ನಾನು ಮ್ಯಾಟರಿಸ್ಟ್: ಕಾರ್ಲ್ ಆಂದ್ರೆ

Date: 19-10-2021

Location: ಬೆಂಗಳೂರು


ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯುವ ಅಂಕಣ 'ಈಚೀಚೆ, ಇತ್ತೀಚೆ'. ಪ್ರತಿ ವಾರ ಪ್ರಕಟವಾಗುವ ಈ ಸರಣಿಯಲ್ಲಿ ಈ ಬಾರಿ ಅಮೆರಿಕ ಮೂಲದ ಮಿನಿಮಲಿಸ್ಟ್ ಆರ್ಟ್ ಕಲಾವಿದ ಕಾರ್ಲ್ ಆಂದ್ರೆ ಕಲಾಬದುಕಿನ ಕುರಿತು ಬರೆದಿದ್ದಾರೆ.

ಕಲಾವಿದ: ಕಾರ್ಲ್ ಆಂದ್ರೆ  (Carl Andre) 
ಜನನ: 16 ಸೆಪ್ಟಂಬರ್, 1935 
ಶಿಕ್ಷಣ: ಫಿಲಿಪ್ಸ್ ಅಕಾಡೆಮಿ, ಮಸಾಚ್ಯುಸೆಟ್ಸ್ 
ವಾಸ: ನ್ಯೂಯಾರ್ಕ್, ಅಮೆರಿಕ 
ಕವಲು: ಮಿನಿಮಲಿಸ್ಟ್ ಆರ್ಟ್ 
ವ್ಯವಸಾಯ:  ಸ್ಕಲ್ಪ್ಚರ್‌ಗಳು, ಕಾವ್ಯ 

ಕಾರ್ಲ್ ಆಂದ್ರೆ ಅವರ ಸಿ.ವಿ.ಗಾಗಿ ಇಲ್ಲಿ ಕ್ಲಿಕ್ ಮಾಡಿ:

ಕಾರ್ಲ್ ಆಂದ್ರೆ ಅವರ ವೆಬ್‌ಸೈಟಿಗಾಗಿ ಇಲ್ಲಿ ಕ್ಲಿಕ್ ಮಾಡಿ:   

ಶಿಲ್ಪ ಎಂದರೆ ಅದನ್ನು ಕೆತ್ತಬೇಕು, ಕಡೆಯಬೇಕು, ನಿರ್ಮಾಣ ಮಾಡಬೇಕು ಎಂಬೆಲ್ಲ ಸಾಂಪ್ರದಾಯಿಕ ಚಿಂತನೆಗಳನ್ನು ದೂರ ಮಾಡಿ, ಇರುವ ವಸ್ತುಗಳನ್ನು ಅವು ಇರುವಂತೆಯೇ ನೆಲದಲ್ಲಿ ವಿಂಗಡಿಸಿ, ಜೋಡಿಸಿಟ್ಟು ಕಲಾಕೃತಿಗಳೆಂದು ಕರೆದ ಕಾರ್ಲ್ ಆಂದ್ರೆ, ಮಿನಿಮಲಿಸ್ಟ್ ಚಳುವಳಿಯ ಪ್ರಮುಖರಲ್ಲೊಬ್ಬರು. ಡೊನಾಲ್ಡ್ ಝಡ್, ಸೋಲ್ ಲೆವಿಟ್ ಅವರಂತಹ ಪ್ರಮುಖ ಮಿನಿಮಲಿಸ್ಟ್ ಕಲಾವಿದರ ಜೊತೆಯಲ್ಲಿ ಆಂದ್ರೆ ಅವರನ್ನೂ ಮಹತ್ವದ ಕಲಾವಿದ ಎಂದು ಪರಿಗಣಿಸಲಾಗುತ್ತದೆ, ರಿಚರ್ಡ್ ಸೆರಾ ಅಂತಹ ಕಲಾವಿದರು ಆಂದ್ರೆ ಬಿಟ್ಟಲ್ಲಿಂದ ಮಿನಿಮಲಿಸ್ಟ್ ಚಳುವಳಿಯನ್ನು ಮುಂದುವರಿಸಿದರು ಎಂದು ಕಲಾಚರಿತ್ರೆ ಗುರುತಿಸುತ್ತದೆ.  

