ಒಬ್ಬರಲ್ಲ ಮೂವರು : ರಾಕ್ಸ್ ಮೀಡಿಯಾ ಕಲೆಕ್ಟಿವ್

Date: 17-01-2022

Location: ಬೆಂಗಳೂರು


ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯುವ ಅಂಕಣ 'ಈಚೀಚೆ, ಇತ್ತೀಚೆ'. ಪ್ರತಿ ವಾರ ಪ್ರಕಟವಾಗುವ ಈ ಸರಣಿಯಲ್ಲಿ ಈ ಬಾರಿ ದಿಲ್ಲಿಯ ಇನ್ಸ್ಟಾಲೇಷನ್ಸ್, ಸ್ಕಲ್ಪ್ಚರ್ಸ್, ವೀಡಿಯೊ ಆರ್ಟ್ ಹಾಗೂ ಬಹುಮಾಧ್ಯಮ ಚಟುವಟಿಕೆಗಳನ್ನು ನಡೆಸುವ ರಾಕ್ಸ್ ಮೀಡಿಯಾ ಕಲೆಕ್ಟಿವ್ ತಂಡದ ಕುರಿತು ಬರೆದಿದ್ದಾರೆ. 

ಕಲಾವಿದ: ಮೋನಿಕಾ ನಾರುಲಾ, ಶುದ್ಧವೃತ ಸೇನ್‌ಗುಪ್ತಾ, ಜೀವೇಶ್ ಬಾಗ್ಚಿ  (Monica Narula, Shuddhabrata Sengupta, Jeebesh Bagchi) 
ಶಿಕ್ಷಣ: ಎ.ಜೆ.ಕೆ. ಮಾಸ್ ಕಮ್ಯೂನಿಕೇಶನ್ ಅಂಡ್ ರೀಸರ್ಚ್ ಸೆಂಟರ್, ಜಾಮಿಯಾ ಮಿಲಿಯಾ ವಿವಿ, ದಿಲ್ಲಿ 
ವಾಸ: ದಿಲ್ಲಿ 
ಕವಲು: ಕಂಟೆಂಪೊರರಿ ಆರ್ಟ್ 
ವ್ಯವಸಾಯ: ಇನ್ಸ್ಟಾಲೇಷನ್ಸ್, ಸ್ಕಲ್ಪ್ಚರ್ಸ್, ವೀಡಿಯೊ ಆರ್ಟ್, ಬಹುಮಾಧ್ಯಮ ಚಟುವಟಿಕೆಗಳು 

ರಾಕ್ಸ್ ಮೀಡಿಯಾ ಕಲೆಕ್ಟಿವ್ಸ್ ಸಿ.ವಿ.ಗಾಗಿ ಇಲ್ಲಿ ಕ್ಲಿಕ್ ಮಾಡಿ:

ರಾಕ್ಸ್ ಮೀಡಿಯಾ ಕಲೆಕ್ಟಿವ್ಸ್ ಅವರ ವೆಬ್‌ಸೈಟಿಗಾಗಿ ಇಲ್ಲಿ ಕ್ಲಿಕ್ ಮಾಡಿ:

ಆಧುನಿಕತೆಯ ದ್ವಂದ್ವಗಳನ್ನು ತೆರೆದಿರಿಸಬಲ್ಲ ಆಳವಾದ ಚರ್ಚೆಗಳಿಗೆ ಹಾದಿ ಮಾಡಿಕೊಡುವುದು ಮತ್ತು ಅಧಿಕಾರ ಹಾಗು ಆಸ್ತಿಗಳ ಕಾರ್ಯವಿಧಾನಗಳನ್ನು ತಣ್ಣಗಿನ ಆದರೆ ಸತತವಾದ ವಿಮರ್ಶೆಗೆ ಒಡ್ಡುವುದು ತನ್ನ ಕಾರ್ಯಚಟುವಟಿಕೆಗಳ ಭಾಗ ಎಂದು ಹೇಳಿಕೊಳ್ಳುವ ರಾಕ್ಸ್ ಮೀಡಿಯಾ ಕಲೆಕ್ಟಿವ್ಸ್ ಭಾರತದ ಮಟ್ಟಿಗೆ ಒಂದು ವಿಶಿಷ್ಠ ಪ್ರಯತ್ನ. ಏಕೆಂದರೆ ಇದು ಒಬ್ಬರು ಕಲಾವಿದ/ದೆ ಅಲ್ಲ. 1992ರಲ್ಲಿ ದಿಲ್ಲಿಯ ಜಾಮಿಯಾ ಮಿಲಿಯಾ ವಿವಿಯ ಮೂವರು ಸ್ನೇಹಿತರು ಒಟ್ಟಾಗಿ ಸ್ಥಾಪಿಸಿದ ಒಂದು ಸಾಮೂಹಿಕ ಪ್ರಯತ್ನ ಇದು. ಆದರೆ ಅವರು ಪ್ರಸ್ತುತಪಡಿಸುವ ಕಲಾಕೃತಿಗಳು ರಾಕ್ಸ್ ಮಿಡೀಯಾ ಕಲೆಕ್ಟಿವ್ಸ್‌ನ ಕೃತಿ ಎಂದೇ ಪ್ರದರ್ಶಿತಗೊಳ್ಳುತ್ತವೆ ಮತ್ತು ಸಮಕಾಲೀನ ಕಲಾಜಗತ್ತಿನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಮಹತ್ವದ ಕಲಾವಿದರ ಪಟ್ಟಿಯಲ್ಲಿ ಇವರ ಹೆಸರೂ ಪ್ರಮುಖವಾದುದು. 

ಮೋನಿಕಾ ನಾರುಲಾ, ಶುದ್ಧವೃತ ಸೇನ್‌ಗುಪ್ತಾ ಮತ್ತು ಜೀವೇಶ್ ಬಾಗ್ಚಿ ಎಂಬ ಈ ಮೂವರು ಗೆಳೆಯರು ಒಂದು ಕಲೆಕ್ಟಿವ್ ಎಂಬುದು An ecosystem whose interaction produces operative or imaginative knowledge, political and performative actions or products by linking the specific interests of its members. ಎಂದು ವ್ಯಾಖ್ಯಾನಿಸಿಕೊಂಡಿದ್ದಾರೆ. 

ಕೇವಲ ಇನ್ಸ್ಟಾಲೇಷನ್‌ಗಳು, ಕಲಾಪ್ರದರ್ಶನಗಳ ಏರ್ಪಾಡು (ಕ್ಯುರೇಶನ್) ಮಾತ್ರವಲ್ಲದೆ ಸರೈ (ಸೆಂಟರ್ ಫಾರ್ ದ ಸ್ಟಡಿಆಫ್ ಡೆವಲಪಿಂಗ್ ಸೊಸೈಟಿ) ಹೆಸರಿನಲ್ಲಿ ಬೇರೆ ಹಲವು ಮಂದಿ ಪರಿಣತರ ಜೊತೆ ಸೇರಿ ಉಪನ್ಯಾಸಗಳು, ವೆಬ್‌ಸೈಟ್‌ಗಳು, ಸಮ್ಮೇಳನಗಳು, ಪ್ರಕಟಣೆಗಳು ಮತ್ತು ಸಂಶೋಧನೆಯ ಚಟುವಟಿಕೆಗಳಲ್ಲಿ ತೊಡಗಿಕೊಂಡಿದೆ. ಅವರ ಮೀಡಿಯಾ ಲ್ಯಾಬ್ ಮೂಲಕ, “ಸರೈ ರೀಡರ್” ಎಂಬ ಜರ್ನಲ್ ಕೂಡ ಪ್ರಕಟಗೊಳ್ಳುತ್ತದೆ. ರಾಕ್ಸ್ (Raqs) ಎಂಬುದು ಉರ್ದುವಿನಲ್ಲಿ ನೃತ್ಯ ಎಂಬ ಅರ್ಥ ಕೊಡುತ್ತದೆ, ಅದರಲ್ಲೂ ವಿಶೇಷವಾಗಿ ಸೂಫಿ ದರ್ವೇಶ್‌ಗಳು ಧ್ಯಾನಕ್ಕಾಗಿ ಸುತ್ತು ಸುತ್ತು ಬರುವ ನೃತ್ಯ ಎಂಬ ಅರ್ಥ ಕೊಡುತ್ತದೆ. 

