Date: 07-12-2025
Location: ಬೆಂಗಳೂರು
ಬೆಂಗಳೂರು: ಅಂಕಿತ ಪುಸ್ತಕ ಪ್ರಕಾಶನದ ವತಿಯಿಂದ ಲೇಖಕ ಸು. ರುದ್ರಮೂರ್ತಿ ಶಾಸ್ತ್ರಿ ಅವರ 'ಜನ ಭಾರತ', ಉಷಾ ನರಸಿಂಹನ್ ಅವರ 'ಆರ್ಯಾವರ್ತ', ವಿಕ್ರಮ ಹತ್ವಾರ ಅವರ 'ಓದಿದ್ದು ನೋಡಿದ್ದು', ಎನ್. ಸಂಧ್ಯಾರಾಣಿ ಅವರ 'ಕದಡಿದ ಕೊಳವು ತಿಳಿಯಾಗಿರಲು', ಹಳೆಮನೆ ರಾಜಶೇಖರ ಅವರ 'ಮಾಯೆಯೆಂಬುದು ಮಾಯೆಯಲ್ಲ', ಗುರುರಾಜ ಕೊಡ್ಕಣಿ, ಯಲ್ಲಾಪುರ ಅವರ 'ಹಕ್ಕಿ ತಂದ ನೆನಪುಗಳು' ಕೃತಿಗಳ ಲೋಕಾರ್ಪಣಾ ಸಮಾರಂಭವು 2025 ಡಿ. 07 ಭಾನುವಾರದಂದು ಸುಚಿತ್ರಾ ಸಭಾಂಗಣದಲ್ಲಿ ನಡೆಯಿತು.
ಕೃತಿಯನ್ನ ಲೋಕಾರ್ಪಣೆಗೊಳಿಸಿ ಮಾತನಾಡಿದ ನಾಟಕಕಾರ, ನಟ, ನಿರ್ದೇಶಕ ಶ್ರೀನಿವಾಸ ಪ್ರಭು, "ಇಂದು ಬಿಡುಗೊಂಡ ಆರು ಕೃತಿಗಳು ಸಮಾಜದಲ್ಲಿ ವಿಭಿನ್ನವಾದ ದೃಷ್ಟಿಕೋನಗಳನ್ನು ಪಡೆಯಲಿದೆ. ಆರು ಲೇಖಕರು ಬಹಳ ಸ್ಥೂಲವಾಗಿ ತಮ್ಮ ವಿಚಾರಧಾರೆಗಳನ್ನು ಕಟ್ಟಿಕೊಟ್ಟಿದ್ದಾರೆ. ಓದುಗರು ಇಂತಹ ಹೊಸತನದ ಕೃತಿಗಳನ್ನ ಒಳಗೊಳ್ಳಬೇಕು," ಎನ್ನುತ್ತಾ ಆರು ಕೃತಿಗಳನ್ನು ಪರಿಚಯಿಸಿದರು.
ಬರಹಗಾರ ಎಚ್.ಎಸ್. ಸತ್ಯನಾರಾಯಣ ಮಾತನಾಡಿ, "ಸು. ರುದ್ರಮೂರ್ತಿ ಶಾಸ್ತ್ರಿ ಅವರ 'ಜನ ಭಾರತ' ಮಹತ್ವಾಕಾಂಕ್ಷೆಯ ಕೃತಿಯಾಗಿದೆ. ಕೃತಿಯಲ್ಲಿ ರೋಗಗಳ ಬಗ್ಗೆ ಸಮಗ್ರವಾಗಿ ವಿವರಿಸಲಾಗಿದೆ. ರೋಗ ಹಾಗೂ ವಿನಾಶದ ನಡುವೆ ನಮ್ಮೆಲರನ್ನು ಅಖಂಡವಾಗಿ ಕಾಪಾಡತಕ್ಕಂತಹ ಒಂದು ಶಕ್ತಿ ಮನುಷ್ಯ ಪ್ರೀತಿಗಿದೆ ಎಂಬುದು ನಮ್ಮ ಅರಿವಿಗೆ ಇಲ್ಲಿ ಬರುತ್ತದೆ. ಕಾದಂಬರಿಯನ್ನ ಓದುತ್ತಾ ಹೋದ ಹಾಗೆ ಸಿನಿಮೀಯ ರೀತಿಯಲ್ಲಿ ಪಾತ್ರವನ್ನ ಹೆಣೆಯಲಾಗಿದೆ ಎಂಬುದು ಗಮನಕ್ಕೆ ಬರುತ್ತದೆ. ಒಟ್ಟಾರೆಯಾಗಿ ಈ ಒಂದು ಕೃತಿಯು ಮನುಷ್ಯ ಜೀವಿಗೆ ಹಲವು ಬಂಧನ ಹಾಗೂ ಬೆಸುಗೆಗಳನ್ನು ತಿಳಿಸುತ್ತದೆ," ಎಂದರು.
