ಪದ್ಮಭೂಷಣ ಗೌರವಕ್ಕೆ ಎಸ್.ಎಲ್.ಭೈರಪ್ಪ ಹಾಗೂ ಸುಧಾ ಮೂರ್ತಿ

Date: 25-01-2023

Location: ಬೆಂಗಳೂರು


2023ನೇ ಸಾಲಿನ ಪದ್ಮ ಪ್ರಶಸ್ತಿ ಪ್ರಕಟವಾಗಿದೆ. ಕರ್ನಾಟಕದ ಓರ್ವರಿಗೆ ಪದ್ಮವಿಭೂಷಣ ಗೌರವ, ಇಬ್ಬರಿಗೆ ಪದ್ಮಭೂಷಣ ಹಾಗೂ ಐವರಿಗೆ ಪದ್ಮಶ್ರೀ ಗೌರವ ದೊರೆತಿದೆ. ಪದ್ಮವಿಭೂಷಣ ಗೌರವಕ್ಕೆ ಮಾಜಿ ಮುಖ್ಯಮಂತ್ರಿ ಎಸ್. ಎಂ ಕೃಷ್ಣ , ಪದ್ಮಭೂಷಣ ಗೌರವಕ್ಕೆ ಎಸ್​. ಎಲ್ ಭೈರಪ್ಪ ಹಾಗೂ ಸುಧಾಮೂರ್ತಿ, ಪದ್ಮಶ್ರೀ ಗೌರವಕ್ಕೆ ಖಾದರ್ ವಾಲಿ ದುಡೇಕುಲ್ಲಾ, ರಾಣಿ ಮಾಚಯ್ಯ, ಮುನಿವೆಂಕಟಪ್ಪ, ರಷೀದ್ ಅಹ್ಮದ್ ಖಾದ್ರಿ, ಸುಬ್ಬರಾಮನ್

ಹಿರಿಯ ರಾಜಕಾರಣಿ ಎಸ್.ಎಂ.ಕೃಷ್ಣ, ಹಿರಿಯ ಸಾಹಿತಿ ಎಸ್. ಎಲ್‌. ಭೈರಪ್ಪ ಹಾಗೂ ಸಮಾಜ ಸೇವೆಗಾಗಿ ಇನ್ಫೋಸಿಸ್‌ ಫೌಂಡೇಷನ್‌ ಅಧ್ಯಕ್ಷೆ ಸುಧಾಮೂರ್ತಿ ಪದ್ಮಭೂಷಣ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಿಂದ ಡಾ.ಖಾದರ್‌ ವಲ್ಲಿ ದುಡೆಕುಲ್ಲಾ, ನೃತ್ಯದ ಮೂಲಕ ಕೊಡವ ಸಂಸ್ಕೃತಿಯನ್ನು ಪಸರಿಸಿದ ರಾಣಿ ಮಾಚಯ್ಯ, ತಮಟೆಯ ಮೂಲಕ ಮನಸೆಳೆದ ಮುನಿವೆಂಕಟಪ್ಪ, ಕಲಾವಿದ ಷಾ ರಶೀದ್‌ ಅಹ್ಮದ್‌ ಖಾದ್ರಿ ಹಾಗೂ ಪುರಾತತ್ವ ಶಾಸ್ತ್ರಜ್ಞ ಎಸ್.ಸುಬ್ಬರಾಮನ್‌ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಎಸ್.ಎಂ.ಕೃಷ್ಣ: ಸೋಮಹಳ್ಳಿ ಮಲ್ಲಯ್ಯ ಕೃಷ್ಣ ರಾಜ್ಯದ ಹಿರಿಯ ರಾಜಕಾರಣಿ. ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದರು. ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದರು. ಕೇಂದ್ರ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ರಾಜಕಾರಣದಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಎಸ್.ಎಲ್.ಭೈರಪ್ಪ: ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ ಕನ್ನಡದ ಪ್ರಸಿದ್ಧ ಕಾದಂಬರಿಕಾರರು. ಮತದಾನ, ವಂಶವೃಕ್ಷ, ನಾಯಿ ನೆರಳು, ತಬ್ಬಲಿಯು ನೀನಾದೆ ಮಗನೆ, ಗೃಹಭಂಗ, ದಾಟು, ಆವರಣ, ಕವಲು ಸೇರಿದಂತೆ ಅನೇಕ ಕಾದಂಬರಿಗಳು. ಭೈರಪ್ಪನವರು ಭಾರತೀಯ ಮತ್ತು ಪಾಶ್ಚಾತ್ಯ ಸಂಗೀತಾಸಕ್ತರು. ಚಿತ್ರ ಹಾಗೂ ಶಿಲ್ಪಕಲೆಯಲ್ಲೂ ಅಭಿರುಚಿ ಹೊಂದಿದ್ದು, ವಿಶ್ವದ ಏಳೂ ಭೂಖಂಡಗಳ ಪ್ರವಾಸ ಮಾಡಿದ್ದಾರೆ.

