ನಾವೇಕೆ ಏನನ್ನಾದರೂ ಅರಸುತ್ತಿರುತ್ತೇವೆ?

Date: 01-04-2022

Location: ಬೆಂಗಳೂರು


'ದು:ಖದ ಅರ್ಥವನ್ನು ಪರೀಕ್ಷಿಸಿ ನೋಡುವುದಕ್ಕೆ ಮೊದಲು ಅತೃಪಿಯ ಮೂಲ ಏನೆಂದು ಅರಿತುಕೊಳ್ಳಬೇಕಾಗಿದೆ ಎನ್ನುತ್ತಾರೆ ಲೇಖಕ ಸಂತೋಷ ಅನಂತಪುರ. ಅವರು ತಮ್ಮ ಅನಂತಯಾನ ಅಂಕಣದಲ್ಲಿ ಜಿಡ್ಡು ಕೃಷ್ಣಮೂರ್ತಿ ಅವರ ಇಂಗ್ಲಿಷ್ ಚಿಂತನಾ ಬರಹವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

ನಾವು ಕೊನೆಯಿಲ್ಲದೇ ಅರಸುತ್ತಲೇ ಇರುತ್ತೇವೆ ಆದರೆ ಯಾಕಾಗಿ ಅರಸುತ್ತೇವೆ ಎಂದು ಮಾತ್ರ ನಮ್ಮನ್ನು ನಾವು ಪ್ರಶ್ನಸಿಕೊಳ್ಳುವುದಿಲ್ಲ. ಈ ಪ್ರಶ್ನೆಗಿರುವ ಖಚಿತ ಉತ್ತರವೆಂದರೆ ನಮಗಿರುವ ಅಸಮಾಧಾನ, ಅಸಂತುಷ್ಟಿ, ನಮ್ಮ ದುರಾದೃಷ್ಟ, ಒಬ್ಬಂಟಿತನ, ನಮ್ಮನ್ನು ಯಾರು ಪ್ರೀತಿಸುವುದಿಲ್ಲ ಎಂಬ ಕೊರಗು, ನಮ್ಮಲ್ಲಿರುವ ಭಯ. ನಮಗೆ ಜೋತು ಬೀಳಲು ಏನಾದರೂ ಬೇಕಾಗಿದೆ. ಆದ್ದರಿಂದಲೇ ಅರಸುತ್ತೇವೆ. ಹಾಗೆ ಅರಸುತ್ತಿರುವಾಗಲೇ ಸದಾ ಹುಡುಕುತ್ತಿರುತ್ತೇವೆ. ದುರಾದೃಷ್ಟದ ವಿಷಯವೆಂದರೆ ನಾವು ಯಾವಾಗ ಅರಸುತ್ತೇವೆಂದು ನಾವೇ ಕಂಡುಕೊಳ್ಳುವುದು.

ನಾವು ಮೊದಲ ಆದ್ಯತೆಯನ್ನು ಅರಸದಿರುವುದಕ್ಕೆ ಕೊಡಬೇಕು. ಆದ್ದರಿಂದ ಮೊದಲನೆಯದು ಅರಸುವುದಲ್ಲ. ಅರ್ಥವಾಯಿತೇ ? ನಿಮಗೆ ಸತ್ಯವನ್ನು ಹುಡುಕಬೇಕೆಂದು, ಶೋಧಿಸಬೇಕೆಂದು, ಅನುಸರಿಸಬೇಕೆಂದು, ಅದನ್ನು ಬೆನ್ನಟ್ಟಬೇಕೆಂದು, ಶಿಸ್ತಿನಿಂದಿರಬೇಕೆಂದು, ನಿಮ್ಮನ್ನು ನೀವೇ ನಿಯಂತ್ರಿಸಿಕೊಳ್ಳಬೇಕೆಂದು ಹೇಳಲಾಗಿದೆ. ನಂತರ ಯಾರೋ ಒಬ್ಬ ಬಂದು "ಅದೆಲ್ಲ ಮಾಡಬೇಡ, ಅರಸಲೇ ಬೇಡ" ಎಂದು ಹೇಳುತ್ತಾನೆ. ಸಹಜವಾಗಿಯೇ ನಿಮ್ಮ ಪ್ರತಿಕ್ರಿಯೆ ಏನಾಗಿರುತ್ತದೆಂದರೆ ಒಂದೋ ಆತನನ್ನು ಸಾಗಹಾಕುವುದು, ಇಲ್ಲ ನೀವೇ ಅವನಿಗೆ ಬೆನ್ನು ತಿರುಗಿಸುವುದು ಅಥವಾ ಆತ ಯಾಕೆ ಹಾಗೆ ಹೇಳಿದ ಎಂದು ನೀವೇ ಕಂಡುಕೊಳ್ಳುವುದು - ಅಂದರೆ ನೀನು ಸುಮ್ಮನೇ ಒಪ್ಪಿಕೊಳ್ಳಲೂ ಬೇಡ, ನಿರಾಕರಿಸಲೂ ಬೇಡ, ಆದರೆ ಬಿಡದೆ ಪ್ರಶ್ನಿಸು. ಮತ್ತೆ ನೀವು ಅರಸುತ್ತಿರುವುದಾದರೂ ಏನನ್ನು ?

