ನಿಸರ್ಗ ನನ್ನ ಸಹಶಿಲ್ಪಿ – ಆಂಡಿ ಗೋಲ್ಡ್ಸ್‌ವರ್ದಿ

Date: 07-09-2021

Location: ಬೆಂಗಳೂರು


ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯುವ ಅಂಕಣ 'ಈಚೀಚೆ, ಇತ್ತೀಚೆ'. ಪ್ರತಿ ವಾರ ಪ್ರಕಟವಾಗುವ ಈ ಸರಣಿಯಲ್ಲಿ ಈ ಬಾರಿ ಸ್ಕಾಟ್ಲಂಡ್  ಮೂಲದ ಶಿಲ್ಪ ಮತ್ತು ಫೊಟೋಗ್ರಫಿ ಕಲಾವಿದ ಆಂಡಿ ಗೋಲ್ಡ್ಸ್‌ವರ್ದಿ ಅವರ ಕಲಾಬದುಕಿನ ಕುರಿತು ಬರೆದಿದ್ದಾರೆ.

ಕಲಾವಿದ: ಆಂಡಿ ಗೋಲ್ಡ್ಸ್‌ವರ್ದಿ  (Andy Goldsworthy) 
ಜನನ: 25 ಜುಲೈ, 1956 
ಶಿಕ್ಷಣ: ಬ್ರಾಡ್‌ಫರ್ಡ್ ಕಾಲೇಜ್ ಮತ್ತು ಪ್ರೆಸ್ಟನ್ ಪಾಲಿಟೆಕ್ನಿಕ್, ಇಂಗ್ಲೆಂಡ್
ವಾಸ: ಪೆನ್‌ಪಾಂಟ್, ಸ್ಕಾಟ್ಲಂಡ್ 
ಕವಲು: ಪರಿಸರ ಕಲೆ, ನೆಲ ಕಲೆ 
ವ್ಯವಸಾಯ: ಶಿಲ್ಪಗಳು, ಫೊಟೋಗ್ರಫಿ
 

ಆಂಡಿ ಗೋಲ್ಡ್ಸ್‌ವರ್ದಿ ಅವರ ಸಿ.ವಿ.ಗಾಗಿ ಇಲ್ಲಿ ಕ್ಲಿಕ್ ಮಾಡಿ:

ಆಂಡಿ ಗೋಲ್ಡ್ಸ್‌ವರ್ದಿ ಅವರ ವೆಬ್‌ಸೈಟಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

ಭೂಭಾಗಗಳನ್ನು ಬಳಸಿಕೊಂಡು ಕಲಾಕೃತಿಗಳನ್ನು ರಚಿಸುವ ಲ್ಯಾಂಡ್ ಆರ್ಟ್‌ಗೆ ಮರು ಜೀವ ನೀಡಿ, ಅದಕ್ಕೊಂದು ಆಪ್ತತೆ, ಸಾಮಾಜಿಕ ಹಾಗೂ ಮಾನವೀಯ ಮುಖ ತಂದುಕೊಟ್ಟ ಶ್ರೇಯಸ್ಸು ಆಂಡಿ ಗೋಲ್ಡ್ಸ್‌ವರ್ದಿ ಅವರಿಗೆ ಸಲ್ಲಬೇಕು. ಅವರಿಗೆ ಭೂಮಿ ಕೇವಲ ಒಂದು ಕ್ಯಾನ್‌ ವಾಸ್ ಅಲ್ಲ. ಅಲ್ಲಿನ ಚರಿತ್ರೆ, ಆ ನೆಲಕ್ಕೂ ಅಲ್ಲಿ ಬದುಕಿ ಹೋದ ಮನುಷ್ಯರಿಗೂ ಇರುವ ಸಂಬಂಧಗಳು, ನಿಸರ್ಗ ಸೌಂದರ್ಯದ ಕಂಡೂ ಕಾಣದಂತಿರುವ-ನುಣುಚಿ ಓಡುವ ಸ್ವರೂಪ ಅವರಿಗ ಆಸಕ್ತಿಯ ಕ್ಷೇತ್ರಗಳು. ನಿಸರ್ಗವನ್ನೇ ಕಚ್ಛಾವಸ್ತುವಾಗಿ ಬಳಸಿಕೊಂಡು, ಮನುಷ್ಯ ಕೂಡ ನಿಸರ್ಗದ ಅವಿಚ್ಛಿನ್ನ ಭಾಗ ಎಂಬ ನಂಬಿಕೆಯೊಂದಿಗೆ ಕಲಾಕೃತಿಗಳನ್ನು ರಚಿಸುವ ಅವರು ತನ್ನ ಶಿಲ್ಪಗಳಲ್ಲಿ ನಿಸರ್ಗ ಕೂಡ ಸಹಕಲಾವಿದನಾಗಿ ಪಾಲ್ಗೊಳ್ಳುತ್ತದೆ ಎನ್ನುತ್ತಾರೆ. 

