ಒಳಗಿನ ಅರಳುವಿಕೆ

Date: 23-04-2022

Location: ಬೆಂಗಳೂರು


'ನಮ್ಮಲ್ಲಿ ಹೆಚ್ಚಿನವರು ಬಹಳ ಅಪರೂಪಕ್ಕೆ ಅರಳುತ್ತಾರೆ, ಬೆಳೆಯುತ್ತಾರೆ ಹಾಗೂ ಬೆಳಗುತ್ತಾರೆ. ಬದುಕಿನ ಯಾತ್ರೆಯಲ್ಲಿ ಏನಾದರು ಘಟಿಸಿದರೆ, ಅದು ನಮ್ಮನ್ನು ಕಡಿಮೆ ಸ್ಪಂದನಶಿಲರನ್ನಾಗಿಸುತ್ತದೆ ಮತ್ತು ನಿರುತ್ಸಾಹಿಗಳನ್ನಾಗಿಸುತ್ತದೆ' ಹೀಗೆ ಹೇಳಿದವರು ಇಪ್ಪತ್ತನೆಯ ಶತಮಾನದ ಭಾರತೀಯ ದಾರ್ಶನಿಕರಲ್ಲಿ ಪ್ರಮುಖರೆಂದು ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿದ್ದ ಜಿಡ್ಡು ಕೃಷ್ಣಮೂರ್ತಿ. ಅವರು ವಿದ್ಯಾರ್ಥಿಗಳೊಂದಿಗೆ ನಡೆಸಿದ ಚಿಂತನೆಯನ್ನು ಇಂಗ್ಲೀಷಿನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ ಲೇಖಕ ಸಂತೋಷ ಅನಂತಪುರ. ಅವರ ಅನಂತಯಾನ ಅಂಕಣದಲ್ಲಿ ಜಿಡ್ಡು ಕೃಷ್ಣಮೂರ್ತಿಯವರ ಚಿಂತನಾ ಬರಹಗಳ ಅನುವಾದದ ಎರಡನೇ ಭಾಗ ನಿಮ್ಮ ಓದಿಗಾಗಿ.

ಜೆ.ಕೆ: ನನಗನಿಸುತ್ತೆ, ಈ ಬೆಳಗ್ಗೆ ಇಲ್ಲಿ ಸೇರಿದ ಗುಂಪಿನ ಪ್ರತಿಯೊಬ್ಬರೂ ಮತ್ತು ನಾವೆಲ್ಲರೂ ಜೊತೆಯಾಗಿ ಅರಳುತ್ತಿದ್ದೆವೆಯೇ ಎಂದು? ನಮ್ಮೊಳಗೇ ನಾವು ಬೆಳೆಯುತ್ತಿದ್ದೆವೆಯೇ ಎಂದು? ಈ ವಿಷಯದ ಕುರಿತಾಗಿ ಮಾತನಾಡುವುದು ಸೂಕ್ತ ಎಂದೆನಿಸುತ್ತದೆ. ಅಥವಾ ನಾವು ಪ್ರತಿಯೊಬ್ಬರೂ ಕೆಲವೊಂದು ದೀರ್ಘವಾದ ಸಂಕುಚಿತ ಪಥವನ್ನು ಅನುಸರಿಸುತ್ತಿದ್ದೆವೆಯೇ? ನಮ್ಮ ಬದುಕಿನ ಕೊನೆಗಾಲದಲ್ಲಿ ಸಂಪೂರ್ಣವಾಗಿ ಅರಳುವ ಅವಕಾಶವನ್ನು ಬಳಸಿಕೊಳ್ಳದಿರುವುದಕ್ಕೆ, ನಮ್ಮುಳಿದ ಬದುಕನ್ನು ಪಶ್ಚಾತಾಪದಿಂದಲೇ ಕಳೆಯಬೇಕೆ?ಎಂಬುದರ ಕುರಿತಾಗಿ ಹೋಗೋಣವೇ? ಕೇವಲ ಬ್ರೊಕ್ವುಡ್ನ ವಿದ್ಯಾರ್ಥಿಗಳಾಗಿ ಮಾತ್ರವಲ್ಲದೆ ಒಬ್ಬ ಶಿಕ್ಷಿತರಾಗಿಯೂ ನಾವು ನಮ್ಮನ್ನು ಕೇಳಿಕೊಳ್ಳಬೇಕಿದೆ, ನಾವು ಆಂತರಿಕವಾಗಿ ಮತ್ತು ಪ್ರಾಯಶ : ಬಾಹ್ಯವಾಗಿಯೂ - ಇವೆರಡೂ ನಿಜವಾಗಿಯೂ ಪರಸ್ಪರ ಸಂಬಂಧಿಗಳೋ- ಜೊತೆಗೆ ನಾವೂ ಬೆಳೆಯುತ್ತಿದ್ದೆವೆಯೇ ಏನೋ, ಅಂದ್ರೆ ಶಾರೀರಿಕವಾಗಿ ಶಕ್ತಿಯುಳ್ಳವರಾಗುವುದೋ, ಎತ್ತರಕ್ಕೆ ಬೆಳೆಯುವುದೋ ಅಲ್ಲ, ಬದಲಾಗಿ ಮಾನಸಿಕವಾಗಿಯೂ, ಒಳಗಿನಿಂದಲೂ ನಾವು ಅರಳಬೇಕು.

ಶಬ್ದ 'ಅರಳುವಿಕೆ'ಯನ್ನು ನಾನು ಸಮರ್ಥಿಸಿಕೊಳ್ಳುತ್ತೇನೆ. ಅದು ನಮ್ಮನ್ನು ಹಿಂಜರಿಸುವುದಿಲ್ಲ. ಒಳಗಿನಿಂದ ಆಳವಾಗಿ ಬೆಳೆಯುವಲ್ಲಿ ನಮ್ಮನ್ನದು ತಡೆಯುವುದಿಲ್ಲ. ನಮ್ಮಲ್ಲಿ ಹೆಚ್ಚಿನವರು ಬಹಳ ಅಪರೂಪಕ್ಕೆ ಅರಳುತ್ತಾರೆ, ಬೆಳೆಯುತ್ತಾರೆ ಹಾಗೂ ಬೆಳಗುತ್ತಾರೆ. ಬದುಕಿನ ಯಾತ್ರೆಯಲ್ಲಿ ಏನಾದರು ಘಟಿಸಿದರೆ, ಅದು ನಮ್ಮನ್ನು ಕಡಿಮೆ ಸ್ಪಂದನಶಿಲರನ್ನಾಗಿಸುತ್ತದೆ ಮತ್ತು ನಿರುತ್ಸಾಹಿಗಳನ್ನಾಗಿಸುತ್ತದೆ. ಅದ್ದರಿಂದ ನಮ್ಮ ಬದುಕಿಗೆ ಬೇಕಾಗುವ ಅತ್ಯಗತ್ಯವಾದ ಒಳಗು ಅಲ್ಲಿ ಬೆಳೆಯುವುದಿಲ್ಲ. ಪ್ರಾಯಶ: ನಮ್ಮ ಸುತ್ತಲಿನ ಜಗತ್ತು ನಮ್ಮನ್ನು ಹೆಚ್ಚು ನೈಪುಣ್ಯ ಉಳ್ಳವರನ್ನಾಗಿಸುವಂತೆ ಬೇಡುತ್ತದೆ- ವೈದ್ಯರು, ವಿಜ್ಞಾನಿಗಳು, ಭೂಗೋಳ ಶಾಸ್ತ್ರಜ್ಞರು, ತತ್ವ ಶಾಸ್ತ್ರಜ್ಞರು… ಹೀಗೆ ಪಟ್ಟಿ ಬೆಳೆಯುತ್ತದೆ; ಆದುದರಿಂದಲೇ ಮಾನಸಿಕವಾಗಿ ಕ್ಷಿಪ್ರ ಗತಿಯಲ್ಲಿ ನಮಗೆ ಬೆಳೆಯಲಾಗದಿರುವುದಕ್ಕೆ ಇದು ಕಾರಣವಾಗಿರಬೇಕು. ಇದೊಂದು ನಾವೆಲ್ಲರು ಜೊತೆಯಲ್ಲಿ ಮಾತನಾಡುವಂತಹ ಪ್ರಶ್ನೆಯಾಗಿದೆ. ಒಂದು ಸಣ್ಣ ಶಿಕ್ಷಕರ ಗುಂಪಿಗೆ ಮತ್ತು ಇಲ್ಲಿ ಜೊತೆಯಲ್ಲಿ ವಾಸಿಸುತ್ತಿರುವ ವಿದ್ಯಾರ್ಥಿಗಳಿಗೆ ಅರಳಲು ಯಾವುದು ತಡೆ ಒಡ್ಡುತ್ತದೆ ? ನಮ್ಮ ಸಮಾಜದಿಂದ, ಪೋಷಕರಿಂದ, ಧರ್ಮದಿಂದ ಮತ್ತು ನಮ್ಮ ನಮ್ಮ ಜ್ಞಾನದಿಂದ ನಾವು ಹೆಚ್ಚು ಪೂರ್ವಾಗ್ರಹ ಪೀಡಿತರಾಗಿದ್ದೇವೆಯೇ?ಈ ಎಲ್ಲಾ ಪ್ರಾಕೃತಿಕ ಪ್ರಭಾವಗಳು ನಿಜಾರ್ಥದಲ್ಲಿ ಅರಳುವಿಕೆಗೆ ಅಡೆ - ತಡೆಗಳಾಗುತ್ತವೆಯೋ ? ನನ್ನ ಪ್ರಶ್ನೆ ಅರ್ಥವಾಯಿತೇ? ನಿನಗೆ ಅರ್ಥವಾಗಲಿಲ್ಲವೇ?

ನೋಡು! ನಾನೊಬ್ಬ ಕ್ಯಾಥಲಿಕ್ ಆಗಿದ್ದರೆ ನನ್ನ ಮನಸ್ಸು, ಮಿದುಳು, ನನ್ನ ಸಂಪೂರ್ಣ ಮಾನಸಿಕಾವಸ್ಥೆಯು ಮೊದಲೇ ಪೂರ್ವಾಗ್ರಹ ಪೀಡಿತವಾಗಿರುತ್ತದೆ, ಅಲ್ಲವೇ? ನನ್ನ ಹೆತ್ತವರು ಹೇಳುತ್ತಾರೆ ನಾನೊಬ್ಬ ಕ್ಯಾಥಲಿಕ್, ನಾನು ಇಗರ್ಜಿಗೆ ಹೋಗಬೇಕು ; ಅಲ್ಲಿನ ಸಾಮೂಹಿಕ ಪ್ರಾರ್ಥನೆ , ಸುಂದರತೆ, ಸುಗಂಧಭರಿತ ಪರಿಮಳ , ಹೊಸ ಹ್ಯಾಟು- ಸೂಟು ಧರಿಸಿದ ಜನರು ಪರಸ್ಪರರನ್ನು ನೋಡುವುದು, ಮಂತ್ರ ಪಠಿಸುವ ಪುರೋಹಿತ - ಇವೆಲ್ಲವೂ ನಮ್ಮ ಮನಸ್ಸನ್ನು ಪೂರ್ವಾಗ್ರಹ ಪೀಡಿತರನ್ನಾಗಿಸುತ್ತವೆ ಮತ್ತು ಯಾವತ್ತೂ ನಮನ್ನು ಅರಳಲು ಸಮ್ಮತಿಸುವುದಿಲ್ಲ. ನಿನಗೆ ಅರ್ಥವಾಯಿತೇ? ಕೆಲವೊಂದು ಸಂಕುಚಿತ ರೀತಿಯಲ್ಲಿ, ನಿರ್ದಿಷ್ಟ ಮಾರ್ಗದಲ್ಲಿ ನಿರ್ದಿಷ್ಟ ವ್ಯವಸ್ಥೆಯಲ್ಲಿ ನಡೆದರೆ, ಮತ್ತು ಅ ನಿರ್ದಿಷ್ಟ ಪಥ, ವ್ಯವಸ್ಥೆ, ಚಟುವಟಿಕೆಯು ದೌರ್ಬಲ್ಯ - ಆದುದರಿಂದ ಅಲ್ಲಿ ಯಾವತ್ತಿಗೂ ಅರಳುವುದು ಸಾಧ್ಯವಿಲ್ಲ. ನಿನಗೆ ಈಗ ನನ್ನ ಪ್ರಶ್ನೆ ಅರ್ಥವಾಯಿತೇ? ಅದೇನಾ ಇಲ್ಲಿಯೂ ನಡೆಯುತ್ತಿರುವುದು? ಹಲವು ಅಪಘಾತಗಳಿಂದ, ಘಟನೆಗಳಿಂದ, ಒತ್ತಡಗಳಿಂದ, ಕಠಿಣಗಳಿಂದ - ಹೆತ್ತವರು, ಸಮಾಜ ಮತ್ತುಳಿದ ಎಲ್ಲದುದರಿಂದಲೂ ಪೂರ್ವಾಗ್ರಹ ಪೀಡಿತರಾಗಿ ನಮಗೆ ಸೂಕ್ತ ರೀತಿಯಲ್ಲಿ ಸುಲಭವಾಗಿ, ಆನಂದದಿಂದ ಹರಿಯಲು ಜೊತೆಗೆ ಬೆಳೆಯಲು ಆಗುತ್ತಿಲ್ಲವೇ ? ಅದೇ ಒಂದು ಕಾರಣ ಎಂದಾದರೆ, ಈ ಪುರ್ವಾಗ್ರಹವನ್ನು ಮುರಿಯಲು ಬ್ರೊಕ್ವುಡ್ ತಯಾರಿದೆಯೇ? ನೀವು ನನ್ನ ಪ್ರಶ್ನೆಯನ್ನು ಹಿಂಬಾಲಿಸುತ್ತಿರಾ? ಅದಿಲ್ಲವಾದಲ್ಲಿ, ಏನರ್ಥವಿದೆ ಅದಕ್ಕೆ? ನೀವು, ಬ್ರೊಕ್ವುಡ್ ನವರು ಜಗತ್ತಿನ ಇತರ ಮಿಲಿಯನ್ ಜನರಂತೆ ಈ ಆಳವಾದ ಪ್ರಜ್ಞೆ, ಹರಿವು, ಅರಳುವಿಕೆಯನ್ನು ಅನುಭವಿಸಲಿಲ್ಲವೇ ಅಥವಾ ಪ್ರಶ್ನಿಸಲಿಲ್ಲವೇ, ಆ ರೀತಿ ಬದುಕಲಿಲ್ಲವೇ ? ನಿಮಗೆ ನನ್ನ ಪ್ರಶ್ನೆ ಅರ್ಥವಾಯಿತೇ?