ಆಂದ್ರೆ ಅವರ ಕಲಾಕೃತಿಗಳಲ್ಲಿ ಮಹತ್ವದ ಸಂಗತಿ ಎಂದರೆ ದೊಡ್ಡ ಗಾತ್ರದ ಮನುಷ್ಯರನ್ನು ಕುಬ್ಜರನ್ನಾಗಿಸುವ ಕಲಾಕೃತಿಗಳಲ್ಲಿ ಅವರಿಗೆ ನಂಬಿಕೆ ಇಲ್ಲ. ಕುರಿತಿಟ್ಟು ನೋಡದಿದ್ದರೆ ಹಠಾತ್ ಆಗಿ ಕಾಣಿಸದ, ಮುಖಕ್ಕೆ ರಾಚುವಂತಿರದ ಅವರ ಕಲಾಕೃತಿಗಳು ಯಾವತ್ತೂ ನೋಡುಗನಿಗೆ ಮುಖಾಮುಖಿ ಆಗುವುದಿಲ್ಲ. ಅವು ನೆಲದಲ್ಲಿ ಹೇಗೆ ಸಹಜವಾಗಿ ಹರಡಿರಬಹುದೆಂದರೆ, ನೋಡುಗ ಅವುಗಳ ಮೇಲೆ ನಡೆದು ಹೋಗುವುದಕ್ಕೂ ಅವಕಾಶ ಇದೆ.  

ಕಲೆ ಒಂದು ಫಾರ್ಮ್ ಇದ್ದಲ್ಲಿಂದ ಅದು ಒಂದು ಸ್ಟ್ರಕ್ಚರ್ ಆಗುವುದು ಮತ್ತು ಅಲ್ಲಿಂದ ಮುಂದೆ ಅದು ಒಂದು ಪ್ಲೇಸ್ ಆಗುವುದು ಆಂದ್ರೆ ಅವರ ಕಲಾಬದುಕಿನ ಪಯಣದ ಭಾಗವಾಗಿತ್ತು. ತನ್ನನ್ನು ತಾನೊಬ್ಬ ಮ್ಯಾಟರಿಸ್ಟ್ ಎಂದು ಕರೆದುಕೊಳ್ಳುವ ಅವರು, ತಾವೇ ಸ್ವತಃ ನಿಂತು ಸಿದ್ಧ ವಸ್ತುಗಳನ್ನು ಅದು ಸ್ಥಾಪನೆಗೊಳ್ಳಲಿರುವ ಪರಿಸರಕ್ಕೆ ಹೊಂದಿಕೆಯಾಗುವಂತೆ ಜೋಡಿಸಿ ಕಲಕೃತಿಗಳನ್ನು ರಚಿಸುತ್ತಾರೆ. ಇದೊಂದು ಮೇಸ್ತ್ರಿಗಳು ಇಟ್ಟಿಗೆಗಳನ್ನು ಒಂದೊಂದಾಗಿ ಜೋಡಿಸಿ ಗೋಡೆ ಕಟ್ಟುವ ರೀತಿಯ ಪ್ರಕ್ರಿಯೆ. ಈ ಪ್ರಕ್ರಿಯೆಯನ್ನು ಅವರು ತಾನೇ ಸ್ವತಃ ಮಾಡುವುದು ವಿಶೇಷ. ಹೀಗೆ ಒಮ್ಮೆ ತಾವು ನಿರ್ಮಿಸಿದ ಬಳಿಕ ಅವರು ಅದನ್ನು ಕಿತ್ತು ತೆಗೆದು ಬೇರೆಡೆ ಮರು ಜೋಡಿಸುವುದಕ್ಕೆ ಬೇರೆಯವರಿಗೆ ಅವಕಾಶ ನೀಡುತ್ತಾರೆ. “Sculpture is a place”ಎಂಬ ಅವರ ಪ್ರಸಿದ್ಧ ಹೇಳಿಕೆಯ ಹಿಂದಿರುವುದು, ಅವರು ಅದನ್ನು ಜೋಡಿಸಿಟ್ಟಾಗ ಅವು ಒಂದು (ಪ್ಲೇಸ್) ಅವಕಾಶವನ್ನು ಸೃಷ್ಠಿಸುವ ಸಾಮರ್ಥ್ಯ ಪಡೆಯುವುದು. ಇಲ್ಲಿ ಪ್ಲೇಸ್ ಎಂದರೆ, ಅದು ಒಂದು ಪರಿಸರದಲ್ಲಿ ಆ ಪರಿಸರ ಇನ್ನಷ್ಟು ಖಚಿತವಾಗಿ ಕಾಣಿಸುವಂತೆ ಮಾಡುವ ಹೊಂದಾಣಿಕೆ ಎಂದವರು ವ್ಯಾಖ್ಯಾನಿಸುತ್ತಾರೆ. ತನ್ನ ಕಲಾಕೃತಿಗಳ ಮೇಲೆ ಜನ ನಡೆದಾಡಲು ಅವಕಾಶ ಇರುವುದನ್ನು ಅವರು ವಿವರಿಸುವುದು ಹೀಗೆ: I don’t like works of art which are terribly conspicuous. I like works of art which are invisible if you’re not looking for them. I like this thing about being able to be in the middle of the work. I don’t mind people touching my sculptures at all, it’s perfectly all right, with the hand. There are a number of properties which materials have which are conveyed by walking on them: there are things like the sound of a piece of work and its sense of friction, you might say.  (1970ರಲ್ಲಿ ಆರ್ಟ್ ಫೋರಂನ ಫಿಲ್ಲಿಸ್ ಟಕ್‌ಮನ್ ಅವರಿಗೆ ನೀಡಿದ ಸಂದರ್ಶನದಲ್ಲಿ) 