ತನ್ನ ಕಲಾಕೃತಿಗಳ ಮೂಲಕ ಪರಿಸರ ರಕ್ಷಣೆಗೆ ಸಂಬಂಧಿಸಿದ ಚರ್ಚೆಗಳಿಗೆ ಕೊಡುಗೆ ನೀಡಿರುವ ಆಂಡಿ, ತನ್ನ ಓರಗೆಯ ಹಲವಾರು ಪ್ರಮುಖ ಕಲಾವಿದರಿಗೆ ಪ್ರೇರಣೆಯೂ ಆಗಿದ್ದಾರೆ. ಒಂದು ಜಾಗದಲ್ಲಿರುವ ಕಲ್ಲು, ಬಂಡೆ, ಮರದ ರೆಂಬೆ, ಎಲೆ, ಐಸ್ ಇತ್ಯಾದಿ ನೈಸರ್ಗಿಕ ವಸ್ತುಗಳನ್ನೇ ಜೋಡಿಸಿ, ಅದರಲ್ಲಿ ನಿಸರ್ಗದ ಪಾತ್ರ ಬಿಂಬಿತವಾಗುವಂತೆ ಕಲಾಕೃತಿಗಳನ್ನು ರಚಿಸುವ ಆಂಡಿ ಅವರಿಗೆ ಕಲಾಕೃತಿಗಿಂತ ಅದನ್ನು ಮಾಡುವ ಪ್ರಕ್ರಿಯೆ ಮಹತ್ವದ್ದು. ಹಲವು ಬಾರಿ ಶಾಶ್ವತವಲ್ಲದ ತನ್ನ ಕಲಾಕೃತಿಗಳ ಸಾವೂ ಕೂಡ ಸಹಜ ಕಲೆಯ ಭಾಗ ಎಂದು ಹೇಳುವ ಅವರು, ಈ ಕಲಾಕೃತಿಗಳನ್ನು ಫೊಟೋಗ್ರಫಿ ದಾಖಲೀಕರಣದ ಮೂಲಕ ಜೀವಂತ ಇರಿಸುತ್ತಾರೆ. ತನ್ನ ಕಲಾ ಪ್ರಕ್ರಿಯೆಯನ್ನು ಅವರು ವಿವರಿಸುವುದು ಹೀಗೆ: “Movement, change, light, growth and decay are the lifeblood of nature, the energies that I try to tap through my work. I need the shock of touch, the resistance of place, materials and weather, the earth as my source. Nature is in a state of change and that change is the key to understanding. I want my art to be sensitive and alert to changes in material, season and weather. Each work grows, stays, decays. Process and decay are implicit. Transience in my work reflects what I find in nature.” (ಸೌಜನ್ಯ: ಲಿವಿಂಗ್ ಯುವರ್ ವೈಲ್ಡ್ ಕ್ರಿಯೇಟಿವಿಟಿ) 

