ಪದವಿ ಓದುತ್ತಿರುವ ರಾಜೇಶ್ ಹೊನ್ನೇನಹಳ್ಳಿ ಅವರಿಂದ ‘ಕುವೆಂಪು ಸ್ಮರಣಾರ್ಥ ಗ್ರಂಥಾಲಯ’ ನಿರ್ಮಾಣ

Date: 10-07-2020

Location: ಬಾಗೂರು


ಪದವಿ ವ್ಯಾಸಂಗ ಮಾಡುತ್ತಿರುವ ಯುವ ಪ್ರತಿಭೆ ರಾಜೇಶ್ ಬಿ. ಹೊನ್ನೇನಹಳ್ಳಿ ಅವರು ಹುಟ್ಟೂರಾದ ಬಾಗೂರು ಸಮೀಪದ ಬಿ.ಹೊನ್ನೇನಹಳ್ಳಿಯಲ್ಲಿ ರಾಷ್ಟ್ರಕವಿ `ಕುವೆಂಪು ಸ್ಮರಣಾರ್ಥ ಗ್ರಂಥಾಲಯ’ವನ್ನು ತಮ್ಮ ಸ್ವಂತ ಖರ್ಚಿನಲ್ಲಿ ಸ್ಥಾಪಿಸಿದ್ದಾರೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ಅವರು ಚನ್ನರಾಯಪಟ್ಟಣ ತಾಲೂಕಿನ ಬಾಗೂರು ಹೋಬಳಿ ಸಮೀಪದ ಒಂದು ಪುಟ್ಟ ಗ್ರಾಮದಲ್ಲಿ ಜನಿಸಿದರು. ತಮ್ಮ ಹುಟ್ಟೂರಿಗೆ ಏನಾದರೊಂದು ಕೊಡುಗೆ ನೀಡಬೇಕೆಂಬ ಆಶಯವನ್ನು ಬಹುದಿನದಿಂದ ಹೊಂದಿದ್ದರು. ಇದೀಗ ತಮ್ಮ ವಿದ್ಯಾರ್ಥಿ ವೇತನ ‌ಹಾಗೂ ಪೋಷಕರ ಕೂಲಿ ಹಣದಿಂದ ಈ ಗ್ರಂಥಾಲಯವನ್ನು ನಿರ್ಮಿಸಿದ್ದಾರೆ. 