ವಿದ್ಯಾರ್ಥಿಗಳು: ನಿಮಗೆ ಗೊತ್ತೇ, ಹೊರಗಡೆ ವಿಪರೀತ ಒತ್ತಡವಿದೆ.
ಜೆ.ಕೆ:
ನೀವು ಹೇಳುತ್ತಿರಿ, ವಿಪರೀತ ಒತ್ತಡವಿದೆಯೆಂದು. ನಿಧಾನಕ್ಕೆ ಅದರತ್ತ ನಡೆಯಿರಿ, ಅದನ್ನು ಪ್ರಶ್ನಿಸಿ. ನಿಮಗೇನಾದರೂ ಒತ್ತಡ ಇಲ್ಲ ಎಂದಾದಲ್ಲಿ, ನಿವೇನಾದರು ಮಾಡುತ್ತಿದ್ದೀರೇ.. ಇದೀಗ ನೀವು ನಿಮ್ಮ ಗಮನವನ್ನು ಇತ್ತ ಕೇಂದ್ರಿಕರಿಸುತ್ತಿರೇ ? ನಿಮ್ಮನ್ನು ನಾನು ಒತ್ತಾಯಿಸುತ್ತಿದ್ದೇನೆ, ನಿಮಗೆ ಅರ್ಥವಾಯಿತೇ ? ನಾನೇನು ನಿಮ್ಮನ್ನು ಒಂದು ತುದಿಗೆ ತಳ್ಳುತ್ತಿಲ್ಲ, ಆದರೆ ನಿಮ್ಮನ್ನೇ ನಾನು ಗುರಿಯಾಗಿಸಿದ್ದೇನೆ- ಮತ್ತದು ನೀವು, ಒತ್ತಡವನ್ನು ಅನುಭವಿಸುತ್ತಿರಿ, ಯಾಕೆಂದರೆ ನೀವು ಅದನ್ನು ನೋಡಲು ಬಯಸುವುದಿಲ್ಲ. ಬದುಕಲ್ಲಿ ಹೆಚ್ಚಿನ ಮಜವಿರಬೇಕು ನಿಮಗೆ, ನೀವು ಯೋಚಿಸುತ್ತಿರಿ; ನೀವೊಬ್ಬ ವಿಶೇಷ ವ್ಯಕ್ತಿ ಮತ್ತು ಏನಾದರೂ ವಿಶೇಷವಾದುದನ್ನು ನಿಮಗೆ ಮಾಡಬೇಕು ಅದ್ದರಿಂದ ಮಿಕ್ಕಿದ್ದೆಲ್ಲವನ್ನೂ ನೀವು ನಿರ್ಲಕ್ಷಿಸುತ್ತಿರಿ. ಯಾವುದೇ ತೆರನಾದ ಒತ್ತಡವನ್ನು ನೀವು ಸ್ವಿಕರಿಸದಿದ್ದಲ್ಲಿ, ನೀವು ಚಟುವಟಿಕೆಯಲ್ಲಿ ಇರುತ್ತಿದ್ದಿರೇ ? ಅಥವಾ ಹೆಚ್ಚೆಚ್ಚು ಆಲಸಿಯಾಗಿ, ಔದಾಸಿನ್ಯಗೊಂಡು ಕೊನೆಗೆ ನಮ್ಮ ತಾಜಾತನವನ್ನೇ ಕಳೆದುಕೊಳ್ಳುತ್ತೇವೆ. ಪತಿಯೋ, ಪತ್ನಿಯೋ, ಮಕ್ಕಳೋ, ಮನೆಯೋ , ಉತ್ತಮ ಕೆಲಸವೋ ಇತರೆ ಇನ್ಯಾವುದಾದರೂ ನಿಮಗೆ ಇದ್ದಿರಬಹುದು- ಅಂದ ಮಾತ್ರಕ್ಕೆ ನಿಮ್ಮೊಳಗೆ ಅರಳುವಿಕೆಯು ನಡೆಯುತ್ತದೆಯೇ ?

ಅದ್ದರಿಂದ ಒಂದು ಒಳ್ಳೆಯ ಉದ್ದೇಶಕ್ಕೆ ಸರಿಯಾದ ಒತ್ತಡವು ಇಲ್ಲಿದೆಯೇ? ನಿಮಗೆ ಅರ್ಥವಾಯಿತೇ? ಸರಿಯಾದದ್ದು. ಬಲವಂತದ ಒತ್ತಡವಲ್ಲ, ಅನುಕರಣೆಯ ಒತ್ತಡವೂ ಅಲ್ಲ, ಯಶಸ್ಸಿನ ಒತ್ತಡವೂ ಅಲ್ಲ, ಏಣಿಯನ್ನು ಏರಲು, ದೊಡ್ಡ ಮನುಷ್ಯನಾಗಲು ಇರುವ ಒತ್ತಡವೂ ಅಲ್ಲ. ಬದಲಾಗಿ ಆಂತರಿಕವಾಗಿ ಬೆಳೆಯಲು ಸಹಾಯ ಮಾಡುವಂತಹ ಒತ್ತಡವಾಗಿರಬೇಕು. ನೀವು ಅನುಸರಿಸುತ್ತಿದ್ದಿರಾ ? ಯಾಕೆಂದರೆ, ಅರಳುವಿಕೆಯು ಇಲ್ಲವೆಂದಾದಲ್ಲಿ, ವ್ಯಕ್ತಿಯೊಬ್ಬನು ಅತೀ ಸಾಮಾನ್ಯ ಬದುಕನ್ನು ಸವೆದು ತನ್ನ 60 ರ ಅಥವಾ 80ರ ವಯಸ್ಸಿಗೆ ದೇಹಾಂತ ಹೊಂದುತ್ತಾನೆ. ಇದೊಂದು ಸರಾಸರಿ ಮನುಷ್ಯನ ಸಾಮಾನ್ಯ ಬದುಕು - ನೀವದನ್ನು ಗಮನಿಸಿದಿರೇ ? ಮತ್ತು ನೀವಿದನ್ನೆಲ್ಲಾ ಗಮನಿಸಿದರೆ , ನಿಮ್ಮ ಪ್ರತಿಕ್ರಿಯೆ ಏನು, ಇದರ ಬಗ್ಗೆ ಏನು ಹೇಳುತ್ತೀರಿ ?

ವಿದ್ಯಾರ್ಥಿ :- ವ್ಯಕ್ತಿಯೊಬ್ಬ, ಅರ್ಥಪೂರ್ಣ ಬದುಕನ್ನು ಸವೆಯಲಿರುವ ಮಾರ್ಗವಿದು ಎಂದರೆ...
ಜೆ.ಕೆ : ನೋಡು ನನ್ನ ಗೆಳೆಯ, ಅಲ್ಲಿ ಸ್ಪರ್ಧೆ, ಅತಿಯಾದ ಒತ್ತಡ, ಒಂದೇ ಕೆಲಸದ ಹಿಂದೆ ಓಡುವ ಸಾವಿರ ಜನರು, ಅತಿಯಾದ ಜನಸಂಖ್ಯೆ ಇವೆಲ್ಲ ಇರುವುದರಿಂದ ನೀನು ಬೆಳೆಯುತ್ತಿದ್ದಂತೆಯೇ ಕೆಲವೇ ಕೆಲವು ಜನರು ಸಂತೋಷದಿಂದಿರುವುದನ್ನು ನೋಡುತ್ತಿಯ. ಜಗತ್ತಿನಲ್ಲಿರುವುದೆಲ್ಲವೂ ಹೆಚ್ಚೆಚ್ಚು ಅಪಾಯಕಾರಿಯಾಗುತ್ತಿದೆ. ನಿಮಗೆ ಅರ್ಥವಾಯಿತೇ ? ಮತ್ತು, ನೀವಿದನ್ನೆಲ್ಲಾ ಗಮನಿಸಿದಾಗ ನಿಮ್ಮ ಪ್ರತಿಕ್ರಿಯೆ ಏನು ?

ವಿದ್ಯಾರ್ಥಿ : ನನ್ನ ಹೆತ್ತವರಿಗೆ ವಯಸ್ಸಾಗುವುದನ್ನು ನಾನು ನೋಡುತ್ತೇನೆ. ಅಗತ್ಯವಿಲ್ಲದೇನೇ ಅತ್ತಿಂದಿತ್ತ ಒದ್ದಾಡುವುದನ್ನು ಗಮನಿಸುತ್ತೇನೆ. ಯಾಕೆಂದರೆ ಅದನ್ನೆಲ್ಲಾ ನೋಡುವುದರಿಂದ ಅವರು ಭಯಭಿತರಾಗುತ್ತಾರೆ.
ಜೆ.ಕೆ :
ಅಂದ್ರೆ ನೀನು ಹೇಳುತ್ತಿರುವುದು, ಈ ಜಗತ್ತಿನ ಹೆಚ್ಚಿನ ಜನರು ಶಾರೀರಿಕ ಸುರಕ್ಷೆ ಮತ್ತು ಪ್ರಾಯಶ: ಮಾನಸಿಕ ಸುರಕ್ಷತೆಯನ್ನು ಬಯಸುತ್ತಾರೆ. ಜೈವಿಕ ಮತ್ತು ಮಾನಸಿಕವಾದ ಸುರಕ್ಷೆಯು ಅರಳುವಿಕೆಯ ಪ್ರಜ್ಞೆಯನ್ನು ನಿಮಗೆ ಕೊಡುತ್ತದೆಯೇ ? ನಿಮಗೆ ಅರ್ಥವಾಯಿತೇ ? ನಾನಿಲ್ಲಿ 'ಅರಳುವಿಕೆ 'ಎಂಬ ಶಬ್ದವನ್ನು ಬೆಳೆಯುವ ಪ್ರಜ್ಞೆಗೆ ಸಮಾನವಾಗಿ ಉಪಯೋಗಿಸುತ್ತಿದ್ದೇನೆ - ಅಂದ್ರೆ ಬಯಲಲ್ಲಿ ಹೂವೊಂದು ಯಾವುದೇ ಅಡೆ - ತಡೆಗಳಿಲ್ಲದೆ ಬೆಳೆಯುವಂತೆ. ಈಗ ಅಂತರಿಕವಾಗಿ ಮತ್ತು ಬಾಹ್ಯವಾಗಿ ನೀವು ಸುರಕ್ಷತೆಯನ್ನು ಬಯಸುತ್ತಿದ್ದಿರಾ ? ನೀವು ಮಾನಸಿಕವಾಗಿ ಯಾರ ಮೇಲಾದ್ರೂ ಅವಲಂಬಿಸಿದರೆ, ನಂಬಿಕೆಯ ಮೇಲೆ ಅವಲಂಬಿತವಾದರೆ, ರಾಷ್ಟ್ರವೊಂದರ ಜತೆ, ತಂಡದ ಜೊತೆ ಗುರುತಿಸಿಕೊಂಡರೆ ಅಥವಾ ನಿರ್ದಿಷ್ಟವಾದ ತಂತ್ರಜ್ಞಾನ ಕಲಿತು ಕೆಲಸ ಮಾಡಿದರೆ ನಿಮಗದು ಆಂತರಿಕ ರಕ್ಷೆಯನ್ನು ನಿಡುತ್ತದೆಯೇ ? ಯಾವುದೋ ಒಂದು ಜ್ಞಾನದಿಂದ ನೀವು ಮಾನಸಿಕ ರಕ್ಷೆಯನ್ನು ಬಯಸುತ್ತೀರೆ?

ಇದನ್ನೆಲ್ಲಾ ತಿಳಿಯುವ ಕ್ರಮದಲ್ಲಿ ನೀವು ಈ ಎಲ್ಲಾ ಪ್ರಶ್ನೆಗಳನ್ನು ಕೇಳಬೇಕು, ಕೇಳುತ್ತೀರಲ್ಲವೆ ? ಮಾನಸಿಕವಾದ ಸುರಕ್ಷತೆ ಇದೆಯೇ ಎಂದು ನಿಮ್ಮನ್ನು ನೀವು ಕೇಳಿಕೊಳ್ಳಬೇಕು. ನನ್ನ ಪ್ರಶ್ನೆ ನಿಮಗೆ ಅರ್ಥವಾಯಿತೇ ? ನೆಮ್ಮದಿ , ಲೈಂಗಿಕತೆ, ಪ್ರೋತ್ಸಾಹ, ಮತ್ತಿತರ ಹಲವಾರು ಕಾರಣಗಳಿಗೆ ನಾನು ನನ್ನ ಪತ್ನಿಯನ್ನೋ, ಪತಿಯನ್ನೋ ಅವಲಂಬಿಸುತ್ತೇನೆ. ನಾನು ಕುಗ್ಗಿದಾಗ, ಒಬ್ಬಂಟಿಯಾದಾಗ ಅವರ ಮೇಲೆ ಅವಲಂಬಿತನಾಗುತ್ತೇನೆ. ಹೆ...ಪರವಾಗಿಲ್ಲ ಎಂದು ಭುಜ ತಟ್ಟಲು ನನ್ನೊಡನೆ ಒಬ್ಬರಿರುತ್ತಾರೆ. ನೀನು ಚೆನ್ನಾಗಿ ಮಾಡುತ್ತೀಯ, ಎಷ್ಟು ಒಳ್ಳೆಯವನು ನೀನು ! ಎಂಬ ಮಾತುಗಳು ಕ್ರಮೇಣ ನಾನು ಹಿತವಾಗಿದ್ದೇನೆ ಎಂದು ಅನಿಸುವಂತೆ ಮಾಡುತ್ತದೆ. ಕಾಲ ಕ್ರಮೇಣ ಆ ವ್ಯಕ್ತಿಯನ್ನು ನಾನು ಹೆಚ್ಚು ಹಚ್ಚಿಕೊಳ್ಳುತ್ತೇನೆ. ಆ ಸಂಬಂಧದಲ್ಲಿ ನಿರ್ದಿಷ್ಟ ಸ್ವರೂಪದ ಸುರಕ್ಷತೆ ಇರುತ್ತದೆ. ಆದರೆ ನಿಜವಾಗಿಯೂ ಅ ಬಂಧದಲ್ಲಿ ಸುರಕ್ಷತೆ ಇದೆಯೇ ?

