ಎನ್.ಎಸ್. ಲಕ್ಷ್ಮೀ ನಾರಾಯಣ ಭಟ್ಟರಿಂದ ಅನುವಾದಿತ ಕನ್ನಡ ಸಾಹಿತ್ಯ ಸಮೃದ್ಧಿ: ರಾಜಶೇಖರ್

Date: 14-03-2021

Location: ರಾಮನಗರ


ಷೇಕ್ಸ್ ಪಿಯರ್., ಏಟ್ಸ್ ,ಏಲಿಯೆಟ್ ಮುಂತಾದವರ ಇಂಗ್ಲಿಷ್ ಕವಿತೆಗಳನ್ನು ಅನುವಾದಿಸುವ ಮೂಲಕ ಕನ್ನಡ ಅನುವಾದ ಸಾಹಿತ್ಯ ಶ್ರೀಮಂತಗೊಳಿಸಿದವರ ಪೈಕಿ ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟರು ಒಬ್ಬರು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಪ್ರಾಧ್ಯಾಪಕ ವಿ.ಎಚ್. ರಾಜಶೇಖರ್ ಅಭಿಪ್ರಾಯಪಟ್ಟರು.,

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದ ಕಚೇರಿಯಲ್ಲಿ ಆಯೋಜಿಸಿದ್ದ ಕವಿ ಎನ್.ಎಸ್. ಲಕ್ಷ್ಮೀನಾರಾಯಣಭಟ್ಟ ಅವರಿಗೆ ಶ್ರದ್ಧಾಂಜಲಿ ಮತ್ತು ಮಹಾಶಿವರಾತ್ರಿ ಕವಿಗೋಷ್ಠಿಉದ್ದೇಶಿಸಿ ಅವರು ಮಾತನಾಡಿದರು.

ಎನ್.ಎಸ್. ಲಕ್ಷ್ಮೀನಾರಾಯಣಭಟ್ಟರು ಕನ್ನಡದ ಪ್ರಮುಖ ಕವಿಯಾಗಿ, ವಿಮರ್ಶಕರಾಗಿ, ಕಾವ್ಯಾನುವಾದಕರಾಗಿ ಪರಿಚಿತರು. ಇವರ ಭಾವಗೀತೆಗಳು ಸಾಹಿತ್ಯ ವಲಯದಲ್ಲಿ ಸಂಚಲನ ಮೂಡಿಸಿವೆ. ಆಂಗ್ಲ ಕವಿಗಳ ಕವನಗಳನ್ನು ಅನುವಾದಿಸಿ ಕನ್ನಡ ಸಾಹಿತ್ಯದ ಶ್ರೀಮಂತಿಕೆಯನ್ನು ಹೆಚ್ಚಿಸಿದ್ದಾರೆ ಎಂದು ಹೇಳಿದರು.