ನಿಮ್ಮನ್ನು ನೀವೇ ಪ್ರಶ್ನಿಸಿಕೊಳ್ಳಿ. ಹೌದು ನೀವು ಅರಸುತ್ತಿದ್ದೀರಿ; ನೀವು ಆಂತರಿಕವಾಗಿ ಬದುಕಿನಲ್ಲಿ ಏನನ್ನೋ ಕಳೆದುಕೊಳ್ಳುತ್ತಿದ್ದೀರೆಂದು ಹೇಳುತ್ತಿದ್ದೀರಿ - ಕಳೆದುಕೊಳ್ಳುತ್ತಿರುವುದು ತಾಂತ್ರಿಕ ಹಂತದಲ್ಲಲ್ಲ, ಅಥವಾ ಸಣ್ಣ ಉದ್ಯೋಗವೂ ಅಲ್ಲ ಅಥವಾ ಅಧಿಕ ಹಣವೂ ಅಲ್ಲ. ಹಾಗಾದರೆ ನಾವು ಏನನ್ನು ಅರಸುತ್ತಿದ್ದೇವೆ? ನಾವು ಅರಸುತ್ತಿರುವುದು ಏಕೆಂದರೆ ನಮಗೆ ನಮ್ಮ ಕುಟುಂಬದೊಡನೆ, ನಮ್ಮ ಸಮಾಜದೊಡನೆ, ಸಂಸ್ಕೃತಿಯೊಡನೆ ಅಷ್ಟೇಕೆ ನಮ್ಮ ಬಗ್ಗೆಯೇ ನಮಗೆ ಆಳವಾದ ಅತೃಪ್ತಿಯಿದೆ; ನಾವು ತೃಪ್ತಿ ಪಡಬೇಕಾಗಿದೆ. ನಮ್ಮನ್ನು ನಿರಂತರವಾಗಿ ನಾಶಪಡಿಸುತ್ತಿರುವ ಈ ತೀವ್ರತರದ ಅಸಮಾಧಾನದಿಂದ ದೂರ ಸರಿಯಲೇಬೇಕಾಗಿದೆ. ನಮಗೇಕೆ ಅತೃಪ್ತಿ ? ಅತೃಪ್ತಿಯನ್ನು ಬಹು ಸುಲಭವಾಗಿ ಬಗೆಹರಿಸಿಕೊಳ್ಳಬಹುದೆಂದು ನನಗೆ ಗೊತ್ತು, ಅತೃಪ್ತನಾದ ಯುವಕನಿಗೆ-ಕ್ರಾಂತಿಕಾರಿಗೆ, ಕಮ್ಯೂನಿಸ್ಟ್ ನಿಗೆ ಒಂದು ಉತ್ತಮ ಉದ್ಯೋಗ ಕೊಡಿ, ಆಗ ಅವನು ಇವೆಲ್ಲವನ್ನೂ ಮರೆಯಬಲ್ಲ. ಅವನಿಗೆ ಒಳ್ಳೆಯ ಕಾರು, ಮನೆ, ಸುಂದರ ಹೂದೋಟ ಮತ್ತು ಉತ್ತಮ ಸ್ಥಾನ-ಮಾನವನ್ನು ನೀಡಿದರೆ ಸಾಕು, ಅವನ ಅತೃಪ್ತಿಯು ಮಾಯವಾಗುವುದನ್ನು ನೀವೇ ಕಾಣಬಹುದು. ಅವನು ಒಂದು ವೈಚಾರಿಕ ಯಶಸ್ಸನ್ನು ಸಾಧಿಸಬಲ್ಲನಾದರೆ ಆ ಅತೃಪ್ತಿಯು ಮಾಯವಾಗಿ ಬಿಡುತ್ತದೆ. ಆದರೆ ನೀವೇಕೆ ಅತೃಪ್ತರೆಂದು- ಉದ್ಯೋಗವುಳ್ಳ ಜನರಷ್ಟೇ ಅಲ್ಲ, ಇನ್ನೂ ಒಳ್ಳೆಯ ಉದ್ಯೋಗ ಬೇಕೆನ್ನುವವರಲ್ಲಿ ಎಂದೂ ಕೇಳಿಕೊಳ್ಳುವುದಿಲ್ಲ. ಆದ್ದರಿಂದಲೇ ನಾವು ಸುಖದ ಇಡೀ ಸಂರಚನೆಯನ್ನು, ಸುಖದ ಹಾಗೆಯೇ ದು:ಖದ ಅರ್ಥವನ್ನು ಪರೀಕ್ಷಿಸಿ ನೋಡುವುದಕ್ಕೆ ಮೊದಲು ಅತೃಪಿಯ ಮೂಲ ಏನೆಂದು ಅರಿತುಕೊಳ್ಳಬೇಕಾಗಿದೆ.

