ಬೇಂದ್ರೆ ಓದುಗರನ್ನು ಒಗ್ಗೂಡಿಸಿದ ’ಬೇಂದ್ರೆ ಬದುಕು ಬರಹ: ಮಾತುಕತೆ’

Date: 08-09-2019

Location: ಬೆಂಗಳೂರು


ಬೇಂದ್ರೆ ಓದುಗರೆಲ್ಲಾ ಭಾನುವಾರ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಸಂಸ ಬಯಲು ರಂಗಮಂದಿರದಲ್ಲಿ ಸೇರಿ ಬೇಂದ್ರೆ ಬದುಕು ಬರಹಗಳನ್ನು ಮೆಲುಕು ಹಾಕಿದರು.

ಬೇಂದ್ರೆಯವರ ಪದ್ಯಗಳು ಅದರ ಹಿನ್ನಲೆಯನ್ನು ಓದುತ್ತಾ ಚರ್ಚಿಸಲಾಯಿತು. ’ಪಾತರಗಿತ್ತಿ ಪಕ್ಕ’ ಪದ್ಯದ ಚರ್ಚೆಯೂ ಕುತೂಹಲಕ್ಕೆ ಕಾರಣವಾಯಿತು. ’ಪಕ್ಕ’ ಎನ್ನುವ ಪದ ಬಳಕೆ , ದ್ವಿಪದಿ ಸಾಲಿನಲ್ಲಿ ಸಾಗುವ ಕವಿತೆಯ ಒಳಹರಿವು ’ಗಾಳಿಕೆನೆ’ ಹೀಗೆ ಮುಂತಾದ ಪದಗಳ ಭಂಡಾರದ ಜಿಜ್ಞಾಸೆ ಮತ್ತಷ್ಟು ತಿಳುವಳಿಕೆಗೆ ಕಾರಣವಾಯಿತು.

’ಬೆಳಗು’ ಕವಿತೆಯೊಳಗಡಗಿದ ವಿಜ್ಞಾನ ಹೊರಹೊಕ್ಕಂತೆ ಕೌತುಕದಿಂದ ಬೆಳಗು - ಬೆಳಕು - ಮುಗಿದ ಮೊಗ್ಗೀ - ಬರಿ ಬೆಳಗಲ್ಲೊ ಅಣ್ಣಾ! ಎಲ್ಲವೂ ನಮ್ಮನ್ನು ಬೇಂದ್ರೆಗಿದ್ದ ಬೆಳಕಿನ ಜ್ಞಾನ ಪರಿಚಯ ಮಾಡಿಕೊಟ್ಟಿತು.

MORE NEWS

ಗಿರಡ್ಡಿ ಗೋವಿಂದರಾಜ ವಿಮರ್ಶಾ ಪ್ರಶಸ್ತಿಗೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಡಾ. ಗಿರಡ್ಡಿ ಗೋವಿಂದರಾಜ ಫೌಂಡೇಶನ್ ನಿಂದ “ವಿಮರ್ಶಾ ಪ್ರಶಸ್ತಿ"ಗೆ ವಿಮರ್ಶಾ ಕೃತಿಗಳನ್ನು ಆಹ್ವಾ...

ಕವಿಗಳು, ಲೇಖಕರು ಬಹುತೇಕವಾಗಿ ಕಲ್ಪನಾ ಶಕ್ತಿಯಿಂದ ಸಾಹಿತ್ಯವನ್ನು ಸೃಷ್ಟಿಸುತ್ತಾರೆ; ಎಂ. ಬಸವಣ್ಣ

25-04-2024 ಬೆಂಗಳೂರು

ಬೆಂಗಳೂರು: ವಿಜಯನಗರದಲ್ಲಿರುವ 'ಅಮೂಲ್ಯ ಪುಸ್ತಕ' ದ ಅಂಗಡಿಯಲ್ಲಿ ಏಪ್ರಿಲ್ 23ರಂದು ವಿಶ್ವ ಪುಸ್ತಕ ದಿನವನ್ನು ...

ಹಿರಿಯ ಪತ್ರಕರ್ತ ಅರ್ಜುನ್ ದೇವ್ ನಿಧನ

24-04-2024 ಬೆಂಗಳೂರು

ಹಿರಿಯ ಪತ್ರಕರ್ತರು, ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಎನ್. ಅರ್ಜುನ್ ದೇವ್ (92) ಅವರು ಕೆಂಗೇರಿ...