ವಿದ್ಯಾರ್ಥಿ : ಸಂಬಂಧ ಎನ್ನುವುದು ತುಂಬಾ ಸೂಕ್ಷ್ಮ .
ಜೆ.ಕೆ : ಅದು ಬಹಳ ಸೂಕ್ಷ್ಮ. ಆದರೆ ಯಾವುದೇ ಬಂಧಗಳಲ್ಲಿ ಶಾಶ್ವತ ಸುರಕ್ಷತೆ ಇದೆಯೇ ? ಪ್ರೀತಿಯಲ್ಲಿ ನೀವು ಬೀಳುತ್ತೀರಿ. ಆ ಶಬ್ದಗಳು ಏನೇ ಅರ್ಥ ಕೊಡಲಿ ಮತ್ತು ಕೆಲವು ವರುಷ ಒಬ್ಬರಿಗೊಬ್ಬರನ್ನು ಹಚ್ಚಿ ಕೊಳ್ಳುತ್ತೀರಿ ಶಾರೀರಿಕವಾಗಿಯೂ , ಮಾನಸಿಕವಾಗಿಯೂ ಪರಸ್ಪರ ಪ್ರತಿಯೊಂದಕ್ಕೂ ಅವಲಂಬಿತರಾಗುತ್ತೀರಿ ಮತ್ತು ಆ ಸಂಬಂಧದಲ್ಲಿ ನೀವು ಯಾವತ್ತೂ ನಿರಂತರತೆಯನ್ನು ಬಯಸುತ್ತೀರಿ, ಬಯಸುವುವುದಿಲ್ಲವೇ ? ಈಗ ನೀವು ಮಾಡುತ್ತಿಲ್ಲವೇ ? ಕನಿಷ್ಠ ಪಕ್ಷ ಆ ನಂಬಿಕೆಯನ್ನಿಡಿ ಮತ್ತು ಸಂಪೂರ್ಣವಾಗಿ ನಿಮ್ಮನ್ನು ನೀವು ಆ ಗಂಟಲ್ಲಿ ಕಟ್ಟಿಕೊಳ್ಳುವ ಮೊದಲು, 'ಪ್ರೀತಿಯಲ್ಲಿ ಬೀಳುವುದು' ಎಂದು ನೀವು ಏನನ್ನು ಕರೆಯುತ್ತಿರೋ, ಮಾನವ ಸಂಬಂಧಗಳ ಸುರಕ್ಷತೆ ಇದುವೆಯೇ ಎಂದು ನೀವು ಪ್ರಶ್ನಿಸುವುದಿಲ್ಲವೇ ? ಅದರರ್ಥ ನಂಬಿಕೆ ಇದೆಯೇ ಎಂದು ನೀವು ಪ್ರಶ್ನಿಸುವುದಲ್ಲವೇ ? ಅದರರ್ಥ ನಂಬಿಕೆ ಇಲ್ಲದ್ದೆಂದೋ, ಒಬ್ಬಂಟಿ ಎಂದೋ, ಖಿನ್ನತೆಯಿಂದ ಇರುವುದೆಂದೋ ಅಲ್ಲ. ಯಾವುದೂ ನಿಮ್ಮನ್ನು ತಡೆಯಲ್ಲ, ಹಿಂಜರಿಸುವುದಿಲ್ಲ. ಏಕೆಂದರೆ ನೀವು ಚಿತ್ತ ವಿಭ್ರಮೆಯ ಊನ ವ್ಯಕ್ತಿಯಲ್ಲ. ಆದರೆ ಬೆಳೆಯುವ, ಅರಳುವ ಅಖಂಡ, ಸಂಪೂರ್ಣ ಮಾನವ ಜೀವಿಯೇ ?

ಹಾಗಾಗಿ, ನಾವೀಗ ಕೇಳಬೇಕು : ಪ್ರೀತಿ ಎಂದರೇನು ? ಸರಿ ತಾನೇ ? ಅದು ಏನೆಂದು ನಿಮ್ಮ ಯೋಚನೆ ? ಇಲ್ಲೊಂದು ಸಮಸ್ಯೆಯಿದೆ. ನೀವು ನಿಮ್ಮ ಹೆತ್ತವರನ್ನು ಪ್ರೀತಿಸುತ್ತೀರಿ ಮತ್ತು ಹೆತ್ತವರು ನಿಮ್ಮನ್ನು ಪ್ರೀತಿಸುತ್ತಾರೆ. ಕನಿಷ್ಟ ಪಕ್ಷ ಅವರು ಹಾಗೆ ಹೇಳುತ್ತಾರೆ ಮತ್ತು ನೀವು ಅದನ್ನೇ ಹೇಳುತ್ತೀರಿ. ನಾವೇನಾದರೂ ಅಪಾಯದ ನೆಲೆಯಲ್ಲಿದ್ದೇವೆಯೇ ? ನಾವಿದ್ದೇವೆಯೇ ?

ಪ್ರಶ್ನೆ : ಅವರಿದ್ದಾರೆಯೇ ?
ನೀವು ಹುಟ್ಟಿದ ಕ್ಷಣದಿಂದ, ಯಾವುದೇ ಪೂರ್ವಾಗ್ರಹಗಳಿಲ್ಲದೆ, ನೀವರಳಲು ಅವರು ನಿಮ್ಮನ್ನು ಪ್ರೀತಿಸುತ್ತಿದ್ದರೆ ಅದನ್ನವರು ನೋಡಿಕೊಳ್ಳುತ್ತಾರೆ. ಯಾಕಂದರೆ ನೀವೊಬ್ಬ ಮನುಷ್ಯ ಜೀವಿ, ನೀವೊಂದು ಜಗತ್ತೇ ಆದ್ದರಿಂದ. ನೀವು ಅರಳದೆ ಇದ್ದಲ್ಲಿ, ಜಗತ್ತಿನಲ್ಲಿ ಸಿಕ್ಕಿ ಹಾಕಿಕೊಳ್ಳುತ್ತೀರಿ ಮತ್ತು ಇತರ ಮನುಷ್ಯರನ್ನೂ ನೀವು ನಾಶ ಮಾಡುತ್ತೀರಿ. ನಿಮ್ಮ ಹೆತ್ತವರು ನಿಮ್ಮನ್ನು ಪ್ರೀತಿಸುತಿದ್ದಾರೆ,ಅವರು ನಿಮಗೆ ಉತ್ತಮ ಶಿಕ್ಷಣವನ್ನು ಕೊಡುವತ್ತ ಗಮನ ಹರಿಸುತ್ತಾರೆ. ಅದು ನಿಮ್ಮನ್ನು ತಂತ್ರಜ್ಞಾನಿಯಾಗಿಸಲು ಅಲ್ಲ, ಕೇವಲ ಒಂದು ಉದ್ಯೋಗ ಗಳಿಸಲೂ ಅಲ್ಲ. ಬದಲಾಗಿ ಅದರಿಂದ ನಿಮಗೇನೂ ಆಂತರಿಕವಾಗಿ ಸಂಘರ್ಷವಿರಾಬಾರದೆಂದು ಮಾತ್ರ. ಯಾವಾಗ ನಾನು ನನ್ನ ಮಗಳನ್ನೋ, ಮಗನನ್ನೋ ಪ್ರೀತಿಸುತ್ತೇನೆ ಎಂದು ಹೇಳುತ್ತೇನೋ ಆಗ ಇವೆಲ್ಲವೂ ದ್ವನಿಸುತ್ತದೆ. ಇವೆಲ್ಲ ಅರ್ಥವಾಯಿತಾ ನಿಮಗೆ? ನಾನು ನನ್ನ ಮಗನನ್ನು ಪ್ರೀತಿಸುವುದಿದ್ದರೆ ಅವನೊಬ್ಬ ಉತ್ತಮ ವ್ಯವಹಾರಸ್ಥನಾಗುವುದು, ಹೆಚ್ಚು ಹಣಗಳಿಸುವುದು ನನಗೆ ಬೇಕಾಗಿಲ್ಲ. ಏನಕ್ಕಾಗಿ ? ಒಂದಿಷ್ಟು ಸಹಾಯವನ್ನು ಆತ ಮಾಡುವುದಿದ್ದರೂ, ಒಬ್ಬ ವೈದ್ಯನಾಗಿ, ಉತ್ತಮ ಸೇತುವೆಯೊಂದನ್ನು ಕಟ್ಟಲು, ಮಿಕ್ಕುಳಿದುದಕ್ಕೆ ನಾನವನನ್ನು ಅತ್ಯದ್ಭುತ ನೈಪುಣ್ಯವುಳ್ಳವನನ್ನಾಗಿಸುವುದಿಲ್ಲ. ಹಾಗಾಗಿ ಪ್ರೀತಿ ಎಂದರೇನು ? ಅದನ್ನು ಹುಡುಕುವುದು ಮುಖ್ಯವಲ್ಲವೇ ? ದಯವಿಟ್ಟು, ನಿಮಗೆ ಅದನ್ನು ಹುಡುಕುವುದು ಬೇಡವೇ ?ನಿಮ್ಮ ಸುತ್ತಲಿನ ಜಗತ್ತನ್ನು, ಹೆತ್ತವರನ್ನು, ಸ್ನೇಹಿತರನ್ನು, ಅಜ್ಜಿಯಂದಿರನ್ನು ಖಂಡಿತವಾಗಿಯೂ ನೀವು ಗಮನಿಸಿರಬಹುದು. ಅವರೆಲ್ಲರೂ 'ಪ್ರೀತಿ' ಎಂಬ ಪದವನ್ನು ಬಳಸುತ್ತಾರೆ. ಮತ್ತೆ ಜಗಳವನ್ನೂ ಆಡುತ್ತಾರೆ, ಅಲ್ಲಿ ಸ್ಪರ್ಧೆ ಇರುತ್ತದೆ, ಪರಸ್ಪರರನ್ನು ನಾಶ ಮಾಡಲು ಬಯಸುತ್ತಾರೆ. ನೀವು ನನ್ನನ್ನು ಹಿಂಬಾಲಿಸುತ್ತಿದ್ದೀರಲ್ಲವೇ ? ಪ್ರೀತಿ ಎಂದರೆ ಅದೇ ಏನು ? ಹಾಗಾದರೆ ನಿಮಗೆ ಪ್ರೀತಿ ಎಂದರೇನು ?

ವಿದ್ಯಾರ್ಥಿ : ಅದರ ಕುರಿತಾಗಿ ಮಾತನಾಡುವುದು ಕಷ್ಟ
ಜೆ.ಕೆ :
ನಿಮಗೇನನಿಸುತ್ತದೆ ? ನಿಮ್ಮ ದೃಷ್ಟಿಯಲ್ಲಿ ಪ್ರೀತಿ ಎಂದರೇನು ? ನನಗೆ ಖಂಡಿತಾ ಗೊತ್ತು ನೀವೆಲ್ಲರೂ ' ಪ್ರೀತಿ' ಎಂಬ ಪದವನ್ನು ಬಳಸುತ್ತೀರಿ ಎಂದು - ಬಳಸುತ್ತೀರಲ್ಲವೇ ?- ಅದು ಒಂದು ದೊಡ್ಡ ಒಪ್ಪಂದ. ಹಾಗಾದರೆ ಅದರರ್ಥವೇನು ? ನಿಮಗೆ 'ದ್ವೇಷ' ಎಂಬ ಪದದ ಬಗ್ಗೆ ಗೊತ್ತು, ಮತ್ತದರ ಅರ್ಥವೂ ಗೊತ್ತಿದೆ. ಅದರ ಅನುಭವವೂ ನಿಮಗಿದೆ, ನಿಮಗಿಲ್ಲವೇ ? ಸಿಟ್ಟು, ಹೊಟ್ಟೆ ಕಿಚ್ಚು, ವೈರತ್ವ- ಈ ಎಲ್ಲವೂ ದ್ವೇಷದ ಒಂದು ಭಾಗ, ಹೌದಲ್ಲವೇ ? ಮತ್ತು ಸ್ಪರ್ಧೆ ಕೂಡಾ ದ್ವೇಷದ ಒಂದು ಭಾಗ. ಸರಿ ತಾನೇ ? ಹಾಗಾಗಿ, ಮನುಷ್ಯರನ್ನು ದ್ವೇಷಿಸುತ್ತೇನೆಂದರೆ ಅದರ ಸಂವೇದನೆ ಏನೆಂದು ನಿಮಗೆ ತಿಳಿದಿದೆ. ಶಬ್ದಗಳಲ್ಲಿ ಬಹಳ ಚೆನ್ನಾಗಿ ಅದನ್ನು ನೀವು ಕಟ್ಟಿಕೊಡುತ್ತೀರಿ. ಈಗ, ಈ ಪ್ರೀತಿಯು ದ್ವೇಷದ ವಿರುದ್ಧ ಪದವೇ ?

ವಿದ್ಯಾರ್ಥಿ : ಅನಿಸಿಕೆಗಳು ವಿರುದ್ಧವಾದುದು.
ಜೆಕೆ :
ಹಾಗಾದರೆ ಆ ಎರಡನ್ನೂ, ಪ್ರೀತಿ ಮತ್ತು ದ್ವೇಷವನ್ನು ನಿಮ್ಮ ಹೃದಯ ಮತ್ತು ಮನಸ್ಸುಗಳಲ್ಲಿ ಹೊಂದಲು ಸಾಧ್ಯವೇ ? ಅದಕ್ಕೆ ಬದ್ಧರಾಗಿರಿ ! ದ್ವೇಷ ಮತ್ತು ಪ್ರೀತಿ ಜೊತೆಯಾಗಿರುವ ಸಂವೇದನೆಗಳು ನಿಮಗಿದೆಯೇ ? ಅಥವಾ ಒಟ್ಟಿಗಲ್ಲದಿದ್ದರೂ ? ಒಂದನ್ನು ಈ ಮೂಲೆಯಲ್ಲಿ ಇನ್ನೊಂದನ್ನು ಮತ್ತೊಂದು ಮೂಲೆಯಲ್ಲಿ ಇರಿಸಿ. ನಾನವನನ್ನು ದ್ವೇಷಿಸುತ್ತೇನೆ ಮತ್ತು ನಾನವನನ್ನು ಪ್ರೀತಿಸುತ್ತೇನೆ. ಸರಿ ಅಲ್ಲವೇ ? ಆದರೆ, ನಿಮ್ಮ ಬಳಿ ಪ್ರೀತಿ ಇದ್ದರೆ, ಇನ್ನೊಬ್ಬರನ್ನು ದ್ವೇಷಿಸಲು ಸಾಧ್ಯವೇ ? ನಿಮ್ಮ ಬಳಿ ಪ್ರೀತಿ ಇದ್ದರೆ, ನೀವು ಮನುಷ್ಯರನ್ನು ಕೊಲ್ಲುತ್ತಿರಾ ? ಬಾಂಬ್ ಗಳನ್ನು ಎಸೆಯುತ್ತೀರಾ ? ಜಗತ್ತಿನ ಇತರೆಡೆ ನಡೆಯುವ ಮಿಕ್ಕೆಲ್ಲಾ ದುಷ್ಕೃತ್ಯಗಳನ್ನು ನೀವು ಮಾಡುತ್ತೀರಾ ?

