ಓದುಗರಿದ್ದೆಡೆ ಪುಸ್ತಕ ತಲುಪಿಸುವುದು ‘ಸಪ್ನ ಬುಕ್ ಹೌಸ್’ ಹಿರಿಯಾಸೆ, ಹುಮ್ಮಸ್ಸು  


ಭಾರತೀಯ ಪುಸ್ತಕ ವಲಯದ ಅತಿ ದೊಡ್ಡ ಭಂಡಾರ ಎಂದೇ ಖ್ಯಾತಿಯ ಸಪ್ನ ಬುಕ್ ಹೌಸ್, ಓದುಗ-ಲೇಖಕ-ಪ್ರಕಾಶಕ ಹೀಗೆ ಪುಸ್ತಕೋದ್ಯಮದ ವಿಸ್ತಾರವನ್ನು ಹೆಚ್ಚಿಸಿಕೊಳ್ಳುತ್ತಿದೆ. ಬೆಂಗಳೂರಿನ ರಾಜರಾಜೇಶ್ವರಿ ನಗರ ವ್ಯಾಪ್ತಿಯಲ್ಲಿ 2021ರ ಅ. 20ರಂದು 20ನೇ ನೂತನ ಮಳಿಗೆಯನ್ನು ಆರಂಭಿಸುತ್ತಿದೆ. ಈ ಶುಭ ಸಂದರ್ಭದಲ್ಲಿ, ಸಪ್ನ ಬುಕ್ ಹೌಸ್ ಜೀವಾಳವಾಗಿ ಬುಕ್ ಬ್ರಹ್ಮ ಸಂಸ್ಥೆಯೊಂದಿಗೆ ನುಡಿದ ಅಭಿಮಾನವಿದು.

‘ನಮ್ಮವರು’ ಎಂಬ ಆಪ್ತ ಭಾವದೊಂದಿಗೆ ಹೊಸ ಬಗೆಯ ವಿಭಿನ್ನ ಕೃತಿಗಳನ್ನು ಪ್ರಕಟಿಸುವ ಮೂಲಕ ಓದುಗರ ವಿಶ್ವಾಸ ಗಳಿಕೆಯು ನಮ್ಮ ಕಾರ್ಯ ವೈಖರಿಯ ಸೌಂದರ್ಯ ಮಾತ್ರವಲ್ಲ ಪ್ರಕಾಶನ ವಲಯದ ಜಯದ ಗುಟ್ಟು, ಮಾರುಕಟ್ಟೆಯ ಯಶಸ್ಸು ಆಗಿದೆ ಎಂಬುದು ‘ಸಪ್ನ ಬುಕ್ ಹೌಸ್’ ಎಂಬ ಪುಸ್ತಕ ಜಗತ್ತಿನ ಅಭಿಮಾನ. ಓದುಗರಿದ್ದೆಡೆ ಪುಸ್ತಕವನ್ನು ತಲುಪಿಸುವುದು ಸಂಸ್ಥೆಯ ಹಿರಿಯಾಸೆ ಹಾಗೂ ಹುಮ್ಮಸ್ಸು ಎಂಬುದನ್ನು ಹೇಳಲು ಈ ಸಂಸ್ಥೆಯು ಮರೆಯದು.

‘ಓದುಗರನ್ನು ತುಂಬಾ ಆಪ್ತವಾಗಿ ಕಾಣಿ. ಅವರಿಗೆ ಇಷ್ಟವಾಗುವ ವಿಷಯಾಧಾರಿತ ಕೃತಿಗಳನ್ನು ಬರೆಯಿಸಿ, ಪ್ರಕಟಿಸಿ, ಕೊಡುವ ಕೃತಿಗಳಲ್ಲಿ ವಿಭಿನ್ನತೆ ಇರಲಿ. ಓದುಗರು ನಮ್ಮ ಬಿಟ್ಟು ಬೇರೆಲ್ಲೂ ಹೋಗಲಾರರು. ಓದುಗರಿದ್ದೆಡೆ ಪುಸ್ತಕೋದ್ಯಮವೇ ಹೋಗಬೇಕು’ ಎಂಬುದು ಸಪ್ನ ಬುಕ್ ಹೌಸ್ ನ್ನು ಯಶಸ್ವಿ ಮಾರ್ಗದಲ್ಲಿ ಕೊಂಡೊಯ್ಯವ ಹಲವರ ಪೈಕಿ ಪ್ರಮುಖರಾದ ದೊಡ್ಡೇಗೌಡರ ವಿಶ್ವಾಸ.