ಉತ್ತರ ಇಂಗ್ಲೆಂಡಿನ ಚೆಷೈರ್ ನಗರದಲ್ಲಿ ಜನಿಸಿ, ಬಳಿಕ ಲೀಡ್ಸ್‌ ನಗರದಲ್ಲಿ ಬೆಳೆದ ಆಂಡಿ ಹೆತ್ತವರು ಕರ್ಮಠ ಮೆಥಾಡಿಸ್ಟ್ ಪಂಥದವರು. ಅವರ ತಂದೆ ಅಲ್ಲೇ ಸ್ಥಳೀಯ ಕಾಲೇಜಿನಲ್ಲಿ ಅಪ್ಲೈಡ್ ಗಣಿತದ ಪ್ರಾಧ್ಯಾಪಕರು. ಬಾಲ್ಯದಲ್ಲಿ ಕೈಗಾರಿಕಾ ನಗರ ಲೀಡ್ಸ್‌ನ ಯಂತ್ರಗಳ ಸದ್ದಿನ ಬದಲು ಪ್ರಶಾಂತ ಪರಿಸರದ ಕಡೆ ಆಸಕ್ತರಾಗಿದ್ದ ಆಂಡಿ, ಕೃಷಿ ಕೂಡ ಯಾವ ಕಲಾಕೃತಿಗೂ ಕಡಿಮೆ ಅಲ್ಲ ಎಂಬ ನಂಬಿಕೆ ಹೊಂದಿದ್ದರು. ತಾನು ಮುಂದೆ ಬೆಳೆದು ಗಾರ್ಡನರ್ ಅಥವಾ ಕೃಷಿಕ ಆಗಲಿದ್ದೇನೆ ಎಂದುಕೊಂಡಿದ್ದ ಅವರು ಕಲಿಕೆಯ ವೇಳೆ ಕೂಡ ತಮ್ಮ ಸ್ಟುಡಿಯೋಗೆ ಸೀಮಿತರಾಗಿರಲಿಲ್ಲ. 

ಶಿಲ್ಪ ಕಲಾವಿದೆ ಜುಡಿತ್ ಗ್ರೆನ್ಸನ್ ಅವರನ್ನು ಮದುವೆ ಆದ ಬಳಿಕ ಪೆನ್‌ಪಾಂಟ್‌ನಲ್ಲಿ ನೆಲೆಸಿರುವ ಆಂಡಿ, 1990 ರ ವೇಳೆಗಾಗಲೇ ಪ್ರಸಿದ್ಧಿ ಪಡೆದಿದ್ದರು. ಜಗತ್ತಿನಾದ್ಯಂತ ಇಂದು ಅವರ ಎಪ್ಪತ್ತಕ್ಕೂ ಮಿಕ್ಕಿ ಕಮಿಷನ್ಡ್ ಕಲಾಕೃತಿಗಳಿವೆ. ಕಲಾವಿಮರ್ಶಕರು ಅವರನ್ನು ನಿಸರ್ಗವನ್ನು ಸಿಂಗರಿಸುವ ಕಲಾವಿದ ಎಂದು ಮೂದಲಿಸಿದ್ದಿದೆ ಮತ್ತು ಸೈದ್ಧಾಂತಿಕವಾಗಿ ಬಲವಾದ ತಳಹದಿ ಹೊಂದಿರುವ ಕಲಾಕೃತಿಗಳಲ್ಲ ಎಂದು ಷರಾ ಬರೆದದ್ದಿದೆ. ಆದರೆ, ಕಲಾಜಗತ್ತಿಗೆ ಅವರು ಯಾವತ್ತಿಗೂ ಪ್ರಿಯರೇ. ತನ್ನ ಪತ್ನಿ ಜುಡಿತ್ ಅವರಿಗೆ ವಿಚ್ಛೇದನ ನೀಡಿದ ಬಳಿಕ ಆಂಡಿ ಈಗ ಕಲಾ ಚರಿತ್ರಜ್ಞೆ ಟೀನಾ ಫಿಸ್ಕ್ ಅವರ ಜೊತೆ ವಾಸವಾಗಿದ್ದಾರೆ. 2008 ರಲ್ಲಿ ಮೊದಲ ಪತ್ನಿ ಅಪಘಾತದಲ್ಲಿ ತೀರಿಕೊಂಡ ಬಳಿಕ, ಬೆನ್ನಿಗೇ ತಾಯಿ ಕೂಡ ತೀರಿಕೊಂಡದ್ದು ಆಂಡಿ ಅವರಿಗೆ ನೀಡಿದ ಆಘಾತ, ಅವರ ಕಲಾಕೃತಿಗಳಲ್ಲಿ ಖಾಲಿತನ, ಸಾವು ಮತ್ತಿತರ ವಸ್ತುವಿಷಯಗಳಿಗೆ ಹಾದಿ ತೆರೆಯಿತು.