ಹಾಗಾಗಿ, ನಾವೀಗ ಮೊದಲ ಪ್ರಶ್ನೆಗೆ ಹಿಂತಿರುಗೋಣ : ಶಿಕ್ಷಿತ ಮತ್ತು ಶಿಕ್ಷಕನನ್ನು ನಾವು ಅನುಭವಿಸುತ್ತಿದ್ದೇವಾ ? ಹೆಚ್ಚಿನ ಪ್ರಾಮುಖ್ಯತೆ, ಅವಶ್ಯಕತೆಯನ್ನು ಪ್ರತಿಯೊಬ್ಬ ಮನುಷ್ಯನಲ್ಲಿ ನಾವೆಲ್ಲರೂ ಕಾಣುತ್ತಿದ್ದೇವೆಯೇ ? ನಾವೆಲ್ಲರೂ ಬೆಳೆಯಬೇಕು ಮತ್ತು ಅರಳಬೇಕು - ಅದು ಖಂಡಿತಾ ಶಾರೀರಿಕ ಪಕ್ವತೆಯಲ್ಲ, ಆದರೆ ಆಂತರಿಕವಾಗಿ ಆಳವಾಗಿ ಪಕ್ವತೆ ಹೊಂದುವುದೇ ? ನೀವು ಹಾಗಲ್ಲದಿದ್ದಲ್ಲಿ, ಮಿಕ್ಕುಳಿದಂತೆ ಏನರ್ಥ ? ನೀವು ಶಿಕ್ಷಿತರಾಗುವುದರಲ್ಲಿ ಏನರ್ಥವಿದೆ ? ಕೆಲವೊಂದು ಪರೀಕ್ಷೆಗಳನ್ನು ಪಾಸು ಮಾಡುವುದು, ಪದವಿ ಪಡೆಯುವುದು, ಉದ್ಯೋಗ ಗಳಿಸುವುದು, ನೀವು ಅದೃಷ್ಟವಂತರಾಗಿದ್ದರೆ ಒಂದು ಉತ್ತಮ ಮನೆಯನ್ನು ನಿರ್ಮಿಸುವುದು, ಇದರಲ್ಲಿ ಏನರ್ಥವಿದೆ ? ಇವೆಲ್ಲವೂ ಪ್ರತಿಯೊಬ್ಬ ಮನುಷ್ಯನಿಗೆ, ಪ್ರತಿಯೊಬ್ಬ ನಿಮಗೂ ಅರಳಲು ಸಹಾಯವಾಗುತ್ತದೆಯೇ ?

ಹಾಗಾಗಿ, ನೀವು ನನ್ನ ಮಗಳೋ ಅಥವಾ ಮಗನೋ ಆಗಿದಿದ್ದರೆ, ನಾನು ಆ ವಿಷಯವನ್ನೇ ಮೊದಲಿಗೆ ಮಾತನಾಡುತ್ತಿದ್ದೆ. ನಾನು ಹೇಳುತ್ತಿದ್ದೆ; ನೋಡು, ನಿನ್ನ ಸುತ್ತಲೂ ನೋಡು, ಶಾಲೆಯಲ್ಲಿ ನಿನ್ನ ಸ್ನೇಹಿತರನ್ನು ನೋಡು, ನಿನ್ನ ಅಕ್ಕ-ಪಕ್ಕದವರನ್ನು ನೋಡು, ನಿನ್ನ ಸುತ್ತಲೂ ಏನು ನಡೆಯುತ್ತಿದೆಯೆಂದು ನೋಡು, ನಿನ್ನ ಮೂಗಿನ ನೇರಕ್ಕೆ, ನಿನ್ನ ಇಷ್ಟಾನಿಷ್ಟವೋ ಅಲ್ಲ, ಬದಲಾಗಿ ಕೇವಲ ಸತ್ಯಾಂಶದತ್ತ ನೋಡು. ಮದುವೆಯಾದ ಜನರು ಅಸಂತುಷ್ಟರಾಗಿದ್ದರೆ, ಜಗಳ ಕಾಯುತ್ತಾರೆ, ಕೊನೆಯಿಲ್ಲದ ಕಲಹ, ಇವೆಲ್ಲವುಗಳು ನಡೆಯುತ್ತಿರುತ್ತವೆ. ಮತ್ತು ಹುಡುಗ ಹಾಗೂ ಹುಡುಗಿಯರಲ್ಲೂ ಅವರದ್ದೇ ಆದ ಸಮಸ್ಯೆಗಳಿವೆ. ಅಲ್ಲದೆ ನೀವು ನೋಡಿ, ಮನುಷ್ಯರು ವರ್ಗ ಮತ್ತು ಪಂಗಡಗಳಲ್ಲಿ ವಿಭಜಿಸಲ್ಪಟ್ಟಿದ್ದಾರೆ- ರಾಷ್ಟ್ರೀಯ ಪಂಗಡ, ಧಾರ್ಮಿಕ ಪಂಗಡ, ವೈಜ್ಞಾನಿಕ ಪಂಗಡ, ವ್ಯಾವಹಾರಿಕ ಪಂಗಡ ಕಲಾವಿದರ ಪಂಗಡ, ಹೀಗೆ. ನೀವು ಅನುಸರಿಸುತ್ತಿದ್ದೀರಾ ? ಪ್ರತಿಯೊಂದೂ ತುಂಡಾಗಿದೆ. ನೀವದನ್ನು ನೋಡುತ್ತಿದ್ದೀರಾ ? ಹಾಗಾದರೆ ಮುಂದಿನ ಪ್ರಶ್ನೆ : ಯಾರದನ್ನು ತಂದು ಮಾಡಿದ್ದು ? ನೀವು ಅನುಸರಿಸುತ್ತಿದ್ದೀರಾ ? ಮನುಷ್ಯರು ಇದನ್ನು ಮಾಡಿದ್ದು. ವಿಚಾರಗಳು ಇದನ್ನು ಮಾಡಿದ್ದು. ನಾನು ಕ್ಯಾಥೋಲಿಕ್, ಜ್ಯೂಯಿಷ್, ಅರಬ್, ಮುಸ್ಲಿಂ, ಕ್ರಿಶ್ಚಿಯನ್ ಅಂತ ವಿಚಾರವು ಹೇಳುತ್ತದೆ. ಈ ವಿಭಜನೆಯನ್ನು ವಿಚಾರವು ಸೃಷ್ಟಿಸಿದ್ದು. ಆದ್ದರಿಂದ ವಿಚಾರವು ಅದರ ಮೂಲದಲ್ಲಿಯೇ, ಸಹಜವಾಗಿ, ಅದರ ಕ್ರೀಯೆಯಲ್ಲಿ ಭಿನ್ನಾಭಿಪ್ರಾಯವನ್ನು ಕಾಣುತ್ತೇವೆ ಹಾಗೂ ಅದು ಛಿದ್ರವಾದುದನ್ನು ಹೊತ್ತು ತರುತ್ತದೆ. ಆ ವಿಚಾರವು ತರುವ ಹೋಳಾದ ಭಾವನೆಯು ನಿಮ್ಮೊಳಗೂ ಅಲ್ಲದೆ ಬಾಹ್ಯವಾಗಿಯೂ ಅಭಿವ್ಯಕ್ತಿಗೊಳ್ಳುವುದನ್ನು ನೀವು ನೋಡುತ್ತಿದ್ದೀರಾ ? ಇದು ತುಂಬಾ ಕಷ್ಟವೇನು ? ನಾನು ಕೇಳುತ್ತೇನೆ, ವಿಚಾರದ ಸತ್ಯತೆಯಲ್ಲಿ ಮತ್ತು ಕ್ರೀಯೆಯಲ್ಲಿ ಹೋಳಾಗುವಿಕೆಯನ್ನು ನಿಜವಾಗಿಯೂ ನೀವು ಕಾಣುತ್ತಿರಾ ? ಮತ್ತು ನೀವು ನೋಡಿದ್ದೇನೆಂದರೆ, ನೀವು ಅದರ ಸತ್ಯಾಸತ್ಯತೆಯನ್ನು ಅಥವಾ ಕೇವಲ ಉದ್ದೇಶವನ್ನು ನೋಡಿದ್ದೀರಾ ?ನೀವು ಅನುಸರಿಸುತ್ತಿದ್ದೀರಿ ತಾನೇ ? ಏನದು ? ಅದು ಉದ್ದೇಶವೋ ಅಥವಾ ಸತ್ಯಾಂಶವೋ ?

ವಿಧ್ಯಾರ್ಥಿ : ಅದು ಉದ್ದೇಶ
ಜೆಕೆ:
ಹಾಗಾದರೆ, ಅದನ್ನೊಂದು ಉದ್ದೇಶವನ್ನಾಗಿ ಯಾಕೆ ಮಾಡಬೇಕು ? ನಾನು ಹೇಳುತ್ತೇನೆ ನಿನಗೆ : ನಿನ್ನ ಸುತ್ತಲೂ ನೋಡು, ಯುದ್ಧ, ಭಯೋತ್ಪಾದನೆ, ಬಾಂಬ್ ಗಳು, ಹಿಂಸೆ ಮತ್ತು ಪ್ರತಿಯೊಂದು ಮನೆಯಲ್ಲೂ ನಿರಂತರವಾಗಿ ನಡೆಯುವ ಸಂಬಂಧಗಳ ನಡುವಿನ ತೊಂದರೆಗಳು - ಸ್ಪರ್ಧಾತ್ಮಕ ಸಮಾಜ, ವ್ಯಾವಹಾರಿಕ ಸಮಾಜ - ಈ ಎಲ್ಲವೂ ಈ ಮೇಜಿನಷ್ಟೇ ನಿಜವಾದದ್ದು ಎಂದು ನೀವು ನೋಡುತ್ತೀರಾ ? ಅಥವಾ ಉದ್ದೇಶವೆಂದು ಕರೆಯಲ್ಪಡುವುದರಿಂದ ತೆಗೆದುಕೊಂಡದ್ದೇ ? ಮತ್ತಿದೊಂದು ಉದ್ದೇಶವಾಗಿದ್ದರೆ, ಅದೊಂದು ಖಂಡಿತವಾಗಿಯೂ ಸತ್ಯಾಂಶವಾಗಿರುವಾಗ ಯಾಕದನ್ನು ಹಾಗೆ ಮಾಡುತ್ತೀರಿ.

ವಿದ್ಯಾರ್ಥಿ: ಪ್ರಾಯಶ: ವಿಚಾರವು ಮಿತಿಯಲ್ಲಿದೆ. ಯಾಕೆಂದರೆ ಅದೊಂದು ಪರಿಮಿತಿಯಲ್ಲಿ ಕೆಲಸ ನಿರ್ವಹಿಸುತ್ತದೆ. ಭೂತದಿಂದ ವಿಷಯವನ್ನು ಹೆಕ್ಕಿ ತೆಗೆದು ಇನ್ನೊಂದು ವಿಷಯದ ಜೊತೆಗೆ ತುಲನೆ ಮಾಡುತ್ತದೆ.
ಜೆಕೆ:
ಯಾಕೆ ವಿಚಾರವು ತನ್ನೊಳಗೆನೇ ಛಿದ್ರಗೊಂಡು, ತುಂಡಾಗಿ, ಮಿತಿಗೊಳಗಾಗುತ್ತದೆ ? ಅದರೊಳಗೇನೇ, ಖಂಡಿತವಾಗಿಯೂ ಅದರ ಫಲಿತಾಂಶದಿಂದಲ್ಲ. ವಿಚಾರವು ಸಮಯವು ನೀಡಿದ ಫಲಿತಾಂಶವಲ್ಲವೇ ? ಗಮನಿಸಿ, ಹುಡುಕಿ ! ವಿಚಾರವು ಸಮಯದ ಚಲನೆಯ ಫಲಿತಾಂಶವಲ್ಲವೇ ? ಖಂಡಿತವಾಗಿಯೂ ವಿಚಾರವು ಜ್ಞಾಪಕಶಕ್ತಿಯ ಫಲಿತಾಂಶ. ನೀವು ನೋಡಿ ಅದನ್ನು. ಜ್ಞಾಪಕ ಶಕ್ತಿ, ಅನುಭವ, ಜ್ಞಾನದ ಫಲಿತಾಂಶವದು; ಮತ್ತು ಅವೆಲ್ಲವೂ ಭೂತಕಾಲದ್ದು ಅಲ್ಲವೇ ? ಅದು ವರ್ತಮಾನದಲ್ಲಿ ಬದಲಾಗಿ ಮತ್ತೂ ಹೋಗುತ್ತಿರುತ್ತದೆ. ಹಾಗಾಗಿ ಇದು ಸಮಯದಲ್ಲಿನ ಚಲನೆ. ಯಾಕೆಂದರೆ ವಿಚಾರವು ಹಿಂದಿನಾದ್ದಾಗಿದ್ದು, ಕಾಲವನ್ನು ಹಿಂದಿಕ್ಕಿದ್ದೂ ಆಗಿರುವುದರಿಂದ ಅದೊಂದು ಛಿದ್ರ ಛಿದ್ರಗೊಂಡದ್ದು. ಅದು ಯಾವತ್ತೂ ಒಂದು ಸಂಪೂರ್ಣವಾಗಲು ಸಾಧ್ಯವಿಲ್ಲ.