ಓದುಗರೇ ಕೇಂದ್ರ: ಓದುಗರನ್ನು ಕೇಂದ್ರವಾಗಿರಿಸಿಕೊಂಡು ವಿಶ್ವಾಸ-ಕಾರ್ಯ ಎರಡೂ ಮೇಳೈಸಿದ ಸಂಸ್ಥೆಯಾಗಿ ಸಪ್ನ ಬುಕ್ ಹೌಸ್ ಪುಸ್ತಕೋದ್ಯಮದಲ್ಲಿ ಅಚ್ಚಳಿಯದ ಛಾಪು ಮೂಡಿಸುತ್ತಿದೆ. ಪುಸ್ತಕೋದ್ಯಮದಲ್ಲಿ ತಾನೇ ತಾನಾಗಿ ಹೊಸ ಹೊಸ ಸವಾಲುಗಳನ್ನು ಸ್ವೀಕರಿಸುತ್ತಾ, ಅದರ ಒಳ-ಹೊರಗನ್ನು ಅರಿಯುತ್ತಾ, ಸಾಧನೆಯ ಶಿಖರಕ್ಕೇರವುದು ಈ ಸಂಸ್ಥೆಯ ಜಾಯಮಾನ. ತನ್ನ ಸ್ವರೂಪ-ಸ್ವಭಾವಕ್ಕೆ ಸಾಕ್ಷಿ ಎಂಬಂತೆ ಸಪ್ನ ಬುಕ್ ಹೌಸ್ ನ ಮತ್ತೊಂದು ನೂತನ ಮಳಿಗೆಯು ಬೆಂಗಳೂರಿನಲ್ಲಿ ಆರಂಭಗೊಳಿಸಿ, ಸವಾಲುಗಳನ್ನು ಎದುರಿಸುವ ಹುಮ್ಮಸ್ಸು ತೋರುತ್ತಾ, ಓದುಗರಲ್ಲಿ ಅಭಿಮಾನ ಹೆಚ್ಚಿಸುತ್ತಿದೆ.

ಹೊಸ ರೆಕ್ಕೆಯ ಬಲ: ಭಾರತೀಯ ಪುಸ್ತಕ ವಲಯದ ಅತಿ ದೊಡ್ಡ ಭಂಡಾರ ಎಂಬ ಖ್ಯಾತಿಯ ‘ಸಪ್ನ ಬುಕ್ ಹೌಸ್’ಗೆ ಈಗ ಆಕಾಶವೇ ಮಿತಿ. ಅತ್ಯಾಧುನಿಕ ಮಾಹಿತಿ ತಂತ್ರಜ್ಞಾನದ ನೆರವಿನೊಂದಿಗೆ ಹೊಸ ಹೊಸ ಸಂಕಲ್ಪದ ರೆಕ್ಕೆಯ ಬಲವನ್ನುಈ ಸಂಸ್ಥೆಯು ತಂದುಕೊಂಡು, ಪುಸ್ತಕೋದ್ಯಮದ ಅಚ್ಚರಿಯಾಗಿ ಓದುಗರ-ಲೇಖಕರ ಅಭಿಮಾನವನ್ನು ಇಮ್ಮಡಿಗೊಳಿಸುತ್ತಿದೆ. ತಮಿಳುನಾಡಿನ ಈರೋಡು ಹಾಗೂ ಕೊಯಿಮತ್ತೂರು -ಈ ಎರಡು ನಗರಗಳು, ಈಗಾಗಲೇ 9 ಮಳಿಗೆಗಳಿರುವ ಬೆಂಗಳೂರು ಸೇರಿದಂತೆ ಇಡೀ ಕರ್ನಾಟಕದ ವಿವಿಧೆಡೆ ಸೇರಿ ಒಟ್ಟು 19 ಮಳಿಗೆಗಳು ಓದುಗರ-ಲೇಖಕರ ಬಾಂಧವ್ಯ ಬೆಸೆಯುತ್ತಿರುವ ಸಪ್ನ ಬುಕ್ ಹೌಸ್, ಬೆಂಗಳೂರಿನಲ್ಲಿ 10ನೇ ಮಳಿಗೆಯಾಗಿ ಹಾಗೂ ರಾಜ್ಯದಾದ್ಯಂತ 20ನೇ ಮಳಿಗೆಯಾಗಿ, 2021ರ ಅಕ್ಟೋಬರ್ 20 ರಂದು ಬೆಳಿಗ್ಗೆ ಸೇವೆ ಕಾರ್ಯ ಆರಂಭಿಸಲಿದೆ.

ಭವಿಷ್ಯದ ಉಜ್ವಲ ದ್ಯೋತಕವೂ ಈ ಸಂಸ್ಥೆ: ಸಪ್ನ ಬುಕ್ ಹೌಸ್ ಸಂಸ್ಥೆಯು, 1967 ರಿಂದ ಪುಸ್ತಕ- ಪ್ರಕಾಶನದ ಮಾರ್ಗದಲ್ಲಿ ದಾಪುಗಾಲಿಡುತ್ತಾ ಇಂದಿಗೂ ಗಮನಾರ್ಹ ಯಶಸ್ಸಿನ ಮೇಲೆಯೇ ದಿಗ್ವಿಜಯ ಸಾಧಿಸುತ್ತಿರುವ ಈ ಸಂಸ್ಥೆಯು, ಸುರೇಶ ಷಾ ಎಂಬ ಅಸಾಧಾರಣ ಮಹನೀಯರಿಂದ ಬೆಂಗಳೂರಿನ ಮೆಜೆಸ್ಟಿಕ್ ನಲ್ಲಿ(1967, ಜನೆವರಿ 26) ಆರಂಭವಾಗಿತ್ತು. ಗುಜರಾತ್ ಮೂಲದ ಇವರ ವಂಶಸ್ಥರು ಬೆಂಗಳೂರಿನಲ್ಲಿ ನೆಲೆಸಿ, ಭಾರತವೇ ಅಭಿಮಾನ ಪಡುವ ರೀತಿಯಲ್ಲಿ ಪುಸ್ತಕೋದ್ಯಮವನ್ನು ಬೆಳೆಸಿದ್ದು ಐತಿಹಾಸಿಕ ಹಾಗೂ ವರ್ತಮಾನದ ಸಂಗತಿಯೂ ಹಾಗೂ ಭವಿಷ್ಯದ ಉಜ್ವಲ ದ್ಯೋತಕವೂ ಆಗಿದೆ. ಸದ್ಯ, ನಿತಿನ್ ಷಾ ವ್ಯವಸ್ಥಾಪಕ ನಿರ್ದೇಶಕರು.

`2021ರ ಅ.20’ ಐತಿಹಾಸಿಕ ದಿನ: ಬೆಂಗಳೂರಿನ ರಾಜರಾಜೇಶ್ವರಿನಗರದ ಚೆನ್ನಸಂದ್ರ ವ್ಯಾಪ್ತಿಯಲ್ಲಿ (ಜೆ.ಎನ್. ರಸ್ತೆ, 5ನೇ ಹಂತ, ಎಸ್ ಬಿಐ ಮೇಲೆ, ಬಿಎಂಟಿಸಿ ಬಸ್ ಘಟಕ ಬಳಿ) ತನ್ನ 20ನೇ ನೂತನ ಮಳಿಗೆಯಾಗಿ ಸಪ್ನ ಬುಕ್ ಹೌಸ್ ಸೇವೆ ಆರಂಭಿಸಲಿದೆ. ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ನಿರ್ಮಲಾನಂದ ಸ್ವಾಮೀಜಿ ಅವರು ಸಾನ್ನಿಧ್ಯವಹಿಸಿ, ಆಶೀರ್ವಚನ ನೀಡುವರು. ರಾಜ್ಯದ ಪ್ರಾಥಮಿಕ -ಪ್ರೌಢಶಿಕ್ಷಣ ಹಾಗೂ ಗ್ರಂಥಾಲಯ ಖಾತೆ ಸಚಿವ ಬಿ.ಸಿ. ನಾಗೇಶ್ ಅವರು ಸಮಾರಂಭವನ್ನು ಉದ್ಘಾಟಿಸಲಿದ್ದು, ನಾಡೋಜ ಹಂಪ ನಾಗರಾಜಯ್ಯ ಅವರು ಅಧ್ಯಕ್ಷತೆವಹಿಸುವರು. ತೋಟಗಾರಿಕೆ ಮತ್ತು ಯೋಜನೆ ಹಾಗೂ ಸಾಂಖ್ಯಿಕ ಖಾತೆ ಸಚಿವ ಮುನಿರತ್ನ ಹಾಗೂ ವಿಶ್ವವಾಣಿ ದೈನಿಕ ಪತ್ರಿಕ ಸಂಪಾದಕ ವಿಶ್ವೇಶ್ವರ ಭಟ್ ಅವರು ಮುಖ್ಯ ಅತಿಥಿಗಳಾಗಿರುವರು.