20ನೇ ಶತಮಾನದುದ್ದಕ್ಕೂ ಆಧುನಿಕತೆಯ ಸಿದ್ಧಾಂತದಲ್ಲಿ ವಾಸ್ತವದ ಅನುಭವವನ್ನು ಅದರ ಅಂಶಗಳ ಭೌತಿಕ ಸತ್ಯಗಳ ಸಹಿತ ಸೆರೆಹಿಡಿಯುವುದು ಹೇಗೆ ಎಂಬ ಚಿಂತನೆಯಲ್ಲಿ ಕಲಾವಿದರು ತೊಡಗಿಕೊಂಡಿರುವಾಗ, ತನ್ನ ಕಲಾಕೃತಿಗಳಲ್ಲಿ ಪರಿಸರವನ್ನೇ ತನ್ನ ಕ್ಯಾನ್ವಾಸ್ ಮತ್ತು ಕಚ್ಛಾ ವಸ್ತು ಎರಡೂ ಆಗಿ ಬಳಸಿಕೊಳ್ಳುವ ಮೂಲಕ ಈ ಚರ್ಚೆಗೊಂದು ಹೊಸ ತಿರುವು ನೀಡಿದ್ದು ಆಂಡಿ ಗೋಲ್ಡ್ಸ್‌ವರ್ದಿ ಅವರ ಹೆಚ್ಚುಗಾರಿಕೆ ಎಂದು ಕಲಾಜಗತ್ತು ಪರಿಗಣಿಸಿದೆ.    

 ಆಂಡಿ ಗೋಲ್ಡ್ಸ್‌ವರ್ದಿ ಅವರ ಗ್ಲೆನ್‌ಮೊರಾಂಜಿ ಸ್ಮಾರಕ ಉಪನ್ಯಾಸ (2012):

ಆಂಡಿ ಗೋಲ್ಡ್ಸ್‌ವರ್ದಿ ಅವರ ಕುರಿತ ಡಾಕ್ಯುಮೆಂಟರಿ ರಿವರ್ ಅಂಡ್ ಟೈಡ್ಸ್ ನ ಪುಟ್ಟ ಭಾಗ: 

ಚಿತ್ರ ಶೀರ್ಷಿಕೆಗಳು:
ಆಂಡಿ ಗೋಲ್ಡ್ಸ್‌ವರ್ದಿ ಅವರ Balanced River Stones, Cumbria (1983) 

ಆಂಡಿ ಗೋಲ್ಡ್ಸ್‌ವರ್ದಿ ಅವರ Cairn (1997), Herring Island, Australia 

ಆಂಡಿ ಗೋಲ್ಡ್ಸ್‌ವರ್ದಿ ಅವರ Feathers from Dead Heron, Cumbria (1982) 

ಆಂಡಿ ಗೋಲ್ಡ್ಸ್‌ವರ್ದಿ ಅವರ Frozen Patch of Snow (making), Cumbria (1986) 

ಆಂಡಿ ಗೋಲ್ಡ್ಸ್‌ವರ್ದಿ ಅವರ Partly Stripped Sycamore Twigs Yorkshire (1972) 

ಆಂಡಿ ಗೋಲ್ಡ್ಸ್‌ವರ್ದಿ ಅವರ Red leaf patch, Brough, Cumbria (1983) 

ಆಂಡಿ ಗೋಲ್ಡ್ಸ್‌ವರ್ದಿ ಅವರ Snowball in Trees Yorkshire (1980) 

ಆಂಡಿ ಗೋಲ್ಡ್ಸ್‌ವರ್ದಿ ಅವರ Stone House (1997) Dunkeld sandstone 

ಆಂಡಿ ಗೋಲ್ಡ್ಸ್‌ವರ್ದಿ ಅವರ Storm King Wall (1997-98) New York. 

