ಆನ್ ಲೈನ್ ನಲ್ಲಿ ನಡೆಯಲಿದೆ ಈ ಬಾರಿಯ 'ಪಂಪ' ಸಾಹಿತ್ಯ ಉತ್ಸವ-2021

Date: 21-07-2021

Location: ಬೆಂಗಳೂರು


ಕೇರಳದ ಜೀವನಾಡಿ ‘ಪಂಪ’ ನದಿ ತೀರದಲ್ಲಿ ದಕ್ಷಿಣ ಭಾರತದ ಬರಹಗಾರರ ಒಕ್ಕೂಟ ಎಂಬ ಸಂಸ್ಥೆಯು (ಎಸ್.ಐ.ಡಬ್ಲ್ಯುಇ) ‘ಪಂಪ’ ಶೀರ್ಷಿಕೆಯಡಿ ನಡೆಸುತ್ತಿದ್ದ ಸಾಹಿತ್ಯ ಉತ್ಸವ ಕೋವಿಡ್ ಕಾರಣದಿಂದಾಗಿ ಈ ಬಾರಿ ಅಂತರ್ಜಾಲದಲ್ಲಿ ನಡೆಯಲಿದೆ. 2021ರ ಜುಲೈ 24 ರಂದು ಒಂದು ದಿನ ಮಾತ್ರ ಉತ್ಸವ ಆಯೋಜಿಸಲಾಗಿದೆ.

‘ಜನರಿಗಾಗಿ ಪ್ರದರ್ಶನಾತ್ಮಕ ಮತ್ತಿತರೆ ಕಲೆಗಳು’ (ಪೀಪಲ್ಸ್ ಫಾರ್ ಪರ್ ಫಾರ್ಮಿಂಗ್ ಆರ್ಟ್ಸ್ ಆಂಡ್ ಮೋರ್-ಪಂಪ) ಈ ಉದ್ದೇಶ ಸಾಕಾರಕ್ಕಾಗಿ ಅಂತಾರಾಷ್ಟ್ರೀಯವಾಗಿ ‘ಪಂಪ’ ವೇದಿಕೆಯು ರೂಪುಗೊಂಡಿದೆ. ಪ್ರತಿ ವರ್ಷವೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸುತ್ತಿದ್ದು, ಪ್ರಸಕ್ತ ಸಾಲಿನ ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಚಟುವಟಿಕೆಯು 9ನೇ ಸಾಹಿತ್ಯ ಉತ್ಸವವಾಗಿದೆ. ಈ ಸಾಹಿತ್ಯ ಉತ್ಸವವು ಸಾಂಸ್ಕೃತಿಕ, ಭೌಗೋಳಿಕ ಹಾಗೂ ಭಾಷಿಕವಾಗಿಯೂ ಗಮನ ಸೆಳೆಯುತ್ತಾ ಬಂದಿದೆ.

ಕೇರಳದ ಆಲಪ್ಪುಳ(ಆಲಪ್ಪಿ) ಜಿಲ್ಲೆಯ ಪೂರ್ವಕ್ಕಿರುವ ‘ಪಂಪ’ ನದಿ ತೀರದ ಮೇಲಿನ ‘ಚೆಂಗಣ್ಣೂರು’ ಎಂಬ ಸಣ್ಣ ಗ್ರಾಮದಲ್ಲಿ ಪ್ರತಿ ವರ್ಷದ ಜುಲೈ 24 ರಿಂದ ಮೂರು ದಿನಗಳ ಕಾಲ ಎಸ್.ಐ.ಡಬ್ಲ್ಯುಇ ಸಂಸ್ಥೆಯು ‘ಪಂಪ’ ಸಾಹಿತ್ಯ ಉತ್ಸವವನ್ನುಆಯೋಜಿಸುತ್ತಾ ಬಂದಿದೆ. ಜಗತ್ತಿನ ವಿವಿಧೆಡೆಯಿಂದ ಸಾಹಿತ್ಯಾಸಕ್ತರು ಆಗಮಿಸುತ್ತಿದ್ದು, ವಿವಿಧ ವೃತ್ತಿಯ ಹಾಗೂ ವಲಯಗಳ ಚೆಂಗಣ್ಣೂರಿನ ಆಸಕ್ತ ಗ್ರಾಮಸ್ಥರು ಮುಂಚೂಣಿಯಲ್ಲಿದ್ದು, ಸಾಹಿತ್ಯ ಉತ್ಸವದ ವ್ಯವಸ್ಥೆ ಮಾಡುತ್ತಾರೆ.