ಜ್ಞಾನ ಮತ್ತು ಕಲೆಯ ಸೀಮೆಗಳನ್ನು ಪ್ರಶ್ನಿಸುವ ಮತ್ತು ಅದನ್ನು ಸಂವಾದಕ್ಕೊಡ್ಡುವ ಕಲಾಕೃತಿಗಳನ್ನು ಸೃಜಿಸುವ ಜೊತೆಗೇ ಕಲಾಪ್ರದರ್ಶನಗಳ ಮೂಲಕವೂ ಈ ಪ್ರಶ್ನಿಸುವ ಮನೋಧರ್ಮವನ್ನು ಮುಂದಕ್ಕೊಯ್ಯುವ ಒಂದು ಲಯಬದ್ಧವಾದ ಪ್ರಯತ್ನವನ್ನು ತಮ್ಮ ತಂಡ  ಮಾಡುತ್ತಿದೆ ಎಂದು ಅವರು ಹೇಳಿಕೊಂಡಿದ್ದಾರೆ.  ಸಂವಹನ-ಸಂವಾದಗಳ ನೈತಿಕತೆಯ ಮೂಲಕ ಸಂಗ್ರಾಹ್ಯವಾಗಿ ತಮ್ಮ ತಂಡದ ಕೆಲಸಗಳು ನಡೆಯುತ್ತವೆ ಎಂದವರ ಅಭಿಪ್ರಾಯ. 

ಮೋನಿಕಾ ನಾರುಲಾ ಅವರು ಒಂದು ಸಂದರ್ಶನದಲ್ಲಿ ತಮ್ಮಲ್ಲಿರುವ ಕಲಾವಿದ ರೂಪುಗೊಂಡ ಬಗೆಯನ್ನು ಹೀಗೆ ವಿವರಿಸಿದ್ದಾರೆ: In the 80s, we were the generation that saw mega-games, and genocide, in front of our eyes. We saw images of chemical leakage from a factory of everyday ever-readies, of a man in space, of police brutality on minorities and peasants, of the army entering a place of worship, of books being banned, students being killed, temple locks being played out, the slow bitter end to the long strike and extension of AFSPA into Punjab and Kashmir. We also saw the fall of the Berlin wall live and then, shortly after, the fall of an Empire and a war mobilized by a so-called victorious Empire. It shaped us. We are still unpacking its dimensions. We knew something was fundamentally problematic with sovereigns, and the stories the sovereign tells about itself and life under the sign of capitalism — and that many people, especially workers, are also reading and coming to similar conclusions. Our working life started with this recognition. (2015ರಲ್ಲಿ ಅನಾಬೆಲ್ ಡೆ ಗೆರ್ಸೀನಿ ಅವರಿಗೆ ಆಕ್ಯುಲಾ ಮ್ಯಾಗಜೀನಿಗಾಗಿ ನೀಡಿದ ಸಂದರ್ಶನದಲ್ಲಿ). 

ಜಗತ್ತಿನಾದ್ಯಂತ ಹಲವು ಬಯನಾಲ್‌ಗಳಲ್ಲಿ, ಡಾಕ್ಯುಮೆಂಟಾದಂತಹ ಪ್ರಮುಖ ಕಲಾಪ್ರದರ್ಶನಗಳಲ್ಲಿ ಈ ತಂಡ ಪಾಲ್ಗೊಂಡಿದೆ.    