ತನ್ನ ಶಿಕ್ಷಣದ ಬಳಿಕ 55-56ರ ಅವಧಿಯಲ್ಲಿ ಅಮೆರಿಕನ್ ಸೇನೆಯ ಗುಪ್ತಚರ ವಿಭಾಗದಲ್ಲಿ ಕೆಲಸ ಮಾಡಿದ್ದ ಅವರು, ಬಳಿಕ ನ್ಯೂಯಾರ್ಕಿಗೆ ಬಂದು, ಅಲ್ಲಿ ಕಾವ್ಯಾಭ್ಯಾಸ ಮತ್ತು ಶಿಲ್ಪ ನಿರ್ಮಾಣದಲ್ಲಿ ತೊಡಗಿಕೊಳ್ಳುತ್ತಾರೆ. ಎಜ್ರಾ ಪೌಂಡ್ ಅವರ ಕಾವ್ಯದಿಂದ ಪ್ರೇರಿತರಾದ ಆಮ್ದ್ರೆ ಅವರ ಮೂಲಕವೇ ರೊಮೇನಿಯಾದ ಕಾನ್ಸ್ಟಾಂಟಿನ್ ಬ್ರಾಂಕೂಸಿ ಅವರ ಕಲಾಕೃತಿಗಳಿಂದ ಪ್ರೇರಿತರಾಗುತ್ತಾರೆ, ಕಲಾವಿದ ಫ್ರಾಂಕ್ ಸ್ಟೆಲ್ಲಾ ಕೂಡ ಅವರನ್ನು ಪ್ರಭಾವಿಸುತ್ತಾರೆ. ಅಲ್ಲಿಂದ ಅವರ ಕಲಾ ಬದುಕು ಆರಂಭಗೊಳ್ಳುತ್ತದೆ. ಆರಂಭದಲ್ಲಿ ಹಣ ಇಲ್ಲದಾಗ ತಾನು ರಚಿಸುತ್ತಿದ್ದ ಸಣ್ಣ ಶಿಲ್ಪಗಳಿಗೆ ಅಕ್ಷರ ಲೆಕ್ಕಾಚಾರದ ಕಾವ್ಯಗಳನ್ನು ಬರೆದು, ಅವುಗಳನ್ನು ಶಿಲ್ಪಗಳ ಜೊತೆ ಪ್ರದರ್ಶಿಸುತ್ತಿದ್ದರು. ಅವರ ಶೈಲಿ ಸುಮಾರಿಗೆ 60-70ರ ದಶಕದಲ್ಲಿ ಕಾನ್ಸೆಪ್ಚುವಲ್ ಆಗಿ ಪಕ್ವಗೊಂಡು ಗಮನ ಸೆಳೆಯತೊಡಗಿತು. 