ಇಲ್ಲಿ ಕೇಳಿ, ನನ್ನ ಒಂಭತ್ತನೇ ವಯಸ್ಸಿನಿಂದ ಇಂಗ್ಲೀಷ್ ಕಲಿಯುವುದನ್ನು ಆರಂಭಿಸಿದೆ ಮತ್ತು ಇತರ ಭಾಷೆಗಳನ್ನು ಕೂಡ. ಅದು ಜ್ಞಾಪಕಶಕ್ತಿ ಅಲ್ಲವೇ ? ಅವುಗಳನ್ನು ಕಲಿಯಲು ನನಗೊಂದಿಷ್ಟು ವರ್ಷ ಬೇಕಾದವು ಮತ್ತವು ನನ್ನ ಮಸ್ತಿಶ್ಕದಲ್ಲಿ ಭದ್ರವಾದುವು - ಆ ಶಬ್ದಗಳು, ಮತ್ತವುಗಳ ಮೂಲಕ ಹೊರ ಹೊಮ್ಮುವ ಸಾಲುಗಳು-ಇವೆಲ್ಲವೂ ಸಮಯವನ್ನು ತೆಗೆದುಕೊಂಡಿದ್ದವು. ತೆಗೆದು ಕೊಂಡಿರಲಿಲ್ಲವೇ ? ಮತ್ತು ಅಲ್ಲಿಂದ ಆ ಘಟ್ಟದಿಂದ ಹೊರ ಹೊಮ್ಮಿದ ವಿಚಾರವು ಮಿತಿಯಿಂದ ಕೂಡಿರುತ್ತದೆ. ಹಾಗಾಗಿ ವಿಚಾರವು ಸಂಪೂರ್ಣವೂ ಅಲ್ಲ, ಪೂರ್ತಿಯೂ ಅಲ್ಲ. ವಿಚಾರವು ಯಾವತ್ತೂ ಪೂರ್ತಿಯಾಗಿರುವುದಿಲ್ಲ ಯಾಕೆಂದರೆ ಅದು ಯಾವತ್ತೂ ಮಿತಿಯಲ್ಲಿರುತ್ತದೆ. ದಯವಿಟ್ಟು ಇದನ್ನು ನೋಡಿ, ಉದ್ದೇಶವಾಗಿಯಲ್ಲ ಬದಲಿಗೆ ನಿಜಾಂಶವಾಗಿ. ವಿಚಾರವು ಜ್ಞಾಪಕದ ಪ್ರತಿಕ್ರಿಯೆ ಎಂದು ನಾವು ಹೇಳಿದ್ದೇವೆ. ವಿಚಾರವು ಮಸ್ತಿಶ್ಕದಲ್ಲಿ ಸಂಗ್ರಹವಾಗಿರುತ್ತದೆ ; ಇದೊಂದು ಅನುಭವ ಮತ್ತು ಜ್ಞಾನದ ನಿರಂತರ ಒಟ್ಟಾಗುವಿಕೆಯಾಗಿದೆ ಮತ್ತು ನೀವೇನಾದರೂ ಕೇಳಿದರೆ, ಜ್ಞಾಪಕವು ಮಿತಿಯುಳ್ಳದ್ದು, ಜ್ಞಾನ, ಸಮಯವು ಮಿತಿಯುಳ್ಳದ್ದು.

ವಿಚಾರವು ಜಗತ್ತಿನಲ್ಲಿ ವಿಭಜನೆಯನ್ನು ಸೃಷ್ಟಿಸಿದೆ. ನೀನು ಡಚ್, ನಾನು ಜರ್ಮನ್, ಅವನು ಬ್ರಿಟಿಷ್ ಮತ್ತು ಮಿಕ್ಕವರು ಚೈನೀಸ್ ಎಂದು ವಿಭಜಿಸಲ್ಪಟ್ಟಿದ್ದು ವಿಚಾರದಿಂದ. ವಿಚಾರವು ಧರ್ಮವನ್ನು ಸೃಷ್ಟಿಸಿತು - ವಿಚಾರವು ಹೇಳುತ್ತದೆ, ' ಕ್ರಿಸ್ತನು ಬಹುದೊಡ್ಡ ಕಾಪಾಡುವವ' ; ಆಮೇಲೆ ನೀನು ಭಾರತಕ್ಕೆ ಹೋಗು ಮತ್ತವರು ಹೇಳುತ್ತಾರೆ, 'ಕ್ಷಮಿಸು, ಯಾರು ಆ ಮಹಾನುಭಾವ ? ನನಗೆ ಅವನು ಯಾರೆಂದೇ ತಿಳಿಯದು. ನಮಗೆ ನಮ್ಮದೇ ದೇವರಿದ್ದಾನೆ, ಅವನು ಮಿಕ್ಕವರಿಗಿಂತ ಶ್ರೇಷ್ಟ’. ವಿಚಾರವು ಯುದ್ಧವನ್ನು ಸೃಷ್ಟಿಸಿತು ಮತ್ತದಕ್ಕೆ ಬೇಕಾದ ಸಲಕರಣೆಗಳನ್ನು ಕೂಡಾ. ವಿಚಾರವು ಈ ಎಲ್ಲವುಗಳಿಗೆ ಕಾರಣ. ಸರಿ ತಾನೇ ?

ವಿದ್ಯಾರ್ಥಿ: ಎಲ್ಲವೂ ಉದ್ದೇಶಗಳು, ಅದರ ಉದಾಹರಣೆಗಳನ್ನು ನೀವು ನೀಡಿದ್ದೀರಿ...
ಜೆಕೆ: ಅವು ಯಾವುವೂ ಉದ್ದೇಶವಲ್ಲ - ಈ ಎಲ್ಲವೂ ಸತ್ಯಾಂಶಗಳು.

ವಿದ್ಯಾರ್ಥಿ: ಹೌದು, ಹೌದು ಆದರೆ...
ಜೆಕೆ:
ನಾನಿದಕ್ಕೆ ಬದ್ಧನಾಗಿರುತ್ತೇನೆ, ನಿಮ್ಮನ್ನು ನಾನು ಕೇಳುತ್ತಿದ್ದೇನೆ, ನೀವು ಈ ಸತ್ಯಾಂಶವನ್ನು ನೋಡಿ- ಅದೇನೆಂದರೆ, ನೀವು ಒಂದು ರಾಷ್ಟ್ರದವರು,ನಾನು ಇನ್ನೊಂದು ರಾಷ್ಟ್ರದವನು .ನಮಗೆ ವ್ಯತ್ಯಸ್ತವಾದ ಬಣ್ಣ, ಸಂಸ್ಕೃತಿ ಮಿಕ್ಕಿದೆಲ್ಲವೂ ಇದೆ. ಮುಸ್ಲಿಂ ಮತ್ತು ಹಿಂದೂ ಎಂಬ ವಿಭಜನೆಯನ್ನು ಇಂಡಿಯಾದಲ್ಲಿ ಕಾಣುತ್ತೀರಿ ? ಅವುಗಳನ್ನು ಸೃಷ್ಟಿಸಿದವರು ಯಾರು ?

ವಿದ್ಯಾರ್ಥಿ: ನಾನು ಆ ವಿಭಜನೆಯನ್ನು ನೋಡಿದ್ದೇನೆ. ಆದರೆ ನಾನು, ವೈಯಕ್ತಿಕವಾಗಿ ಹೆಚ್ಚಿನ ಆಸಕ್ತಿ ತೋರಿಸುವುದಿಲ್ಲ, ಯಾಕೆಂದರೆ ಅವುಗಳು ಕಪೋಕಲ್ಪಿತ.
ಜೆಕೆ:
ನೀನು ಆಸಕ್ತಿ ವಹಿಸದೆ ಇರಬಹುದು ಆದರೆ ಕೆಲವರು ನಿಜಕ್ಕೂ ಆಸಕ್ತಿ ವಹಿಸುತ್ತಾರೆ ಮತ್ತವರು ಪರಸ್ಪರರನ್ನು ದ್ವೇಷಿಸುತ್ತಾರೆ. ಈ ಭಿನ್ನಾಭಿಪ್ರಾಯದ ಹಿಂದಿನ ವಿಚಾರ ಯಾವುದು ? ಪೂರ್ವಾಗ್ರಹ, ಅಲ್ಲವೇ ? ನನ್ನ ಹೆತ್ತವರು ನನಗೆ ಹೇಳಿದ್ರು, 'ನೀನೊಬ್ಬ ಬ್ರಾಹ್ಮಣ', ನೀನೊಬ್ಬ ಹಿಂದೂ' ಎಂದು ಮತ್ತು ನಿಮ್ಮ ಹೆತ್ತವರು ಹೇಳಿದರು, ' ನೀನೊಬ್ಬ ಕ್ರಿಶ್ಚಿಯನ್ ಎಂದು.

ವಿದ್ಯಾರ್ಥಿ : ಒಂದು ಪಂಗಡಕ್ಕೆ ಒಳಪಡುವುದು ಸಹಜ ಪ್ರವೃತ್ತಿ.
ಜೆಕೆ:
ಪಂಗಡವೊಂದಕ್ಕೆ ಒಳಪಡುವ ಸಹಜ ಪ್ರವೃತ್ತಿ ಯಾಕೆ ? ಯಾಕೆಂದರೆ ಅದು ಹೆಚ್ಚಾಗಿ ರಕ್ಷಣೆಯಿಂದ ಕೂಡಿದ್ದು. ಒಂದು ಪಂಗಡದ ಜೊತೆಗೆ ಗುರುತಿಸಿಕೊಳ್ಳುವುದು, ಒಂದು ವರ್ಗದ ಭಾಗವಾಗುವುದು ನಿಮಗೆ ಹೆಚ್ಚಿನ ರಕ್ಷಣೆಯ ಅನುಭವ ಕೊಡುತ್ತದೆ. ಆದರೆ ನೀವು ಜಗತ್ತಿನ ಇತರ ಎಲ್ಲಾ ಮನುಷ್ಯರ ಜತೆಗೆ, ಒಬ್ಬ ಸಂಪೂರ್ಣ ಮನುಷ್ಯರಾಗಿ ಯಾಕೆ ಗುರುತಿಸಿಕೊಳ್ಳುವುದಿಲ್ಲ ? ಯಾಕೆ ಒಂದು ಸಣ್ಣ ಪಂಗಡ ?

ನಾನು ಏನನ್ನು ಹೇಳಲು ಉದ್ದೇಶಿಸುತ್ತೇನೆಂದರೆ, ವಿಚಾರವು ಈ ಎಲ್ಲಾ ಮಾನವ, ಮಾನಸಿಕ ಮತ್ತು ಜಾಗತಿಕ ಸಮಸ್ಯೆಗಳನ್ನು ಸೃಷ್ಟಿಸಿದೆ. ಅದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಇದೊಂದು ಸತ್ಯಾಂಶ ಮತ್ತದು ಕೇವಲ ಉದ್ದೇಶವಲ್ಲ ಎಂಬುದನ್ನು ನೋಡಿದಿರಾ ? ನಿಮ್ಮ ಹಲ್ಲು ನೋವಿನಷ್ಟೆ ಸತ್ಯವಿದು. 'ಇದೊಂದು ಉದ್ದೇಶಿತ ಹಲ್ಲು ನೋವೆಂದು, ನೀವು ಹೇಳುವುದಿಲ್ಲ.'ಹಾಗಾಗಿ ನಾವಿದನ್ನು ಹೀಗೆ ಹೇಳೋಣ. ವಿಚಾರವೆಂದರೆ ಪ್ರೀತಿಯೇನು ? ಪ್ರೀತಿಯನ್ನು ವಾಪಾಸ್ ತರುವ ಬಗ್ಗೆ ಚಿಂತಿಸೋಣವೇ ?

ವಿದ್ಯಾರ್ಥಿ: ನೀವು ಯಾರನ್ನಾದರೂ ಪ್ರೀತಿಸುತ್ತಿದ್ದರೆ, ನೀವು ಅದರ ಬಗ್ಗೆ ಯೋಚಿಸಬೇಕು.
ಜೆಕೆ:
ನಾನು ಏನು ನಿಮ್ಮನ್ನು ಕೇಳುತ್ತಿರುವುದೇನೆಂದರೆ: ಪ್ರೀತಿಯು ವಿಚಾರದಿಂದ ಸಂಸ್ಕರಿಸಲ್ಪಟ್ಟದ್ದೇ ? ವಿಚಾರವು ಛಿದ್ರ ಛಿದ್ರವಾದದ್ದು ಎಂದು ನಾವು ಹೇಳುತ್ತೇವೆ- ಅದು ಯಾವತ್ತೂ ಛಿದ್ರ ಛಿದ್ರವಾದದ್ದೇ.

ಇನ್ನೊಂದು ಪ್ರಶ್ನೆ : ವಿಚಾರವು ತನ್ನ ಚಟುವಟಿಕೆಯಲ್ಲಿ ತುಂಡರಿಸಲ್ಪಟ್ಟ ಮತ್ತು ಅದರ ಕ್ರೀಯೆಯಲ್ಲಿ ತರುವ ಛಿದ್ರತೆಯು, ಆಮೇಲೆ ವಿಚಾರವು ವಿಕಾಸಗೊಂಡು ಪ್ರೀತಿಯನ್ನು ಪುನ: ತರಬಲ್ಲದೇ ? ಈಗ ಯಾವಾಗ ನೀನು 'ಇಲ್ಲ' ಎನ್ನುತ್ತಿಯೋ - ಹುಷಾರಾಗಿರು, ನಾನು ನಿನ್ನನ್ನು ಈ ವಿಚಾರವಾಗಿ ಹಿಡಿಯಬಲ್ಲೆ ! ಯಾವಾಗ ನೀನು 'ಇಲ್ಲ' ಎನ್ನುತ್ತಿಯೋ, ಆವಾಗ ವಿಚಾರವು ಪ್ರೀತಿಯಾಗಿರುವುದಿಲ್ಲ' - ಅದು ಮತ್ತೆ ಒಂದೇ ಉದ್ದೇಶವೋ? ಅಥವಾ ವಾಸ್ತವತೆಯೋ? ಅದೊಂದು ವಾಸ್ತವತಯೇ ಆಗಿದ್ದರೆ, ಅಂತಹದ್ದೊಂದು ಇದ್ದಿದ್ದರೆ, ಪ್ರೀತಿಯು ಎಲ್ಲಿ ಕಾಳಜಿಯಾಗಿದೆ ? ಅಲ್ಲಿ ವಿಚಾರದ ಯಾವುದೇ ಚಲನೆ ಇರುವುದಿಲ್ಲ. ಇದು ತುಸು ಹೆಚ್ಚಾಯಿತೇ? ನಿಮಗಿದು ಅರ್ಥವಾಯಿತೆ ?ಇಲ್ಲ ಅಲ್ಲವೇ (ತಮ್ಮ ತಲೆಯನ್ನು ಮುಟ್ಟಿ) ಆದರೆ ,ಆಳವಾಗಿ, ಆಂತರಿಕವಾಗಿ ?- ತುಂಬಾ ತುಂಬಾ ಹುಶಾರಾಗಿರಿ. ಪ್ರೀತಿಯು ವಿಚಾರವಲ್ಲವಾದರೆ, ಅದೊಂದು ವಿಚಾರದ ಅಡಿಪಾಯದಿಂದ ಬಾರದಿದ್ದರೆ, ಸಂಬಂಧವೆಂದರೇನು ? ವಿಚಾರವು ಪ್ರೀತಿ ಅಲ್ಲವಾದರೆ, ಈಗಿರುವ ನಿಮ್ಮ ವಾಸ್ತವ ಸಂಬಂಧವನ್ನು ಏನು ಮಾಡುತ್ತೀರಿ ?

