ನನ್ನದೇ ಸಂಗತಿಗಳಿವು: ಆದರೆ ಕೇವಲ ನನ್ನವಲ್ಲ– ಶಿರಿನ್ ನೆಹಶಾತ್

Date: 05-10-2021

Location: ಬೆಂಗಳೂರು


ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯುವ ಅಂಕಣ 'ಈಚೀಚೆ, ಇತ್ತೀಚೆ'. ಪ್ರತಿ ವಾರ ಪ್ರಕಟವಾಗುವ ಈ ಸರಣಿಯಲ್ಲಿ ಈ ಬಾರಿ ಅಮೆರಿಕ ಮೂಲದ ಫೊಟೋಗ್ರಫಿ ಮತ್ತು ಸಿನೆಮಾ ಕಲಾವಿದ ಶಿರಿನ್ ನೆಹಶಾತ್ ಕಲಾಬದುಕಿನ ಕುರಿತು ಬರೆದಿದ್ದಾರೆ.

ಕಲಾವಿದೆ: ಶಿರಿನ್ ನೆಹಶಾತ್  (Shirin Neshat)
ಜನನ: 26 ಮಾರ್ಚ್, 1957
ಶಿಕ್ಷಣ: ಕ್ಯಾಲಿಫೋರ್ನಿಯಾ ವಿವಿ, ಬರ್ಕಲೆ, ಅಮೆರಿಕ
ವಾಸ: ನ್ಯೂಯಾರ್ಕ್, ಅಮೆರಿಕ
ಕವಲು: ಸಮಕಾಲೀನ ಕಲೆ
ವ್ಯವಸಾಯ: ಫೊಟೋಗ್ರಫಿ, ಸಿನೆಮಾ

ಶಿರಿನ್ ನೆಹಶಾತ್ ಅವರ ಸಿ.ವಿ.ಗಾಗಿ ಇಲ್ಲಿ ಕ್ಲಿಕ್ ಮಾಡಿ:

ಜನರ ದೃಷ್ಟಿಕೋನವನ್ನು ಕಲಾವಿದರಾಗಿ ನಾವು ನಿಯಂತ್ರಿಸಲಾಗುವುದಿಲ್ಲ. ಯಾವುದೇ ಕಲಾಕೃತಿಯನ್ನು ಜನ ನೋಡುವುದು ಅವರ ವೈಯಕ್ತಿಕ ಅನುಭವ, ಅಭಿರುಚಿ, ದೃಷ್ಟಿಕೋನ, ರಾಜಕೀಯ ಚಿಂತನೆಗಳ ಆಧಾರದಲ್ಲಿ. ಹಾಗಾಗಿ ಒಂದೇ ಕೃತಿಗೆ ಎರಡು ತುದಿಗಳ “ಎಕ್ಸ್‌ಟ್ರೀಮ್” ಪ್ರತಿಕ್ರಿಯೆಗಳು ಸಿಗುವುದಿದೆ. ಅದು ನನಗೆ ಕೌತುಕದ್ದು. ಎಲ್ಲರಿಗೂ ಒಪ್ಪಿಗೆಯಾಗುವಂತಹ, ಎಲ್ಲರನ್ನೂ ಖುಷಿಪಡಿಸುವ ಕಲಾಕೃತಿಗಳು ಸಾಧ್ಯವಾಗುವುದಿಲ್ಲ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳುವ  ಇರಾನಿ ಮೂಲದ ಕಲಾವಿದೆ ಶಿರಿನ್ ನೆಹಶಾತ್ ಅವರ ಹೆಚ್ಚಿನ ಕಲಾಕೃತಿಗಳ ವಸ್ತು ಕಾವ್ಯಾತ್ಮಕವಾಗಿ ತನ್ನ ವೈಯಕ್ತಿಕ ಬದುಕಿನ ಆತಂಕ ಮತ್ತು ತನ್ನ ಸುತ್ತಲಿನ ರಾಜಕೀಯ ವಾಸ್ತವಗಳನ್ನು ಬಿಂಬಿಸುವುದು. ಇಸ್ಲಾಮಿಕ್ ಮೂಲಭೂತವಾದ ಮತ್ತು ಉಗ್ರವಾದಗಳ ಹಿನ್ನೆಲೆಯಲ್ಲಿ ಧರ್ಮ, ಹಿಂಸೆ, ಹುಚ್ಚಾಟಗಳು ಮತ್ತು ಲಿಂಗತ್ವದ ಪ್ರಶ್ನೆಗಳನ್ನು ಎತ್ತುವ ಆಕೆಯ ಕಲಾಕೃತಿಗಳಲ್ಲಿ ಹೆಚ್ಚಿನವು ರಾಜಕೀಯ ಹೂರಣವನ್ನೇ ಹೊಂದಿವೆ.

