ನೇಸರು ಜಾಗತಿಕ ಏಕಾಂಕ ನಾಟಕ ರಚನೆ ಸ್ಪರ್ಧೆ- 2022

Date: 21-09-2022

Location: ಬೆಂಗಳೂರು


ಮೈಸೂರು ಅಸೋಸಿಯೇಷನ್ ಮುಂಬೈ ವತಿಯಿಂದ ನೇಸರು ಜಾಗತಿಕ ಏಕಾಂಕ ನಾಟಕ ರಚನಾ ಸ್ಪರ್ಧೆ ಏರ್ಪಡಿಸಲಾಗಿದೆ. ಮೈಸೂರು ಅಸೋಸಿಯೇಷನ್ ಮುಂಬೈ ಒಂದು ಪ್ರತಿಷ್ಠಿತ ಕನ್ನಡ ಸಂಸ್ಥೆಯಾಗಿದ್ದು ಶತಕವನ್ನು ಪೂರೈಸುತ್ತಿದೆ. ಈ ಮೊದಲೂ ಕೂಡ ಕನ್ನಡ ಕಥಾ, ಕವನ, ನಾಟಕಗಳ ಸ್ಪರ್ಧೆಯನ್ನು ಆಯೋಜಿಸುತ್ತಲೇ ಬಂದಿದೆ. ಇದೇ ಸರಣಿಯಲ್ಲಿ ಮೂರನೆಯ “ನೇಸರು ಜಾಗತಿಕ ಏಕಾಂಕ ನಾಟಕ ರಚನಾ ಸ್ಪರ್ಧೆ" ಯನ್ನು ಆಯೋಜಿಸಿದೆ.

ನಾಟಕ ರಚನಾಕಾರರು ಯಾವುದೇ ವಿಷಯದ ಕುರಿತು ನಾಟಕಗಳನ್ನು ರಚಿಸಬಹುದಾಗಿದೆ. ನಾಟಕಕ್ಕೆ ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ. ನಾಟಕಗಳನ್ನು ಕಳುಹಿಸಲು 2022 ನವೆಂಬರ್‌ 15 ಮಂಗಳವಾರ ಅಂತಿಮ ದಿನಾಂಕವಾಗಿದೆ. ತೀರ್ಪುಗಾರರ ತೀರ್ಮಾನವೇ ಅಂತಿಮ.ಜನವರಿ ತಿಂಗಳಿನಲ್ಲಿ ವಿಜೇತರನ್ನು ಘೋಷಿಸಲಾಗುವುದು.

ನಾಟಕ ಸ್ಪರ್ಧೆಯ ನಿಯಮಾವಳಿಗಳು ಈ ಕೆಳಗಿನಂತಿವೆ:

1) ನಾಟಕಗಳು ಏಕಾಂಕ ನಾಟಕವಾಗಿದ್ದು ಸ್ವಂತ ರಚನೆಯಾಗಿರಬೇಕು. ಅನುವಾದ, ಅನುಕರಣೆ ಆಗಿರಕೂಡದು. ಕನ್ನಡದಲ್ಲಿಯೇ ಇರಬೇಕು.

2) ನಾಟಕಗಳು ಸುಮಾರು 30 ಪುಟಗಳ ಮಿತಿಯಲ್ಲಿದ್ದು, ನಾಟಕವನ್ನು ಪ್ರದರ್ಶನ ಮಾಡಿದರೆ 45-50 ನಿಮಿಷಗಳ ಒಳಗೆ ಮುಗಿಯುವಂತಿರಬೇಕು. ಕಾಗದದ ಒಂದೇ ಮಗ್ಗುಲಲ್ಲಿ ಚಿತ್ತಿಲ್ಲದಂತೆ ಬರೆದು ಕಳುಹಿಸಿ. ( ಕೈಬರವಣಿಗೆ ಅಥವಾ ಕಂಪ್ಯೂಟರ್ ಮುದ್ರಿತ), ಇಮೈಲ್ : nataka.nesaru @gmail.com ಮೂಲಕವೂ ಕಳುಹಿಸಬಹುದು.

3) ನಾಟಕಕಾರರ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಹಾಗೂ ಇಮೈಲ್ ಪ್ರತ್ಯೇಕ ಕಾಗದದಲ್ಲಿ ಬರೆದು ಕಳುಹಿಸಬೇಕು.

4) ಒಬ್ಬರು ಒಂದೇ ನಾಟಕವನ್ನು ಕಳುಹಿಸಬೇಕು.

5) ಸ್ಪರ್ಧೆಗೆ ಬಂದ ನಾಟಕಗಳನ್ನು ಮರಳಿಸಲಾಗುವುದಿಲ್ಲ.

ಬಹುಮಾನ : ಪ್ರಥಮ ಬಹುಮಾನ 15,000,ದ್ವಿತೀಯ ಬಹುಮಾನ 10,000, ತೃತೀಯ ಬಹುಮಾನ 7,500 ರೂಪಾಯಿ

ಹೆಚ್ಚಿನ ಮಾಹಿತಿಗಾಗಿ : 022 24037 065 , 9920966497 Email : nataka.nesaru@gmail.com

 

MORE NEWS

ವಿಶು ಕುಮಾರ್ ಸಾಹಿತ್ಯ ಪ್ರಶಸ್ತಿ: ...

01-10-2022 ಬೆಂಗಳೂರು

ಯುವ ವಾಹಿನಿ ಕೇಂದ್ರ ಸಮಿತಿಯಿಂದ ನೀಡಲಾಗುವ ವಿಶು ಕುಮಾರ್ ಸಾಹಿತ್ಯ ಪ್ರಶಸ್ತಿಗೆ ಈ ಬಾರಿ ಲೇಖಕ, ವಿಮರ್ಶಕ ಡಾ. ಬಿ. ಜನಾ...

ಕನ್ನಡವು ಸಂವಹನಕ್ಕಷ್ಟೇ ಅಲ್ಲ; ಅದಕ...

01-10-2022 ಬೆಂಗಳೂರು

ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸರಕಾರಿ ಶಾಲೆಗಳಿಗೆ ಮೂಲಭೂತ ಸೌಲಭ್ಯಗಳನ್ನು ಪೂರೈಸಲು 5 ಕೋಟಿ ಅನುದಾನ...

ಪುಸ್ತಕಗಳ ರಚನೆಯಲ್ಲಿ ಎಚ್ಚರಿಕೆ ಅವ...

30-09-2022 ಪುತ್ತೂರು.

ಪುಸ್ತಕಗಳು ಓದುಗರ ಹಾಗೂ ಸಮಾಜದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಲೇಖಕರು ಪುಸ್ತಕವನ್ನು ಎಚ್ಚರಿಕೆಯಿಂದ ರಚಿಸಬೇಕಾದ...