ನಾನು ನನಗೆ ಹೇಳಿಕೊಳ್ಳುತ್ತೇನೆ ಏನೆಂದರೆ, ನಾನು ವಾಸ್ತವಾಂಶವನ್ನು ನೋಡುತ್ತೇನೆ, ಉದ್ದೇಶವನ್ನಲ್ಲ, ಉಪಾಯವನ್ನಲ್ಲ. ಆ ಚಿಂತನೆಯು ಪ್ರೀತಿಯಲ್ಲ. ಆದರೆ ನಾನು ಗೃಹಸ್ಥ, ನನಗೆ ಮಕ್ಕಳಿದ್ದಾರೆ, ನನ್ನ ಅಮ್ಮ ಇದ್ದಾಳೆ - ಪ್ರತಿಯೊಬ್ಬರ ಬಗ್ಗೆಯೂ ನಮಗೆಲ್ಲರಿಗೂ ರೂಪಕಗಳಿವೆ. ಸಂಬಂಧಗಳ ಜತೆಗಿನ ಒಡನಾಟವು ರೂಪಕಗಳ ಕ್ರಿಯೆ - ನನ್ನ ತಾಯಿಯ ಬಗ್ಗೆಗಿನ ರೂಪಕ , ನನ್ನ ಹೆಂಡತಿ, ಮಕ್ಕಳ ಬಗೆಗಿನ ರೂಪಕ ಎಲ್ಲವೂ. ಮತ್ತಿದನ್ನು ನಾನು ಪ್ರೀತಿ ಎಂದು ಕರೆಯುತ್ತೇನೆ. ನಾನು ನನ್ನ ಅಮ್ಮನನ್ನು ಪ್ರೀತಿಸುತ್ತೇನೆಂದು ಹೇಳುತ್ತೇನೆ, ನನ್ನ ಹೆಂಡತಿಯನ್ನು, ಮಕ್ಕಳನ್ನು ಪ್ರೀತಿಸುತ್ತೇನೆ.

ನಾನೀಗ ಏನು ಹೇಳುತ್ತೇನೆಂದರೆ, ಆ ಸಂಬಂಧವು ರೂಪಕದ, ಚಿಂತನೆಯ ಮೇಲೆ ಅವಲಂಬಿತವಾಗಿದೆ. ನಾನು ಅದನ್ನು ಗಮನಿಸುತ್ತಿದ್ದೇನೆ ; ಏನೆಂದರೆ ಪ್ರೀತಿಯು ಚಿಂತನೆಯ ಉತ್ಪನ್ನವಲ್ಲ. ಆ ಪ್ರೀತಿಯು ಚಿಂತನೆಯಾಗಲಾರದು. ಹಾಗಿರುವಾಗ, ನನ್ನ ತಾಯಿ, ಹೆಂಡತಿ, ಮಕ್ಕಳೊಂದಿಗಿನ ಸಂಬಂಧಗಳಿಗೆ ಏನಾಗುತ್ತದೆ ?

ವಿದ್ಯಾರ್ಥಿ : ಹೇಗಿದನ್ನು ನೋಡುತ್ತೀರಿ ?
ಜೆಕೆ
: 'ಹೇಗೆ' ಎಂಬುದಿಲ್ಲ - ಇದು ಯಾಂತ್ರಿಕವಾದುದಲ್ಲ' ನೀವದನ್ನು ನೋಡಲಾರಿರೇ, ನಿಜವಾಗಿಯೂ, ಆ ಪ್ರೀತಿಗೆ ವಿಚಾರದೊಂದಿಗೆ ಮಾಡುವಂತದ್ದು ಏನೂ ಇಲ್ಲ - ಪೂರ್ಣ ವಿರಾಮ ? ನಾನು ಬಹಳ ಸ್ಪಷ್ಟವಾಗಿ ಗಮನಿಸುತ್ತಿದ್ದೇನೆ, ಏನಂದ್ರೆ ವಿಚಾರವು ಛಿದ್ರತೆಯಲ್ಲಿನ ಚಲನೆ. ಅದನ್ನು ಬಹಳ ಸ್ಪಷ್ಟವಾಗಿ ನಾನು ನೋಡುತ್ತಿದ್ದೇನೆ. ಇದೊಂದು ಸತ್ಯ, ಒಂದು ವಾಸ್ತವಾಂಶವೋ , ಉದ್ದೇಶವೋ, ಉಪಾಯವೋ ಅಲ್ಲ. ಆದರೆ, ನಾನು ಗೃಹಸ್ಥ, ನನಗೆ ಮಕ್ಕಳಿದ್ದಾರೆ, ತಾಯಿ ಇದ್ದಾಳೆ ಮತ್ತು ಈ ಬಂಧಗಳೆಲ್ಲಾ ರೂಪಕದ ಮೇಲೆ, ವಿಚಾರದ ಮೇಲೆ ನಿಂತಿವೆ ಎಂಬುದರ ಅರಿವಾದಾಗ, ಏನು ಸಂಭವಿಸುತ್ತದೆ ?

ವಿದ್ಯಾರ್ಥಿ: ರೂಪಕಗಳ ನಡುವಿನ ಬಂಧವನ್ನು ಸಾಮಾನ್ಯವಾಗಿ 'ಪ್ರೀತಿ' ಎಂದು ಕರೆಯುತ್ತಾರೆ, ಆದರೆ ನೀವು ಹೇಳುತ್ತೀರಿ ಪ್ರೀತಿ ಎನ್ನುವುದು ಅದರಿಂದಲೂ ಭಿನ್ನ ಎಂದು.
ಜೆಕೆ:
ನಾನು ಹೇಳಿದ್ದೆ: ನಾನು ಪ್ರೀತಿಯಲ್ಲಿ ಬಿದ್ದಿದ್ದೆ, ಹಲವು ವರ್ಷಗಳಿಂದ ನಾನು ಗೃಹಸ್ತನಾಗಿದ್ದೇನೆ ಮತ್ತು ನನಗೆ ಮಕ್ಕಳಿದ್ದಾರೆ. ನನ್ನ ಮಡದಿಯ ಬಗ್ಗೆ ನನಗೊಂದು ರೂಪಕವಿದೆ. ಸರಿ ತಾನೇ ? ನಾನೇ ಅದನ್ನು ಸೃಷ್ಟಿಸಿದ್ದು. ಆಕೆ ನನ್ನ ನಿಯಂತ್ರಿಸಿದ್ದಳು, ಕಾಲೆಳೆದಿದ್ದಳು ಎಂಬ ರೂಪಕವೊಂದನ್ನು ಸೃಷ್ಟಿಸಿರುತ್ತೇನೆ. ಮತ್ತು ಅವಳಿಗೂ ನನ್ನ ಬಗೆಗಿನ ರೂಪಕವಿದೆ - ಅದು ನಾನು ಅವಳ ಕಾಲೆಳೆದಿದ್ದೆ, ಆಕೆಯನ್ನು ನಿಯಂತ್ರಿಸಿದ್ದೆ ಎಂದು. ಅಲ್ಲಿ ಈ ಮಾತುಕತೆಗಳು ಜರಗುತ್ತಿರುತ್ತವೆ, ಲೈಂಗಿಕವಾಗಿಯೂ ಮತ್ತು ಇನ್ನಿತರ ಎಲ್ಲಾ ರೀತಿಯಲ್ಲೂ ಕೂಡ. ನಾನು ಆಕೆಯ ಬಗ್ಗೆ ಒಂದು ಚಿತ್ರವನ್ನು ಕಟ್ಟಿದ್ದೆ ಮತ್ತು ಆಕೆಯೂ ಅದೇ ರೀತಿ ನನ್ನ ಬಗ್ಗೆಯೊಂದು ಚಿತ್ರವನ್ನು ಕಟ್ಟಿಕೊಂಡಿದ್ದಳು. ಅದು ವಾಸ್ತವ. ದಯವಿಟ್ಟು ಇದನ್ನು ನೋಡಿ ! ಈ ಪ್ರತಿಮೆಯನ್ನು ಕಟ್ಟುವ ಕ್ರೀಯೆ ಇದೆಯಲ್ಲಾ, ಇದು ವಿಚಾರದ ಚಲನೆ. ಅದನ್ನು ನೋಡದೆ ಅಲ್ಲಿಂದ ಕದಲ ಬೇಡ ! ಆ ವಾಸ್ತವದಿಂದಲೂ ಕದಲದಿರು.

ಈಗ ನೀವು ಜತೆಯಾಗಿ ಬಂದು ಚಿಂತನೆಯು ಛಿದ್ರತೆಯ ಚಲನೆ ಎಂದು ನನಗೆ ಹೇಳುತ್ತೀರಿ. ಬಹಳ ಜಾಗರೂಕರಾಗಿ ನನಗೆ ವಿವರಿಸುತ್ತೀರಿ ಯಾತಕ್ಕಾಗಿ ಎಂದು - ಯಾಕೆಂದರೆ ಇದು ಸಮಯದಿಂದ ಬಂಧಿತವಾದುದು, ಜ್ಞಾಪಕದಿಂದ, ಜ್ಞಾನದಿಂದ ಬಂಧಿತವಾದುದು,ಆದ್ದರಿಂದ ಇದು ತುಂಬಾ ಮಿತಿಯುಳ್ಳದ್ದು. ನಾನದನ್ನು ನೋಡುತ್ತೇನೆ. ಅದನ್ನು ನೋಡಿದ ನಂತರದ ನನ್ನ ಹೆಜ್ಜೆಯು- ತಾಯಿ,ಮಡದಿ, ಮಕ್ಕಳೊಂದಿಗಿನ ನನ್ನ ಸಂಬಂಧದ ಜತೆಗೆ ನಾನೇನು ಮಾಡಲಿ ?

ನೀವಿದನ್ನು ನೋಡಿದರೆ- ಪ್ರೀತಿ ಎಂದರೇನು ? ಪ್ರೀತಿ ಎಂದರೆ ದಿಟ್ಟೊ ಇದೇ ಏನು ? ಪ್ರೀತಿಯು ಚೂರು ಚೂರಾದುದೇ ? ಪ್ರೀತಿ ಎನ್ನುವುದು ಜ್ಞಾಪಕದಿಂದ, ಚಿಂತನೆಯಿಂದ ಮಾಡಲ್ಪಟ್ಟ ಚಿತ್ರವೇ , ರೂಪಕವೇ ?

ವಿದ್ಯಾರ್ಥಿ: ಮೊದಲನೆಯಾದ್ದಾಗಿ, ಪ್ರೀತಿಯೊಳಗಿದ್ದು ಚಂದವಾದುದನ್ನು ನೋಡಿ ಅನುಭವಿಸುವುದು ನಿಜಕ್ಕೂ ಸುಂದರವಾದುದು ಅದನ್ನು ಸ್ಫಟಿಕದಷ್ಟು ಸ್ಪಷ್ಟತೆಗೆ ಒಡ್ಡುತ್ತೀರಿ.
ಜೆಕೆ:
ಏನೋ ಒಂದು ಸುಂದರವಾದುದನ್ನು ನೀನು ನೋಡುತ್ತಿದ್ದೀಯಾ ? ನೀನು ? ನೀವು ನಿಜವಾಗಲೂ ಸುಂದರವಾದುದನ್ನು ನೋಡುತ್ತೀರಾ ?

ನೀವು ಆ ಹೂದೋಟದಲ್ಲಿರುವ ಸುಂದರ ಮರವನ್ನು ನೋಡಿದಾಗ ಅಥವಾ ಸುಂದರ ಹೆಂಗಸನ್ನು, ಮೋಡವನ್ನು, ಹರಿವ ನೀರನ್ನು ಕಂಡು ಅತ್ಯದ್ಭುತ ಸೌಂದರ್ಯವೆಂದು ನೀವು ಆದರಲ್ಲೇ ಉಳಿಯುತ್ತೀರಾ ? ಅಥವಾ ನೀವು ಒಂದು ಉದ್ದೇಶದತ್ತ ತಿರುಗಿ - ಉದ್ದೇಶವೊಂದು ಸುಂದರವೇ ? ನೀವು ನೋಡುತ್ತಿರುವಾಗ ಏನು ಘಟಿಸುತ್ತದೆ ?

ವಿದ್ಯಾರ್ಥಿ: ಯಾವುದೇ ಶಬ್ದವಿಲ್ಲ.
ಜೆಕೆ:
ಅದರರ್ಥವೇನು? ಶಬ್ದವಿಲ್ಲ, ಚಿಂತನೆಯಿಲ್ಲ. ಚಿಂತನೆಯ, ವಿಚಾರದ ಚಲನೆಯಿಲ್ಲದಾಗ ಸೌಂದರ್ಯವು ಬೆಳಗುತ್ತದೆ. ನೀವಿದಕ್ಕೆ ಒಪ್ಪುತ್ತೀರಾ ? (ತಲೆ ಅಲ್ಲಾಡಿಸುತ್ತಾ) ನೀವೆಲ್ಲಾ ಜತೆಯಾಗಿ ಒಪ್ಪುತ್ತೀರಿ! ಎಂತಹ ಅತ್ಯಧ್ಭುತ!ಯಾವುದಾದರೊಂದು ಸುಂದರ ವಸ್ತುವನ್ನು ನೋಡುವಾಗ ವಿಚಾರದ ಹಾಜರಿ ಅಲ್ಲಿ ಇರುವುದಿಲ್ಲ. ಈಗ, ನೀವು ಆ ಕ್ಷಣದಲ್ಲಿ ನಿಂತು ಅದರಿಂದ ಕದಲದಂತೆ ಇರಬಹುದೇ? ಆ ಮೋಡವನ್ನು ಗಮನಿಸಿದಾಗ ನಮ್ಮ ಮನಸ್ಸು ಮಾತನಾಡುವುದಿಲ್ಲ. ಕಾರಣ ಆ ಕ್ರಿಯೆಯಲ್ಲಿ ಯಾವುದೇ ತರದ ವಿಚಾರವಿರುವುದಿಲ್ಲ. ಅತ್ಯದ್ಭುತ ಸೌಂದರ್ಯವನ್ನು ನೋಡುವಾಗ ನಿಮ್ಮ ವಿಚಾರವು ಸಂಪೂರ್ಣವಾಗಿ ಹಾಜರಿರುವುದಿಲ್ಲ.