ಟೆಹರಾನ್ ಸಮೀಪದ ಕಾಜ್ವಿನ್ ಎಂಬಲ್ಲಿ ವೈದ್ಯರ ಕುಟುಂಬದಲ್ಲಿ ಜನಿಸಿದ ಶಿರೀನ್, ಕಲಿಕೆಗಾಗಿ ತನ್ನ ಹದಿನೇಳನೇ ವಯಸ್ಸಿನಲ್ಲಿ ಅಮೆರಿಕಕ್ಕೆ ತೆರಳುತ್ತಾರೆ. ಆದರೆ, ಆ ಹೊತ್ತಿಗೆ, ಇಲ್ಲಿ ಇರಾನ್‌ನಲ್ಲಿ ಇಸ್ಲಾಮಿಕ್ ಕ್ರಾಂತಿ ಸಂಭವಿಸಿ, ಮೊಹಮ್ಮದ್ ರೆಜಾ ಷಾ ಪಹ್ಲವಿ ಆಡಳಿತದಿಂದ ಆಯತೊಲ್ಲಾ ಖೊಮೇನಿ ಅವರ ನೇತೃತ್ವದ ಇಸ್ಲಾಮಿಕ್ ಆಡಳಿತ ಸ್ಥಾಪನೆಗೊಳ್ಳುತ್ತದೆ. ಆಗ ಅಮೆರಿಕ-ಇರಾನ್ ನಡುವೆ ಸಂಪರ್ಕ ಸಂಪೂರ್ಣ ಕಡಿದು ಹೋದದ್ದರಿಂದ ಮುಂದೆ ಸುಮಾರು 20ವರ್ಷಗಳ ಕಾಲ ಆಕೆ ತನ್ನ ನೆಲ-ಕುಟುಂಬದ ಜೊತೆ ಸಂಪರ್ಕ ಕಡಿದುಕೊಳ್ಳಬೇಕಾಗುತ್ತದೆ.

ಅಮೆರಿಕದ ಕ್ಯಾಲಿಫೋರ್ನಿಯಾ ವಿವಿಯಲ್ಲಿ ಕಲೆಯ ಉನ್ನತ ಶಿಕ್ಷಣ ಮುಗಿಸಿದ ಬಳಿಕ ಅಲ್ಲೇ ಸ್ವಲ್ಪಕಾಲ ಉದ್ಯೋಗದಲ್ಲಿದ್ದ ಶಿರಿನ್ ಇರಾನಿಗೆ ಹಿಂದಿರುಗಿದ್ದು, ಇರಾನ್ ಆಡಳಿತಗಾರ ಖೊಮೇನಿ ತೀರಿಕೊಂಡ ಒಂದು ವರ್ಷದ ಬಳಿಕ, 1993ರಲ್ಲಿ. ಆಗ ಆಕೆ ಅನುಭವಿಸಿದ ಸಾಂಸ್ಕೃತಿಕ ಶಾಕ್‌ಅನ್ನು ಆಕೆ ವಿವರಿಸಿದ್ದು ಹೀಗೆ: ನಾನು ಅಂತಹದೊಂದು ಸಾಂಸ್ಕೃತಿಕ ಪಲ್ಲಟವನ್ನು ನಿರೀಕ್ಷಿಸಿರಲಿಲ್ಲ. ಜನರ ದೈಹಿಕ ಚಹರೆ ಮಾತ್ರವಲ್ಲದೆ ಸಾರ್ವಜನಿಕ ವರ್ತನೆಗಳು ಕೂಡ ಬದಲಾಗಿದ್ದವು. ಇದು ಅಚ್ಚರಿಯ ಜೊತೆ ಭಯಕ್ಕೂ ಕಾರಣವಾಗುತ್ತಿತ್ತು.