ಆಂಡಿ ಗೋಲ್ಡ್ಸ್‌ವರ್ದಿ ಅವರ Tree with stones around it (2007-2008) Yorkshire Sculpture Park, West Yorkshire, England 

ಆಂಡಿ ಗೋಲ್ಡ್ಸ್‌ವರ್ದಿ ಅವರ Woven Branch Circular Arch, Dumfrieshire, (1986) 

ಈ ಅಂಕಣದ ಹಿಂದಿನ ಬರೆಹಗಳು:
ಫಿಗರೇಟಿವ್ ಚಿತ್ರಗಳು ಕೂಡಾ ಇಂದು ಪ್ರಸ್ತುತ – ಪೀಟರ್ ಡಾಯ್
ಕಾನ್ಸೆಪ್ಚುವಲ್ ಆರ್ಟ್‌ನ ಜನಕ – ಸೊಲ್ ಲೆವಿಟ್
ಮನುಷ್ಯ ಆಗಿರೋದು ಅಂದ್ರೆ ಏನು?- ವಿಲಿಯಂ ಕೆಂಟ್ರಿಜ್
“ಸೂಪರ್ ಫ್ಲ್ಯಾಟ್” ಐ ಕ್ಯಾಂಡಿಗಳ ತಕಾಷಿ ಮುರಾಕಾಮಿ
ಅಲ್ಲಿರುವುದು ನನ್ನಮನೆ – ದೊ ಹೊ ಸುಹ್
ದಿ ಲೈಫ್ ಆಫ್ CB: ಅರ್ಥಾತ್, ಕ್ರಿಷ್ಚಿಯನ್ ಬೋಲ್ತನಸ್ಕಿ
ಅಸೆಂಬ್ಲಿಗಳಲ್ಲಿ “ಬಾಕತನ” ತೋರಿಸಿದ ಅರ್ಮಾನ್
ಪ್ರಾಮಾಣಿಕತೆಯೇ ಸೌಂದರ್ಯ- ಜೊರ್ಗ್ ಇಮ್ಮೆಂದ್ರಾಫ್
ನಾಗರೀಕತೆಯ ಒಡಕಿಗೆ ಕನ್ನಡಿ ಹಿಡಿದ ಡೊರಿಸ್ ಸಾಲ್ಸೆದೊ
ಕಾನ್ಸೆಪ್ಚುವಲ್ ಆರ್ಟ್‌ಗೆ ತಳಪಾಯ –ರಾಬರ್ಟ್ ರಾಷನ್‌ಬರ್ಗ್
ಡಿಜಿಟಲ್ ಜಗತ್ತಿನಲ್ಲಿ ಒರಿಜಿನಲ್‌ನ ಹುಡುಕಾಟ – ಥಾಮಸ್ ರಫ್
ಕಲೆ ಜಗತ್ತನ್ನು ಬದಲಾಯಿಸಲೇ ಬೇಕೆಂದಿಲ್ಲ- ಫಿಯೊನಾ ಹಾಲ್
ಜಾಗತೀಕರಣದ ಆಟಗಳ ಬೆನ್ನಟ್ಟಿರುವ ಇಂಕಾ ಶೋನಿಬೇರ್
ಅರ್ಥವಂತಿಕೆಗಾಗಿ ಅರ್ಥ ಕಳೆದುಕೊಳ್ಳಬೇಕೆಂಬ- ಗು ವೆಂಡಾ
ಗದ್ದಲದ ಲೋಕದಲ್ಲಿ ಒಳಗಿನ ಪಿಸುಮಾತು- ನಿಯೊ ಆವ್
ಕಲೆ ಒಂದು ಉತ್ಪನ್ನವಲ್ಲ ಪ್ರಕ್ರಿಯೆ- ನಾಮನ್ ಬ್ರೂಸ್
‘ಇನ್ಫಾರ್ಮೇಷನ್ ಸೂಪರ್ ಹೈವೇ’ ಹೊಳಹು- ನಾಮ್ ಜುನ್ ಪಾಯಿಕ್
ಬದುಕಿನ ಮುಜುಗರಗಳಿಗೆ ಹೊರದಾರಿ- ಸ್ಟೀವ್ ಮೆಕ್ವೀನ್
ಅವ್ಯಕ್ತವನ್ನು ವ್ಯಕ್ತದಿಂದ ವಿವರಿಸುವ ರೀಚಲ್ ವೈಟ್‌ರೀಡ್
ಒಪ್ಪಿತ ನೈತಿಕತೆಯ ದ್ವಂದ್ವಗಳ ಶೋಧ - ಸಾರಾ ಲೂಕಸ್
ತನ್ನೊಳಗಿನ “ತೋಳ”ತನಕ್ಕೆ ಭಾವಕೊಟ್ಟ- ಕಿಕಿ ಸ್ಮಿತ್