ಕೇವಲ ಕಲಾವಿದನಾಗಿ ಮಾತ್ರವಲ್ಲದೇ, 1969ರ ಹೊತ್ತಿಗೆ ಆರ್ಟ್ ವರ್ಕರ್ಸ್ ಕೊಯಲಿಶನ್ ಎಂಬ ಕಲಾವಿದರ ಸಂಘಟನೆಯ ಮೂಲಕ ಅವರು ಕಲಾವಿದರ ಹಕ್ಕುಗಳಿಗಾಗಿಯೂ ಹೋರಾಟ ಮಾಡುತ್ತಾರೆ. 85ರಲ್ಲಿ ವೈಯಕ್ತಿಕವಾಗಿ ದುರ್ಘಟನೆಯೊಂದರಲ್ಲಿ ಅವರು ಹೆಸರು ಕೆಡಿಸಿಕೊಳ್ಳಬೇಕಾಯಿತು. ಅವರ ಕ್ಯೂಬನ್ ಪತ್ನಿ ಅನಾ ಮೆಂಡಿಯೇಟಾ ಅವರು ಅಕಸ್ಮಾತ್ ಆಗಿ ಅವರ ನ್ಯೂಯಾರ್ಕ್ ಅಪರ್ಟ್‌ಮೆಂಟಿನಿಂದ ಕೆಳಬಿದ್ದು ತೀರಿಕೊಂಡಾಗ ಆಂದ್ರೆ ಬಂಧನಕ್ಕೊಳಗಾಗಬೇಕಾಗುತ್ತದೆ. 1988ರಲ್ಲಿ ಅವರು ದೋಷಮುಕ್ತರೆಂದು ತೀರ್ಪು ಬಂತಾದರೂ, ವೈಯಕ್ತಿಕವಾಗಿ ಅವರು ಹಲವರ ತಿರಸ್ಕಾರಕ್ಕೊಳಗಾಗಬೇಕಾಯಿತು. ಅವರು ಯಾವುದರ ವಿರುದ್ಧ ಆಕ್ಟಿವಿಸ್ಟ್ ಆಗಿ ಹೋರಾಡಿದರೋ, ಅದೇ ಆಪಾದನೆಗಳು ಸ್ವತಃ ಅವರ ವಿರುದ್ಧವೇ ಬರುವಂತಾಯಿತು.  

ಈಗ ಅವರು ಮೆಲಿಸ್ಸಾ ಕ್ರೆಷ್ಮರ್ ಅವರನ್ನು ಮದುವೆಯಾಗಿ ನ್ಯೂಯಾರ್ಕಿನಲ್ಲಿ ನೆಲೆಸಿದ್ದಾರೆ.   

ಕಾರ್ಲ್ ಆಂದ್ರೆ ಅವರ ಕಲಾಕೃತಿಗಳ ಕುರಿತು ವಿಚಾರ ಸಂಕಿರಣ: 

 ಕಾರ್ಲ್ ಆಂದ್ರೆ ಅವರ ಆಡಿಯೊ ಸಂದರ್ಶನ:

ಚಿತ್ರಗಳು: 

ಕಾರ್ಲ್ ಆಂದ್ರೆ ಅವರ 5 x 20 Altstadt Rectangle (1967)  

ಕಾರ್ಲ್ ಆಂದ್ರೆ ಅವರ 9th Cedar Corner, (2007)  

ಕಾರ್ಲ್ ಆಂದ್ರೆ ಅವರ 10 x 10 Altstadt Copper Square (1967)  

