ನಿರಂತರ ಆಧ್ಯಯನದ ಸೂಕ್ಷ್ಮ ಸ್ನೇಹಿ ಈಶ್ವರಯ್ಯ ಮಠ: ಅಕ್ಕೋಣಿ ಪ್ರಶಂಸೆ

Date: 24-01-2021

Location: ಕಲಬುರಗಿ


ಸಾಹಿತಿ ಪ್ರೊ. ಈಶ್ವರಯ್ಯ ಮಠ ಅವರ 151ನೇ ದಿನದ ಪುಣ್ಯಸ್ಮರಣಾರ್ಥ ಪ್ರಕಟಿತ `ನೆನಪೇ ನಂದಾದೀಪ ಕೃತಿಯು ಕಲಬುರಗಿಯ ಸುವರ್ಣ ಭವನದಲ್ಲಿ ಭಾನುವಾರ ಬೆಳಗ್ಗೆ ಬಿಡುಗಡೆಗೊಂಡಿತು.

ಕಳೆದ 4 ತಿಂಗಳ ಹಿಂದೆಯಷ್ಟೇ ಹೃದಯಾಘಾತದಿಂದ ನಿಧನರಾದ ಸಾಹಿತಿ ಡಾ. ಈಶ್ವರಯ್ಯ ಮಠ ಅವರ ಅಭಿಮಾನಿ ಬಳಗವು ತೀಕ್ಷ್ಣವಾಗಿ ಸ್ಪಂದಿಸಿ ಡಾ. ಈಶ್ವರಯ್ಯ ಮಠ ಅವರ ನೆನಪಿಗಾಗಿ ಈ ಕೃತಿಯನ್ನು ಪ್ರಕಟಿಸುವ ಮೂಲಕ ಅವರನ್ನು ಸ್ಮರಿಸಿಕೊಂಡಿತು.

ಕೃತಿ ಬಿಡುಗಡೆ ಮಾಡಿದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ರಾಜ್ಯ ಅಧ್ಯಕ್ಷ ಅಪ್ಪಾರಾವ್ ಅಕ್ಕೋಣಿ ಮಾತನಾಡಿ ‘ಡಾ. ಈಶ್ವರಯ್ಯ ಮಠ ಅವರು ನಿರಂತರ ಅಧ್ಯಯನ ಸೂಕ್ಷ್ಮ ಸ್ನೇಹಿ. ಸಮಯಪ್ರಜ್ಞೆ, ಕರ್ತವ್ಯ ನಿಷ್ಠೆ ಮಾದರಿ. ಅದಕ್ಕೆಂದೇ, ಅವರು ಅಗಲಿದ ಅಲ್ಪಾವಧಿಯಲ್ಲೇ ಅವರ ನೆನಪಿಗಾಗಿ ಸ್ಮರಣ ಸಂಪುಟ ಪ್ರಕಟಗೊಳ್ಳುತ್ತಿರುವುದು ಅವರ ಸ್ನೇಹಮಯ ವ್ಯಕ್ತಿತ್ವವನ್ನು ಸೂಚಿಸುತ್ತದೆ ಎಂದು ಸ್ಮರಿಸಿದರು.

ಕೇಂದ್ರೀಯ ವಿ.ವಿ. ಕನ್ನಡ ಪ್ರಾಧ್ಯಾಪಕ ಡಾ. ವಿಕ್ರಂ ವಿಸಾಜಿ ಮಾತನಾಡಿ ‘ನೆನಪೇ ನಂದಾದೀಪ’ ಕೃತಿಯಲ್ಲಿ ಈಶ್ವರಯ್ಯ ಮಠ ಅವರ ಸಾಹಿತ್ಯದ ಎತ್ತರ, ಅನುಭವದ ಗಟ್ಟಿತನ ಎಲ್ಲಕ್ಕೂ ಹೆಚ್ಚಾಗಿ ಅವರ ಸ್ನೇಹಮಯ ವ್ಯಕ್ತಿತ್ವವೇ ಎಲ್ಲ ಬರಹಗಳ ಕೇಂದ್ರ ವಸ್ತುವಾಗಿದೆ. ಈ ಮೂಲಕ ಈಶ್ವರಯ್ಯ ಮಠ ಒಬ್ಬ ವ್ಯಕ್ತಿಯಾಗಿ ಸಾಹಿತ್ಯಕ ಶಕ್ತಿಯಾಗಿ ಹೇಗಿದ್ದರೂ ಎಂಬುದಕ್ಕೆ ಕನ್ನಡಿ ಹಿಡಿಯುತ್ತಿವೆ ಎಂದರು.

