ನಾಡಕವಿ ಗವಿಸಿದ್ಧ ಎನ್. ಬಳ್ಳಾರಿ 2019 ರ ಕಾವ್ಯ ಪ್ರಶಸ್ತಿಗೆ ಎನ್. ರವಿಕುಮಾರ್ ಆಯ್ಕೆ

Date: 20-10-2019

Location: ಕೊಪ್ಪಳ


ನಾಡಿನ ಖ್ಯಾತ ಸಾಹಿತಿ‌ "ನಾಡಕವಿ ಗವಿಸಿದ್ಧ ಎನ್. ಬಳ್ಳಾರಿ ರಾಜ್ಯಮಟ್ಟದ ಕಾವ್ಯ ಪ್ರಶಸ್ತಿ" ಗೆ ರಾಜ್ಯಮಟ್ಟದಲ್ಲಿ ಹಸ್ತಪ್ರತಿಗಳನ್ನು ಆಹ್ವಾನಿಸಿತ್ತು. ಈ ಸಲದ ಕಾವ್ಯ ಪ್ರಶಸ್ತಿಗೆ ಒಟ್ಟು 26 ಹಸ್ತಪ್ರತಿಗಳು ಬಂದಿದ್ದವು. ಈ ಹಸ್ತಪ್ರತಿಗಳ ಪೈಕಿ ಶಿವಮೊಗ್ಗದ ಎನ್. ರವಿಕುಮಾರ ಟೆಲೆಕ್ಸ್ ಅವರ 'ನೆರ್ಕೆ ಗೋಡೆಯ ರತ್ನಪಕ್ಷಿ' ಹಸ್ತಪ್ರತಿಯು "2019 ರ ನಾಡಕವಿ ಗವಿಸಿದ್ಧ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿಗೆ" ಆಯ್ಕೆಯಾಗಿದೆ. ಪ್ರಶಸ್ತಿಯು 5,000 ರೂ. ನಗದು ಮತ್ತು ಬೆಳ್ಳಿ ಪದಕವನ್ನು ಒಳಗೊಂಡಿದೆ.

ವಿಮರ್ಶಕರಾದ ಡಾ. ಜಾಜಿ ದೇವೆಂದ್ರಪ್ಪ ಅವರು ತೀರ್ಪುಗಾರರಾಗಿದ್ದರು. ಎನ್. ರವಿಕುಮಾರ ಟೆಲೆಕ್ಸ್ ಅವರಿಗೆ ಇದೇ ದಿನಾಂಕ 20-10-2019, ರವಿವಾರ ಕೊಪ್ಪಳದ ಸರಕಾರಿ ನೌಕರರ ಸಾಂಸ್ಕೃತಿಕ ಭವನದಲ್ಲಿ ನಡೆಯುವ 'ಗವಿಸಿದ್ಧ ಎನ್. ಬಳ್ಳಾರಿ - ಸಾಹಿತ್ಯೋತ್ಸವ' ಸಮಾರಂಭದಲ್ಲಿ ಖ್ಯಾತ ಸಾಹಿತಿಗಳೂ, ಚಿಂತಕರೂ ಆದ ಡಾ. ಸರಜೂ ಕಾಟ್ಕರ್ ಇವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಸಾಹಿತ್ಯೋತ್ಸವದ ಸಂಚಾಲಕ ಮಹೇಶ ಬಳ್ಳಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

MORE NEWS

ಹಿರಿಯ ಪತ್ರಕರ್ತ ಅರ್ಜುನ್ ದೇವ್ ನಿಧನ

24-04-2024 ಬೆಂಗಳೂರು

ಹಿರಿಯ ಪತ್ರಕರ್ತರು, ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಎನ್. ಅರ್ಜುನ್ ದೇವ್ (92) ಅವರು ಕೆಂಗೇರಿ...

ಪುಸ್ತಕ ಸಂಸ್ಕೃತಿ ಬೆಳೆಸುವುದು ಸಾಮಾಜಿಕ ನ್ಯಾಯದ ಭಾಗ ಅಂತ ಸರ್ಕಾರಗಳು ಭಾವಿಸಬೇಕು: ಬರಗೂರು

23-04-2024 ಬೆಂಗಳೂರು

ಬೆಂಗಳೂರು: ನಿಜವಾದ ಪುಸ್ತಕ ಪ್ರೀತಿ ಬೆಳೆಯ ಬೇಕಿರುವುದು, ಉಳಿಯ ಬೇಕಿರುವುದು ಮುಂದಿನ ಪೀಳಿಗೆಯಿಂದ, ಆ ಮುಂದಿನ ಪೀ...

ಪ್ರಕಾಶನ ಸಂಸ್ಥೆಯನ್ನು ತೆರೆದಿರುವ ಪ್ರಕಾಶಕರೆಲ್ಲರೂ ಹುಚ್ಚರೇ; ಕೆ.ಎನ್. ಗಣೇಶಯ್ಯ

23-04-2024 ಬೆಂಗಳೂರು

ಪುಸ್ತಕಗಳನ್ನು ಕೊಂಡುಕೊಂಡು ಓದುವವರ ಪ್ರಮಾಣ ಕಡಿಮೆಯೂ ಆಗಿಲ್ಲ ಹೆಚ್ಚು ಕೂಡ ಆಗಿಲ್ಲ. ಬಹುಶಃ ಪುಸ್ತಕವನ್ನು ಓದಬೇಕು ಅನ್...