"ತಂದೆ ಮಾಡಿದ ಸಾಲದ ಹೊರೆಯನ್ನು ಹೊತ್ತು ಸಂಸಾರ ನಡೆಸುವ ಉದ್ದೇಶದಿಂದ ತನಗಿಷ್ಟವಿಲ್ಲದ ವ್ಯಾಪಾರೀ ವೃತ್ತಿ ಹಿಡಿದವನು. ತಂದೆಯ ಸಾಲ ಮುಗಿದಕೂಡಲೇ ಈ ಅನಿಷ್ಟ ಕೆಲಸವನ್ನು ತೊರೆದು ಸ್ವತಂತ್ರನಾಗುವ ಹಂಬಲದಲ್ಲಿದ್ದವನು; ತಂಗಿಯನ್ನು ಸಂಗೀತ ಶಾಲೆಗೆ ಕಳಿಸುವ ಆಸೆಯಲ್ಲಿದ್ದವನು," ಎನ್ನುತ್ತಾರೆ ಚಂದನ್ ಎಸ್.ವಿ ಅವರು ಫ್ರಾನ್ಸ್ ಕಾಪ್ಕ ಅವರ ಮೂಲ ಗಿರಿ ಅವರು ಕನ್ನಡಕ್ಕೆ ಅನುವಾದಿಸಿರುವ ‘ರೂಪಾಂತರ’ ಕೃತಿ ಕುರಿತು ಬರೆದ ಅನಿಸಿಕೆ.
"ರೂಪಾಂತರ" ಇದು ಮನುಷ್ಯನೊಬ್ಬ ದೈತ್ಯಾಕಾರದ ಹುಳುವಾಗಿ ರೂಪಾಂತರಗೊಂಡಮೇಲೆ ಆತ ಹಲವು ದಿವಸ ಬದುಕಿದ್ದ ಕತೆ. ಗ್ರಿಗೋರ್ ಸಾಂಸ ಒಬ್ಬ ಸಂಚಾರಿ ವ್ಯಾಪಾರಿ; ತಂದೆ, ತಾಯಿ, ಮತ್ತು ತಂಗಿಯ ಜೊತೆ ವಾಸಿಸುವವನು. ತಂದೆ ಮಾಡಿದ ಸಾಲದ ಹೊರೆಯನ್ನು ಹೊತ್ತು ಸಂಸಾರ ನಡೆಸುವ ಉದ್ದೇಶದಿಂದ ತನಗಿಷ್ಟವಿಲ್ಲದ ವ್ಯಾಪಾರೀ ವೃತ್ತಿ ಹಿಡಿದವನು. ತಂದೆಯ ಸಾಲ ಮುಗಿದಕೂಡಲೇ ಈ ಅನಿಷ್ಟ ಕೆಲಸವನ್ನು ತೊರೆದು ಸ್ವತಂತ್ರನಾಗುವ ಹಂಬಲದಲ್ಲಿದ್ದವನು; ತಂಗಿಯನ್ನು ಸಂಗೀತ ಶಾಲೆಗೆ ಕಳಿಸುವ ಆಸೆಯಲ್ಲಿದ್ದವನು.
ಆದರೆ ಇದ್ದಕ್ಕಿದ್ದಂತೆ ಒಂದು ಬೆಳಗ್ಗೆ ಎದ್ದು ಕೆಲಸಕ್ಕೆ ಹೋಗಬೇಕಾಗಿದ್ದವನಿಗೆ ಹಾಸಿಗೆಯಲ್ಲಿ ದೊಡ್ಡ ಹುಳುವಾಗಿ ರೂಪಾಂತರಗೊಂಡಿದ್ದು ವೇದ್ಯವಾಗುತ್ತದೆ. ಕತೆ ಶುರುವಾಗುವಾಗಲೇ ಈ ರೂಪಾಂತರ ಮುಗಿದು ಹೋಗಿರುವುದರಿಂದ ಗ್ರಿಗೋರ್ ಏಕೆ ಮತ್ತು ಹೇಗೆ ಹುಳುವಾದ ಎಂಬುದರ ವಿವರಣೆ ಕತೆಯಲ್ಲಿ ಇಲ್ಲ. ಅಲ್ಲದೆ ಕೆಲವು ಮುಖ್ಯವಾದ ಸಂಗತಿಗಳೆಂದರೆ ಗ್ರಿಗೋರ್ ಹುಳುವಿನ ರೂಪಕ್ಕೆ ಮಾರ್ಪಾಡಾದರೂ ಮಾನವೀಯ ಆಲೋಚನೆ, ಭಾವನೆ, ಪ್ರತಿಕ್ರಿಯೆಗಳನ್ನು ಉಳಿಸಿಕೊಂಡಿರುವುದು; ಕತೆಯ ಬಹುಪಾಲು ಗ್ರಿಗೋರ್‌ನ ದೃಷ್ಟಿಯಲ್ಲೇ ತೆರೆದುಕೊಳ್ಳುತ್ತ ಹೋಗುವುದು. (ಆದರೆ, ಆತ ಸತ್ತ ಮೇಲೂ ಕತೆ ಒಂದಿಷ್ಟು ಮುಂದುವರಿಯುವುದರಿಂದ ಗ್ರಿಗೋರ್‌ನೇ ಕತೆ ಹೇಳುತ್ತಿಲ್ಲವೆಂಬುದು ಸ್ಪಷ್ಟ.) ಆಗೀಗ ಅವನ ವರ್ತನೆ, ಭಾವನೆ, ಆಹಾರದ ರುಚಿ, ಇತ್ಯಾದಿಗಳಲ್ಲಿ ಮನುಷ್ಯತನ ಕ್ರಮೇಣ ಕುಂದುವಂತೆ ಕಂಡು ಬಂದರೂ, ಅದರ ಬಗ್ಗೆ ಅವನಲ್ಲೇ ಇರುವ ಪ್ರಜ್ಞೆಯಿಂದಾಗಿ ಆತ ಮತ್ತೆಮತ್ತೆ ಮಾನವೀಯ ವೃತ್ತಕ್ಕೆ ಹೊರಳಿಕೊಳ್ಳಲು ಪ್ರಯತ್ನಿಸುವುದು ವ್ಯಕ್ತವಾಗುತ್ತದೆ. ಕತೆಯಲ್ಲಿ ತುಂಬಿ ಕೊಂಡಿರುವ ಹಲವು ಬಗೆಯ ವಿಪರ್ಯಾಸಗಳಲ್ಲಿ ಇದೂ ಒಂದು.
ಕತೆಯ ಮೊದಲನೆಯ ವಾಕ್ಯವೊಂದನ್ನು ನಾವು ಒಪ್ಪಿಕೊಂಡ ಮೇಲೆ ಉಳಿದದ್ದೆಲ್ಲ ಅತ್ಯಂತ ತರ್ಕಬದ್ಧವಾಗಿ, ಸಮರ್ಪಕವಾಗಿ, ಸಹಜವಾಗಿ, ಮತ್ತು ಅನಿವಾರ್ಯವಾಗಿ ಕಾಣುತ್ತದೆ. ಆದರೆ ಮಗ ಏಕೆ ಹುಳುವಾಗಿ ಮಾರ್ಪಾಡಾದ ಎಂಬ ಪ್ರಶ್ನೆ ಮನೆಯವರನ್ನು ಅಷ್ಟಾಗಿ ಬಾಧಿಸುವುದಿಲ್ಲ.
ತಂಗಿಯೂ ಊಟ ಕೊಡುತ್ತಾರೆ ಬರುತ್ತಾಳೆ ಅದ್ರೆ ಬರು ಬರುತ್ತಾ ಕೊಡುವ ರೀತಿನೇ ಬದಲಾಗುತ್ತೆ, ಮನೆಯವರು ಮಗನ ರೀತಿ ನೋಡದೆ ಒಂದು ಕೀಟದ ರೀತಿನೇ ನೋಡುತ್ತಾರೆ, ಅವನು ಕೀಟವದರೂ ಮನುಷ್ಯ ಭಾವನೆಗಳು ಅವನಿಗೆ ಅರ್ಥ ವಾಗುತ್ತಿತ್ತು ಮಾತುಗಳು ಕೇಳುತಿದ್ದವು.
ಲೇಖಕ ಎಸ್. ಎಚ್. ಪಾಟೀಲ ಅವರು ಬರೆದ 'ಒಲವಿನ ನೆನಪಿನ ಮೆರವಣಿಗೆ' ಕವಿತೆಯ ಸಾಲುಗಳು ಹೀಗಿವೆ... ಇರುಳ ಮಂಚದ...
ಕರ್ನಾಟಕ ರಾಜ್ಯೋತ್ಸವ ಕೇವಲ ಧ್ವಜಾರೋಹಣ, ಪ್ರಶಸ್ತಿ ಪ್ರದಾನ ಮತ್ತು ಸಾಂಸ್ಕೃತಿಕ ಮೆರವಣಿಗೆಗಳಿಗೆ ಸೀಮಿತವಾಗಬೇಕೇ? ಖಂಡಿ...
ಕೃತಿ : ಅಪರೂಪದ ಪುರಾಣ ಕಥೆಗಳು ಲೇಖಕರು : ಆಶಾ ರಘು ಪ್ರಕಾಶನ : ಉಪಾಸನ ಬುಕ್ಸ್ ಪುಸ್ತಕದ ಬೆಲೆ : 170/- ರಾಮಾಯಣ...
©2025 Book Brahma Private Limited.