ರಾಕ್ಸ್ ಮೀಡಿಯಾ ಕಲೆಕ್ಟಿವ್ಸ್ ಚಿಕಾಗೊ ವಿವಿಯಲ್ಲಿ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿ ಚರ್ಚೆಯಲ್ಲಿ ಪಾಲ್ಗೊಂಡದ್ದು : 

ರಾಕ್ಸ್ ಮೀಡಿಯಾ ಕಲೆಕ್ಟಿವ್ಸ್ ನ ಮೋನಿಕಾ ಮತ್ತು ಶುದ್ಧವೃತ್ MUMA ಕಾರ್ಯಕ್ರಮದಲ್ಲಿ ಮಾತನಾಡಿದ್ದು.: 

ರಾಕ್ಸ್ ಮೀಡಿಯಾ ಕಲೆಕ್ಟಿವ್ಸ್ ಅವರ ಆರ್ಟ್ ಅಥಿನಾ – 2013, ಸೋಲೊ ಪ್ರದರ್ಶನ ದ ಬಗ್ಗೆ ಪರಿಚಯ ಚಿತ್ರ: 

ಚಿತ್ರ ಶೀರ್ಷಿಕೆಗಳು: 

ರಾಕ್ಸ್ ಮೀಡಿಯಾ ಕಲೆಕ್ಟಿವ್ಸ್ ಅವರ Blood of stars (2017)  

ರಾಕ್ಸ್ ಮೀಡಿಯಾ ಕಲೆಕ್ಟಿವ್ಸ್ ಅವರ coronation park (2015)  

ರಾಕ್ಸ್ ಮೀಡಿಯಾ ಕಲೆಕ್ಟಿವ್ಸ್ ಅವರ Deep breath (2017)  

ರಾಕ್ಸ್ ಮೀಡಿಯಾ ಕಲೆಕ್ಟಿವ್ಸ್ ಅವರ Escapement (2009)  

ರಾಕ್ಸ್ ಮೀಡಿಯಾ ಕಲೆಕ್ಟಿವ್ಸ್ ಅವರ  K D Vyas Correspondence Vol-1, (2006) 

ರಾಕ್ಸ್ ಮೀಡಿಯಾ ಕಲೆಕ್ಟಿವ್ಸ್ ಅವರ Log book entry before storm (2014) 

ರಾಕ್ಸ್ ಮೀಡಿಯಾ ಕಲೆಕ್ಟಿವ್ಸ್ ಅವರ More salt in your tears (2011)  

ರಾಕ್ಸ್ ಮೀಡಿಯಾ ಕಲೆಕ್ಟಿವ್ಸ್ ಅವರ Not yet at ease (2018)  

ರಾಕ್ಸ್ ಮೀಡಿಯಾ ಕಲೆಕ್ಟಿವ್ಸ್ ಅವರ Re-run (video still ) (2013) 

ರಾಕ್ಸ್ ಮೀಡಿಯಾ ಕಲೆಕ್ಟಿವ್ಸ್ ಅವರ The Ecliptic (2014) 

ರಾಕ್ಸ್ ಮೀಡಿಯಾ ಕಲೆಕ್ಟಿವ್ಸ್ ಅವರ Utopia is a Hearing Aid (2003)  