ಕಾರ್ಲ್ ಆಂದ್ರೆ ಅವರ Belgica Blue Tin Raster, (1990)  

ಕಾರ್ಲ್ ಆಂದ್ರೆ ಅವರ Fall (1968)  

ಕಾರ್ಲ್ ಆಂದ್ರೆ ಅವರ Hour rose (1959)  

ಕಾರ್ಲ್ ಆಂದ್ರೆ ಅವರ Sculpture as Place, (1958–2010)  

ಕಾರ್ಲ್ ಆಂದ್ರೆ ಅವರ Squaw Rock (1964)  

ಕಾರ್ಲ್ ಆಂದ್ರೆ ಅವರ Timber Spindle Exercise (1964)  

ಕಾರ್ಲ್ ಆಂದ್ರೆ ಅವರ Tin Ribbon, (1997)  

ಕಾರ್ಲ್ ಆಂದ್ರೆ ಅವರ untitled (1963)  

ಈ ಅಂಕಣದ ಹಿಂದಿನ ಬರೆಹಗಳು:
ಫೊಟೋಗ್ರಫಿಯನ್ನು ಸಮಕಾಲೀನ ಆರ್ಟ್ ಮಾಡಿದ ವಿಕ್ ಮ್ಯೂನಿಸ್
ನನ್ನದೇ ಸಂಗತಿಗಳಿವು: ಆದರೆ ಕೇವಲ ನನ್ನವಲ್ಲ– ಶಿರಿನ್ ನೆಹಶಾತ್
ಪೇಂಟಿಂಗ್ ಎಂಬುದು ಐಡಿಯಾ ಮತ್ತು ವಾಸ್ತವದ ಮಧ್ಯಂತರ ಸ್ಥಿತಿ – ಲೀ ಉಹ್ವಾನ್
ಸದಭಿರುಚಿ ಎಂಬುದು ಆಧುನಿಕ ಬದುಕಿನ ಶಾಪ – ಗಿಲ್ಬರ್ಟ್ ಮತ್ತು ಜಾರ್ಜ್
ಆನೆಲದ್ದಿ ಮತ್ತು ಕ್ರಿಸ್ ಒಫಿಲಿ
ನಿಸರ್ಗ ನನ್ನ ಸಹಶಿಲ್ಪಿ – ಆಂಡಿ ಗೋಲ್ಡ್ಸ್‌ವರ್ದಿ
ಫಿಗರೇಟಿವ್ ಚಿತ್ರಗಳು ಕೂಡಾ ಇಂದು ಪ್ರಸ್ತುತ – ಪೀಟರ್ ಡಾಯ್
ಕಾನ್ಸೆಪ್ಚುವಲ್ ಆರ್ಟ್‌ನ ಜನಕ – ಸೊಲ್ ಲೆವಿಟ್
ಮನುಷ್ಯ ಆಗಿರೋದು ಅಂದ್ರೆ ಏನು?- ವಿಲಿಯಂ ಕೆಂಟ್ರಿಜ್
“ಸೂಪರ್ ಫ್ಲ್ಯಾಟ್” ಐ ಕ್ಯಾಂಡಿಗಳ ತಕಾಷಿ ಮುರಾಕಾಮಿ
ಅಲ್ಲಿರುವುದು ನನ್ನಮನೆ – ದೊ ಹೊ ಸುಹ್
ದಿ ಲೈಫ್ ಆಫ್ CB: ಅರ್ಥಾತ್, ಕ್ರಿಷ್ಚಿಯನ್ ಬೋಲ್ತನಸ್ಕಿ
ಅಸೆಂಬ್ಲಿಗಳಲ್ಲಿ “ಬಾಕತನ” ತೋರಿಸಿದ ಅರ್ಮಾನ್
