ಪರಂಪರಾ: ‘ಮಕ್ಕಳಿಗಾಗಿ ಕತೆ ಹೇಳಿಸುವ ಅಭಿಯಾನ’ ಸ್ಪರ್ಧೆ

Date: 20-05-2020

Location: ಬೆಂಗಳೂರು


ಪರಂಪರಾ ಕಲ್ಚರಲ್ ಫೌಂಡೇಶನ್, ಮಕ್ಕಳ ಸೃಜನಶೀಲತೆಯನ್ನು ಹೆಚ್ಚಿಸುವ ಸಲುವಾಗಿ ‘ಕತೆ ಹೇಳಿಸುವ ಅಭಿಯಾನ’ ಸ್ಪರ್ಧೆ ಆಯೋಜಿಸಿದೆ. ಮಕ್ಕಳಲ್ಲಿ ಕಥಾಕಥನ ಪ್ರಯತ್ನಶೀಲತೆಯನ್ನು ಬೆಳೆಸುವ ಹಂಬಲ ಹೊಂದಿ ರೂಪಿತವಾಗಿ, ಈಗಾಗಲೇ ನೂರಾರು ಮಕ್ಕಳನ್ನು ತಲುಪಿರುವ ಕಾರ್ಯಕ್ರಮ. ಚಿಣ್ಣರಿಗೆ ಬಹುವಾಗಿ ರುಚಿಸುವ, ರುಚಿಸಿರುವ ಕಾರ್ಯಕ್ರಮ.

ಈ ಕೊರೋನಾ ಕಾಲದಲ್ಲಿ, ಲಾಕ್ ಡೌನ್ ಸಮಯದಲ್ಲಿ ಮಕ್ಕಳನ್ನು ಸುಧಾರಿಸುವುದೇ ಒಂದು ಸವಾಲು, ಆಟಪಾಠಗಳಿಲ್ಲದೆ ಗೃಹಬಂಧನದಲ್ಲಿರುವ ಮತ್ತು ಪಾಲಕರ ಕಾವಲಿನಲ್ಲಿರುವ ಮಕ್ಕಳು ಒತ್ತಡಕ್ಕೆ ಒಳಗಾಗಿರುವ ಸಂದರ್ಭ ಇದು. ಶಾಲೆಗಳು ಮತ್ತೆ ತೆರೆದುಕೊಳ್ಳುವ ಕಾಲದವರೆಗೂ ಅವರನ್ನು ಒಂದಿಲ್ಲೊಂದು ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರಬೇಕಾದ ಅನಿವಾರ್ಯತೆ ಪಾಲಕರಿಗೆ ಈ ಸುಸಮಯವನ್ನು ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಸಹಕಾರಿಯಾಗುವ ‘ಕತೆ ಹೇಳುವೆ’ ಎನ್ನುವ ಮಕ್ಕಳಿಂದಲೇ ಕತೆ ಹೇಳಿಸುವ ಅಭಿಯಾನ ಇಲ್ಲಿದೆ. ಮಕ್ಕಳು ಉತ್ಸಾಹದಿಂದ ಭಾಗವಹಿಸಲಿ ಎನ್ನುವ ದೃಷ್ಟಿಯಿಂದ ಇದಕ್ಕೆ ಸ್ಪರ್ಧೆಯ ಸ್ವರೂಪ ನೀಡಲಾಗಿದೆ,

ಈ ಸ್ಪರ್ಧೆ ಆಸಕ್ತಿಯ ಮಕ್ಕಳ ಪೈಕಿ 10 ಮಕ್ಕಳನ್ನು ಆರಿಸಿ, ಅವರನ್ನು ಸೂಕ್ತ ರೀತಿಯಲ್ಲಿ ಪುರಸ್ಕರಿಸಲಾಗುವುದು. ಈ ಮಕ್ಕಳಿಗೆ ಕತೆ ಹೇಳುವುದರಲ್ಲಿ ವಿಶೇಷ ತರಬೇತಿ ನೀಡಲಾಗುವುದು. ಜೊತೆಗೆ ಮುಂದೆ ನಡೆಯುವ ಸಂಸ್ಥೆಯ ‘ಕತೆ ಹೇಳುವೆ' ಕಾರ್ಯಕ್ರಮದಲ್ಲಿ ಕತೆ ಹೇಳಲು ಆಹ್ವಾನಿಸಲಾಗುವುದು. ಆಸಕ್ತರು ತಮ್ಮ ಮಕ್ಕಳನ್ನು ಈ ಅಭಿಯಾನದಲ್ಲಿ ಭಾಗವಹಿಸಲು ಪ್ರೋತ್ಸಾಹಿಸಿ,

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ : 9448202708, 9731116653, 9035097210

ಸ್ಪರ್ಧಾ ನಿಯಮಗಳು: 

  • 15 ವರ್ಷದೊಳಗಿನ ಮಕ್ಕಳು ಈ ಅಭಿಯಾನದಲ್ಲಿ ಭಾಗವಹಿಸಬಹುದು. 

  • ಭಾರತೀಯ ಕತೆಗಳನ್ನು ಮಾತ್ರವೇ ಹೇಳಬೇಕು.

  • ಕನ್ನಡ ಭಾಷೆಯಲ್ಲೇ ಕತೆ ಹೇಳಬೇಕು. 

  • ಕತೆ ಹೇಳುವುದನ್ನು ವಿಡಿಯೋ ಮಾಡಿ ಕಳುಹಿಸಿಕೊಡಬೇಕು. 

  • ವಿಡಿಯೋ ಕಾಲಮಿತಿ ಗರಿಷ್ಠ 6 ನಿಮಿಷಗಳು 

  • ವಿಡಿಯೋ ಕಳುಹಿಸಬೇಕಾದ ವಾಟ್ಸ್ಯಾಪ್ ಸಂಖ್ಯೆ : 9448087878 

  • ಸ್ಪರ್ಧಿಗಳು ತಮ್ಮ ಹೆಸರು, ವಯಸ್ಸು, ಊರು, ಮೊಬೈಲ್ ಸಂಖ್ಯೆ ನಮೂದಿಸಿರಬೇಕು. 

  • ವಿಡಿಯೋ ಕಳುಹಿಸಲು ಕೊನೆಯ ದಿನಾಂಕ : 2020ರ ಮೇ 31 ಹಾಗೂ ಫಲಿತಾಂಶ ಪ್ರಕಟವಾಗುವ ದಿನಾಂಕ : 2020 ರ ಜೂನ್ 7 ರಂದು.. 

MORE NEWS

ಎಸ್.ಜ್ಯೋತಿ ಅವರ ‘ಅತ್ತೆ ನಿಮಗೊಂದು ಪ್ರಶ್ನೆ’ ಪುಸ್ತಕ ಬಿಡುಗಡೆ ಸಮಾರಂಭ

19-03-2024 ಬೆಂಗಳೂರು

ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...

ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರಬಂದಗಳಿಗೆ ಆಹ್ವಾನ

17-12-2023 ಬೆಂಗಳೂರು

ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...

ಸಾಂಸ್ಕೃತಿಕ ಸಂವಿಧಾನದ ಅರಿವು ಅಗತ್ಯ : ಪ್ರೊ.ನಟರಾಜ ಬೂದಾಳು

06-12-2023 ಬೆಂಗಳೂರು

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...