ಸುಧಾ ಮೂರ್ತಿ: ಇನ್ಫೋಸಿಸ್‌ ಫೌಂಡೇಷನ್‌ ಅಧ್ಯಕ್ಷೆಯಾಗಿರುವ ಇವರು ಸಾಮಾಜಿಕ ಕಾರ್ಯಗಳಲ್ಲಿ ನಿರತರಾಗಿದ್ದಾರೆ. ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದಲ್ಲೂ ತೊಡಗಿಸಿಕೊಂಡಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಜನರ ಜೀವನ ಸುಧಾರಿಸುವಲ್ಲಿ ಶ್ರಮಿಸುತ್ತಿದ್ದಾರೆ. ಹಿಂದೆ ಪದ್ಮಶ್ರೀ ಪ್ರಶಸ್ತಿಗೂ ಕೂಡ ಭಾಜನರಾಗಿದ್ದರು.

ಮುನಿವೆಂಕಟಪ್ಪ ಅವರ ಪರಿಚಯ: ತಮಟೆ ಕಲಾವಿದ ಮುನಿವೆಂಕಟಪ್ಪ ಪದ್ಮಶ್ರೀ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಮೂಲತಃ ಚಿಕ್ಕಬಳ್ಳಾಪುರದವರಾದ ಇವರು ಶಿಡ್ಲಘಟ್ಟ ತಾಲ್ಲೂಕಿನ ಪಿಂಡಪಾಪನಹಳ್ಳಿ ಎಂಬ ಕುಗ್ರಾಮದವರು . ಹಳೆ ಮೈಸೂರು ಭಾಗದಲ್ಲಿ ಪ್ರಚಲಿತದಲ್ಲಿರುವ ತಮಟೆ ವಾದ್ಯವನ್ನು 72 ವರ್ಷದ ಮುನಿವೆಂಕಟಪ್ಪನವರು ತಮ್ಮ 16ನೇ ವಯಸ್ಸಿನಲ್ಲೇ ಬಾರಿಸಲು ಪ್ರಾರಂಭಿಸಿದ್ದರು.ತಮಟೆಯಲ್ಲಿಯೇ ಹಲವು ರೀತಿಯ ಪ್ರಯೋಗಗಳನ್ನು ವಮುನಿವೆಂಕಟಪ್ಪ ಅವರು ತಮಟೆಯಲ್ಲಿಯೇ ' ಸ ರಿ ಗ ಮ ಪ ... ' ನುಡಿಸಿ ಎಲ್ಲರ ಮನಗೆದ್ದಿದ್ದಾರೆ. 2010 ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ನಾಡೋಜ ಗೌರವ ಪುರಸ್ಕಾರ ಕೂಡ ಪೆಡದುಕೊಂಡಿದ್ದಾರೆ. ಇದೀಗ ಮುನಿವೆಂಕಟಪ್ಪ ಪದ್ಮ ಪ್ರಶಸ್ತಿಗೆ ಭಾಜನರಾಗಿರುವುದು ಕನ್ನಡಿಗರ ಹೆಮ್ಮೆ.

