’ಒಂದೇ ಬಳ್ಳಿಯ ಹೂಗಳು’ ಪುಸ್ತಕ ಬಿಡುಗಡೆ

Date: 03-11-2019

Location: ಗದಗ


ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ವಾರದ ’ಚಿಂತನ ಗೋಷ್ಠಿ’ ಹಾಗೂ ಯುವ ಕವಿ ಮೈಬುಬೂ ಪಾಷಾ ಮಕಾನದಾರ ಅವರ ’ಒಂದೇ ಬಳ್ಳಿಯ ಹೂಗಳು’ ಪುಸ್ತಕ ಬಿಡುಗಡೆ ಸಮಾರಂಭವು ಗದಗದಲ್ಲಿ ಜರುಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕವಿ ಅಲ್ಲಾಗಿರಿರಾಜ್ ಕನಕಗಿರಿ ಮಾತನಾಡಿ "ಧರ್ಮಕ್ಕಿಂತ ದೇಶ ದೊಡ್ಡದು ಹಾಗೇ ಕವಿಗಿಂತ ಕಾವ್ಯ ಪರಂಪರೆ ತುಂಬ ದೊಡ್ಡದು" ಎಂದರು. "ಒಂದು ನೆಲದ ಭಾಷೆ ಉಳಿದು ಬೆಳೆಯಬೇಕಾದರೆ ಆ ಭಾಷೆಯ ಸಾಹಿತ್ಯ ಮನೆ ಮಾತಾಗಬೇಕು. ಕೇವಲ ಕವಿಗೆ ಹೊಗಳಿ ಮಾನ ಸನ್ಮಾನ ಮಾಡಿದರೆ ಸಾಹಿತ್ಯ ಬೆಳೆಯಲಾರದು. ಕವಿಯ ಪುಸ್ತಕವನ್ನು ಕೊಂಡು ಓದುವ ಸಂಪ್ರದಾಯ ಇದ್ದರೆ ಕಾವ್ಯದ ಜೊತೆಗೆ ಕವಿಯೂ ಬದುಕಬಲ್ಲ. ಕವಿಯಾದವರು ಮೊದಲು ಸಮಾಜದಲ್ಲಿ ಓದುಗರನ್ನು ಸೃಷ್ಠಿ ಮಾಡಿಕೊಳ್ಳದೆ ಕವಿಯಾಗಲೂ ಸಾಧ್ಯವಿಲ್ಲವೆಂದು" ಅಲ್ಲಾಗಿರಿರಾಜ್ ಕನಕಗಿರಿ ನುಡಿದರು. 

ನಂತರ ಹತ್ತು ಜನ ಕವಿಗಳಿಂದ ಕವನ ವಾಚನ ಹಾಗೂ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮವು ಜರುಗಿತು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದಂತಹ "ಐ.ಎ.ರೇವಡಿಯವರು ಪುಸ್ತಕಗಳು ಸಮಾಜದ ಅಂಕುಡೊಂಕುಗಳನ್ನು ತಿದ್ದುವಂತಿರಬೇಕು, ಜನರ ನೋವಿನ ಧ್ವನಿ ಹಾಗೂ ಔಷಧವಾಗಿರಬೇಕು, ಮೌಡ್ಯದೊಳಗೆ ಮುಳಗಿರುವವರನ್ನು ಎಚ್ಚರಿಸುವಂತಿರಬೇಕು" ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ಕೆ.ಎಸ್.ಗಾರವಾಡಹಿರೇಮಠ, ಬಸವರಾಜ ಮುನವಳ್ಳಿ, ಕೆ.ಜಿ.ಸಂಗಟಿ, ಶರಣಮ್ಮ ಅಂಗಡಿ, ಸುರೇಶ ಪತ್ತಾರ, ಹನಂಮತ ಭಜಂತ್ರಿ, ಎಮ್.ಎಸ್.ಮಕಾನದಾರ, ಶರಣಪ್ಪ ಬೇವಿನಕಟ್ಟಿ ಮುಂತಾದವರು ಉಪಸ್ಥಿತರಿದ್ದರು.

MORE NEWS

ಎಸ್.ಜ್ಯೋತಿ ಅವರ ‘ಅತ್ತೆ ನಿಮಗೊಂದು ಪ್ರಶ್ನೆ’ ಪುಸ್ತಕ ಬಿಡುಗಡೆ ಸಮಾರಂಭ

19-03-2024 ಬೆಂಗಳೂರು

ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...

ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರಬಂದಗಳಿಗೆ ಆಹ್ವಾನ

17-12-2023 ಬೆಂಗಳೂರು

ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...

ಸಾಂಸ್ಕೃತಿಕ ಸಂವಿಧಾನದ ಅರಿವು ಅಗತ್ಯ : ಪ್ರೊ.ನಟರಾಜ ಬೂದಾಳು

06-12-2023 ಬೆಂಗಳೂರು

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...