ಲೇಖಕ ಎಸ್. ಎಚ್. ಪಾಟೀಲ ಅವರು ಬರೆದ 'ಒಲವಿನ ನೆನಪಿನ ಮೆರವಣಿಗೆ' ಕವಿತೆಯ ಸಾಲುಗಳು ಹೀಗಿವೆ...
ಇರುಳ ಮಂಚದಲ್ಲಿ
ಒಂಟಿಯಾಗಿ ಕುಳಿತು
ನಾ ನಕ್ಷತ್ರಗಳಲಿ ಕಳೆದು ಹೋಗಬೇಕಿತ್ತು.
ಹಾಗೆ ನಮ್ಮ ಮಧುರ ಬಾಂಧವ್ಯದ ರಸಮಯ ಕ್ಷಣಗಳನ್ನು
ಅಲ್ಲಿ ಬರೆದಿಡಬೇಕಿತ್ತು.
ಆ ಕನಸಿನ ಪೊರೆ ಕಳಚಿ
ನಾ ಎದ್ದು ಹೊರಡುವ ಮುನ್ನ,
ಬೆಳಕಿಗೆ ಮುಖಾಮುಖಿಯಾಗುವಾಗ,
ಗಾಯದ ಮೇಲೆ ಮತ್ತೊಂದು
ಆಳದ
ಗುರುತು ಮೂಡಿಸುವ ಮುನ್ನ,
ಬೇಕಿತ್ತು ಎನಗೆ ಗೆಳತಿ
ನೆನಪಿಗೆ ಒಂದು
ನಿನ್ನ
ಬೆಚ್ಚನೆಯ ಅಪ್ಪುಗೆಯ
ಕಹಿ ನೆನಪಿನ ಗುರುತೊಂದು ಬೇಕಿತ್ತು.
ಬದುಕಿನ ನೋವನು ಮರೆಯಲು
ಒಂದು ಸಿಹಿ ಮುತ್ತಿನ
ಸಹಿ ಒತ್ತಬೇಕಿತ್ತು.
ಎಂದು ಅಳಿಸಲಾಗದ ಲಿಪಿ ಎಂಬ ಅರಿವಿಗೂ
ದಾಟಿ,
ಉಳಿಸಿಕೊಳ್ಳಬೇಕಿತ್ತು.
ನಿನ್ನ ಇರುವಿಕೆಯನ್ನು ನನ್ನಲ್ಲಿ.
ಆದರೂ ಎಲ್ಲ ನೆನಪಿನ ನಡುವೆ
ಸುಡುವ ವಿರಹವನು ಹೇಗೆ
ತಣ್ಣಗಾಗಿಸುವುದು
ಸುಲಿವ ತಂಗಾಳಿಯೇ ಉತ್ತರಿಸಬೇಕು.
ಅದುವೇ ತಾನೇ ಪ್ರೇಮ ಸಂದೇಶ
ತರುತ್ತದೆ ಎಂದು ಈ ಮನ
ನಂಬಿರುವುದು.
ಮರೆಯದಂತೆ
ನೀನು ನನ್ನೊಳಗೆ ಆಳವಾಗಿ
ಬೆರೂರಿವಾಗ.
ಮರೆತಂತೆ ನಟಿಸಿ ನಾ
ಮುಂದೆ ಸಾಗುವಾಗ
ಮರೆಯಲಿ ಎದೆಗೊರಗಿ ಸುರಿಸಿದ ಕಣ್ಣೀರಿನ
ಹಿತವಲ್ಲದ ಬಿಸಿಶಾಖ
ಬೇಕಿತ್ತು.
ಎದೆಯ ರೂಮಗಳು ನಿನ್ನೆದೆಯ ತಾಕಿ ಸಿಹಿ ಅನುಭವದ
ಭಾವವನು ಬಚ್ಚಿಟ್ಟುಕೊಂಡಿವೆ.
ನೀಮೂಡಿಸಿ ಹೊರಟ ಆಳದ ಗಾಯಕೆ ,
ಮಂತ್ರದ ಮದ್ದು ಎಂದರೆ
ನೆನಪನು ಮತ್ತೆ ಮೆಲುಕು ಹಾಕಲು
ನಿನ ನೆನಪಿನ ಘಮಲಿನಿ
ನಾ ನನ್ನನ್ನೇ ಮರೆತು ಬಿಡುವೆ.
ನೆನಪು ಮೂಡಿದಾಗ
ಮನಸನು ಸಿಂಗರಿಸಲು
ತುಟಿಗೆ ಕಿರುನಗೆಯಾ ಹನಿ ಚಿಮುಕಿಸಿ
ನಗೆಯಲಿ ಕಳೆದು ಬಿಡುವೆ.
ನನ್ನ ನೆನಪಿಗೆ ನಿನ್ನ ಒಪ್ಪಿಗೆಯಾ
ಸಹಿ ಹಾಕು ಸಾಕು.
ನಾ ಮತ್ತೆ ಮತ್ತೆ ನಿನಗಾಗಿ
ಸದಾ ಕಾಯುತ್ತಿರುವೆನು
ಜನ್ಮ ಜನ್ಮಕೂ, ನಿನ್ನೊಲವಿಗಾಗಿ.
ಬರುವೆಯಾ ನೀ ನನ್ನೊಲವ ಬಯಸಿ
"ದಲಿತರು ಒಳಪಂಗಡಗಳ ಭಾವನಾತ್ಮಕ ಸೆಳವಿಗೆ ಸಿಕ್ಕು ಮೂಲ ಸಿದ್ದಾಂತದಿಂದ ದೂರವಾಗುತ್ತಿದ್ದಾರೆ. ಇಂದು ಅಂಬೇಡ್ಕರ್ ವಿ...
ಬೆಂಗಳೂರು : ಬೆಂಗಳೂರು ಸಾಹಿತ್ಯ ಉತ್ಸವ (BlrLitFest)ವು ಪ್ರತಿ ವರ್ಷ ನಡೆಯುವ ಅತ್ಯಂತ ನಿರೀಕ್ಷಿತ ಸಾಂಸ್ಕೃತಿಕ ಕಾರ್ಯ...
ಮಗಳ ನೋವನ್ನು ಕಂಡು ಹೆತ್ತವರು ಜರ್ಜರಿತರಾಗುವ ದೃಶ್ಯವನ್ನು ಹಾಗೂ ಅಪ್ಪ ಅಮ್ಮನ ಧಾವಂತದ ಬದುಕಿನಲ್ಲಿ ಮಕ್ಕಳು ಬಡವಾಗುವ ಸ...
©2025 Book Brahma Private Limited.