ಜಗತ್ತಿನ ವೈವಿಧ್ಯಮಯ ಅಭಿಪ್ರಾಯಗಳನ್ನು ‘ಪಂಪ’ ವೇದಿಕೆಯು ಗೌರವಿಸುತ್ತದೆ. ಮಾನವೀಯ ಅಂತಃಕರಣ/ ಸಂವೇದನೆಯ ಕಲಾವಿದರು ಸಾಹಿತ್ಯ ಉತ್ಸವದಲ್ಲಿ ಪಾಲ್ಗೊಂಡು ವಿಚಾರಗಳನ್ನು ವಿನಿಮಯ ಮಾಡಿಕೊಳ್ಳುವುದು ಈ ಉತ್ಸವದ ವೈಶಿಷ್ಟ್ಯ. ತಮಿಳು ಕವಯತ್ರಿ ಸಲ್ಮಾ ಅವರ ‘ಯುವರ್ ಹೋಪ್ ಈಸ್ ರಿಮೇನಿಂಗ್’ ಹಾಗೂ ‘ಕಾವ್ಯ ಸಂಜೆ’ ಸಂಸ್ಥೆಗಳ ಸಹಯೋಗವಿದೆ.

ಒಂದು ದಿನ ಮಾತ್ರ:
ಎಸ್.ಐ.ಡಬ್ಲ್ಯುಇ ನಿರ್ದೇಶಕಿ ಕನಕ ಹ.ಮ, ವಿಷ್ಣುನಾದ್ ಅವರು ‘ಸತತ ಎರಡು ವರ್ಷಗಳ ಪೈಕಿ, ಮೊದಲ ವರ್ಷ ಪ್ರವಾಹಕ್ಕೆ ಹಾಗೂ ನಂತರದ ವರ್ಷ ಕೋವಿಡ್ ವೈರಸ್ ನಿಂದ ನಲುಗಿದ ಸ್ಥಿತಿಯಲ್ಲೂ ದಕ್ಷಿಣ ಭಾರತದ ಬರಹಗಾರರ ಮೇಳ ಸಂಸ್ಥೆಯು (ಎಸ್.ಐ.ಡಬ್ಲ್ಯುಇ) ಬದುಕಿನ ಬಗ್ಗೆ ಭರವಸೆ ಹಾಗೂ ಪ್ರೀತಿಯನ್ನು ತುಂಬುವ ಪ್ರೋತ್ಸಾಹದ ಭಾಗವಾಗಿ ಮೇಳವನ್ನು ಆಯೋಜಿಸುತ್ತಿದೆ. ಕೋವಿಡ್ ನಿಯಮಗಳ ಪಾಲನೆಗೆ ಆದ್ಯತೆ ನೀಡುತ್ತಿದ್ದರ ಪರಿಣಾಮ, ಪ್ರಸಕ್ತ ವರ್ಷ, ಮೂರು ದಿನಗಳ ಬದಲಿಗೆ ಕೇವಲ ಜುಲೈ 24 ರಂದು ಅಂತರ್ಜಾಲದಲ್ಲಿ ಉತ್ಸವ ನಡೆಸಲು ನಿರ್ಣಯಿಸಲಾಗಿದೆ’ ಎಂದು ಹೇಳುತ್ತಾರೆ.

