ಒತ್ತಡದ ನಿವಾರಣೆಗೆ ಪುಸ್ತಕದ ಓದು ಔಷದವಾಗಿದೆ: ಎಂ. ರುಕ್ಮಾಂಗದ ನಾಯ್ಡು

Date: 31-05-2023

Location: ಬೆಂಗಳೂರು


ಬೆಂಗಳೂರು: ಸಿದ್ಧಾಂತ ಪ್ರಕಾಶನದಿಂದ ಲೇಖಕ ಕವಿ ಜೆ.ಆರ್ ನರಸಿಂಹಮೂರ್ತಿ ರವರ 'ನುಡಿ ನಮನ ' ಕವನ ಸಂಕಲನ ಹಾಗೂ 'ನವರತ್ನ ಮಾಲೆ 'ಕಥಾ ಸಂಕಲನ ಬಿಡುಗಡೆ ಕಾರ್ಯಕ್ರಮವು ನಗರದ ಐಟಿಐ ಲೇಔಟ್ ನಲ್ಲಿರುವ ಶ್ರೀಕೃಷ್ಣ ಪದವಿ ಸಂಜೆ ಕಾಲೇಜಿನಲ್ಲಿ ನೆರವೇರಿತು.

ಶ್ರೀಕೃಷ್ಣ ಸಮೂಹ ವಿದ್ಯಾ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಎಂ. ರುಕ್ಮಾಂಗದ ನಾಯ್ಡು ಕೃತಿ ಬಿಡುಗಡೆ ಮಾಡಿ ಮಾತನಾಡುತ್ತಾ ‘ಬದಲಾಗುತ್ತಿರುವ ಜೀವನ ಶೈಲಿ ಇಂದ ಉಂಟಾಗುತ್ತಿರುವ ಒತ್ತಡಗಳನ್ನು ಕಡಿಮೆ ಮಾಡಿಕೊಳ್ಳಲು ಉತ್ತಮ ಸಾಹಿತ್ಯ ಕೃತಿಗಳನ್ನು ಓದುವುದರಿಂದ ಮನಸ್ಸು ಪ್ರಫುಲ್ಲವಾಗಿ ಸಕಾರಾತ್ಮಕ ಯೋಚನೆಗಳು ಮೂಡುತ್ತವೆ’ ಎಂದು ಅಭಿಪ್ರಾಯ ಪಟ್ಟರು.

ಕಾದಂಬರಿಕಾರ ಕೆ. ರಮಾನಂದ, ‘ಸರಳ ಸುಂದರ ಶೈಲಿಯಲ್ಲಿ ಪ್ರಸ್ತುತ ಸಮಾಜದ ಜ್ವಲಂತ ಸಮಸ್ಯೆಗಳ ಕುರಿತು ತೀಕ್ಷ್ಣವಾಗಿ ಕವನದ ಮೂಲಕ ತಮ್ಮ ಆಲೋಚನೆಗಳನ್ನು ಹರಿಯ ಬಿಟ್ಟಿರುವ ಜಿ ಆರ್ ನರಸಿಂಹಸ್ವಾಮಿ ಅವರನ್ನು ಅಭಿನಂದಿಸಿದರು’. ಪ್ರಾಧ್ಯಾಪಕ ಆರ್ ವಾದಿರಾಜು ಹಾಗೂ ಸಂಸ್ಕೃತಿ ಚಿಂತಕ ಗುರುರಾಜ ಪೋಶೆಟ್ಟಿಹಳ್ಳಿ ಮತ್ತು ಕಾಲೇಜಿನ ಪ್ರಾಂಶುಪಾಲ ಪ್ರೊ.ಚೆಂಗಪ್ಪ ಸಿ ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

MORE NEWS

ಕುವೆಂಪು ಪರಿಸರದಲ್ಲಿ ದೇವರನ್ನ ಕಂಡರೆ, ರಾಜ್‌ಕುಮಾರ್‌ ಅಭಿಮಾನಿಗಳಲ್ಲಿ ದೇವರನ್ನ ಕಂಡರು: ಬರಗೂರು

18-04-2024 ಬೆಂಗಳೂರು

ಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರೇ ನನ್ನ ವಿಶ್ವ ಮಾನವ ಸಂದೇಶವನ್ನು ಜನರಿಗೆ ತಲುಪಿಸುವ ಶಕ್ತಿ ಇರುವುದು ರಾಜ್&zwnj...

ಹಾಸನ ಸಂಸ್ಕೃತ ಭವನದಲ್ಲಿ ವಿಶ್ವ ಕಲಾ ದಿನಾಚರಣೆ, ಚಿತ್ರಕಲಾ ಪ್ರದರ್ಶನ ಸ್ಫರ್ಧೆ

18-04-2024 ಬೆಂಗಳೂರು

ಕಲೆಗೆ ಗೌರವವನ್ನು ವ್ಯಕ್ತಪಡಿಸಲು ವಿಶ್ವ ಕಲಾ ದಿನವನ್ನು ಆಚರಿಸಲಾಗುತ್ತಿದೆ. ವಿಶ್ವ ಕಲಾ ದಿನವು ಸಮಾಜದಲ್ಲಿ ಕಲೆಯ ಪ್ರಾ...

ತನುಶ್ರೀ ಸಾಹಿತ್ಯ ವೇದಿಕೆಯಿಂದ ಕವಿಗೋಷ್ಠಿಗೆ ಕವನಗಳ ಆಹ್ವಾನ

16-04-2024 ಬೆಂಗಳೂರು

ಚಿತ್ರದುರ್ಗ: ತನುಶ್ರೀ ಸಾಹಿತ್ಯ, ಸಾಂಸ್ಕೃತಿಕ ಕಲಾ ವೇದಿಕೆಯಿಂದ ರಾಜ್ಯ ಮಟ್ಟದ ಕವಿಗೋಷ್ಠಿಗೆ ಕವನಗಳನ್ನು ಆಹ್ವಾನಿಸಲಾಗ...