ಈ ಅಂಕಣದ ಹಿಂದಿನ ಬರೆಹಗಳು:
ಕಂಫರ್ಟ್ ಝೋನ್ ನನಗಿಷ್ಟವಿಲ್ಲ : ಅತುಲ್ ದೋಡಿಯಾ
ಕಲೆ ಎಂಬುದು ಭಾವನೆಗಳು ಮತ್ತು ಐಡಿಯಾಗಳ ಅಭಿವ್ಯಕ್ತಿ: ಸುಬೋಧ್ ಗುಪ್ತಾ
ಭಾರತದಲ್ಲಿ ವೀಡಿಯೊ ಆರ್ಟ್‌ಗೆ ಹಾದಿ ತೆರೆದ ನಳಿನಿ ಮಲಾನಿ
ಮಹಾನಗರಕ್ಕೊಂದು ದೃಶ್ಯಭಾಷೆ ಕಟ್ಟಿಕೊಟ್ಟ ಜಿತೀಶ್ ಕಲ್ಲಟ್
ಸಾಂಸ್ಕೃತಿಕ ವೈರುಧ್ಯದ ಪದರುಗಳ ಅಭಿವ್ಯಕ್ತಿ: ಶೀಲಾಗೌಡ
ಅಕ್ಷರಗಳನ್ನು ಅಮೂರ್ತಗೊಳಿಸುವ ಗ್ಲೆನ್ ಲೈಗನ್
ಕಲೆಯ ಪ್ರಜಾತಾಂತ್ರೀಕರಣ – ಡೊನಾಲ್ಡ್ ಜಡ್
ಕಲೆಯ ಅತಿರೇಕದ ಮಿತಿಗಳನ್ನು ವಿಸ್ತರಿಸಿದ ಕ್ರಿಸ್ ಬರ್ಡನ್:
"ದಾ ಷಾನ್ ಝಿ” ಯ “ಕ್ಸಿಂಗ್‌ವೇಯಿ ಈಷು” ಮುಂಗೋಳಿ - ಝಾಂಗ್ ಹುವಾನ್
ಕಟ್ಟಕಡೆಯ ಸರ್ರಿಯಲಿಸ್ಟ್ – ಲಿಯೊನೊರಾ ಕೇರಿಂಗ್ಟನ್
ಸ್ಟ್ರೀಟ್ ಟು ಗ್ಯಾಲರಿ – ಕೀತ್ ಹೆರಿಂಗ್:
ನಾನು ಮ್ಯಾಟರಿಸ್ಟ್: ಕಾರ್ಲ್ ಆಂದ್ರೆ:
ಫೊಟೋಗ್ರಫಿಯನ್ನು ಸಮಕಾಲೀನ ಆರ್ಟ್ ಮಾಡಿದ ವಿಕ್ ಮ್ಯೂನಿಸ್
ನನ್ನದೇ ಸಂಗತಿಗಳಿವು: ಆದರೆ ಕೇವಲ ನನ್ನವಲ್ಲ– ಶಿರಿನ್ ನೆಹಶಾತ್
ಪೇಂಟಿಂಗ್ ಎಂಬುದು ಐಡಿಯಾ ಮತ್ತು ವಾಸ್ತವದ ಮಧ್ಯಂತರ ಸ್ಥಿತಿ – ಲೀ ಉಹ್ವಾನ್
ಸದಭಿರುಚಿ ಎಂಬುದು ಆಧುನಿಕ ಬದುಕಿನ ಶಾಪ – ಗಿಲ್ಬರ್ಟ್ ಮತ್ತು ಜಾರ್ಜ್
ಆನೆಲದ್ದಿ ಮತ್ತು ಕ್ರಿಸ್ ಒಫಿಲಿ
ನಿಸರ್ಗ ನನ್ನ ಸಹಶಿಲ್ಪಿ – ಆಂಡಿ ಗೋಲ್ಡ್ಸ್‌ವರ್ದಿ
ಫಿಗರೇಟಿವ್ ಚಿತ್ರಗಳು ಕೂಡಾ ಇಂದು ಪ್ರಸ್ತುತ – ಪೀಟರ್ ಡಾಯ್
ಕಾನ್ಸೆಪ್ಚುವಲ್ ಆರ್ಟ್‌ನ ಜನಕ – ಸೊಲ್ ಲೆವಿಟ್
ಮನುಷ್ಯ ಆಗಿರೋದು ಅಂದ್ರೆ ಏನು?- ವಿಲಿಯಂ ಕೆಂಟ್ರಿಜ್