ರಾಣಿ ಮಾಚಯ್ಯ: ಮಡಿಕೇರಿಯ ನಿವಾಸಿ. ಚಿಕ್ಕವಯಸ್ಸಿನಲ್ಲೇ ಕೊಡವ ವಾಲಗಕ್ಕೆ ಹೆಜ್ಜೆ ಹಾಕುವ ಮೂಲಕ ಸೈ ಎನಿಸಿಕೊಂಡವರು. ಕೊಡವ ಜನಾಂಗದ ಜಾನಪದ ನೃತ್ಯ ಪ್ರಕಾರವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗೊಳಸಿಬೇಕು ಎಂಬ ಉದ್ದೇಶದಿಂದ ಕೊಡವ ಸಮಾಜ ಸ್ಥಾಪಿಸಿದರು. ದೇಶದ ಹಲವು ರಾಜ್ಯಗಳಲ್ಲಿ ಪ್ರದರ್ಶನ ನೀಡಿದ್ದಾರೆ.

ಡಾ.ಖಾದರ್‌ ವಲ್ಲಿ ದುಡೆಕುಲ್ಲಾ: ವಿಜ್ಞಾನ, ಆಹಾರ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸುತ್ತಿದ್ದಾರೆ ಡಾ.ಖಾದರ್‌ ವಲ್ಲಿ. ತಮ್ಮ ಸಂಶೋಧನೆ ಹಾಗೂ ಅರಿವಿನ ಕಾರ್ಯಕ್ರಮಗಳ ಮೂಲಕ ಜನರೊಂದಿಗೆ ಬೆರೆತಿದ್ದಾರೆ.

ಷಾ ರಶೀದ್‌ ಅಹ್ಮದ್‌ ಖಾದ್ರಿ : ತಮ್ಮ ಪರಿವಾರದ ಹಿರಿಯರಿಂದ ಬಂದಿರುವ ಬಿದ್ರಿನ ಕರಕುಶಲ ಕಲೆಯನ್ನು ಉಳಿಸಿ ಬೆಳೆಸುತ್ತಿದ್ದಾರೆ ಬೀದರಿನ ಕಲಾವಿದ ರಶೀದ್‌ ಅಹ್ಮದ್‌ ಖಾದ್ರಿ.

MORE NEWS

ಪುಸ್ತಕ ಸಂಸ್ಕೃತಿ ಬೆಳೆಸುವುದು ಸಾಮಾಜಿಕ ನ್ಯಾಯದ ಭಾಗ ಅಂತ ಸರ್ಕಾರಗಳು ಭಾವಿಸಬೇಕು: ಬರಗೂರು

23-04-2024 ಬೆಂಗಳೂರು

ಬೆಂಗಳೂರು: ನಿಜವಾದ ಪುಸ್ತಕ ಪ್ರೀತಿ ಬೆಳೆಯ ಬೇಕಿರುವುದು, ಉಳಿಯ ಬೇಕಿರುವುದು ಮುಂದಿನ ಪೀಳಿಗೆಯಿಂದ, ಆ ಮುಂದಿನ ಪೀ...

ಪ್ರಕಾಶನ ಸಂಸ್ಥೆಯನ್ನು ತೆರೆದಿರುವ ಪ್ರಕಾಶಕರೆಲ್ಲರೂ ಹುಚ್ಚರೇ; ಕೆ.ಎನ್. ಗಣೇಶಯ್ಯ

23-04-2024 ಬೆಂಗಳೂರು

ಪುಸ್ತಕಗಳನ್ನು ಕೊಂಡುಕೊಂಡು ಓದುವವರ ಪ್ರಮಾಣ ಕಡಿಮೆಯೂ ಆಗಿಲ್ಲ ಹೆಚ್ಚು ಕೂಡ ಆಗಿಲ್ಲ. ಬಹುಶಃ ಪುಸ್ತಕವನ್ನು ಓದಬೇಕು ಅನ್...

‘ಕಠಾರಿ ಅಂಚಿನ ನಡಿಗೆ’ ಸಮಕಾಲೀನ ವಿಡಂಬನೆಗಳ ಪುಸ್ತಕ: ಶಿವಸುಂದರ್

22-04-2024 ಬೆಂಗಳೂರು

ಬೆಂಗಳೂರು: ಚಂದ್ರಪ್ರಭ ಕಠಾರಿಯವರು ವಿಡಂಬನೆಗಳನ್ನು ಬರೆದಿದ್ದಾರೆ. ವಿಡಂಬನೆ, ಲೇವಡಿ ಮಾಡುವುದಕ್ಕೆ ಇಂದು ಬಹಳ ಧೈರ್ಯ ಬ...