ಇಂತಹದೊಂದು ಸಾಂಸ್ಕೃತಿಕ ಶಾಕ್, ಆಕೆಯ ಗಂಭೀರ ಕಲಾ ಬದುಕಿಗೆ ನಾಂದಿ ಹಾಡಿತು. ಜಗತ್ತಿನಾದ್ಯಂತ ಮುಸ್ಲಿಂ ಮಹಿಳೆಯರ ಗುರುತನ್ನು ರೂಪಿಸುತ್ತಿರುವ ಬೌದ್ಧಿಕ-ಧಾರ್ಮಿಕ ಶಕ್ತಿಗಳ ಸಂಕೀರ್ಣತೆಯನ್ನು ಪರ್ಷಿಯನ್ ಕಾವ್ಯ ಮತ್ತು ಕ್ಯಾಲಿಗ್ರಾಫಿಗಳ ಹಿನ್ನೆಲೆಯಲ್ಲಿ ವಿಶ್ಲೇಷಿಸುವ ಶಿರಿ, ಇವೆಲ್ಲ ನನ್ನದೇ ಅನುಭವಗಳು ಆದರೆ ಕೇವಲ ನನ್ನದು ಮಾತ್ರವಲ್ಲ ಈ ಜಗತ್ತಿನ ಎಲ್ಲ ಮಹಿಳೆಯರದೂ ಅನ್ನುತ್ತಾರೆ. ತಾನೇನೂ ಆಕ್ಟಿವಿಸ್ಟ್ ಅಲ್ಲ, ಆದರೆ ನನ್ನ ಕಲೆಯಲ್ಲಿ ನನಗೆ ನಂಬಿಕೆ ಇದೆ. ಅದು ಯಾವುದೇ ರೂಪದ ಅಭಿವ್ಯಕ್ತಿಯಾಗಿದ್ದರೂ, ಅದು ತಾನಿರುವ ರೂಪದಲ್ಲೇ ಒಂದು ಪ್ರತಿಭಟನೆ ಕೂಡಾ ಹೌದು; ಮನುಷ್ಯತ್ವಕ್ಕಾಗಿ ಹುಯಿಲು ಕೂಡ ಹೌದು ಎಂಬುದು ಅವರ ವ್ಯಾಖ್ಯಾನ. ತನ್ನ ಅಭಿವ್ಯಕ್ತಿಯ ಬಗ್ಗೆ ಆಕೆ ವಿವರಿಸಿದ್ದು ಹೀಗೆ: I never censor myself. But I do give myself a lot of boundaries because I’m not the kind of artist who wants to point fingers. Even if I am critical, it’s in a very quiet and subversive way – it’s not in your face, that’s just not my style. I like subtlety. In that sense, even when I approach politics, there is a poetic aspect to it. I should add that my work usually reflects back in time – it’s rarely about the present moment. (2015ಎಪ್ರಿಲ್‌ನಲ್ಲಿ ಅನಾ ಮೆಕ್ನೇ ಅವರಿಗೆ ನೀಡಿದ ಸಂದರ್ಶನದಲ್ಲಿ, ಸ್ಟುಡಿಯೊ ಇಂಟರ್‌ನ್ಯಾಷನಲ್‌ನಲ್ಲಿ ಪ್ರಕಟಿತ)