“ಸೂಪರ್ ಫ್ಲ್ಯಾಟ್” ಐ ಕ್ಯಾಂಡಿಗಳ ತಕಾಷಿ ಮುರಾಕಾಮಿ
ಅಲ್ಲಿರುವುದು ನನ್ನಮನೆ – ದೊ ಹೊ ಸುಹ್
ದಿ ಲೈಫ್ ಆಫ್ CB: ಅರ್ಥಾತ್, ಕ್ರಿಷ್ಚಿಯನ್ ಬೋಲ್ತನಸ್ಕಿ
ಅಸೆಂಬ್ಲಿಗಳಲ್ಲಿ “ಬಾಕತನ” ತೋರಿಸಿದ ಅರ್ಮಾನ್
ಪ್ರಾಮಾಣಿಕತೆಯೇ ಸೌಂದರ್ಯ- ಜೊರ್ಗ್ ಇಮ್ಮೆಂದ್ರಾಫ್
ನಾಗರೀಕತೆಯ ಒಡಕಿಗೆ ಕನ್ನಡಿ ಹಿಡಿದ ಡೊರಿಸ್ ಸಾಲ್ಸೆದೊ
ಕಾನ್ಸೆಪ್ಚುವಲ್ ಆರ್ಟ್‌ಗೆ ತಳಪಾಯ –ರಾಬರ್ಟ್ ರಾಷನ್‌ಬರ್ಗ್
ಡಿಜಿಟಲ್ ಜಗತ್ತಿನಲ್ಲಿ ಒರಿಜಿನಲ್‌ನ ಹುಡುಕಾಟ – ಥಾಮಸ್ ರಫ್
ಕಲೆ ಜಗತ್ತನ್ನು ಬದಲಾಯಿಸಲೇ ಬೇಕೆಂದಿಲ್ಲ- ಫಿಯೊನಾ ಹಾಲ್
ಜಾಗತೀಕರಣದ ಆಟಗಳ ಬೆನ್ನಟ್ಟಿರುವ ಇಂಕಾ ಶೋನಿಬೇರ್
ಅರ್ಥವಂತಿಕೆಗಾಗಿ ಅರ್ಥ ಕಳೆದುಕೊಳ್ಳಬೇಕೆಂಬ- ಗು ವೆಂಡಾ
ಗದ್ದಲದ ಲೋಕದಲ್ಲಿ ಒಳಗಿನ ಪಿಸುಮಾತು- ನಿಯೊ ಆವ್
ಕಲೆ ಒಂದು ಉತ್ಪನ್ನವಲ್ಲ ಪ್ರಕ್ರಿಯೆ- ನಾಮನ್ ಬ್ರೂಸ್
‘ಇನ್ಫಾರ್ಮೇಷನ್ ಸೂಪರ್ ಹೈವೇ’ ಹೊಳಹು- ನಾಮ್ ಜುನ್ ಪಾಯಿಕ್
ಬದುಕಿನ ಮುಜುಗರಗಳಿಗೆ ಹೊರದಾರಿ- ಸ್ಟೀವ್ ಮೆಕ್ವೀನ್
ಅವ್ಯಕ್ತವನ್ನು ವ್ಯಕ್ತದಿಂದ ವಿವರಿಸುವ ರೀಚಲ್ ವೈಟ್‌ರೀಡ್
ಒಪ್ಪಿತ ನೈತಿಕತೆಯ ದ್ವಂದ್ವಗಳ ಶೋಧ - ಸಾರಾ ಲೂಕಸ್
ತನ್ನೊಳಗಿನ “ತೋಳ”ತನಕ್ಕೆ ಭಾವಕೊಟ್ಟ- ಕಿಕಿ ಸ್ಮಿತ್
“ನಾನು ಪ್ರೀ-ಪಿಕ್ಸೆಲ್”- ಚಕ್ ಕ್ಲೋಸ್
ಕಲೆ ಎಂಬುದು ಪ್ರಶ್ನಿಸುವ ಕಲೆ- ಸ್ಯು ಬಿಂಗ್
ವೀಡಿಯೊ ಆರ್ಟ್ ಕಾಲದ ’ರೆಂಬ್ರಾಂಟ್’
ದೇಹಕ್ಕೆ ವಿಸ್ತರಣೆ; ಯಂತ್ರಗಳಿಗೆ ಆತ್ಮ- ರೆಬೆಕಾ ಹಾರ್ನ್
ಪಾಪ್ ಆರ್ಟಿಗೊಬ್ಬ ಗಾಡ್‌ಫಾದರ್ – ಪೀಟರ್ ಬ್ಲೇಕ್
ಬಾರ್ಬರಾ ಕ್ರುಗರ್‌ - ಘೋಷಣೆಯೊಂದು ಆರ್ಟಾಗುವ ಮ್ಯಾಜಿಕ್
