ಓದಿ ಹಗುರವಾಗುವಂಥ ಕಾದಂಬರಿಯೇನೂ ಇದಲ್ಲ


"ವ್ಯವಸ್ಥೆಯು ವ್ಯಕ್ತಿಯನ್ನು ಬೇಟೆಯಾಡುವಂಥ ಕಾದಂಬರಿಗಳು ಹಲವು ಬಂದಿವೆ. ಇವು ಸಕ್ಸಸ್‌ ಆಗುವುದು ಆ ವ್ಯಕ್ತಿ ಇಂಥ ವ್ಯವಸ್ಥೆಯನ್ನು ಹೇಗೆ ಗುರುತಿಸುತ್ತಾನೆ ಮತ್ತು ಎದುರಿಸುತ್ತಾನೆ ಎನ್ನುವುದರಲ್ಲಿ. ಚಿತ್ತಾಲರ ಶಿಕಾರಿ ಖ್ಯಾತ ಉದಾಹರಣೆ. ಹಾಗೆ ನೋಡಿದರೆ ಇಲ್ಲಿನ ದುರಂತಮಯ ವ್ಯವಸ್ಥೆ ಶಿಕಾರಿಯ ಕಾರ್ಪೊರೇಟ್‌ ಒಳಾಡಳಿತಕ್ಕಿಂತಲೂ ನೂರು ಪಟ್ಟು ಸಿಕ್ಕುಸಿಕ್ಕಾದುದು ಹಾಗೂ ಕ್ರೂರವಾದುದು," ಎನ್ನುತ್ತಾರೆ ಹರೀಶ್ ಕೇರ. ಅವರು ಲಕ್ಷ್ಮಣ ವಿ.ಎ ಅವರ ‘ಕವಲುಗುಡ್ಡ 24/7’ ಕೃತಿ ಕುರಿತು ಬರೆದ ವಿಮರ್ಶೆ.

ನಿಮ್ಮ ಕಾದಂಬರಿ ಓದಲು ಹೊರಡುವ ಮುನ್ನ ಭಯವಿತ್ತು. ಎರಡು ವರ್ಷಗಳ ಕಾಲ ಅನುಭವಿಸಿದ ಆತಂಕ ಶೋಕ ದುಃಖಗಳನ್ನು ಮತ್ತೆ ಅನುಭವಿಸಬೇಕೆ ಎಂಬುದು ಈ ಭಯ. ಓದುತ್ತಾ ಅದು ಸ್ವಲ್ಪ ನಿಜವೂ ಆಯಿತೆನ್ನಿ. ಆದರೆ ಕೊರೊನಾ ಕಾಲದ ಆ ದಾರುಣತೆಗಳ ನಡುವೆಯೂ ಓದುವಂತೆ ಕಾದಂಬರಿಯಲ್ಲಿ ಹಿಡಿದಿಟ್ಟದ್ದು ಡಾ.ಸುಹಾಸನ ಹೋರಾಟ. ಅವನು ನಮ್ಮ ನಿಮ್ಮೆಲ್ಲರ ಹಾಗೇ ಇದ್ದಾನೆ. ಧೈರ್ಯ, ಅಂಜಿಕೆ, ವಿಷಾದ ಮತ್ತು ವಿಚಿತ್ರ ಉಲ್ಲಾಸಗಳ ಸಂಗಮವಾಗಿರುವ ಆತ ವ್ಯವಸ್ಥೆಯೆದುರಿನ ಹೋರಾಟದಲ್ಲಿ ಸೋಲುವುದು ಕಾದಂಬರಿಯಲ್ಲಿ ಮಾತ್ರ; ಆದರೆ ಅವನು ನಮ್ಮ ಮನೋರಂಗದಲ್ಲಿ ಗೆದ್ದು ನಿಲ್ಲುತ್ತಾನೆ.

ಮತ್ತೆ ಈ ಕಾದಂಬರಿ ಅಥೆಂಟಿಕ್‌ ಆಗಿರುವುದು ಇಲ್ಲಿರುವ ಇಲಾಖೆಯೊಳಗಿನ ವಿವರಗಳ ಮೂಲಕ. ಕಾದಂಬರಿ ನಿಜ ಅನಿಸುವಲ್ಲಿ ವಿವರಗಳು ಎಷ್ಟು ಮುಖ್ಯ ಎನ್ನುವುದು ಇಲ್ಲಿ ಗೊತ್ತಾಗುತ್ತದೆ. ವಿವರಗಳು ಇಲ್ಲದ ಮಲೆಗಳಲ್ಲಿ ಮದುಮಗಳು, ಗ್ರಾಮಾಯಣಗಳನ್ನು ಊಹಿಸುವುದು ಹೇಗೆ ಕಷ್ಟವೋ, ಹಾಗೇ ಆರೋಗ್ಯ ಶುಶ್ರೂಷೆಯ ವಿವರಗಳಿಲ್ಲದ ಇಂಥ ಕಾದಂಬರಿಯನ್ನು ಊಹಿಸುವುದು ಕಷ್ಟ. ನೀವೇನೋ ಬರೆದು ಹಗುರವಾಗಿದ್ದೇನೆ ಎಂದು ಹೇಳಿಕೊಂಡಿರಿ. ಆದರೆ ಓದಿ ಹಗುರವಾಗುವಂಥ ಕಾದಂಬರಿಯೇನೂ ಇದಲ್ಲ. ಪಿಪಿಇ ಕಿಟ್‌ನೊಳಗೆ ಬೆವರುವ ವಿವರಗಳು ಇದರಲ್ಲಿ ಬರುತ್ತವೆ. ಇದನ್ನು ಓದುತ್ತಾ ಹಾಗೇ ಬೆವರಿದ್ದೇನೆ.