ಪ್ರಾಮಾಣಿಕತೆಯೇ ಸೌಂದರ್ಯ- ಜೊರ್ಗ್ ಇಮ್ಮೆಂದ್ರಾಫ್
ನಾಗರೀಕತೆಯ ಒಡಕಿಗೆ ಕನ್ನಡಿ ಹಿಡಿದ ಡೊರಿಸ್ ಸಾಲ್ಸೆದೊ
ಕಾನ್ಸೆಪ್ಚುವಲ್ ಆರ್ಟ್‌ಗೆ ತಳಪಾಯ –ರಾಬರ್ಟ್ ರಾಷನ್‌ಬರ್ಗ್
ಡಿಜಿಟಲ್ ಜಗತ್ತಿನಲ್ಲಿ ಒರಿಜಿನಲ್‌ನ ಹುಡುಕಾಟ – ಥಾಮಸ್ ರಫ್
ಕಲೆ ಜಗತ್ತನ್ನು ಬದಲಾಯಿಸಲೇ ಬೇಕೆಂದಿಲ್ಲ- ಫಿಯೊನಾ ಹಾಲ್
ಜಾಗತೀಕರಣದ ಆಟಗಳ ಬೆನ್ನಟ್ಟಿರುವ ಇಂಕಾ ಶೋನಿಬೇರ್
ಅರ್ಥವಂತಿಕೆಗಾಗಿ ಅರ್ಥ ಕಳೆದುಕೊಳ್ಳಬೇಕೆಂಬ- ಗು ವೆಂಡಾ
ಗದ್ದಲದ ಲೋಕದಲ್ಲಿ ಒಳಗಿನ ಪಿಸುಮಾತು- ನಿಯೊ ಆವ್
ಕಲೆ ಒಂದು ಉತ್ಪನ್ನವಲ್ಲ ಪ್ರಕ್ರಿಯೆ- ನಾಮನ್ ಬ್ರೂಸ್
‘ಇನ್ಫಾರ್ಮೇಷನ್ ಸೂಪರ್ ಹೈವೇ’ ಹೊಳಹು- ನಾಮ್ ಜುನ್ ಪಾಯಿಕ್
ಬದುಕಿನ ಮುಜುಗರಗಳಿಗೆ ಹೊರದಾರಿ- ಸ್ಟೀವ್ ಮೆಕ್ವೀನ್
ಅವ್ಯಕ್ತವನ್ನು ವ್ಯಕ್ತದಿಂದ ವಿವರಿಸುವ ರೀಚಲ್ ವೈಟ್‌ರೀಡ್
ಒಪ್ಪಿತ ನೈತಿಕತೆಯ ದ್ವಂದ್ವಗಳ ಶೋಧ - ಸಾರಾ ಲೂಕಸ್
ತನ್ನೊಳಗಿನ “ತೋಳ”ತನಕ್ಕೆ ಭಾವಕೊಟ್ಟ- ಕಿಕಿ ಸ್ಮಿತ್
“ನಾನು ಪ್ರೀ-ಪಿಕ್ಸೆಲ್”- ಚಕ್ ಕ್ಲೋಸ್
ಕಲೆ ಎಂಬುದು ಪ್ರಶ್ನಿಸುವ ಕಲೆ- ಸ್ಯು ಬಿಂಗ್
ವೀಡಿಯೊ ಆರ್ಟ್ ಕಾಲದ ’ರೆಂಬ್ರಾಂಟ್’
ದೇಹಕ್ಕೆ ವಿಸ್ತರಣೆ; ಯಂತ್ರಗಳಿಗೆ ಆತ್ಮ- ರೆಬೆಕಾ ಹಾರ್ನ್
ಪಾಪ್ ಆರ್ಟಿಗೊಬ್ಬ ಗಾಡ್‌ಫಾದರ್ – ಪೀಟರ್ ಬ್ಲೇಕ್
ಬಾರ್ಬರಾ ಕ್ರುಗರ್‌ - ಘೋಷಣೆಯೊಂದು ಆರ್ಟಾಗುವ ಮ್ಯಾಜಿಕ್
ಭಾವನೆಯಿಂದ ವರ್ತನೆಯೆಡೆಗೆ -ಒಲಫರ್ ಎಲಿಯಾಸನ್