ಶಿರಿನ್ ಅವರ ಆರಂಭಿಕ ಹಂತದ ಪ್ರಮುಖ ಫೊಟೋಗ್ರಫಿ ಕಲಾಕೃತಿಗಳೆಂದರೆ Unveiling (1993) and Women of Allah (1993–97). ಆ ಬಳಿಕ ಅವರು ವಿಡಿಯೋ ಆರ್ಟ್‌ನತ್ತ ಹೊರಳಿದರು. ಅವರ ಪ್ರಮುಖ ವಿಡಿಯೋ ಆರ್ಟ್ ಕಲಾಕೃತಿಗಳು: Turbulent (1998), Rapture (1999), and Fervor (2000)Soliloquy (1999), Possessed (2001), Pulse (2001), Tooba (2002), ಆಕೆಯ ಪ್ರಮುಖ ಸಿನಿಮಾಗಳು Mahdokht(Women Without Men) (2004) Passage (2001) ಹಲವು ಅಂತಾರಾಷ್ಟ್ರೀಯ ಪ್ರಶಸ್ತಿಗಳು, ಸಿನಿಮಾ ಅವಾರ್ಡ್‌ಗಳು ಆಕೆಗೆ ಸಂದಿವೆ.

2009ರಲ್ಲಿ ಇರಾನ್ ಅಧ್ಯಕ್ಷೀಯ ಚುನಾವಣೆಯನ್ನು ಪ್ರತಿಭಟಿಸಿ, ಆಕೆ ವಿಶ್ವಸಂಸ್ಥೆಯ ಮುಖ್ಯಾಲಯದ ಹೊರಗೆ ಮೂರು ದಿನಗಳ ಕಾಲ ಉಪವಾಸ ಸತ್ಯಾಗ್ರಹಕ್ಕೆ ಕುಳಿತಿದ್ದರು.

ಶಿರಿನ್ ನೆಹಶಾತ್ ಅವರ ಜೊತೆ ಸಂದರ್ಶನ. ಸಂದರ್ಶಕರು ಸಂಶೋಧಕಿ ಒಕ್ಸಾನಾ ಷೆಫ್ರಾನೋವಾ: 

ಶಿರಿನ್ ನೆಹಶಾತ್ ಅವರ ಕುರಿತ ಡಾಕ್ಯುಮೆಂಟರಿ: 

ಚಿತ್ರ ಶೀರ್ಷಿಕೆಗಳು: 
ಶಿರಿನ್ ನೆಹಶಾತ್ ಅವರ Fervor series (2000)

ಶಿರಿನ್ ನೆಹಶಾತ್ ಅವರ Hassan, from Our House Is on Fire series (2013)

ಶಿರಿನ್ ನೆಹಶಾತ್ ಅವರ I Am Its Secret, (1999)

ಶಿರಿನ್ ನೆಹಶಾತ್ ಅವರ On Guard, (1998)

ಶಿರಿನ್ ನೆಹಶಾತ್ ಅವರ Rapture film series (1999)

ಶಿರಿನ್ ನೆಹಶಾತ್ ಅವರ Rapture Series (1999)

ಶಿರಿನ್ ನೆಹಶಾತ್ ಅವರ Rapture, (1999), video still

ಶಿರಿನ್ ನೆಹಶಾತ್ ಅವರ Soliloquy Film (1999)

ಶಿರಿನ್ ನೆಹಶಾತ್ ಅವರ untitled (1996)

ಶಿರಿನ್ ನೆಹಶಾತ್ ಅವರ Women of Allah, (1994)