ಓದಿಗೆ ಅಡ್ಡ ಬಾರದ ಕೊರೊನಾ: ಓದುಗರ ಓದುವ ಆಸಕ್ತಿಯನ್ನು ಕೇಂದ್ರೀಕರಿಸಿ, ಪುಸ್ತಕಗಳನ್ನು ಪ್ರಕಟಿಸುವ ಸಂಸ್ಥೆಯು ಓದುವ ಹವ್ಯಾಸವನ್ನು ಇಮ್ಮಡಿಗೊಳಿಸುತ್ತದಲ್ಲದೇ, ಸಪ್ನ ಬುಕ್ ಹೌಸ್ ಸಂಸ್ಥೆಯು ಕನ್ನಡ ಸಾಹಿತ್ಯ -ಸಂಸ್ಕೃತಿಯ ಸಾಂಪ್ರದಾಯಿಕತೆಯನ್ನು ಗಟ್ಟಿಗೊಳಿಸುತ್ತಿದೆ. ಕೊರೊನಾದಿಂದ ಬೇರೆ ಬೇರೆ ವಲಯದಲ್ಲಿ ಧಕ್ಕೆಯಾಗಿದ್ದನ್ನು ತಳ್ಳಿ ಹಾಕುವಂತಿಲ್ಲ. ಆದರೆ, ಪುಸ್ತಕೋದ್ಯಮ ಮಾತ್ರ ತನ್ನ ಆಸಕ್ತಿಯನ್ನು ಕಾಯ್ದುಕೊಂಡಿತ್ತು ಮಾತ್ರವಲ್ಲ; ತನ್ನಓದಿನ ಆಸಕ್ತಿಯ ತೀವ್ರತೆಯನ್ನು ಹೆಚ್ಚಿಸಿಕೊಂಡಿತ್ತು. ಲೇಖಕರು ಹೆಚ್ಚು ಹೆಚ್ಚು ಕೃತಿಗಳನ್ನು ರಚಿಸಿದ್ದು, ಇದಕ್ಕೆ ತಕ್ಕಂತೆ ಓದುಗರ ಸಂಖ್ಯೆಯೂ ಹೆಚ್ಚಿದೆ. ಹೀಗಾಗಿ, ಕೊರೊನಾ ಸನ್ನಿವೇಶವು ಓದಿಗೆ ಅಡ್ಡ ಬಂದಿಲ್ಲ. ಪುಸ್ತಕೋದ್ಯಮಕ್ಕೆ ಹೊಸ ಹುಮ್ಮಸ್ಸು ನೀಡಿದೆ ಎಂಬುದು ದೊಡ್ಡೇಗೌಡರ ಹುರುಪು.

 

MORE FEATURES

ತುಳುನಾಡಿನ ದೈವಾರಾಧನೆಯ ಒಳ, ಹೊರಗಿನ ವಿಚಾರಗಳನ್ನು ಈ ಕೃತಿ ದಾಖಲಿಸಿದೆ

24-04-2024 ಬೆಂಗಳೂರು

"ಇದನ್ನು ಪುಸ್ತಕ ಅನ್ನುದಕ್ಕಿಂತಲೂ ದೈವಗಳ ಬಗ್ಗೆ ಭಕ್ತಿ , ಪ್ರೀತಿ ಇರುವವರ ಮನೆಯಲ್ಲಿರಲೆಬೇಕಾದ ಅಧ್ಬುತವಾದ ಗ್ರಂ...

ಸಾಮಾಜಿಕ ನ್ಯಾಯದ ಪ್ರಜ್ಞೆಯಾಗಿ ಡಾ. ರಾಜ್ ಕುಮಾರ್

24-04-2024 ಬೆಂಗಳೂರು

ಕನ್ನಡ ರಂಗಭೂಮಿ ಮತ್ತು ಚಿತ್ರರಂಗ ಕಂಡ ಮೇರು ಕಲಾವಿದ ಡಾ.ರಾಜ್ ಕುಮಾರ್. ನಟಸಾರ್ವಭೌಮ, ವರನಟ ಡಾ.ರಾಜ್ ಕುಮಾರ್ ತಮ್ಮ ಚಿ...

ಉಪನಿಷತ್ತುಗಳನ್ನು ವಿಮರ್ಶಾತ್ಮಕ ನೆಲೆಯಲ್ಲಿ ಕಾಣುವ ಪ್ರಯತ್ನವೇ ಈ ಕೃತಿ

23-04-2024 ಬೆಂಗಳೂರು

‘ಉಪನಿಷತ್ತುಗಳನ್ನು ಪರಿಚಯಿಸುವ ಪುಸ್ತಕವೇ ಆದರೂ ವಿಮರ್ಶಾತ್ಮಕ ನೆಲೆಯಲ್ಲಿ ಅವನ್ನು ಕಾಣುವ ಪ್ರಯತ್ನವಾಗಿದೆ. ನಿಗ...