“ನಾನು ಪ್ರೀ-ಪಿಕ್ಸೆಲ್”- ಚಕ್ ಕ್ಲೋಸ್
ಕಲೆ ಎಂಬುದು ಪ್ರಶ್ನಿಸುವ ಕಲೆ- ಸ್ಯು ಬಿಂಗ್
ವೀಡಿಯೊ ಆರ್ಟ್ ಕಾಲದ ’ರೆಂಬ್ರಾಂಟ್’
ದೇಹಕ್ಕೆ ವಿಸ್ತರಣೆ; ಯಂತ್ರಗಳಿಗೆ ಆತ್ಮ- ರೆಬೆಕಾ ಹಾರ್ನ್
ಪಾಪ್ ಆರ್ಟಿಗೊಬ್ಬ ಗಾಡ್‌ಫಾದರ್ – ಪೀಟರ್ ಬ್ಲೇಕ್
ಬಾರ್ಬರಾ ಕ್ರುಗರ್‌ - ಘೋಷಣೆಯೊಂದು ಆರ್ಟಾಗುವ ಮ್ಯಾಜಿಕ್
ಭಾವನೆಯಿಂದ ವರ್ತನೆಯೆಡೆಗೆ -ಒಲಫರ್ ಎಲಿಯಾಸನ್
ಚರಿತ್ರೆಯ ನೆರಳಿನ ಬಂಡಾಯಗಾರ್ತಿ - ಕಾರಾ ವಾಕರ್
“ರಪ್ಪೆಂದು… ಮುಖಕ್ಕೆ ತಣ್ಣೀರು ರಾಚುವ ಸಾಂಟಿಯಾಗೊ ಸಿಯೆರಾ”
“ಪಾತ್ರಾನುಸಂಧಾನ ಮತ್ತು ಅದರಿಂದಾಚೆ: ಸಿಂಡಿ ಶೆರ್ಮನ್”
ಬ್ರಿಟಿಷ್ ಕಲಾಜಗತ್ತಿನ ’ಬ್ಯಾಡ್ ಗರ್ಲ್’ –ತ್ರೇಸಿ ಎಮಿನ್
ಕಲೆಯ ಬೀದಿಯಲ್ಲೊಬ್ಬ 'ಬೆಳದಿಂಗಳ ಬಾಲೆ' - ಬಾಂಕ್ಸಿ
“ಕಾನ್ಸೆಪ್ಚುವಲ್ ಆರ್ಟ್‌ನ ಪಿತಾಮಹ ಮಾರ್ಸೆಲ್ ದುಷಾಮ್ ”
“ಪ್ರತಿಯೊಬ್ಬ ವ್ಯಕ್ತಿಯೂ ಕಲಾವಿದನೇ; ಸಮಾಜವೇ ಶಿಲ್ಪ”
“ಅಮೂರ್ತದಿಂದ ನವಮೂರ್ತದತ್ತ – ಭಾರತವೇ ಸ್ಪೂರ್ತಿ”
“ಕಲಾಲೋಕದ ಡೊನಾಲ್ಡ್ ಟ್ರಂಪ್ – ಜೆಫ್ ಕೂನ್ಸ್”
“ಸಿಗ್ಮಾರ್ ಪೋಲ್ಕ್ ಎಂಬ ರಸಶಾಸ್ತ್ರಿಗೆ ಕಲೆಯೂ ವಿಮರ್ಶೆಯೇ”
“ಒಳಗಣ ಅನಂತ ಮತ್ತು ಹೊರಗಣ ಅನಂತ”
“ಪ್ಯಾಕ್ ಅಪ್“ – ಕ್ರಿಸ್ತೊ ಮತ್ತು ಜೇನ್ ಕ್ಲೋದ್ ದಂಪತಿ ಶೈಲಿ
ಜಗತ್ತಿಗೊಬ್ಬಳು ಸೂಜಿಮಲ್ಲಿ – ಕಿಮ್ ಸೂ ಜಾ
ವ್ಯಗ್ರತೆಯ ಒಳಹರಿವುಗಳ ಶೋಧ – ಮೋನಾ ಹಾಟಮ್
ಪರ್ಫಾರ್ಮಿಂಗ್ ಆರ್ಟ್ ನ ಹಿರಿಯಜ್ಜಿ – ಮಾರಿನಾ ಅಬ್ರಾಮೊವಿಚ್
ಸೈ ಗು-ಚಾಂಗ್ ಎಂಬ ’ಬೆಂಕಿಚೂರ್ಣ’
ಅನೀಶ್ ಕಪೂರ್ ಅವರ “ಕರಿ”ಗೆ ಅಂಟಿದ “ಗುಲಾಲಿ” ವಿವಾದ
ಅತಿವೇಗಕ್ಕೆ ಬೆಲೆ ತೆತ್ತ ಡೇಮಿಯನ್ ಹರ್ಸ್ಟ್
ಸೂರ್ಯಕಾಂತಿಯ ಹೊಸಮೊಳಕೆ… ಆಯ್ ವೇಯಿ ವೇಯಿ
ಆನ್ಸೆಲ್ಮ್ ಕೀಫರ್ ಕಟ್ಟಿಕೊಡುವ ವಿನಾಶದ ವಿಷಣ್ಣತೆ
ಕಟ್-ಕಾಪಿ-ಪೇಸ್ಟ್ ನಿಂದ ಸಿಟ್-ಥಿಂಕ್-ಆಕ್ಟ್ ನತ್ತ