ಗುಲಬರ್ಗಾ ವಿ.ವಿ. ಪ್ರಾಧ್ಯಾಪಕ ಡಾ. ವಿ.ಜಿ. ಪೂಜಾರ ಅಧ್ಯಕ್ಷತೆವಹಿಸಿದ್ದರು. ಹಿಂದುಳಿದ ವರ್ಗಗಳ ಕಲ್ಯಾನ ಇಲಾಖೆ ವಿಶ್ರಾಂತ ಜಿಲ್ಲಾ ಅಧಿಕಾರಿ ಮೌನೇಶ ಗೋನಾಲ, ,ಗುಲಬರ್ಗಾ ವಿ.ವಿ. ಪ್ರಾಧ್ಯಾಪಕ ಶಿವಾನಂದ ವಿರಕ್ತಮಠ, ಉಸ್ಮಾನಿಯಾ ವಿ.ವಿ. ಪ್ರಾಧ್ಯಾಪಕ ಲಿಂಗಣ್ಣ ಗೋನಾಳ, ಶರಣಯ್ಯ ಸ್ವಾಮಿ ಹಿರೇಮಠ ದೇವರಗೋನಾಳ, ಪ್ರಾಧ್ಯಾಪಕ ಕಲ್ಯಾಣರಾವ್ ಪಾಟೀಲ್, ಪ್ರೊ. ಶಾಂತಾ ಭಿಮಸೇನರಾವ್ ಸೇರಿದಂತೆ ಸಾಹಿತ್ಯಾಸಕ್ತು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

 

MORE NEWS

ಪುಸ್ತಕ ಸಂಸ್ಕೃತಿ ಬೆಳೆಸುವುದು ಸಾಮಾಜಿಕ ನ್ಯಾಯದ ಭಾಗ ಅಂತ ಸರ್ಕಾರಗಳು ಭಾವಿಸಬೇಕು: ಬರಗೂರು

23-04-2024 ಬೆಂಗಳೂರು

ಬೆಂಗಳೂರು: ನಿಜವಾದ ಪುಸ್ತಕ ಪ್ರೀತಿ ಬೆಳೆಯ ಬೇಕಿರುವುದು, ಉಳಿಯ ಬೇಕಿರುವುದು ಮುಂದಿನ ಪೀಳಿಗೆಯಿಂದ, ಆ ಮುಂದಿನ ಪೀ...

ಪ್ರಕಾಶನ ಸಂಸ್ಥೆಯನ್ನು ತೆರೆದಿರುವ ಪ್ರಕಾಶಕರೆಲ್ಲರೂ ಹುಚ್ಚರೇ; ಕೆ.ಎನ್. ಗಣೇಶಯ್ಯ

23-04-2024 ಬೆಂಗಳೂರು

ಪುಸ್ತಕಗಳನ್ನು ಕೊಂಡುಕೊಂಡು ಓದುವವರ ಪ್ರಮಾಣ ಕಡಿಮೆಯೂ ಆಗಿಲ್ಲ ಹೆಚ್ಚು ಕೂಡ ಆಗಿಲ್ಲ. ಬಹುಶಃ ಪುಸ್ತಕವನ್ನು ಓದಬೇಕು ಅನ್...

‘ಕಠಾರಿ ಅಂಚಿನ ನಡಿಗೆ’ ಸಮಕಾಲೀನ ವಿಡಂಬನೆಗಳ ಪುಸ್ತಕ: ಶಿವಸುಂದರ್

22-04-2024 ಬೆಂಗಳೂರು

ಬೆಂಗಳೂರು: ಚಂದ್ರಪ್ರಭ ಕಠಾರಿಯವರು ವಿಡಂಬನೆಗಳನ್ನು ಬರೆದಿದ್ದಾರೆ. ವಿಡಂಬನೆ, ಲೇವಡಿ ಮಾಡುವುದಕ್ಕೆ ಇಂದು ಬಹಳ ಧೈರ್ಯ ಬ...