ಜಾತ್ಯತೀತ ಮೌಲ್ಯದಡಿ…
ಉತ್ಸವದ ಸಂಯೋಜಕಿ ಮಮತಾ ಜಿ. ಸಾಗರ ಅವರು ‘ಭಾಷೆಯ ವೈವಿಧ್ಯತೆಯ ಕೇರಳದ ಬೇರೆ ಬೇರೆ ಭೌತಿಕ ಪ್ರದೇಶದಲ್ಲಿ ನೆಲೆಸಿರುವ ಸೃಜನಾತ್ಮಕ ಯುವ ಬರಹಗಾರರು, ಕಲಾವಿದರು, ಸಿನಿಮಾ ನಟರು, ಸಂಗೀತಗಾರರು, ರಂಗಕರ್ಮಿಗಳು ಹೀಗೆ ಎಲ್ಲರನ್ನು ಜಾತ್ಯತೀತ ಮೌಲ್ಯದಡಿ ಒಂದೆಡೆ ಸೇರಿಸುವ ಭಾಗವಾಗಿಯೂ ಸಾಹಿತ್ಯ ಉತ್ಸವ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಜೊತೆಗೆ ವಿಚಾರಗಳ ವಿನಿಮಯದ ಉದ್ದೇಶ ಸಾಧನೆಗಾಗಿ ಬರಹಗಾರರು ಹಾಗೂ ಸಾರ್ವಜನಿಕ ಸಾಹಿತ್ಯಾಸಕ್ತರ ಮಧ್ಯೆ ಸಂವಾದ-ಚರ್ಚೆಗೂ ಅವಕಾಶ ನೀಡಲಾಗುತ್ತದೆ. ರಾಜಕೀಯ ಸೇರಿದಂತೆ ಪ್ರಕೃತಿ ವಿಕೋಪದ ಮಧ್ಯೆ ಸಾರ್ವಜನಿಕ ವಲಯವು ತತ್ತರಿಸಿದೆ. ಸಾರ್ವಜನಿಕ ಬದುಕಿನ ಭದ್ರತೆಯನ್ನೇ ಹಾನಿಗೊಳಪಡಿಸಿದೆ. ಆದ್ದರಿಂದ, ಒಂದು ದಿನ ನಡೆಯುವ ಸಾಹಿತ್ಯ ಉತ್ಸವವನ್ನು ಕೋವಿಡ್ ಸಮರ ವೀರರು ಒಳಗೊಂಡು ‘ಕೋವಿಡ್ ವಿಷಯ ಕುರಿತು ಸುದೀರ್ಘ ಚರ್ಚೆಗೆ ಅವಕಾಶ ಮಾಡಿಕೊಡಲಾದೆ. ಜಗತ್ತಿನ ವಿವಿಧೆಡೆಯ ಬರಹಗಾರರು, ಕಲಾವಿದರು, ನಟರು, ಚಿಂತಕರು ಪಾಲ್ಗೊಳ್ಳುವರು.’ ಎಂದು ತಿಳಿಸಿದ್ದಾರೆ.

2021ರ ಜುಲೈ 24 ರಂದು ಕಾರ್ಯಕ್ರಮಗಳ ವಿವರ
ಬೆಳಗ್ಗೆ 10ಕ್ಕೆ, ಪಿ.ಸಿ. ವಿಶ್ವನಾದ್ ಉತ್ಸವಕ್ಕೆ ಚಾಲನೆ ನೀಡಲಿದ್ದು, ಇಬ್ಬರು ಕವಿಗಳು ಹಾಗೂ ಅವರ ಕವಿತಾ ರಚನೆಯ ಅನುಭವ ಕುರಿತು ಮಲಯಾಳಂ ಕವಿ ಮನೋಜ ಕುರೂರು ಹಾಗೂ ನೈದರ್ ಲ್ಯಾಂಡ್ ನಿವಾಸಿ ಡೆವಿಡ್ ಅಷ್ಫೋರ್ಡ್ ಪಾಲ್ಗೊಳ್ಳಲಿದ್ದಾರೆ. ಅನಿತಾ ಥಂಪಿ ಹಾಗೂ ಮಮತಾ ಸಾಗರ ಕ್ರಮವಾಗಿ ಕಾರ್ಯಕ್ರಮವನ್ನು ನಿರೂಪಿಸಲಿದ್ದಾರೆ.

11:45 ಕ್ಕೆ, ‘ಪರಿವರ್ತನಾಕಾರರು’ ಎಂಬ ಪ್ರಮುಖ ಕಾರ್ಯಕ್ರಮದಡಿ ಮುಂಬೈನ ಪರಿಸರ ಹಾಗೂ ವಾಸ್ತುಶಿಲ್ಪ ಕೇಂದ್ರದ (ಎಸ್ ಇಎ) ಪ್ರಸಾದ ಶೆಟ್ಟಿ, ರೂಪಾಲಿ ಗುಪ್ತೆ, ವಾಸ್ತವಿಕ್ತ ಭಗತ್, ಮೂಮಲ್ ಶೇಖಾವತ್ ಹಾಗೂ ಕೇಂದ್ರದ ವಿದ್ಯಾರ್ಥಿಗಳು ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ.

