ಮಾಸ್ತಿ ಕಥಾ ಪುರಸ್ಕಾರ, ಕಾದಂಬರಿ ಪುರಸ್ಕಾರಕ್ಕೆ ಕೃತಿಗಳ ಆಹ್ವಾನ

Date: 30-06-2022

Location: ಬೆಂಗಳೂರು


ಕನ್ನಡದ ಹೆಸರಾಂತ ಸಾಹಿತಿ ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್‌ ಅವರ 131ನೇ ವರ್ಷದ ಜನ್ಮದಿನದ ಪ್ರಯುಕ್ತ ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಟ್ರಸ್ಟ್‌ ವತಿಯಿಂದ ಅವರ ಸಂಸ್ಮರಣಾರ್ಥವಾಗಿ ನೀಡುವ 'ಮಾಸ್ತಿ ಕಥಾ ಪುರಸ್ಕಾರ' ಮತ್ತು 'ಮಾಸ್ತಿ ಕಾದಂಬರಿ ಪುರಸ್ಕಾರ'ಕ್ಕಾಗಿ 2021 ರಲ್ಲಿ ಪ್ರಕಟವಾದ ಕಥಾ ಸಂಕಲನ ಮತ್ತು ಕಾದಂಬರಿಗಳನ್ನು ಆಹ್ವಾನಿಸಲಾಗಿದೆ. 2021ರ ಜನವರಿ1 ರಿಂದ ಡಿಸೆಂಬರ್ 31ರವರೆಗೆ ಪ್ರಕಟಗೊಂಡ ಕೃತಿಗಳನ್ನು ಸ್ಪರ್ಧೆಗೆ ಕಳುಹಿಸಬಹುದು.

ಆಯ್ಕೆಯಾದ ಕೃತಿಯ ಲೇಖಕರಿಗೆ 25 ಸಾವಿರ ರೂ. ಮತ್ತು ಪ್ರಕಾಶಕರಿಗೆ 10 ಸಾವಿರ ರೂ. ಬಹುಮಾನ ಮೊತ್ತ ಸಿಗಲಿದೆ. ಹಾಗೂ 2022ರಲ್ಲಿ ಆಯೋಜಿಸುವ ಮಾಸ್ತಿ ಪುರಸ್ಕಾರ ಸಮಾರಂಭದಲ್ಲಿ ಪುರಸ್ಕಾರ ಪಡೆದ ಲೇಖಕರನ್ನು, ಪ್ರಕಾಶಕರನ್ನು ಆಹ್ವಾನಿಸಿ ಮಾಸ್ತಿ ಫಲಕದೊಂದಿಗೆ ಅಭಿನಂದಿಸಲಾಗುತ್ತದೆ.

ಸ್ಪರ್ಧೆಯ ನಿಯಮಗಳು: ಕನ್ನಡದ ಮೂಲ ರಚನೆಯ ಪ್ರಕಟಿತ ಕಥಾ ಸಂಕಲನ ಮತ್ತು ಕಾದಂಬರಿಗಳಿಗೆ ಮಾತ್ರ ಪ್ರವೇಶವಿರುತ್ತದೆ. ಕೃತಿಗಳು ಅನುವಾದ, ರೂಪಾಂತರ, ಭಾವಾನುವಾದ, ಸಂಗ್ರಹ ಇಲ್ಲವೇ ಇತರೆ ಹೊಂದಾಣಿಕೆಗೆ ಒಳಪಟ್ಟಿರಬಾರದು.

ಆಸಕ್ತರು ಜುಲೈ 31ರೊಳಗೆ ತಮ್ಮ ಕೃತಿಗಳನ್ನು ಮಾವಿನಕೆರೆ ರಂಗನಾಥನ್, ಅಧ್ಯಕ್ಷರು, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಟ್ರಸ್ಟ್ ನಂ.21, ಎಲ್ಲಪ್ಪ ಗಾರ್ಡನ್, 10ನೇ ಕ್ರಾಸ್, ಮಲ್ಲೇಶ್ವರಂ, ಬೆಂಗಳೂರು- 03. ವಿಳಾಸಕ್ಕೆ ಕಳುಹಿಸಬೇಕು.

ಹೆಚ್ಚಿನ ಮಾಹಿತಿಗಾಗಿ: 080-23363347

MORE NEWS

ಅವಿರತ ಹರೀಶ್ ಅವರ ಅಭಿನಂದನಾ ಕಾರ್ಯಕ್ರಮ ಎಲ್ಲರಿಗೂ ಆದರ್ಶವಾಗಿದೆ; ಬರಗೂರು ರಾಮಚಂದ್ರಪ್ಪ

25-04-2024 ಬೆಂಗಳೂರು

ಬೆಂಗಳೂರು: ಅವಿರತ ಹರೀಶ್ ಗೆಳೆಯರ ಬಳಗದಿಂದ ಹಮ್ಮಿಕೊಂಡಿದ್ದ ಪ್ರಕಾಶಕ, ಲೇಖಕ, ಸಂಘಟಕ ಅವಿರತ ಹರೀಶ್ 60ರ ಸಾಂಸ್ಕೃತಿಕ ಸ...

ಮಾತೋಶ್ರೀ ರತ್ನಮ್ಮ ಹೆಗ್ಗಡೆ 47ನೇ ಮಹಿಳಾ ಗ್ರಂಥ ಬಹುಮಾನಕ್ಕೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾದಿಂದ 2023ನೇ ವರ್ಷದ ಮಹಿಳಾ ಶ್ರೇಷ್ಠ ಕನ್ನಡ ಕೃತಿಗಳಿಗೆ “ಮಾತೋಶ್ರೀ...

ಗಿರಡ್ಡಿ ಗೋವಿಂದರಾಜ ವಿಮರ್ಶಾ ಪ್ರಶಸ್ತಿಗೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಡಾ. ಗಿರಡ್ಡಿ ಗೋವಿಂದರಾಜ ಫೌಂಡೇಶನ್ ನಿಂದ “ವಿಮರ್ಶಾ ಪ್ರಶಸ್ತಿ"ಗೆ ವಿಮರ್ಶಾ ಕೃತಿಗಳನ್ನು ಆಹ್ವಾ...