ಭಾವನೆಯಿಂದ ವರ್ತನೆಯೆಡೆಗೆ -ಒಲಫರ್ ಎಲಿಯಾಸನ್
ಚರಿತ್ರೆಯ ನೆರಳಿನ ಬಂಡಾಯಗಾರ್ತಿ - ಕಾರಾ ವಾಕರ್
“ರಪ್ಪೆಂದು… ಮುಖಕ್ಕೆ ತಣ್ಣೀರು ರಾಚುವ ಸಾಂಟಿಯಾಗೊ ಸಿಯೆರಾ”
“ಪಾತ್ರಾನುಸಂಧಾನ ಮತ್ತು ಅದರಿಂದಾಚೆ: ಸಿಂಡಿ ಶೆರ್ಮನ್”
ಬ್ರಿಟಿಷ್ ಕಲಾಜಗತ್ತಿನ ’ಬ್ಯಾಡ್ ಗರ್ಲ್’ –ತ್ರೇಸಿ ಎಮಿನ್
ಕಲೆಯ ಬೀದಿಯಲ್ಲೊಬ್ಬ 'ಬೆಳದಿಂಗಳ ಬಾಲೆ' - ಬಾಂಕ್ಸಿ
“ಕಾನ್ಸೆಪ್ಚುವಲ್ ಆರ್ಟ್‌ನ ಪಿತಾಮಹ ಮಾರ್ಸೆಲ್ ದುಷಾಮ್ ”
“ಪ್ರತಿಯೊಬ್ಬ ವ್ಯಕ್ತಿಯೂ ಕಲಾವಿದನೇ; ಸಮಾಜವೇ ಶಿಲ್ಪ”
“ಅಮೂರ್ತದಿಂದ ನವಮೂರ್ತದತ್ತ – ಭಾರತವೇ ಸ್ಪೂರ್ತಿ”
“ಕಲಾಲೋಕದ ಡೊನಾಲ್ಡ್ ಟ್ರಂಪ್ – ಜೆಫ್ ಕೂನ್ಸ್”
“ಸಿಗ್ಮಾರ್ ಪೋಲ್ಕ್ ಎಂಬ ರಸಶಾಸ್ತ್ರಿಗೆ ಕಲೆಯೂ ವಿಮರ್ಶೆಯೇ”
“ಒಳಗಣ ಅನಂತ ಮತ್ತು ಹೊರಗಣ ಅನಂತ”
“ಪ್ಯಾಕ್ ಅಪ್“ – ಕ್ರಿಸ್ತೊ ಮತ್ತು ಜೇನ್ ಕ್ಲೋದ್ ದಂಪತಿ ಶೈಲಿ
ಜಗತ್ತಿಗೊಬ್ಬಳು ಸೂಜಿಮಲ್ಲಿ – ಕಿಮ್ ಸೂ ಜಾ
ವ್ಯಗ್ರತೆಯ ಒಳಹರಿವುಗಳ ಶೋಧ – ಮೋನಾ ಹಾಟಮ್
ಪರ್ಫಾರ್ಮಿಂಗ್ ಆರ್ಟ್ ನ ಹಿರಿಯಜ್ಜಿ – ಮಾರಿನಾ ಅಬ್ರಾಮೊವಿಚ್
ಸೈ ಗು-ಚಾಂಗ್ ಎಂಬ ’ಬೆಂಕಿಚೂರ್ಣ’
ಅನೀಶ್ ಕಪೂರ್ ಅವರ “ಕರಿ”ಗೆ ಅಂಟಿದ “ಗುಲಾಲಿ” ವಿವಾದ
ಅತಿವೇಗಕ್ಕೆ ಬೆಲೆ ತೆತ್ತ ಡೇಮಿಯನ್ ಹರ್ಸ್ಟ್
ಸೂರ್ಯಕಾಂತಿಯ ಹೊಸಮೊಳಕೆ… ಆಯ್ ವೇಯಿ ವೇಯಿ
ಆನ್ಸೆಲ್ಮ್ ಕೀಫರ್ ಕಟ್ಟಿಕೊಡುವ ವಿನಾಶದ ವಿಷಣ್ಣತೆ
ಕಟ್-ಕಾಪಿ-ಪೇಸ್ಟ್ ನಿಂದ ಸಿಟ್-ಥಿಂಕ್-ಆಕ್ಟ್ ನತ್ತ

 

 

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...