ಪಂಜು ಗಂಗೊಳ್ಳಿಗೆ ಹಿಗ್ಗು-ಅರಿವಿನ ಮಾಲೆ ಪುಸ್ತಕ ದತ್ತಿ ಪ್ರಶಸ್ತಿ

Date: 27-11-2020

Location: ಕುಂದಾಪುರ


ತಲ್ಲೂರು ಫ್ಯಾಮಿಲಿ ಟ್ರಸ್ಟ್ ಅವರ ‘ಹಿಗ್ಗು - ಅರಿವಿನಮಾಲೆ’ ಪುಸ್ತಕ ದತ್ತಿ ಪ್ರಶಸ್ತಿಗೆ ಪಂಜು ಗಂಗೊಳ್ಳಿ ಅವರ ‘ಕುಂದಾಪ್ರ ಕನ್ನಡ ನಿಘಂಟು’ ಕೃತಿ ಆಯ್ಕೆಯಾಗಿದೆ.

ವೃತ್ತಿಪರ ವ್ಯಂಗ್ಯಚಿತ್ರಕಾರರಾದ ಅವರು ಎರಡು ದಶಕಗಳ ಕಾಲ ಶ್ರಮಿಸಿ, ಸಂಗ್ರಹಿಸಿ, ಸಂಪಾದಿಸಿದ ಈ ನಿಘಂಟು ಸುಮಾರು 10,000ಕ್ಕೂ ಹೆಚ್ಚು ಕುಂದಾಪುರ ಕನ್ನಡ ಪದಗಳ ಮತ್ತು 1700ರಷ್ಟು ಕುಂದಾಪುರ ಕನ್ನಡದ ನುಡಿಗಟ್ಟುಗಳ ಅರ್ಥ ವಿವರಣೆ ನೀಡುತ್ತದೆ.

ಉಡುಪಿಯ ಪ್ರೊಡಿಜಿ ಪ್ರಕಾಶನವು ಈ ನಿಘಂಟನ್ನು ಮುಂದಿನ ವರ್ಷದ ಅವಧಿಗೆ ಪ್ರಕಟಿಸಿ ಸಾರ್ವಜನಿಕರಿಗೆ ಲಭ್ಯವಾಗಿಸಲಿದೆ ಎಂದು ಟ್ರಸ್ಟಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪಂಜು ಗಂಗೊಳ್ಳಿ ಅವರು 1962ರ ಆಗಸ್ಟ್‌ 01ರಂದು ಕುಂದಾಪುರದ ಗಂಗೊಳ್ಳಿಯಲ್ಲಿ ಜನಿಸಿದರು. ಪ್ರಸ್ತುತ ಮುಂಬೈನಲ್ಲಿ ವಾಸ. ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಬಿಎಸ್.ಸಿ. ಪೂರೈಸಿ, ಮುಂಗಾರು ದಿನಪತ್ರಿಕೆಯಲ್ಲಿ ಕಾರ್ಟೂನಿಸ್ಟ್ ಆಗಿ ಪತ್ರಿಕೋದ್ಯಮಕ್ಕೆ ಕಾಲಿಟ್ಟರು. 'ಲಂಕೇಶ್ ಪತ್ರಿಕೆ'ಯಲ್ಲಿ ಕೆಲವು ವರ್ಷಗಳ ಕಾಲ ಕಾರ್ಟೂನಿಸ್ಟ್ ಆಗಿದ್ದರು. ಬಳಿಕ ಪ್ರೀತೀಶ್ ನಂದಿ ಸಂಪಾದಕತ್ವದ 'ದಿ ಸಂಡೇ ಆಬ್ಬರ್ವರ್' ಪತ್ರಿಕೆಯ ಮೂಲಕ ಇಂಗ್ಲಿಷ್ ಪತ್ರಿಕೋದ್ಯಮ ಪ್ರವೇಶಿಸಿದರು. ಕಳೆದ 20ವರ್ಷಗಳಿಂದ 'ಬ್ಯುಸಿನೆಸ್ ಇಂಡಿಯಾ' ಪತ್ರಿಕೆಯಲ್ಲಿ ಕಾರ್ಟೂನಿಸ್ಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಪಂಜು ಗಂಗೊಳ್ಳಿ ಅವರಿಗೆ ಆನುವಂಶಿಕವಾಗಿ ಬಂದ ಚಿತ್ರಕಲೆ ವೃತ್ತಿಯಾದರೆ, ಬರವಣಿಗೆ ಪ್ರವೃತ್ತಿ. 'ಮೂಢನಂಬಿಕೆಗಳ ವಿಶ್ವರೂಪ', 'ರುಜು' ಇವರ ಪ್ರಕಟಿತ ಕೃತಿಗಳು, ಸ್ನೇಹಿತರನ್ನು ಒಗ್ಗೂಡಿಸಿಕೊಂಡು ಕಳೆದ 20 ವರ್ಷಗಳಿಂದ ರಚಿಸುತ್ತಿರುವ ಕುಂದಾಪು ಕನ್ನಡ ನಿಘಂಟು ಈಗ ಬಿಡುಗಡೆಗೆ ಸಿದ್ಧವಾಗಿದ್ದರೆ, ‘ಕುಂದಾಪು ಕನ್ನಡ ಹಾಡುಗಳು' ತಯಾರಿಯ ಹಂತದಲ್ಲಿದೆ.

MORE NEWS

ಕುವೆಂಪು ಪರಿಸರದಲ್ಲಿ ದೇವರನ್ನ ಕಂಡರೆ, ರಾಜ್‌ಕುಮಾರ್‌ ಅಭಿಮಾನಿಗಳಲ್ಲಿ ದೇವರನ್ನ ಕಂಡರು: ಬರಗೂರು

18-04-2024 ಬೆಂಗಳೂರು

ಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರೇ ನನ್ನ ವಿಶ್ವ ಮಾನವ ಸಂದೇಶವನ್ನು ಜನರಿಗೆ ತಲುಪಿಸುವ ಶಕ್ತಿ ಇರುವುದು ರಾಜ್&zwnj...

ಹಾಸನ ಸಂಸ್ಕೃತ ಭವನದಲ್ಲಿ ವಿಶ್ವ ಕಲಾ ದಿನಾಚರಣೆ, ಚಿತ್ರಕಲಾ ಪ್ರದರ್ಶನ ಸ್ಫರ್ಧೆ

18-04-2024 ಬೆಂಗಳೂರು

ಕಲೆಗೆ ಗೌರವವನ್ನು ವ್ಯಕ್ತಪಡಿಸಲು ವಿಶ್ವ ಕಲಾ ದಿನವನ್ನು ಆಚರಿಸಲಾಗುತ್ತಿದೆ. ವಿಶ್ವ ಕಲಾ ದಿನವು ಸಮಾಜದಲ್ಲಿ ಕಲೆಯ ಪ್ರಾ...

ತನುಶ್ರೀ ಸಾಹಿತ್ಯ ವೇದಿಕೆಯಿಂದ ಕವಿಗೋಷ್ಠಿಗೆ ಕವನಗಳ ಆಹ್ವಾನ

16-04-2024 ಬೆಂಗಳೂರು

ಚಿತ್ರದುರ್ಗ: ತನುಶ್ರೀ ಸಾಹಿತ್ಯ, ಸಾಂಸ್ಕೃತಿಕ ಕಲಾ ವೇದಿಕೆಯಿಂದ ರಾಜ್ಯ ಮಟ್ಟದ ಕವಿಗೋಷ್ಠಿಗೆ ಕವನಗಳನ್ನು ಆಹ್ವಾನಿಸಲಾಗ...