'ನಿಸರ್ಗಪ್ರಿಯ' ಕಾವ್ಯನಾಮದ ಕಾದಂಬರಿಕಾರ ಬಿ.ಸಿದ್ಧಗಂಗಯ್ಯ ಕಂಬಾಳು ಇನ್ನಿಲ್ಲ

Date: 12-08-2022

Location: ಬೆಂಗಳೂರು


'ನಿಸರ್ಗಪ್ರಿಯ' ಕಾವ್ಯನಾಮದ ನಾಟಕಕಾರˌ ಕಾದಂಬರಿಕಾರˌ ಸಂಶೋಧಕˌ ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ರಿಜಿಸ್ಟ್ರಾರ್ ಬಿ.ಸಿದ್ಧಗಂಗಯ್ಯ ಕಂಬಾಳು ಅವರು ಇಂದು ನಿಧನರಾಗಿದ್ದಾರೆ.

ಬಿ.ಸಿದ್ಧಗಂಗಯ್ಯ ಕಂಬಾಳು : ಸಾಹಿತ್ಯ, ನಾಟಕ ರಂಗಭೂಮಿ ಕ್ಷೇತ್ರಗಳಲ್ಲಿ ತಮ್ಮನ್ನು ಸಕ್ರಿಯರನ್ನಾಗಿ ತೊಡಗಿಸಿಕೊಂಡಿದ್ದವರು ಬಿ. ಸಿದ್ಧಲಿಂಗಯ್ಯ ಕಂಬಾಳು. ನಿಸರ್ಗಪ್ರಿಯ ಎಂಬ ನಾಮಾಂಕಿತದಿಂದ ಬಹು ಜನಪ್ರಿಯತೆ ಗಳಿಸಿದ್ದ ಇವರು ಬೆಂಗಳೂರು ಗ್ರಾಮಾಂತರದ ಕಂಬಾಳು ಗ್ರಾಮದಲ್ಲಿ ಜನಿಸಿದವರು. ಬಾಲ್ಯದಿಂದಲೂ ನಟನೆಯಲ್ಲಿ ಆಸಕ್ತಿ. ನಂತರ ಕೆಲ ವರ್ಷ ಗುಜ ಕಂಪನಿಯಲ್ಲಿ ಅಭಿನಯಿಸಿದರು. ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ ನಾಟಕ ರಚನೆ ಪ್ರಾರಂಭಿಸಿದರು. ಕಾದಂಬರಿ, ಮಹಾಕಾವ್ಯ, ಜನಪದ ಗ್ರಂಥ ಸಂಪಾದನೆ, ಸಂಶೋಧನೆ(ಇತಿಹಾಸ) ಮುಂತಾದ ಪ್ರಕಾರಗಳಲ್ಲಿ ರಚನೆ ಮಾಡಿದ್ದರು.

ಸರ್ಕಾರಿ ಕಾಲೇಜಿನ ಪ್ರಾಂಶುಪಾಲರಾಗಿ ಶಿಕ್ಷಣ ಇಲಾಖೆಯ ಸಹಾಯಕ ನಿರ್ದೇಶಕರಾಗಿ, ನಾಟಕ ಅಕಾಡೆಮಿಯ ರಿಜಿಸ್ಟಾರ್ ಮುಂತಾಗಿ ಗೌರವಯುತ ಹುದ್ದೆಗಳನ್ನು ಅಲಂಕರಿಸಿ ಕಾರ್ಯ ನಿರ್ವಹಣೆ ಮಾಡಿದವರು. ಬೆನಕನಕೆರೆ, ಸ್ವರ್ಗಸ್ಥ ('ಸ್ವರ್ಗಸ್ಥ' ಕೃತಿಗೆ ರಾಜ್ಯ ಸಾಹಿತಿ ಅಕಾಡೆಮಿಯ ಬಹುಮಾನ ಲಭಿಸಿದೆ), ವ್ಯವಸ್ಥೆ, ಯಶೋಧರ, ತಿರುಕರಾಜ, ರುರ್ದ ಚೋರಪುರಾಣ (ಪ್ರಹಸನ ಕರ್ನಾಟಕ ನಾಟಕ ಅಕಾಡೆಮಿ ಏರ್ಪಡಿಸಿದ್ದ ನಾಟಕ ರಚನಾ ಸ್ಪರ್ಧೆ ಬಹುಮಾನ) ಮುಂತಾದ ಕೃತಿಗಳನ್ನು ರಚಿಸಿರುವ ಇವರಿಗೆ ಕಂಬಾಳರು ಕರ್ನಾಟಕ ಸಾಹಿತ್ಯ ಅಕಾಡೆಮಿ, ಜಾನಪದ ಅಕಾಡೆಮಿ, ನಾಟಕ ಅಕಾಡೆಮಿಗಳಿಂದ ಪುರಸ್ಕೃತರಾಗಿದ್ದರು.