ಈ ಅಂಕಣದ ಹಿಂದಿನ ಬರೆಹಗಳು:
ಪೇಂಟಿಂಗ್ ಎಂಬುದು ಐಡಿಯಾ ಮತ್ತು ವಾಸ್ತವದ ಮಧ್ಯಂತರ ಸ್ಥಿತಿ – ಲೀ ಉಹ್ವಾನ್
ಸದಭಿರುಚಿ ಎಂಬುದು ಆಧುನಿಕ ಬದುಕಿನ ಶಾಪ – ಗಿಲ್ಬರ್ಟ್ ಮತ್ತು ಜಾರ್ಜ್
ಆನೆಲದ್ದಿ ಮತ್ತು ಕ್ರಿಸ್ ಒಫಿಲಿ
ನಿಸರ್ಗ ನನ್ನ ಸಹಶಿಲ್ಪಿ – ಆಂಡಿ ಗೋಲ್ಡ್ಸ್‌ವರ್ದಿ
ಫಿಗರೇಟಿವ್ ಚಿತ್ರಗಳು ಕೂಡಾ ಇಂದು ಪ್ರಸ್ತುತ – ಪೀಟರ್ ಡಾಯ್
ಕಾನ್ಸೆಪ್ಚುವಲ್ ಆರ್ಟ್‌ನ ಜನಕ – ಸೊಲ್ ಲೆವಿಟ್
ಮನುಷ್ಯ ಆಗಿರೋದು ಅಂದ್ರೆ ಏನು?- ವಿಲಿಯಂ ಕೆಂಟ್ರಿಜ್
“ಸೂಪರ್ ಫ್ಲ್ಯಾಟ್” ಐ ಕ್ಯಾಂಡಿಗಳ ತಕಾಷಿ ಮುರಾಕಾಮಿ
ಅಲ್ಲಿರುವುದು ನನ್ನಮನೆ – ದೊ ಹೊ ಸುಹ್
ದಿ ಲೈಫ್ ಆಫ್ CB: ಅರ್ಥಾತ್, ಕ್ರಿಷ್ಚಿಯನ್ ಬೋಲ್ತನಸ್ಕಿ
ಅಸೆಂಬ್ಲಿಗಳಲ್ಲಿ “ಬಾಕತನ” ತೋರಿಸಿದ ಅರ್ಮಾನ್
ಪ್ರಾಮಾಣಿಕತೆಯೇ ಸೌಂದರ್ಯ- ಜೊರ್ಗ್ ಇಮ್ಮೆಂದ್ರಾಫ್
ನಾಗರೀಕತೆಯ ಒಡಕಿಗೆ ಕನ್ನಡಿ ಹಿಡಿದ ಡೊರಿಸ್ ಸಾಲ್ಸೆದೊ
ಕಾನ್ಸೆಪ್ಚುವಲ್ ಆರ್ಟ್‌ಗೆ ತಳಪಾಯ –ರಾಬರ್ಟ್ ರಾಷನ್‌ಬರ್ಗ್
ಡಿಜಿಟಲ್ ಜಗತ್ತಿನಲ್ಲಿ ಒರಿಜಿನಲ್‌ನ ಹುಡುಕಾಟ – ಥಾಮಸ್ ರಫ್
ಕಲೆ ಜಗತ್ತನ್ನು ಬದಲಾಯಿಸಲೇ ಬೇಕೆಂದಿಲ್ಲ- ಫಿಯೊನಾ ಹಾಲ್
ಜಾಗತೀಕರಣದ ಆಟಗಳ ಬೆನ್ನಟ್ಟಿರುವ ಇಂಕಾ ಶೋನಿಬೇರ್
ಅರ್ಥವಂತಿಕೆಗಾಗಿ ಅರ್ಥ ಕಳೆದುಕೊಳ್ಳಬೇಕೆಂಬ- ಗು ವೆಂಡಾ
ಗದ್ದಲದ ಲೋಕದಲ್ಲಿ ಒಳಗಿನ ಪಿಸುಮಾತು- ನಿಯೊ ಆವ್
ಕಲೆ ಒಂದು ಉತ್ಪನ್ನವಲ್ಲ ಪ್ರಕ್ರಿಯೆ- ನಾಮನ್ ಬ್ರೂಸ್
‘ಇನ್ಫಾರ್ಮೇಷನ್ ಸೂಪರ್ ಹೈವೇ’ ಹೊಳಹು- ನಾಮ್ ಜುನ್ ಪಾಯಿಕ್
ಬದುಕಿನ ಮುಜುಗರಗಳಿಗೆ ಹೊರದಾರಿ- ಸ್ಟೀವ್ ಮೆಕ್ವೀನ್
ಅವ್ಯಕ್ತವನ್ನು ವ್ಯಕ್ತದಿಂದ ವಿವರಿಸುವ ರೀಚಲ್ ವೈಟ್‌ರೀಡ್
ಒಪ್ಪಿತ ನೈತಿಕತೆಯ ದ್ವಂದ್ವಗಳ ಶೋಧ - ಸಾರಾ ಲೂಕಸ್
ತನ್ನೊಳಗಿನ “ತೋಳ”ತನಕ್ಕೆ ಭಾವಕೊಟ್ಟ- ಕಿಕಿ ಸ್ಮಿತ್