 

 

MORE NEWS

ಬೇಲಿಯ ಗೂಟದ ಮೇಲೊಂದು ಚಿಟ್ಟೆಃ ಅನುದಿನದ ದಂದುಗದೊಂದಿಗೆ ಅನುಸಂಧಾನ

31-12-1899 ಬೆಂಗಳೂರು

"ಲೋಕದ ವಾಸ್ತವವಗಳ ಮುಖವಾಡಗಳೊಂದಿಗೆ ಮುಖಾಮುಖಿಯಾಗುವ ಇವರ ಕವಿತೆಗಳು ದೈನಂದಿನ ಬದುಕಿನ ವಿನ್ಯಾಸವನ್ನೇ ಕಾವ್ಯವನ್ನ...

ಚಕ್ರಾಸನ ಮತ್ತು ಭುಜಂಗಾಸನ

26-03-2024 ಬೆಂಗಳೂರು

"ವ್ಯಕ್ತಿಯು ‘ಚಕ್ರಾಸನ’ ಮಾಡುವಾಗ ಮೊದಲು ಬೆನ್ನಿನ ಮೇಲೆ ಮಲಗಬೇಕು. ಇದು ವ್ಯಕ್ತಿಯನ್ನು ಶಕ್ತಿಯುತವ...

ಹಿಂದಿನ ನಿಲ್ದಾಣದಲ್ಲಿ...

19-03-2024 ಬೆಂಗಳೂರು

'ಪ್ರಯಾಣದ ಭಾಗವಾಗಿ ನಮ್ಮೊಂದಿಗಿದ್ದು ನೆನಪುಗಳ ಬುತ್ತಿ ಕಟ್ಟಿಕೊಡುವ ಈ "ಹಿಂದಿನ ನಿಲ್ದಾಣಗಳೇ" ಬದುಕಲು...