ಈ ಅಂಕಣದ ಹಿಂದಿನ ಬರೆಹಗಳು:
ನೋವು ಹಿಂದುರಿಗಿಸಲಾರದ ಸಾಲದಂತೆ…
ಸಾವಿರ ಭಾವಗಳ ಹೊತ್ತ ಹುಡುಗಿಯ ಕತೆಗಳು
ಪ್ರೇಮಲೋಕ’ದ ಪ್ರೇಮ ಗೀತೆಗಳು…
ಆದಿ-ಅಂತ್ಯಗಳ ನಡುವಿನ ಹರಿವು
ಗರುಡಗಮನ ಬಂದ..ಮಂಗಳೂರ ಹೊತ್ತು ತಂದ
ಸುಖದ ಸುತ್ತು…
ನಿರೀಕ್ಷೆಗಳಿಲ್ಲವಾದರೆ ನಿರಾಳ
ದಾರುಣ ಅಂತ್ಯ ಹೇಳುವ 'ನಗ್ನಸತ್ಯ'
ಮೂಲ ಸ್ವರೂಪದಿಂದ ವಿಮುಖವಾಯಿತೇ ಯಕ್ಷಗಾನ?
ಮಲೆಯಾಳಂ ಸಿನಿಮಾವೆಂಬ ಸುಂದರಿ ಕುಟ್ಟಿ..
ಮತ್ತೇರಿಸಿ ಕಾಡುವ ಕಾಡ ಸುಮ
ಜಾಗತೀಕರಣ: ವೃದ್ಧಾಶ್ರಮಗಳಾಗುತ್ತಿರುವ ಹಳ್ಳಿಗಳು
ಆಧುನಿಕ ತಂತ್ರಜ್ಞಾನ ಮತ್ತು ಹರಕು-ಮುರುಕು ಬಂಧಗಳು
ಪ್ರಜಾಪ್ರಭುತ್ವದ ಮೂಲ ಅಂಗಗಳು ವಿಕಲಗೊಂಡಿವೆಯೇ?
ದಾಸ್ಯವೂ..ಸ್ವಾತಂತ್ರ್ಯವೂ..
ಮುಸ್ಸಂಜೆಯ ಒಳಗೊಂದು ಅರ್ಥ
ಧಮ್ಮ ಗುಮ್ಮನ ನಂಬಿ ಕೆಟ್ಟರೆ ಎಲ್ಲರೂ ?
ಭರವಸೆಯ ಜೊತೆ ಹೆಜ್ಜೆ ಹಾಕೋಣ..
ಚಾದರದೊಳಗಿನ ಕಥೆ, ವ್ಯಥೆ...
'ಚಂದ್ರಗಿರಿ ತೀರದಲ್ಲಿ' ತೀರದ ಬವಣೆ..
‘ಬಯಲರಸಿ ಹೊರಟವಳು’- ಇಟ್ಟ ಹೆಜ್ಜೆಯ ಜಾಡು
ಬೆಳಕ ದಾಟಿಸುವ ಹಣತೆ- ಎಸ್.ದಿವಾಕರ್
ಅನುಭವಿಸಿ ಬರೆಯುವ ಜಯಂತ ಕಾಯ್ಕಿಣಿ
ಜೀವ ಜೀವಗಳ ಅಳು…
ಹನಿ ಹನಿಸಿದ ಚೊಕ್ಕಾಡಿ
ಶಾಂತ ಕಡಲೊಳು ಬೀಸಿದ ಬಿರುಗಾಳಿ
ರಂಗದ ಮೇಲಿನ ಬಣ್ಣದ ಭಾವಗಳು
ಬೆಳಕ ದಾಟಿಸುವ ಹಣತೆಯೂ...ಒಳ್ಳೆಯವರಾಗುವ ವ್ಯಸನವೂ...
ಟ್ಯಾಗ್ ಹಾಕಿ ನೋಡುವ ಮನಸ್ಸುಗಳ ನಡುವೆ
ಸಖನೂ ಸುಖವೂ ಒಂದೇ ಆಗುವ ಕ್ಷಣ

 

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...