“ನಾನು ಪ್ರೀ-ಪಿಕ್ಸೆಲ್”- ಚಕ್ ಕ್ಲೋಸ್
ಕಲೆ ಎಂಬುದು ಪ್ರಶ್ನಿಸುವ ಕಲೆ- ಸ್ಯು ಬಿಂಗ್
ವೀಡಿಯೊ ಆರ್ಟ್ ಕಾಲದ ’ರೆಂಬ್ರಾಂಟ್’
ದೇಹಕ್ಕೆ ವಿಸ್ತರಣೆ; ಯಂತ್ರಗಳಿಗೆ ಆತ್ಮ- ರೆಬೆಕಾ ಹಾರ್ನ್
ಪಾಪ್ ಆರ್ಟಿಗೊಬ್ಬ ಗಾಡ್‌ಫಾದರ್ – ಪೀಟರ್ ಬ್ಲೇಕ್
ಬಾರ್ಬರಾ ಕ್ರುಗರ್‌ - ಘೋಷಣೆಯೊಂದು ಆರ್ಟಾಗುವ ಮ್ಯಾಜಿಕ್
ಭಾವನೆಯಿಂದ ವರ್ತನೆಯೆಡೆಗೆ -ಒಲಫರ್ ಎಲಿಯಾಸನ್
ಚರಿತ್ರೆಯ ನೆರಳಿನ ಬಂಡಾಯಗಾರ್ತಿ - ಕಾರಾ ವಾಕರ್
“ರಪ್ಪೆಂದು… ಮುಖಕ್ಕೆ ತಣ್ಣೀರು ರಾಚುವ ಸಾಂಟಿಯಾಗೊ ಸಿಯೆರಾ”
“ಪಾತ್ರಾನುಸಂಧಾನ ಮತ್ತು ಅದರಿಂದಾಚೆ: ಸಿಂಡಿ ಶೆರ್ಮನ್”
ಬ್ರಿಟಿಷ್ ಕಲಾಜಗತ್ತಿನ ’ಬ್ಯಾಡ್ ಗರ್ಲ್’ –ತ್ರೇಸಿ ಎಮಿನ್
ಕಲೆಯ ಬೀದಿಯಲ್ಲೊಬ್ಬ 'ಬೆಳದಿಂಗಳ ಬಾಲೆ' - ಬಾಂಕ್ಸಿ
“ಕಾನ್ಸೆಪ್ಚುವಲ್ ಆರ್ಟ್‌ನ ಪಿತಾಮಹ ಮಾರ್ಸೆಲ್ ದುಷಾಮ್ ”
“ಪ್ರತಿಯೊಬ್ಬ ವ್ಯಕ್ತಿಯೂ ಕಲಾವಿದನೇ; ಸಮಾಜವೇ ಶಿಲ್ಪ”
“ಅಮೂರ್ತದಿಂದ ನವಮೂರ್ತದತ್ತ – ಭಾರತವೇ ಸ್ಪೂರ್ತಿ”
“ಕಲಾಲೋಕದ ಡೊನಾಲ್ಡ್ ಟ್ರಂಪ್ – ಜೆಫ್ ಕೂನ್ಸ್”
“ಸಿಗ್ಮಾರ್ ಪೋಲ್ಕ್ ಎಂಬ ರಸಶಾಸ್ತ್ರಿಗೆ ಕಲೆಯೂ ವಿಮರ್ಶೆಯೇ”
“ಒಳಗಣ ಅನಂತ ಮತ್ತು ಹೊರಗಣ ಅನಂತ”
“ಪ್ಯಾಕ್ ಅಪ್“ – ಕ್ರಿಸ್ತೊ ಮತ್ತು ಜೇನ್ ಕ್ಲೋದ್ ದಂಪತಿ ಶೈಲಿ
ಜಗತ್ತಿಗೊಬ್ಬಳು ಸೂಜಿಮಲ್ಲಿ – ಕಿಮ್ ಸೂ ಜಾ
ವ್ಯಗ್ರತೆಯ ಒಳಹರಿವುಗಳ ಶೋಧ – ಮೋನಾ ಹಾಟಮ್
ಪರ್ಫಾರ್ಮಿಂಗ್ ಆರ್ಟ್ ನ ಹಿರಿಯಜ್ಜಿ – ಮಾರಿನಾ ಅಬ್ರಾಮೊವಿಚ್
ಸೈ ಗು-ಚಾಂಗ್ ಎಂಬ ’ಬೆಂಕಿಚೂರ್ಣ’
ಅನೀಶ್ ಕಪೂರ್ ಅವರ “ಕರಿ”ಗೆ ಅಂಟಿದ “ಗುಲಾಲಿ” ವಿವಾದ
ಅತಿವೇಗಕ್ಕೆ ಬೆಲೆ ತೆತ್ತ ಡೇಮಿಯನ್ ಹರ್ಸ್ಟ್
ಸೂರ್ಯಕಾಂತಿಯ ಹೊಸಮೊಳಕೆ… ಆಯ್ ವೇಯಿ ವೇಯಿ
ಆನ್ಸೆಲ್ಮ್ ಕೀಫರ್ ಕಟ್ಟಿಕೊಡುವ ವಿನಾಶದ ವಿಷಣ್ಣತೆ
ಕಟ್-ಕಾಪಿ-ಪೇಸ್ಟ್ ನಿಂದ ಸಿಟ್-ಥಿಂಕ್-ಆಕ್ಟ್ ನತ್ತ