2:00 ಕ್ಕೆ, ‘ಕೋವಿಡ್ ’ ವಿಷಯವಾಗಿಯೂ ಇದೇ ಎಸ್ ಇಎ ಸದಸ್ಯರು ಚರ್ಚಿಸಲಿದ್ದು, ಮಧ್ಯಾಹ್ನ 3:15 ರಿಂದ, ಕವಿಗೋಷ್ಠಿ ನಡೆಯಲಿದೆ. ಶೋಭಾ ನಾಯಕ್, ಅಮೂಲ್ಯ ಬಿ, ಗೀತಾ ಸುಕುಮಾರನ್, ಸಂಧ್ಯಾರಾಮನ್, ರವಿ ಶಂಕರ, ದೀಪ್ತಿ ಭದ್ರಾವತಿ, ಕವಿನ್ ಮಲಾರ, ಡಿ. ಅನಿಲ್ ಕುಮಾರ, ದೀಪು ಹರಿ, ಪಕಿಯನಾಥನ್ ಅಹಿಲನ್ ಪಾಲ್ಗೊಳ್ಳುತ್ತಿದ್ದು, ರೇಷ್ಮಾ ರಮೇಶ್ ನಿರೂಪಿಸಿದರು.

ಸಂಜೆ 4:30ಕ್ಕೆ, ಎರಡನೇ ಕವಿಗೋಷ್ಠಿ ನಡೆಯುತ್ತಿದ್ದು, ರಾಜಗೋಪಾಲ್, ಶಿಣೈ ಅಂತೋನಿ, ಅನ್ವರ್ ಅಲಿ, ಹ.ಮ.ಕನಕ, ಮಮತಾ ಸಾಗರ, ಆರ್. ಕೃತಿ, ಸಲ್ಮಾ, ಅನಿತಾ ಥಂಪಿ ಪಾಲ್ಗೊಳ್ಳುವರು. ಮಿತ್ರಾ ವೆಂಕಟರಾಜ್ ನಿರೂಪಿಸುವರು.


MORE NEWS

ವಿಭಿನ್ನ ದೃಷ್ಟಿಕೋನದ ಬರಹವು ಓದುಗರ...

02-08-2021 ಮಂಗಳೂರು

ಲೇಖಕರ ವಿಭಿನ್ನ ದೃಷ್ಟಿಕೋನದ ಬರಹವು ಓದುಗರಿಗೆ ಹೆಚ್ಚು ಆಪ್ತವಾಗುತ್ತದೆ ಎಂದು ವಿಜಯ ಕರ್ನಾಟಕ ದಿನಪತ್ರಿಕೆಯ ಮಂಗಳೂರು ಆ...

ಓದು ಮನೋ-ಬೌದ್ಧಿಕ ಬದಲಾವಣೆ ತರಬಲ್ಲ...

02-08-2021 ಲಾಯಿಲ, ಬೆಳ್ತಂಗಡಿ.

ಓದು, ಮನೋ-ಬೌದ್ಧಿಕ ಬದಲಾವಣೆಯನ್ನು ತರಬಲ್ಲುದು. ಆದರೆ, ಇಂದಿನ ಯುವ ಪೀಳಿಗೆಯು ಸಾಹಿತ್ಯವನ್ನು ಓದುವ ಹವ್ಯಾಸ ಬೆಳೆಸಿಕೊಳ...

ಆಧುನಿಕತೆಗೆ ಒಗ್ಗುವಂತೆ ಜಾನಪದೀಯ ಕ...

01-08-2021 ವರ್ಚುವಲ್ ವೇದಿಕೆ

ಆಧುನಿಕತೆಗೆ ಒಗ್ಗುವ ಹಾಗೆ ಮೂಲ ಆಶಯಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಜಾನಪದೀಯ ಕಲೆಗಳನ್ನು ಪರಿಷ್ಕರಣೆ ಒಳಪಡಿಸಬೇಕಿದೆ ಎಂದ...