ವ್ಯವಸ್ಥೆಯು ವ್ಯಕ್ತಿಯನ್ನು ಬೇಟೆಯಾಡುವಂಥ ಕಾದಂಬರಿಗಳು ಹಲವು ಬಂದಿವೆ. ಇವು ಸಕ್ಸಸ್‌ ಆಗುವುದು ಆ ವ್ಯಕ್ತಿ ಇಂಥ ವ್ಯವಸ್ಥೆಯನ್ನು ಹೇಗೆ ಗುರುತಿಸುತ್ತಾನೆ ಮತ್ತು ಎದುರಿಸುತ್ತಾನೆ ಎನ್ನುವುದರಲ್ಲಿ. ಚಿತ್ತಾಲರ ಶಿಕಾರಿ ಖ್ಯಾತ ಉದಾಹರಣೆ. ಹಾಗೆ ನೋಡಿದರೆ ಇಲ್ಲಿನ ದುರಂತಮಯ ವ್ಯವಸ್ಥೆ ಶಿಕಾರಿಯ ಕಾರ್ಪೊರೇಟ್‌ ಒಳಾಡಳಿತಕ್ಕಿಂತಲೂ ನೂರು ಪಟ್ಟು ಸಿಕ್ಕುಸಿಕ್ಕಾದುದು ಹಾಗೂ ಕ್ರೂರವಾದುದು. ಸರ್ಕಾರಕ್ಕೂ ಮೀಡಿಯಾಗಳಿಗೂ ಜನತೆಗೂ ಬಲಿಪಶುಗಳು ಹಾಗೂ ಕಣ್ಣಿಗೆ ಕಾಣುವ ಹೊಣೆಗಾರರು ಬೇಕು. ಆದರೆ ಒಂದು ಆಡಳಿತ ಯಂತ್ರವೇ ನಿರ್ದಯವಾಗುವ ಪರಿಯನ್ನು ಚಿತ್ರಿಸಲು ಕಲೆಗಾರಿಕೆ ಬೇಕು.

ಈ ಹೋರಾಟದ ಕತೆಯಲ್ಲಿ ಸುಹಾಸ್‌ ಮುಂದೆ ಉಳಿದ ಪಾತ್ರಗಳು ಕಾಣಿಸಿಕೊಳ್ಳುವುದೇ ಇಲ್ಲ. ನಳಿನಿ ಹಾಗೂ ಸಾಗರಿಕಾಗೆ ಇನ್ನಷ್ಟು ಸ್ಪೇಸ್‌ ಕೊಡಬಹುದಿತ್ತು. ಈ ನಿರಂತರ ತೊಳಲಾಟದಿಂದ ಸುಹಾಸ್‌ನ ಅಂತರಂಗಕ್ಕೆ ಏನಾಗುತ್ತದೆ ಎಂಬುದು ಓದುಗನಿಗೆ ಗೊತ್ತಾಗುವುದು ಕೂಡ ಮುಖ್ಯ. ಬಾಹ್ಯ ಘಟನೆಗಳಷ್ಟೇ ಆಂತರಿಕ ಪರಿವರ್ತನೆ ಕೂಡ ಮುಖ್ಯವಾಗುತ್ತದೆ ಅಲ್ವೇ.

MORE FEATURES

ಭಾಷಾಸಮೃದ್ಧಿ ಆಶಾ ಅವರ ಕಥನಕಲೆಯ ವೈಶಿಷ್ಟ್ಯಗಳು

16-03-2025 ಬೆಂಗಳೂರು

"ಸಶಕ್ತ ಬರವಣಿಗೆ, ಭಾಷಾಸಮೃದ್ಧಿ ಆಶಾ ಅವರ ಕಥನಕಲೆಯ ವೈಶಿಷ್ಟ್ಯಗಳು. 'ಕೆಂಪು ದಾಸವಾಳ' ಕಥಾಸಂಕಲನದ ಕಥೆಗ...

ಕೌಟುಂಬಿಕ ಕಥಾ ವಸ್ತುಗಳ ಮೇಲೆ ರಚಿತವಾದಂಥ ಕಥೆಗಳಿವು

16-03-2025 ಬೆಂಗಳೂರು

"ಸದಾ ಅಕ್ಷೇಪದ ದನಿಯೆತ್ತುತ್ತ ಗೊಣಗಾಡುವ, ಲಕ್ವಾ ಹೊಡೆದು ಹಾಸಿಗೆ ಹಿಡಿದ ಚಿಕ್ಕಮಾವನ ಚಾಕರಿ ಮಾಡಿ ಬೇಸತ್ತ ಭಾಗಮ್...

ಲೇಖಕಿ ದೀಪ ಜೋಶಿ ಅವರಿಗೆ ಕಥೆ ಹೇಳುವ ಕೌಶಲ್ಯ ಒಲಿದಿದೆ

15-03-2025 ಬೆಂಗಳೂರು

"ಕಥೆಯಲ್ಲಿ ಬರುವ ಬದರಿ ಯಾತ್ರೆಯ ಸನ್ನಿವೇಶಗಳು, ಕೇದಾರಲ್ಲಿ ನಡೆದ ಘಟನೆ, ಹರಿಹರದ ಕಾರ್ಖಾನೆ ಲಾಕ್ ಔಟ್, ಮಳಖೇಡದಲ...