ತೊಂಭತ್ತರ ದಶಕದಲ್ಲಿ (1990) ಬೆಂಗಳೂರು ದೂರದರ್ಶನದಿಂದ ಪ್ರತಿ ಶನಿವಾರ ಪ್ರಸಾರವಾಗುತ್ತಿದ್ದ 'ಸಿರಿಗಂಧ' ಜಾನಪದ ಚಿತ್ರಮಾಲಿಕೆಗೆ ಸಂಶೋಧನಾ ಸಾಹಿತ್ಯ ಹಾಗೂ ನಿರೂಪಣಾ ಸಾಹಿತ್ಯ ರಚಿಸಿದ್ದ ಇವರು ಕನ್ನಡ ಚಿತ್ರ ನಿರ್ದೇಶಕರ ಒತ್ತಾಸೆಯ ಮೇರೆಗೆ, 'ಅಲ್ಲಮ', 'ರಾಮಾ ರಾಮಾ ರೇ' ಚಲನಚಿತ್ರಗಳಿಗೆ ಸಂಭಾಷಣೆ ಬರೆದಿದ್ದರು. ರಾಮಾ ರಾಮಾ ರೇ... ಚಿತ್ರಕ್ಕಾಗಿ 'ಹುಣಸೂರು ಕೃಷ್ಣಮೂರ್ತಿ ಸ್ಮರಣಾರ್ಥ ಪ್ರಶಸ್ತಿ ಸಂದಿದ್ದು ಇವರ ನವಿರು ಸಾಹಿತ್ಯಕ ಘಮಲಿಗೆ ಸಾಕ್ಷಿಯಾಗಿರುತ್ತದೆ.

MORE NEWS

ಪುಸ್ತಕ ಸಂಸ್ಕೃತಿ ಬೆಳೆಸುವುದು ಸಾಮಾಜಿಕ ನ್ಯಾಯದ ಭಾಗ ಅಂತ ಸರ್ಕಾರಗಳು ಭಾವಿಸಬೇಕು: ಬರಗೂರು

23-04-2024 ಬೆಂಗಳೂರು

ಬೆಂಗಳೂರು: ನಿಜವಾದ ಪುಸ್ತಕ ಪ್ರೀತಿ ಬೆಳೆಯ ಬೇಕಿರುವುದು, ಉಳಿಯ ಬೇಕಿರುವುದು ಮುಂದಿನ ಪೀಳಿಗೆಯಿಂದ, ಆ ಮುಂದಿನ ಪೀ...

ಪ್ರಕಾಶನ ಸಂಸ್ಥೆಯನ್ನು ತೆರೆದಿರುವ ಪ್ರಕಾಶಕರೆಲ್ಲರೂ ಹುಚ್ಚರೇ; ಕೆ.ಎನ್. ಗಣೇಶಯ್ಯ

23-04-2024 ಬೆಂಗಳೂರು

ಪುಸ್ತಕಗಳನ್ನು ಕೊಂಡುಕೊಂಡು ಓದುವವರ ಪ್ರಮಾಣ ಕಡಿಮೆಯೂ ಆಗಿಲ್ಲ ಹೆಚ್ಚು ಕೂಡ ಆಗಿಲ್ಲ. ಬಹುಶಃ ಪುಸ್ತಕವನ್ನು ಓದಬೇಕು ಅನ್...

‘ಕಠಾರಿ ಅಂಚಿನ ನಡಿಗೆ’ ಸಮಕಾಲೀನ ವಿಡಂಬನೆಗಳ ಪುಸ್ತಕ: ಶಿವಸುಂದರ್

22-04-2024 ಬೆಂಗಳೂರು

ಬೆಂಗಳೂರು: ಚಂದ್ರಪ್ರಭ ಕಠಾರಿಯವರು ವಿಡಂಬನೆಗಳನ್ನು ಬರೆದಿದ್ದಾರೆ. ವಿಡಂಬನೆ, ಲೇವಡಿ ಮಾಡುವುದಕ್ಕೆ ಇಂದು ಬಹಳ ಧೈರ್ಯ ಬ...