ಈಗ ಇದನ್ನು ಗಮನವಿಟ್ಟು ನೋಡಿ, ಹುಷಾರಾಗಿ ಕೇಳಿ, ದಯವಿಟ್ಟು ಹುಷಾರಾಗಿ ಕೇಳಿರಿ. ಮೋಡ, ಅದರ ಬೆಳಕು, ತೀಕ್ಷ್ಣತೆಯು ನಿಮ್ಮನ್ನು ಎತ್ತಲೋ ಕೊಂಡೊಯ್ದಿದೆ. ಇದನ್ನು ನೋಡಿದ್ದೀರಾ ನೀವು ? ಮೋಡವು ನಿಮ್ಮನ್ನು ಹೀರಿಕೊಂಡಿದೆ. ಅಂದ್ರೆ ನೀವು ಆ ಹೀರುವಿಕೆಯಲ್ಲಿ ಹಾಜರಾಗಿರುವುದಿಲ್ಲ. ಇನ್ನೊಂದು ಹೆಜ್ಜೆ. ಮಗುವೊಂದು ಆಟಿಕೆಯ ಮೂಲಕ ಹೀರಲ್ಪಟ್ಟಿದೆ. ಆಟಿಕೆಯನ್ನು ತೆಗೆದಿರಿಸಿ ಆಗ ಆ ಮಗು ತನ್ನ ತುಂಟಾಟಕ್ಕೆ ಪುನ: ಮರಳುತ್ತದೆ. ಅದು ನಿಜವಾಗಿಯೂ ಹಾಗೆಯೇ ಆಗಿರುತ್ತದೆ. ಮೋಡವು ನಿಮ್ಮನ್ನು ಹೀರಿರುತ್ತದೆ ಮತ್ತು ಯಾವಾಗ ಆ ಮೋಡವು ನಿಮ್ಮಿಂದ ದೂರವಾಗುತ್ತದೋ ಆವಾಗ ನೀವು ನಿಮ್ಮತನಕ್ಕೆ ಮರಳುತ್ತೀರಿ. ಪರ್ವತಗಳಿಂದ, ಮೇಘಗಳಿಂದ, ಮರಗಳಿಂದ, ಹಕ್ಕಿಗಳ ಇಂಚರಗಳಿಂದ, ಈ ಮಣ್ಣಿನ ಸೌಂದರ್ಯದಿಂದ ವಿಮುಖರಾಗಿ ಸಂಪೂರ್ಣ ನಿಮ್ಮೊಳಗೆ ನೀವು ಖಾಲಿಯಾಗಲು ಸಾಧ್ಯವೇ ?

ಆಟಿಕೆಯನ್ನು ತೆಗೆದಿರಿಸಿ, ಮಗುವು ತನ್ನ ತುಂಟಾಟಕ್ಕೆ ಮತ್ತೆ ಮರಳುತ್ತದೆ. ಕೂಗುವುದು, ಕಿರುಚುವುದು ಎಲ್ಲವೂ ಮತ್ತೆ ತೊಡಗಿಕೊಳ್ಳುತ್ತದೆ. ಆಟಿಕೆಯನ್ನು ಮತ್ತೆ ನೀಡಿ, ಆ ಆಟಿಕೆಯು ಮಗುವನ್ನು ಸಂಪೂರ್ಣಾವಾಗಿ ಆವರಿಸಿಕೊಂಡು ಬಿಡುತ್ತದೆ. ನಾನು ಕೇಳುತ್ತೇನೆ, ಆಟಿಕೆಯಿಲ್ಲದೆ, ನಿಮ್ಮನ್ನು ಹೀರಿಕೊಳ್ಳಲು ಏನೂ ಇರದಾಗ, ನಿಮ್ಮೊಳಗೆ ನೀವು ಹಾಜರಾಗದಿರಲು ಸಾಧ್ಯವೇ ? ಓಹ್.... ಈ ಸೌಂದರ್ಯವನ್ನು ನೀವು ಗಮನಿಸಿದಿರಾ ! ನಿಮಗಾರ್ಥವಾಯಿತೆ ? ಹಾಗಾಗಿ ಸೌಂದರ್ಯ ಎಂದರೆ ನೀನಿಲ್ಲದಿರುವುದು. ಯಾವಾಗ ವಿಚಾರವು ಹಾಜರಿರುವುದಿಲ್ಲವೋ ಆಗ ಸೌಂದರ್ಯವು ಆಗಮಿಸುತ್ತದೆ. ಈಗ, ಪ್ರೀತಿ ಎನ್ನುವುದು ಒಂದು ಚಿಂತನೆ ಅಲ್ಲ, ಅಲ್ವೇ ? ನೀವು ಈ ಸಂಬಂಧದ ಆರಂಭವನ್ನು ನೋಡಿದ್ದೀರಾ ? ನಾನು ನಿನ್ನನ್ನು ಪ್ರೀತಿಸುತ್ತೇನೆ - ನೀವು ನನ್ನನ್ನು ಹೀರಿಕೊಂಡಿರಿ - ನೀನು ನನಗೆ ಬೇಕು, ನೀನು ಚೆನ್ನಾಗಿ ಕಾಣುತ್ತಿ, ವಿಶೇಷವಾದ ಪರಿಮಳವನ್ನು ಸೂಸುತ್ತಿ, ಅಂದವಾದ ಕೇಶರಾಶಿಯಿದೆ ನಿನಗೆ, ನನ್ನ ಇಂದ್ರಿಯಗಳು ಲೈಂಗಿಕತೆಯನ್ನು ಮತ್ತು ಈ ಎಲ್ಲವುಗಳನ್ನೂ ಬಯಸುತ್ತದೆ, ಹೀಗೆ ಹತ್ತು ಹಲವು. ನೀವು ನನ್ನನ್ನು ಹೀರಿಕೊಂಡಿರಿ. ನಾನು ನಿಮ್ಮ ಪ್ರೀತಿಯಲ್ಲಿ ಬಿದ್ದಿದ್ದೇನೆ. ಅದು ಹೀರಲ್ಪಡುವಿಕೆ. ಮತ್ತು ನಾನು ನಿಮಗೆ ಗಟ್ಟಿಯಾಗಿ ಅಂಟಿಕೊಂಡು ಬಿಟ್ಟಿದ್ದೇನೆ. ನಾನು ನಿನ್ನನ್ನು ಪ್ರೀತಿಸುತ್ತೇನೆ. ಆದರೆ ಸಮಯಕ್ಕನುಗುಣವಾಗಿ ನನ್ನ ಹಳೆಯತನವು ದೃಢತೆಯಿಂದ ಹೇಳುತ್ತದೆ, ' ಹೌದು, ಎರಡು ವರ್ಷಗಳ ಕೆಳಗೆ ಅದು ತುಂಬಾ ಚೆನಾಗಿತ್ತು, ಮತ್ತು ಈಗ ನಾನವಳನ್ನು ಇಷ್ಟಪಡುವುದಿಲ್ಲ. ನಾನವಳ ಪ್ರೀತಿಯಲ್ಲಿ ಬಿದ್ದಿದ್ದೆ, ಆದ್ರೆ ಈಗ ನೋಡು ಏನಾಗಿದೆಯಂತ ?'

ದಯವಿಟ್ಟು ಈ ಸತ್ಯವನ್ನು ನೋಡಿ - ಏನೆಂದರೆ, ಎಲ್ಲಿ ಸೌಂದರ್ಯವಿದೆಯೋ ಅಲ್ಲಿ ವಿಚಾರದ ಸಂಪೂರ್ಣ ಗೈರು ಇರುತ್ತದೆ. ಹಾಗಾಗಿ ಪ್ರೀತಿ ಎಂದರೆ 'ನನ್ನ' ದು ಎಂಬುದರ ಸಂಪೂರ್ಣ ಗೈರು. ಅರ್ಥವಾಯಿತೆ ? ನಿಮಗದು ದೊರಕಿದೆ ಎಂದಾದರೆ, ಬದುಕೆಂಬ ಕಾರಂಜಿಯನ್ನು ನೀವು ಕುಡಿದಿರುತ್ತೀರಿ.

ವಿದ್ಯಾರ್ಥಿ : ಭಾವನೆಯು ಹೀರಲ್ಪಡುವಿಕೆಯನ್ನು ಒಳಗೊಂಡಿದೆಯೇ ?
ಜೆಕೆ:
ಭಾವನೆ ಎಂದರೇನು ? ಒಂದು ವೇಳೆ ನಿಮಗೆ ವಿಚಾರಗಳು ಇಲ್ಲವಾದಲ್ಲಿ, ನಿಮ್ಮಲ್ಲಿ ಭಾವನೆಗಳು ಇರುತ್ತಿದ್ದವೇ ? ಅದನ್ನು ಹುಷಾರಾಗಿ ಗಮನಿಸಿ.ಅದನ್ನು ನೋಡಿ ! ಪ್ರೀತಿ ಎಂದರೆ ಭಾವನೆಯೇ, ಅನುಭವವೇ ? ನಾವಂದೆವು, ಚಿಂತನೆ ಇಲ್ಲದಿರುವುದು ಪ್ರೀತಿ ಎಂದು. ಹಾಗಾದರೆ ಚಿಂತನೆ ಇಲ್ಲದಾಗ ಏನಾದರೂ ಭಾವನೆಗಳು ಸ್ಫುರಿಸುತ್ತವೆಯೇ ? ಅದರ ತಿರುಳನ್ನು ಪಡೆಯಿರಿ, ಅದರ ಒಳಹಿನತ್ತ ನಡೆಯಿರಿ. ಎಲ್ಲ ವಿವರಗಳನ್ನೂ ಬಿಟ್ಟುಬಿಡಿ, ವಿವರಗಳೆಲ್ಲಾ ನಂತರ ಬಂದರಾಯಿತು. ಇದರ ಸತ್ಯವನ್ನು ನೋಡಿ, ಅದೊಂದು: ಎಲ್ಲಿ ಪ್ರೀತಿ ಇದೆಯೋ ಅಲ್ಲಿ ವಿಚಾರಗಳಿರುವುದಿಲ್ಲ. ಎಲ್ಲಿ ಪ್ರೀತಿ ಇದೆಯೋ ಅಲ್ಲಿ 'ನನ್ನ'ದು ಎಂಬುದು ಗೈರು ಹಾಜರಾಗಿರುತ್ತದೆ...ತುಂಬಾ ಸಮಸ್ಯೆಗಳು, ಆತಂಕ, ಭಯ..ಹೀಗೆ 'ನನ್ನದು' ಮಾಯವಾದಾಗ ಅಲ್ಲಿ ಪ್ರೀತಿ ಉದಯಿಸುತ್ತದೆ.

ವಿದ್ಯಾರ್ಥಿ : ನೀವು ಮೋಡವನ್ನು ನೋಡಿ, ಅದು ಚಲಿಸುತ್ತಿದೆ ಮತ್ತು ನೀವು ನಿಮ್ಮೊಳಗೇನೇ ಬೀಳುತ್ತಿದ್ದೀರಿ.
ಜೆಕೆ:
ಪುಟ್ಟ ಹುಡುಗನೊಬ್ಬ ಪುಟ್ಟ ಹುಡುಗಿಗೆ ಗೊಂಬೆ ಕೊಡುವುದನ್ನು ನೋಡಿದ್ದೀರಾ ? ಶಾಂತವಾಗಿ, ಚಡಪಡಿಸದೆ,ಅತ್ತು- ಕೂಗದೆ ಸರಿಯಾದ ಖುಷಿಯಲ್ಲಿದ್ದಾಳೆ.- ಹುಡುಗನಿಗೆ ಕ್ಲಿಷ್ಟವಾದ ಆಟಿಕೆಯನ್ನು ಕೊಡು ಮತ್ತು ಅವನು ಅದರ ಜೊತೆಗೆ ಕನಿಷ್ಟ ಒಂದು ಗಂಟೆಗಳ ಕಾಲ ಆಟವಾಡುತ್ತಾ ಕಳೆಯುತ್ತಾನೆ. ತಾನೊಬ್ಬ ತುಂಟ ಎನ್ನುವುದನ್ನೂ ಮರೆತು ಬಿಡುತ್ತಾನೆ. ಗೊಂಬೆ, ಆಟಿಕೆಗಳೆಲ್ಲಾ ಮುಖ್ಯವಾದುವು ಮತ್ತು ನೀವು ಮೇಘಗಳನ್ನು ನೋಡಿದರೆ, ಹಕ್ಕಿಯು ಆಗಸವನ್ನು ಕತ್ತರಿಸಿ ಹಾರುತ್ತದೆ, ಅದನ್ನು ನೀವು ನೋಡಿದಾಗ, ನಿಮ್ಮೊಳಗೆ ಏನು ಸಂಭವಿಸುತ್ತದೆ ? ಮಾತನಾಡುವುದನ್ನು ನೀವು ನಿಲ್ಲಿಸುತ್ತೀರಿ ಮತ್ತು ನೀವು ಪಾಶ್ಚಾತ್ಯ ಸಿನೆಮಾಗಳನ್ನು ನೋಡಿದರೆ ಅಥವಾ ಯಾವುದೇ ಇತರ ಸಿನೆಮಾಗಳನ್ನು ನೋಡಿದರೆ, ನೀವು ಅದನ್ನು ಗಮನವಿಟ್ಟು ನೋಡುತ್ತೀರಿ. ನೀವು ನಿಮ್ಮ ಎಲ್ಲಾ ಸಮಸ್ಯೆಗಳನ್ನು, ಬೇಸರಗಳನ್ನು, ಭಯಗಳನ್ನು ಯೋಚಿಸುವುದಿಲ್ಲ. ನೀವು ಸಿನಿಮಾದಿಂದ ಹೀರಲ್ಪಟ್ಟಿದ್ದೀರಿ. ಸಿನಿಮಾವನ್ನು ನಿಲ್ಲಿಸಿ, ನೀವು ನಿಮ್ಮತನಕ್ಕೆ ಮರಳುತ್ತೀರಿ !