ಹಿರಿಯ ಸಂಶೋಧಕ ಡಾ. ಮುನಿರಾಜಪ್ಪ ಕಾರ್ಯಕ್ರಮ ಉದ್ಘಾಟಿಸಿ ‘ಕರ್ನಾಟಕದ ಸಾಂಸ್ಕೃತಿ ಹಿರಿಮೆ ದೊಡ್ಡದು. ಬಾದಾಮಿ, ಹಂಪಿ, ಶ್ರವಣ ಬೆಳಗೊಳ ಸೇರಿದಂತೆ ಇತರೆ ತಾಣಗಳು ಕನ್ನಡ ಸಂಸ್ಕೃತಿಯನ್ನು ಪ್ರತಿನಿಧಿಸುತ್ತವೆ. ಈ ಸಾಂಸ್ಕೃತಿ ಪರಂಪರೆ ಕಾಯ್ದುಕೊಂಡು ಹೋಗುವ ಹೊಣೆಗಾರಿಕೆ ಇದೆ. ಐತಿಹಾಸಿಕ ಸ್ಥಳಗಳ ಸಂಶೋಧನೆಯೂ ಸವಾಲು ಎಂದಿಗಿಂತ ಹೆಚ್ಚಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಜಾನಪದ ವಿದ್ವಾಂಸ ಡಾ. ಕುರುವ ಬಸವರಾಜ್ ಮಾತನಾಡಿ ಭಾಷೆಯು ಹಿರಿಯರಿಂದ ಬಂದ ಕೊಡುಗೆಯಾಗಿದೆ. ಲಿಪಿ ಇರಲಿ; ಇಲ್ಲದೇ ಇರಲಿ, ತಾರತಮ್ಯ ಮಾಡದೇ ಎಲ್ಲ ಭಾಷೆಗಳನ್ನು ಗೌರವಿಸಬೇಕು ಎಂದು ಸಲಹೆ ನೀಡಿದರೆ, ಸಾಧನಕೇರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷೆ ವಸುವತ್ಸಲೆ ಮಾತನಾಡಿ ಮನಸ್ಸಿನಲ್ಲಿರುವ ಸಂವೇದನೆಯನ್ನು ಪ್ರಕಟಿಸಲು ಕಾವ್ಯ ಉತ್ತಮ ಸಾಧನವಾಗಿದೆ. ಅಭ್ಯಾಸ ಮತ್ತು ಓದಿನಿಂದ ಉತ್ತಮವಾದ ಕಾವ್ಯವನ್ನು ರಚಿಸಲು ಸಾಧ್ಯವಾಗುತ್ತದೆ.ಓದುಗರಿಗೆ ಅರ್ಥವಾಗುವ ಭಾಷೆಯಲ್ಲಿ ಕಾವ್ಯವನ್ನು ರಚಿಸಿದರೆ ಕಾವ್ಯದ ರಚನೆಯ ಉದ್ದೇಶ ಸಾರ್ಥಕವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಕವಿಗೋಷ್ಠಿ, ಸನ್ಮಾನ: ಕವಿಗಳಾದ ದೇ. ನಾರಾಯಣಸ್ವಾಮಿ, ವಸಂತಲಕ್ಷ್ಮಿ, ಎಲೆಕೇರಿ ಶಿವರಾಂ, ಜಿ.ಎಚ್. ರಾಮಯ್ಯ, ಕೂರಣಗೆರೆ ಕೃಷ್ಣಪ್ಪ, ಸಾ.ಮ. ಶಿವಮಲ್ಲಯ್ಯ, ಮಲ್ಲೇಶ್ ಚನ್ನಮಾನಹಳ್ಳಿ, ಕೆ.ಆರ್. ವಿನುತ, ಎಸ್. ನರಸಿಂಹಸ್ವಾಮಿ, ಎ.ಜಿ. ಸುನೀತ, ಎಸ್. ವಿಕಾಸ್ ಕನ್ನಸಂದ್ರ, ಕಾಕೋಳು ಶೈಲೇಶ್, ಎನ್. ಕಿರಣ್ ರಾಜ್, ಮಾ.ತಿ. ಬಸವರಾಜು, ಚೇತನ್ ಗುನ್ನೂರು, ಸಂದೇಶ್ ಕುಮಾರ್, ಪೂರ್ಣಚಂದ್ರ, ಎ.ಆರ್. ಅಭಿಷೇಕ್, ವಿನೋದ್ ಕಲ್ಬಾಳು, ಯೋಗೇಶ್ ಚಕ್ಕೆರೆ ಕವನ ವಾಚಿಸಿದರು.
ಹಿರಿಯ ಜಾನಪದ ವಿದ್ವಾಂಸ ಡಾ. ಕುರುವ ಬಸವರಾಜ್ ಅವರನ್ನು ಸನ್ಮಾನಿಸಲಾಯಿತು. ಗಾಯಕರಾದ ಚೌ.ಪು. ಸ್ವಾಮಿ, ಕೆಂಗಲ್ ವಿನಯ್ ಕುಮಾರ್, ಬಿ. ಗೋಪಾಲ್, ನಾಗಶ್ರೀಗಣೇಶ್, ದೇವರಾಜು, ಜಗದೀಶ್ ಗೀತಗಾಯನ ನಡೆಸಿಕೊಟ್ಟರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿಂ.ಲಿಂ. ನಾಗರಾಜ್, ಕೋಶಾಧ್ಯಕ್ಷ ಎಚ್.ಪಿ. ನಂಜೇಗೌಡ, ತಾಲ್ಲೂಕು ಘಟಕಗಳ ಅಧ್ಯಕ್ಷರಾದ ಕಲ್ಪನಾಶಿವಣ್ಣ, ಬಿ. ಚಲುವರಾಜು, ಗೌರವ ಕೋಶಾಧ್ಯಕ್ಷ ಶ್ರೀನಿವಾಸ್ ರಾಂಪುರ, ಸಂಘಟನಾ ಕಾರ್ಯದರ್ಶಿ ಎಸ್. ರುದ್ರೇಶ್ವರ, ಜಿಲ್ಲಾ ಲೇಖಕರ ವೇದಿಕೆ ಅಧ್ಯಕ್ಷ ಕೂ.ಗಿ. ಗಿರಿಯಪ್ಪ ಇದ್ದರು.

MORE NEWS

ಎಸ್.ಜ್ಯೋತಿ ಅವರ ‘ಅತ್ತೆ ನಿಮಗೊಂದು ಪ್ರಶ್ನೆ’ ಪುಸ್ತಕ ಬಿಡುಗಡೆ ಸಮಾರಂಭ

19-03-2024 ಬೆಂಗಳೂರು

ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...

ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರಬಂದಗಳಿಗೆ ಆಹ್ವಾನ

17-12-2023 ಬೆಂಗಳೂರು

ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...

ಸಾಂಸ್ಕೃತಿಕ ಸಂವಿಧಾನದ ಅರಿವು ಅಗತ್ಯ : ಪ್ರೊ.ನಟರಾಜ ಬೂದಾಳು

06-12-2023 ಬೆಂಗಳೂರು

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...