"ನೆಲವೆಲ್ಲ ನಂದಬಟ್ಟಲು ಕತೆಯ ಮುಕ್ತಾಳ ಆತಂಕ ಮತ್ತು ಅದನ್ನು ಅವಳು ಮೀರುವ ಒಂದು ಕ್ಷಣವನ್ನು ಸಂಜೋತಾ ಬಹಳ ಚೆನ್ನಾಗಿ ದಾಖಲಿಸಿದ್ದಾರೆ. ಅದು ಕತೆ ಗೆಲ್ಲುವ ಕ್ಷಣವೂ ಹೌದು," ಎನ್ನುತ್ತಾರೆ ಜೋಗಿ. ಅವರು ಸಂಜೋತಾ ಪುರೋಹಿತ ಅವರ ʻನೆಲವೆಲ್ಲ ನಂದಬಟ್ಟಲುʼ ಕೃತಿ ಕುರಿತು ಬರೆದ ಅನಿಸಿಕೆ.
ಮೂರು ದಿನಗಳಿಂದ ಸಂಜೋತಾ ಪುರೋಹಿತ ಬರೆದ ನೆಲವೆಲ್ಲ ನಂದಬಟ್ಟಲು ಸಂಕಲನದ ಬಹುತೇಕ ಕತೆಗಳನ್ನು ಓದಿ ಮುಗಿಸಿದೆ. ಅಮೆರಿಕಾದ ಯಾವುದೋ ಭಾಗದಲ್ಲಿರುವ, ನನ್ನ ನಂತರದ ಎರಡನೆಯ ತಲೆಮಾರು ಅನ್ನಬಹುದಾದ ಸಂಜೋತಾಗೆ ಭಾಷೆಯ ಮೇಲಿರುವ ಅಕ್ಕರೆ, ಅವರು ಕತೆಗಳನ್ನು ಬರೆಯುವ ಶೈಲಿಯಲ್ಲಿ, ಅವರು ಕೊಡುವ ಶೀರ್ಷಿಕೆಗಳಲ್ಲಿ ಕಾಣಿಸುತ್ತದೆ. ನೆಲವೆಲ್ಲ ನಂದಬಟ್ಟಲು ಅನ್ನುವುದು ಎಷ್ಟು ಚೆಂದದ ಹೆಸರು. ಒಂದು ಹೂವಿನ ನೆಳಲು ಎಂಬ ಹೆಸರು ಕೂಡ ಆಪ್ತ. ಈ ಕತೆಯ ಮೊದಲ ಸಾಲು – ಚಾರುಲತೆ ಇನ್ನಿಲ್ಲವೆಂಬ ಸುದ್ದಿ ನಮ್ಮ ಮನೆಯಲ್ಲೆಲ್ಲ ಧೂಪದ ಹೊಗೆಯಂತೆ ಹಬ್ಬಿತು- ಕೂಡ ಇಷ್ಟವಾಯಿತು. ಇವರ ಕತೆಗಳಲ್ಲಿ ಇಂಥ ಚೆಂದದ ಹೊಳಪಿನ ವಾಕ್ಯಗಳು ಅಲ್ಲಲ್ಲಿ ಸಿಗುತ್ತವೆ.
ನೆಲವೆಲ್ಲ ನಂದಬಟ್ಟಲು ಕತೆಯ ಮುಕ್ತಾಳ ಆತಂಕ ಮತ್ತು ಅದನ್ನು ಅವಳು ಮೀರುವ ಒಂದು ಕ್ಷಣವನ್ನು ಸಂಜೋತಾ ಬಹಳ ಚೆನ್ನಾಗಿ ದಾಖಲಿಸಿದ್ದಾರೆ. ಅದು ಕತೆ ಗೆಲ್ಲುವ ಕ್ಷಣವೂ ಹೌದು. ಇಂಥ ಕತೆಗಳಲ್ಲಿ ಮನಸ್ಸು ದುರಂತವನ್ನು ಎದುರು ನೋಡುತ್ತಿರುತ್ತದೆ. ಆದರೆ ಸಂಜೋತಾ ಕತೆ ಬೇರೆಯೇ ಹಾದಿ ಹಿಡಿಯುವಂತೆ ಮಾಡುತ್ತಾರೆ. ಮುಕ್ತಾಳ ತಲ್ಲಣ, ಅದಕ್ಕೆ ಕಾರಣವಾಗುವ ಅವಳ ಕೌಟುಂಬಿಕ ಹಿನ್ನೆಲೆ, ಅವಳ ಅನಾಥಪ್ರಜ್ಞೆ ಹೆಚ್ಚಿಸುವ ಪರಿಸರ, ಹೆಚ್ಚು ಅಂಕ ಪಡೆದಾಗಲೂ ಮುದುಡುವ ಮನ- ಇವೆಲ್ಲವನ್ನು ಸಂಜೋತಾ ಬಹಳ ಸೂಕ್ಷ್ಮವಾಗಿ ಹೆಣೆದಿದ್ದಾರೆ.
ಸಂಜೋತಾ ಕತೆ ಕಟ್ಟಿಕೊಡುವ ಚಾರುಲತೆಯ ಚಿತ್ರ, ಲಾಸ್ ವೆಗಾಸ್ ಬಲಿ ತೆಗೆದುಕೊಂಡ ಪ್ರಸಂಗ, ಪಚ್ಚಿಯ ವಿಷಾದ, ಫಾರೂಕ್‌ನ ದುಗುಡ, ಒಬ್ಬೊಬ್ಬರ ಕತೆ ಹೇಳಲಿಕ್ಕೂ ಸಂಜೋತಾ ಆರಿಸಿಕೊಳ್ಳುವ ವಿಭಿನ್ನ ಪರಿಸರ- ಇವೆಲ್ಲ ಅವರ ಕತೆಗಳನ್ನು ಓದುವಂತೆ ಮಾಡುವುದರ ಜತೆಗೇ, ಅವರು ಕತೆ ಹೇಳಲು ಮಾಡಿಕೊಳ್ಳುವ ತಯಾರಿ ಮೆಚ್ಚುಗೆಯಾಗುತ್ತದೆ.
ನೆಲವೆಲ್ಲ ನಂದಬಟ್ಟಲು ಸಂಜೋತಾರ ಬಗ್ಗೆ ಭರವಸೆ ಮೂಡಿಸಿದೆ.
"ಕಲ್ಕತ್ತಾದ ಗೌರವಾನ್ವಿತ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಹುಡುಗಿ, ತನ್ನ ಸಂಬಂಧಿ ಅಣ್ಣನ ಸ್ಥಾನದಲ್ಲಿ ಇದ್ದ ರಮೇ...
"ಇದು ಕವನದ ಪಲ್ಲವಿ. ಈ ಹಾಡು ಏಕಾಂತಕ್ಕೂ, ಲೋಕಾಂತಕ್ಕೂ ಸೇರಿಯೇ ಸಲ್ಲುವ ಹಾಡು. ಅಂತರಂಗ ಎನ್ನುವುದು ನಮ್ಮೊಳಗಿನದ್...
"ದಲಿತರು ಒಳಪಂಗಡಗಳ ಭಾವನಾತ್ಮಕ ಸೆಳವಿಗೆ ಸಿಕ್ಕು ಮೂಲ ಸಿದ್ದಾಂತದಿಂದ ದೂರವಾಗುತ್ತಿದ್ದಾರೆ. ಇಂದು ಅಂಬೇಡ್ಕರ್ ವಿ...
©2025 Book Brahma Private Limited.