ʻಮೂವರ ಮಹಮದರು’ ಕೃತಿಗೆ  ವೀಚಿ ಸಾಹಿತ್ಯ ಪ್ರಶಸ್ತಿ ಗರಿ

Date: 31-05-2025

Location: ಬೆಂಗಳೂರು


ತುಮಕೂರು: ಪಿ. ಚಂದ್ರಿಕಾ ಅವರ ‘ಮೂವರು ಮಹಮದರು’ ಕೃತಿ 2024 ನೇ ಸಾಲಿನ ‘ವೀಚಿ ಸಾಹಿತ್ಯ ಪ್ರಶಸ್ತಿ’ಗೆ ಭಾಜನವಾಗಿದೆ. ಈ ಪ್ರಶಸ್ತಿಯು 25 ಸಾವಿರ ನಗದು ಬಹುಮಾನ ಮತ್ತು ಸ್ಮರಣಿಕೆಯನ್ನು ಒಳಗೊಂಡಿರುತ್ತದೆ.

‘ವೀಚಿ ಯುವ ಸಾಹಿತ್ಯ ಪ್ರಶಸ್ತಿ’ಗೆ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ. ಗೋವಿಂದರಾಜು ಎಂ. ಕಲ್ಲೂರು ಅವರ ‘ನಕ್ಷತ್ರಕ್ಕಂಟಿದ ಮುಟ್ಟಿನ ನೆತ್ತರು’ ಕಥಾಸಂಕಲನ ಆಯ್ಕೆ ಆಗಿದೆ. ಈ ಪ್ರಶಸ್ತಿಯು 5000 ನಗದು ಹಾಗೂ ಫಲಕವನ್ನು ಒಳಗೊಂಡಿರುತ್ತದೆ.

ವೀಚಿ (ವೀ. ಚಿಕ್ಕವೀರಯ್ಯ) ಸಾಹಿತ್ಯ ಪ್ರತಿಷ್ಠಾನವು ತುಮಕೂರು ಜಿಲ್ಲೆಯ ಮೊಟ್ಟಮೊದಲ ಸಾಹಿತ್ಯಿಕ ಪ್ರತಿಷ್ಠಾನ (ಸ್ಥಾಪನೆ:2000) ವಾಗಿದ್ದು, 2023ರಲ್ಲಿ ಪ್ರಕಟವಾದ ಸಾಹಿತ್ಯ ಕೃತಿಗಳನ್ನು ಪರಿಗಣಿಸಿ 2024ನೇ ಸಾಲಿನ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ.

ಕತೆಗಾರ ತುಂಬಾಡಿ ರಾಮಯ್ಯ, ರಂಗಕರ್ಮಿ ಬೇಲೂರು ರಘುನಂದನ್, ಕವಿ ಟಿ. ಯಲ್ಲಪ್ಪ ಅವರಿದ್ದ ತೀರ್ಪುಗಾರರ ಸಮಿತಿಯು ಸಲ್ಲಿಕೆಯಾಗಿದ್ದ 180 ಕೃತಿಗಳನ್ನು ಪರಿಶೀಲಿಸಿ, ಪ್ರಶಸ್ತಿಗಳನ್ನು ಪ್ರಕಟಿಸಿದೆ.

ಪ್ರಶಸ್ತಿ ಪ್ರದಾನ ಸಮಾರಂಭವನ್ನು ಜೂನ್ ತಿಂಗಳಲ್ಲಿ ಆಯೋಜಿಸಲಾಗುವುದೆಂದು, ವೀಚಿ ಸಾಹಿತ್ಯ ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಎಂ.ಎಚ್. ನಾಗರಾಜು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

MORE NEWS

ಎಸ್. ಜಿತೇಂದ್ರ ಕುಮಾರ್ ಗೆ ಕಂಬತ್ತಳ್ಳಿ ಜೀವಣ್ಣ ಪದ್ಮಾವತಮ್ಮ ದತ್ತಿ ಪ್ರಶಸ್ತಿ

24-06-2025 ಬೆಂಗಳೂರು

ಬೆಂಗಳೂರು: ಬಿ.ಎಂ.ಶ್ರೀ ಪ್ರತಿಷ್ಠಾನದಲ್ಲಿ ಕೆ.ಜೆ. ಪಾರ್ಶ್ವನಾಥ್ ತಮ್ಮ ತಂದೆತಾಯಿ ಹೆಸರಿನಲ್ಲಿ ಸ್ಥಾಪಿಸಿರುವ ಕಂಬತ್ತಳ...

ಸಂಸ್ಕೃತಿ ಸಂವರ್ಧನೆಯಲ್ಲಿ ಹಂಸಜ್ಯೋತಿ ಪಾತ್ರ ಹಿರಿದು; ಶ್ರೀನಿವಾಸ ಜಿ ಕಪ್ಪಣ್ಣ

23-06-2025 ಬೆಂಗಳೂರು

ಬೆಂಗಳೂರು: ಹಂಸ ಜ್ಯೋತಿ ಟ್ರಸ್ಟ್ ಆಯೋಜನೆಯಲ್ಲಿ ಹಂಸ ಜ್ಯೋತಿಯ ಸುವರ್ಣ ಸಂಭ್ರಮಾಚರಣೆ ; ಹಂಸ ಸಾಂಸ್ಕೃತಿಕ ಸಂಭ್ರಮ ಅಂತರ...

ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷರಾಗಿ ಬಿ.ಎಲ್. ಶಂಕರ್ ಪುನರಾಯ್ಕೆ

23-06-2025 ಬೆಂಗಳೂರು

ಬೆಂಗಳೂರು: ಕಾಂಗ್ರೆಸ್ ಮುಖಂಡ ಬಿ.ಎಲ್. ಶಂಕರ್ ಅವರು ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷರಾಗಿ ಪುನರಾಯ್ಕೆಯಾಗಿದ್...