"ಉಷಾ ನರಸಿಂಹನ್ ಅವರ 'ಆರ್ಯಾವರ್ತ' ಕುರಿತು ಮಾತಾನಾಡುತ್ತಾ, ಸಾಮಾನ್ಯರ ಕಣ್ಣಲ್ಲಿ ಸಾಮ್ರಾಟರನ್ನ ನೋಡುವ ದೃಷ್ಟಿಕೋನವನ್ನ ಲೇಖಕಿ ಇಲ್ಲಿ ವಿವರಿಸುತ್ತ ಹೋದಾಗೆ, ಸಮಾಜದಲ್ಲಿನ ವ್ಯವಸ್ಥೆ ಹೇಗಿತ್ತು ಹಾಗೂ ಈಗ ಹೀಗೆ ಬದಲಾಗಿದೆ ಎಂಬುದನ್ನು ನಾವಿಲ್ಲಿ ಗಮನಿಸಬುದು. ನಾವೆಲ್ಲರೂ ಪಠ್ಯ ಪುಸ್ತಕದಲ್ಲಿ ನಳಂದ, ತಕ್ಷಶೀಲ ಎಂದು ಓದುತ್ತಿದ್ದೆವು. ಆದರೆ ಇಲ್ಲಿ ಲೇಖಕಿ haa ಎಲ್ಲಾ ವಿಚಾರಗಳನ್ನು ಸಮಗ್ರವಾಗಿ ಒಂದು ಕೃತಿಯ ಮೂಲಕ ಕಟ್ಟಿಕೊಡಲು ಎಷ್ಟು ಫೀಲ್ಡ್ ವರ್ಕ್ ಮಾಡಿದ್ದಾರೆ ಅಂತ ಇಲ್ಲಿರುವ ಮಾಹಿತಿಯಿಂದ ತಿಳಿದುಕೊಳ್ಳಬಹುದು. ನಿಜಕ್ಕೂ ಇದೊಂದು ಅಭೂತಪೂರ್ವ ಕೃತಿ," ಎಂದರು.
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಕಥೆಗಾರ, ಪತ್ರಕರ್ತ ವಿಕಾಸ ನೇಗಿಲೋಣಿ, "ಲೇಖಕರು ಬರೆಯುವ ಕಥೆಗಳ ಬೇರುಗಳು ಒಂದೇ. ಆದರೆ ಆ ಕಥೆ ಎಂಬ ಬೇರನ್ನು ಬಳಸಿಕೊಳ್ಳುವ ಶೈಲಿ ವಿಭಿನ್ನವಾಗಿರುತ್ತದೆ. ಕಥೆಗಾರ ಕಥೆಯನ್ನ ಹದ ಮಾಡುವಾಗ ಅವನಿಗೆ ಬೇಕಾದ ಸಾಮಗ್ರಿಯನ್ನ ಮಾತ್ರ ಹಾಕುತ್ತಾನೆ. ಹೀಗೆ ಮಾಡಿದಾಗ ಕಥೆ ವಿಭಿನ್ನವಾದ ರೂಪುರೇಶೆಯನ್ನು ಪಡೆಯುತ್ತದೆ," ಎಂದು ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸಿದರು.
ಇನ್ನೋರ್ವ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಲೇಖಕ ಶರತ್ ಭಟ್ ಸೇರಾಜೆ, "ಆಕರ್ಷಕ ಹಾಗೂ ಮನಮೋಹಕ ಶೈಲಿಯಲ್ಲಿ ಓದುಗರನ್ನು ಹಿಡಿದಿಟ್ಟುಕೊಳ್ಳುವ ಗುಣ ಎಲ್ಲಾ ಲೇಖಕರಿಗೂ ಬರುದಿಲ್ಲ. ಆದರೇ ಇಂದು ಬಿಡುಗಡೆಗೊಂಡಿರುವ ಎಲ್ಲಾ ಕೃತಿಗಳು ಬಹಳ ವಿಶೇಷವಾಗಿದ್ದು, ಓದುಗರನ್ನು ಸೆಳೆಯುವ ಗುಣವನ್ನು ಇಲ್ಲಿಯ ಬರಹಗಳು ಒಳಗೊಂಡಿದೆ," ಎಂದು ಹೇಳಿದರು.
ವೇದಿಕೆಯಲ್ಲಿ ಸು ರುದ್ರಮೂರ್ತಿ ಶಾಸ್ತ್ರಿ, ಉಷಾ ನರಸಿಂಹನ್, ವಿಕ್ರಮ ಹತ್ವಾರ, ಎನ್ ಸಂಧ್ಯಾರಾಣಿ, ಹಳೆಮನೆ ರಾಜಶೇಖರ, ಗುರುರಾಜ ಕೊಡ್ಕಣಿ ಯಲ್ಲಾಪುರ ಅವರು ಉಪಸ್ಥಿತರಿದ್ದರು.
ಬೆಂಗಳೂರು: ಮನುಷ್ಯ ಸಂಸ್ಕೃತಿಯ ಬಹುದೊಡ್ಡ ಕೊಡುಗೆಯಾಗಿ ವಿಭಿನ್ನ ಭಾಷೆಯ ಬರವಣಿಗೆ ಸಮಾಜದ ಪ್ರತಿಬಿಂಬವಾಗಿವೆ. ಓರ್ವ ಉತ್...
ಬೆಂಗಳೂರು ಸಾಹಿತ್ಯ ಉತ್ಸವದ 14ನೇ ಆವೃತ್ತಿಯು ಡಿ.6 ಮತ್ತು 7ರಂದು ನಗರದ ಸ್ವಾತಂತ್ಯ್ರ ಉದ್ಯಾನವನದಲ್ಲಿ ಹಮ್ಮಿಕೊಳ್ಳಲಾಗ...
ಬೆಂಗಳೂರು : ಬೆಂಗಳೂರು ಸಾಹಿತ್ಯ ಉತ್ಸವ (BLR LitFest) 2025ರ 14ನೇ ಆವೃತ್ತಿಯ ಮೊದಲ ದಿನದ ಕಾರ್ಯಕ್ರಮಗಳು ಸಾಹಿತ್ಯಾಸ...
©2025 Book Brahma Private Limited.