ಗ್ರಂಥಾಲಯಕ್ಕೆ ಪೋಷಕರ ಕೂಲಿ ಕೊಡುಗೆ 

ರಾಜೇಶ್ ಅವರು ಚನ್ನರಾಯಪಟ್ಟಣ ತಾಲ್ಲೂಕಿನ ಸಮ್ಮೇಳನದ ಅಧ್ಯಕ್ಷನಾಗಿದ್ದಾಗ ಸಮ್ಮೇಳನಾಧ್ಯಕ್ಷರ ಭಾಷಣದಲ್ಲಿ  ಹೋಬಳಿಯ ಪ್ರಮುಖ ಗ್ರಾಮಗಳಲ್ಲಿ  ಗ್ರಂಥಾಲಯಗಳನ್ನ ನಿರ್ಮಿಸಿ ಎಂದು ಸ್ಥಳೀಯ ಸರ್ಕಾರಕ್ಕೆ ಮನವಿ ಮಾಡಿದ್ದರು. ನಂತರದ ದಿನಗಳಲ್ಲಿ ಮಾತಿಗಿಂತ ಕೃತಿ ಲೇಸು ಎನ್ನುವಂತೆ ಕೊರೋನ ರಜೆಯಲ್ಲಿ ಊರಿಗೆ ಬಂದು ತಾವೆ ಸ್ವತಃ ಕಟ್ಟಡ ಕಾಮಗಾರಿಯಲ್ಲಿ ತೊಡಗಿಕೊಂಡು ಸುಮಾರು ಒಂದುವರೆ ಲಕ್ಷದಷ್ಟು ಹಣವನ್ನು ವಿನಿಯೋಗಿಸಿದ ಒಂದು ತಿಂಗಳಲ್ಲೇ ಗ್ರಂಥಾಲಯವನ್ನು ನಿರ್ಮಿಸಿದ್ದಾರೆ. ರಾಜೇಶ್ ಬಿ ಹೊನ್ನೇನಹಳ್ಳಿ ಅವರು ಪೋಷಕರಾದ ಚನ್ನಮ್ಮ, ಹಾಗೂ ರಂಗಸ್ವಾಮಿ ಇವರುಗಳ ಪರಿಶ್ರಮದಿಂದ ನಿರ್ಮಾಣವಾದ  ಈ ಗ್ರಂಥಾಲಯವು ಮೂರು ಹಳ್ಳಿಗಳಿಗೆ ಉಪಯುಕ್ತವಾಗಿದೆ ಅಲ್ಲದೆ  ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುವ ವಿದ್ಯಾರ್ಥಿಗಳಿಗೆ, ಊರಿನ ಹಿರಿಯ ನಾಗರಿಕರು ಇದರ ಸದುಪಯೋಗವನ್ನು ಪಡೆಯುತ್ತಿದ್ದಾರೆ. ಸರ್ಕಾರದ ಯಾವುದೇ ನೆರವಿಲ್ಲದೆಯೂ ತಮ್ಮ ‌ಸ್ವತಃ ಖರ್ಚಿನಲ್ಲೇ ಗ್ರಂಥಾಲಯವನ್ನು ನಿರ್ವಹಿಸುತ್ತಿರುವ ಅವರ ಕಾರ್ಯಕ್ಕೆ ಗ್ರಾಮಸ್ಥರಿಂದ ಮೆಚ್ಚುಗೆಗೂ ಪಾತ್ರವಾಗಿದೆ. 

ಪುಸ್ತಕಗಳ ಕೊಡುಗೆಗೆ ಮನವಿ

ಗ್ರಂಥಾಲಯಕ್ಕೆ ಸುಮಾರು ಇಪ್ಪತ್ತು ಸಾವಿರ ಪುಸ್ತಕಗಳನ್ನಿಡುವ ಆಲೋಚನೆಯಿದೆ. ಯಾವುದೇ ರೀತಿಯ ಸಹಾಯ ಮಾಡುವವರು ಹಾಗೂ ರಾಜ್ಯದಾದ್ಯಂತ ಆಸಕ್ತ ಸಾಹಿತಿಗಳು ಗ್ರಂಥಾಲಯಕ್ಕೆ ತಮ್ಮ ಕೃತಿಯ 5 ಪ್ರತಿಗಳನ್ನು ಈ ಜುಲೈ  20, 2020ರೊಳಗೆ ಕಳುಹಿಸಬಹುದು. ಆಸಕ್ತರು ರಾಜೇಶ್ ಬಿ ಹೊನ್ನೇನಹಳ್ಳಿ, ಓಬಳಾಪುರ ಅಂಚೆ ಬಾಗೂರು ( ಹೋ) ಚನ್ನರಾಯಪಟ್ಟಣ (ತಾ) ಹಾಸನ(ಜಿ) ಪಿನ್ ಕೋಡ್ 573111- ಈ ವಿಳಾಸಕ್ಕೆ ಕಳುಹಿಸಬಹುದು. ಸಂಪರ್ಕ ಸಂಖ್ಯೆ - 9108554099/7975662820. 

MORE NEWS

ಎಸ್.ಜ್ಯೋತಿ ಅವರ ‘ಅತ್ತೆ ನಿಮಗೊಂದು ಪ್ರಶ್ನೆ’ ಪುಸ್ತಕ ಬಿಡುಗಡೆ ಸಮಾರಂಭ

19-03-2024 ಬೆಂಗಳೂರು

ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...

ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರಬಂದಗಳಿಗೆ ಆಹ್ವಾನ

17-12-2023 ಬೆಂಗಳೂರು

ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...

ಸಾಂಸ್ಕೃತಿಕ ಸಂವಿಧಾನದ ಅರಿವು ಅಗತ್ಯ : ಪ್ರೊ.ನಟರಾಜ ಬೂದಾಳು

06-12-2023 ಬೆಂಗಳೂರು

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...