MORE NEWS

ಬೇಲಿಯ ಗೂಟದ ಮೇಲೊಂದು ಚಿಟ್ಟೆಃ ಅನುದಿನದ ದಂದುಗದೊಂದಿಗೆ ಅನುಸಂಧಾನ

31-12-1899 ಬೆಂಗಳೂರು

"ಲೋಕದ ವಾಸ್ತವವಗಳ ಮುಖವಾಡಗಳೊಂದಿಗೆ ಮುಖಾಮುಖಿಯಾಗುವ ಇವರ ಕವಿತೆಗಳು ದೈನಂದಿನ ಬದುಕಿನ ವಿನ್ಯಾಸವನ್ನೇ ಕಾವ್ಯವನ್ನ...

ಚಕ್ರಾಸನ ಮತ್ತು ಭುಜಂಗಾಸನ

26-03-2024 ಬೆಂಗಳೂರು

"ವ್ಯಕ್ತಿಯು ‘ಚಕ್ರಾಸನ’ ಮಾಡುವಾಗ ಮೊದಲು ಬೆನ್ನಿನ ಮೇಲೆ ಮಲಗಬೇಕು. ಇದು ವ್ಯಕ್ತಿಯನ್ನು ಶಕ್ತಿಯುತವ...

ಹಿಂದಿನ ನಿಲ್ದಾಣದಲ್ಲಿ...

19-03-2024 ಬೆಂಗಳೂರು

'ಪ್ರಯಾಣದ ಭಾಗವಾಗಿ ನಮ್ಮೊಂದಿಗಿದ್ದು ನೆನಪುಗಳ ಬುತ್ತಿ ಕಟ್ಟಿಕೊಡುವ ಈ "ಹಿಂದಿನ ನಿಲ್ದಾಣಗಳೇ" ಬದುಕಲು...