ಚರಿತ್ರೆಯ ನೆರಳಿನ ಬಂಡಾಯಗಾರ್ತಿ - ಕಾರಾ ವಾಕರ್
“ರಪ್ಪೆಂದು… ಮುಖಕ್ಕೆ ತಣ್ಣೀರು ರಾಚುವ ಸಾಂಟಿಯಾಗೊ ಸಿಯೆರಾ”
“ಪಾತ್ರಾನುಸಂಧಾನ ಮತ್ತು ಅದರಿಂದಾಚೆ: ಸಿಂಡಿ ಶೆರ್ಮನ್”
ಬ್ರಿಟಿಷ್ ಕಲಾಜಗತ್ತಿನ ’ಬ್ಯಾಡ್ ಗರ್ಲ್’ –ತ್ರೇಸಿ ಎಮಿನ್
ಕಲೆಯ ಬೀದಿಯಲ್ಲೊಬ್ಬ 'ಬೆಳದಿಂಗಳ ಬಾಲೆ' - ಬಾಂಕ್ಸಿ
“ಕಾನ್ಸೆಪ್ಚುವಲ್ ಆರ್ಟ್‌ನ ಪಿತಾಮಹ ಮಾರ್ಸೆಲ್ ದುಷಾಮ್ ”
“ಪ್ರತಿಯೊಬ್ಬ ವ್ಯಕ್ತಿಯೂ ಕಲಾವಿದನೇ; ಸಮಾಜವೇ ಶಿಲ್ಪ”
“ಅಮೂರ್ತದಿಂದ ನವಮೂರ್ತದತ್ತ – ಭಾರತವೇ ಸ್ಪೂರ್ತಿ”
“ಕಲಾಲೋಕದ ಡೊನಾಲ್ಡ್ ಟ್ರಂಪ್ – ಜೆಫ್ ಕೂನ್ಸ್”
“ಸಿಗ್ಮಾರ್ ಪೋಲ್ಕ್ ಎಂಬ ರಸಶಾಸ್ತ್ರಿಗೆ ಕಲೆಯೂ ವಿಮರ್ಶೆಯೇ”
“ಒಳಗಣ ಅನಂತ ಮತ್ತು ಹೊರಗಣ ಅನಂತ”
“ಪ್ಯಾಕ್ ಅಪ್“ – ಕ್ರಿಸ್ತೊ ಮತ್ತು ಜೇನ್ ಕ್ಲೋದ್ ದಂಪತಿ ಶೈಲಿ
ಜಗತ್ತಿಗೊಬ್ಬಳು ಸೂಜಿಮಲ್ಲಿ – ಕಿಮ್ ಸೂ ಜಾ
ವ್ಯಗ್ರತೆಯ ಒಳಹರಿವುಗಳ ಶೋಧ – ಮೋನಾ ಹಾಟಮ್
ಪರ್ಫಾರ್ಮಿಂಗ್ ಆರ್ಟ್ ನ ಹಿರಿಯಜ್ಜಿ – ಮಾರಿನಾ ಅಬ್ರಾಮೊವಿಚ್
ಸೈ ಗು-ಚಾಂಗ್ ಎಂಬ ’ಬೆಂಕಿಚೂರ್ಣ’
ಅನೀಶ್ ಕಪೂರ್ ಅವರ “ಕರಿ”ಗೆ ಅಂಟಿದ “ಗುಲಾಲಿ” ವಿವಾದ
ಅತಿವೇಗಕ್ಕೆ ಬೆಲೆ ತೆತ್ತ ಡೇಮಿಯನ್ ಹರ್ಸ್ಟ್
ಸೂರ್ಯಕಾಂತಿಯ ಹೊಸಮೊಳಕೆ… ಆಯ್ ವೇಯಿ ವೇಯಿ
ಆನ್ಸೆಲ್ಮ್ ಕೀಫರ್ ಕಟ್ಟಿಕೊಡುವ ವಿನಾಶದ ವಿಷಣ್ಣತೆ
ಕಟ್-ಕಾಪಿ-ಪೇಸ್ಟ್ ನಿಂದ ಸಿಟ್-ಥಿಂಕ್-ಆಕ್ಟ್ ನತ್ತ

 

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...