ಹಾಗಾಗಿ ನೀವು ನೋಡಿ,ನೀವು ಇಷ್ಟನ್ನು ತಳ್ಳಿದರೆ, ಉದ್ದೇಶವು ನಿಮ್ಮ ಆಟಿಕೆ, ಆದರ್ಶವೂ ನಿಮ್ಮ ಆಟಿಕೆ ಮತ್ತು ಅವೆಲ್ಲವೂ ನಿಮ್ಮನ್ನು ನಿಯಂತ್ರಿಸುತ್ತವೆ. ಧರ್ಮವು ನಿಮ್ಮ ಆಟಿಕೆ. ಯಾವಾಗ ಈ ವಿಷಯಗಳು ಪ್ರಶ್ನಿಸಲ್ಪಡುತ್ತದೋ ನೀವು ನಿಮ್ಮತನಕ್ಕೆ ಮರಳುತ್ತೀರಿ ಮತ್ತು ನೀವು ಭಯಗ್ರಸ್ತರೂ, ಕ್ಷೋಭೆಯುಳ್ಳವರೂ ಆಗುತ್ತೀರಿ.

ವಿದ್ಯಾರ್ಥಿ:ಅದರಿಂದ ಹೊರಗಿನ ಒಂದೇ ಒಂದು ವಿಷಯವಿದೆಯೆ ? ಆಟಿಕೆ ಎಂಬ ಜಗತ್ತಿನಿಂದ ಹೊರಗೆ ?
ಜೆಕೆ:
ನಾನು ನಿಮಗದನ್ನು ತೋರಿಸಿದ್ದೇನೆ. ದಯವಿಟ್ಟು ಗಮನವಿಟ್ಟು ಕೇಳಿರಿ. ಚಿಂತನೆಯು ಈ ಜಗತ್ತನ್ನು ಸೃಷ್ಟಿಸಿತು ಎಂದು ನಾವು ಹೇಳಿದ್ದೇವೆ. ಯುದ್ಧಗಳು, ವ್ಯವಹಾರಸ್ಥರು, ರಾಜಕಾರಣಿಗಳು, ಕಲಾವಿದರು, ದುಷ್ಟರನ್ನು ಸಮಾಜ ಹುಟ್ಟು ಹಾಕಿದ್ದು. ಪರಸ್ಪರರ ನಡುವಿನ ಸಂಬಂಧ - ಅದು ಚಿಂತನೆಯ ಮೇಲೆ ಅವಲಂಬಿತವಾಗಿದೆ. ಈ ಎಲ್ಲಾ ಗೊಂದಲಕ್ಕೆ ಚಿಂತನೆಯೇ ಕಾರಣ. ಅಲ್ಲವೇ ? ಅಥವಾ ಉದ್ದೇಶವೇನು ? ನೀವು ಅದನ್ನು ಉದ್ದೇಶವೆಂದರೆ, ನೀವು ನಿಜವಾದ ವಾಸ್ತವಾಂಶದತ್ತ ನೋಡುತ್ತಿಲ್ಲವೆಂದು ಅರ್ಥ.ಹಾಗಾಗಿ ಅದರಿಂದ ದೂರ ಸರಿಯಿರಿ. ವಿಚಾರ, ಚಿಂತನೆ, ನಾವು ಹೇಳಿದೆವು ಅದು ತುಂಡಾಗಿದೆ ಎಂದು; ಅದೇನೇ ಮಾಡಿದರೂ ತುಂಡಾಗುತ್ತದೆ. ನಾನಿಲ್ಲಿ ಕುಳಿತಿರುವುದು ಏನೋ ಒಂದು ಸತ್ಯತೆ, ವಾಸ್ತವ ಎಂದು ನೀವು ನೋಡುತ್ತೀರಾ ?

ವಿದ್ಯಾರ್ಥಿ : ಅವೆಲ್ಲಾ ಯಾಂತ್ರಿಕ ಚಿಂತನೆಗಳು, ಆದರೆ ಉಪಯೋಗಿಸುವಂತದ್ದು ಹಿಂದೆ ಏನಾದರೂ ಇದೆಯಾ ?
ಜೆಕೆ:
ನಿಮಗೆ ಯಾಂತ್ರಿಕ ಚಿಂತನೆ ಬಿಟ್ಟರೆ ಬೇರೇನೂ ಇಲ್ಲ. ಯಾವಾಗ ಯಾಂತ್ರಿಕ ಚಿಂತನೆ ನಿಲ್ಲುತ್ತದೋ, ಆವಾಗ ಬೇರೇನೋ ಇರುತ್ತದೆ, ಆದರೆ ಅದನ್ನು ನಿನಗೆ ಹೇಳಲಾಗುವುದಿಲ್ಲ, ' ಹೌದು, ಅದು ಯಾಂತ್ರಿಕ ಚಿಂತನೆ, ಆದ್ದರಿಂದ ನಾವು ಬೇರೆಯದುದರ ಕಡೆಗೆ ನೋಡೋಣ. ಚಿಂತನೆಯು ನಿಲ್ಲಬೇಕು. ಮತ್ತದು ನಿಲ್ಲುತ್ತದೆ, ಉದಾಹರಣೆಗೆ, ನೀವು ಸೌಂದರ್ಯವನ್ನು ನೋಡುವಾಗ, ವಿವಿಧ ತರದ ಪರ್ವತ ಶ್ರೇಣಿಗಳ ತುದಿ ಹಿಮಾವೃತಗೊಂಡದ್ದು ; ಅದರ ಗಾಂಭಿರ್ಯವು ನಿಮ್ಮನ್ನು ಬೇರೆಲ್ಲೋ ಹೊತ್ತೊಯ್ಯುತ್ತದೆ. ಮತ್ತು ಆ ಪರ್ವತ ಅಲ್ಲಿ ಇಲ್ಲದಿದ್ದರೆ, ನೀವು ನಿಮ್ಮ ಜಗಳದೊಂದಿಗೆ ಮರಳುತ್ತೀರಿ, ಜೊತೆಯಲ್ಲಿ ನಿಮ್ಮ ವಿಚಾರಗಳು ಕೂಡ. ದಯವಿಟ್ಟು ನಿಮ್ಮನ್ನು ನೀವೇ ಶೋಧಿಸಿ, ಕುಳಿತುಕೊಳ್ಳಿ, ಧ್ಯಾನಸ್ಥರಾಗಿ, ಅದರೊಳಗೆ ಹೋಗಿ.

ವಿದ್ಯಾರ್ಥಿ : ಇದೆಲ್ಲವೂ ಚೆನ್ನಾಗಿದೆ, ಆದರೆ...
ಜೆಕೆ:
ಚೆನ್ನಾಗಿಯೇ ಹೇಳಿದಿ, ಆದರೆ ನನಗೆ ನನ್ನ ಅಂಕಲ್ ಬಳಿ ಹೋಗಬೇಕು, ನನ್ನ ಅತ್ತೆ, ಅಮ್ಮ, ಅಜ್ಜಿ ಬಳಿ ಹೋಗಬೇಕು ಮತ್ತು ದುಡ್ಡು ಸಂಪಾದನೆ ಮಾಡಬೇಕು ಹಾಗೂ ಮತ್ತು ಉಳಿದೆಲ್ಲವೂ. ಅದೇ ನಮ್ಮೆಲ್ಲರ ಸಮಸ್ಯೆ. ಹಾಗಾಗಿ ಏನು ಮಾಡಲು ಹೊರಟಿದ್ದೀರಿ ? ನಿಮಗರಿವಾದಾಗ, ನೀವು ನೋಡಿದಾಗ, ನಿಜವಾಗಿಯೂ, ಅದು ತಂತ್ರಜ್ಞಾನದ ಹೊರತಾಗಿ ಮತ್ತು ವಾಸ್ತವ ವಿಷಯಗಳಲ್ಲಿ ಚಿಂತನೆಯು ಬಹಳ ಉಪದ್ರವಕಾರಿ ಅಂಶ. ಸಂಬಂಧದಲ್ಲಿ ಅದೊಂದು ಅತೀ ಭಯಂಕರವಾದುದು. ಆದ್ದರಿಂದ ಅದು ಪ್ರೀತಿಯನ್ನು ನಾಶಮಾಡುತ್ತದೆ. ಹಾಗಾದರೆ ಮತ್ತೇನನ್ನು ಮಾಡ ಹೊರಟಿದ್ದೀರಿ ? ನಿಮಗೆ ಹಣ ಗಳಿಸಬೇಕು, ಉತ್ತಮ ಬದುಕು, ಅವೆರಡೂ ಚಿಂತನೆಯನ್ನು ಆಗ್ರಹಿಸುತ್ತವೆ. ಹಾಗಾಗಿ ಅಲ್ಲಿ ಚಿಂತನೆಯ ಕಸರತ್ತನ್ನು ನಡೆಸುತ್ತೀರಿ. ದಂತವೈದ್ಯರ ಬಳಿ ಹೋಗಬೇಕಾಗಿ ಬಂದಲ್ಲಿ, ನೀವು ನಿಮ್ಮ ವಿಚಾರದ ಕಸರತ್ತನ್ನು ಚಟುವಟಿಕೆಯಲ್ಲಿ ತೊಡಗಿಸುತ್ತೀರಿ. ಸೂಟ್, ಡ್ರೆಸ್ ಅನ್ನು ಖರೀದಿಸಬೇಕಾದರೆ ನೀವು ಹೋಲಿಕೆ ಮಾಡುತ್ತೀರಿ - ಇದು ಅದಕ್ಕಿಂತ ಉತ್ತಮ ಗುಣಮಟ್ಟದ್ದು ಎಂದು, ಹೀಗೆ ಹತ್ತು ಹಲವು - ಅದಕ್ಕೆ ಚಿಂತನೆ ಬೇಕು. ಆದರೆ ಚಿಂತನೆಯು ಸಂಬಂಧದಲ್ಲಿರುವ ಅತಿ ಭಯಂಕರವಾದ ಅಂಶ ಎಂದು ನಿಮಗೆ ಅರಿವಾಗುತ್ತದೆ. ಅಷ್ಟೇ, ಪ್ಯಾಕ್ಸ್.

ಈ ಅಂಕಣದ ಹಿಂದಿನ ಬರೆಹಗಳು:
ನಾವೇಕೆ ಏನನ್ನಾದರೂ ಅರಸುತ್ತಿರುತ್ತೇವೆ?
ನೋವು ಹಿಂದುರಿಗಿಸಲಾರದ ಸಾಲದಂತೆ…
ಸಾವಿರ ಭಾವಗಳ ಹೊತ್ತ ಹುಡುಗಿಯ ಕತೆಗಳು
ಪ್ರೇಮಲೋಕ’ದ ಪ್ರೇಮ ಗೀತೆಗಳು…
ಆದಿ-ಅಂತ್ಯಗಳ ನಡುವಿನ ಹರಿವು
ಗರುಡಗಮನ ಬಂದ..ಮಂಗಳೂರ ಹೊತ್ತು ತಂದ
ಸುಖದ ಸುತ್ತು…
ನಿರೀಕ್ಷೆಗಳಿಲ್ಲವಾದರೆ ನಿರಾಳ
ದಾರುಣ ಅಂತ್ಯ ಹೇಳುವ 'ನಗ್ನಸತ್ಯ'
ಮೂಲ ಸ್ವರೂಪದಿಂದ ವಿಮುಖವಾಯಿತೇ ಯಕ್ಷಗಾನ?
ಮಲೆಯಾಳಂ ಸಿನಿಮಾವೆಂಬ ಸುಂದರಿ ಕುಟ್ಟಿ..
ಮತ್ತೇರಿಸಿ ಕಾಡುವ ಕಾಡ ಸುಮ
ಜಾಗತೀಕರಣ: ವೃದ್ಧಾಶ್ರಮಗಳಾಗುತ್ತಿರುವ ಹಳ್ಳಿಗಳು
ಆಧುನಿಕ ತಂತ್ರಜ್ಞಾನ ಮತ್ತು ಹರಕು-ಮುರುಕು ಬಂಧಗಳು
ಪ್ರಜಾಪ್ರಭುತ್ವದ ಮೂಲ ಅಂಗಗಳು ವಿಕಲಗೊಂಡಿವೆಯೇ?
ದಾಸ್ಯವೂ..ಸ್ವಾತಂತ್ರ್ಯವೂ..
ಮುಸ್ಸಂಜೆಯ ಒಳಗೊಂದು ಅರ್ಥ
ಧಮ್ಮ ಗುಮ್ಮನ ನಂಬಿ ಕೆಟ್ಟರೆ ಎಲ್ಲರೂ ?
ಭರವಸೆಯ ಜೊತೆ ಹೆಜ್ಜೆ ಹಾಕೋಣ..
ಚಾದರದೊಳಗಿನ ಕಥೆ, ವ್ಯಥೆ...
'ಚಂದ್ರಗಿರಿ ತೀರದಲ್ಲಿ' ತೀರದ ಬವಣೆ..
‘ಬಯಲರಸಿ ಹೊರಟವಳು’- ಇಟ್ಟ ಹೆಜ್ಜೆಯ ಜಾಡು
ಬೆಳಕ ದಾಟಿಸುವ ಹಣತೆ- ಎಸ್.ದಿವಾಕರ್
ಅನುಭವಿಸಿ ಬರೆಯುವ ಜಯಂತ ಕಾಯ್ಕಿಣಿ
ಜೀವ ಜೀವಗಳ ಅಳು…
ಹನಿ ಹನಿಸಿದ ಚೊಕ್ಕಾಡಿ
ಶಾಂತ ಕಡಲೊಳು ಬೀಸಿದ ಬಿರುಗಾಳಿ
ರಂಗದ ಮೇಲಿನ ಬಣ್ಣದ ಭಾವಗಳು
ಬೆಳಕ ದಾಟಿಸುವ ಹಣತೆಯೂ...ಒಳ್ಳೆಯವರಾಗುವ ವ್ಯಸನವೂ...
ಟ್ಯಾಗ್ ಹಾಕಿ ನೋಡುವ ಮನಸ್ಸುಗಳ ನಡುವೆ
ಸಖನೂ ಸುಖವೂ ಒಂದೇ ಆಗುವ ಕ್ಷಣ

MORE NEWS

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...