ಪತ್ರಕರ್ತರು ಪ್ರಜಾಪ್ರಭುತ್ವದ ಪರವಿರಬೇಕು:ನಾಗೇಶ್ ಹೆಗಡೆ

Date: 03-12-2020

Location: ಬೆಂಗಳೂರು


"ಪತ್ರಕರ್ತನಾದವನು ಪ್ರಜಾಪ್ರಭುತ್ವದ ಪರ ಇರಬೇಕು. ಪ್ರಜಾಪ್ರಭುತ್ವದ ಮೌಲ್ಯಗಳ ಪರ ವಾಲುವುದೂ ಸಹ ವೃತ್ತಿಪರ ಪತ್ರಿಕೋದ್ಯಮವೇ" ಎಂದು ಹಿರಿಯ ಪತ್ರಕರ್ತ, ಅಂಕಣಕಾರ ನಾಗೇಶ್ ಹೆಗಡೆ ಅಭಿಪ್ರಾಯಪಟ್ಟರು.

‘ಅವಧಿʼ ಅಂತರ್ಜಾಲ ತಾಣ ಹಮ್ಮಿಕೊಂಡಿದ್ದ ‘ಚಾಕ್ ಸರ್ಕಲ್’ ವಿಶೇಷ ಸಂವಾದದಲ್ಲಿ ಮಾತನಾಡಿದ ಅವರು ಮಲೆನಾಡಿನ ಕಣಿವೆಯಲ್ಲಿದ್ದ ನಾನು ಕಣಿವೆಯ ಆಳಕ್ಕೂ, ಹಿಮಾಲಯದ ಪರ್ವತದ ಎತ್ತರಕ್ಕೂ, ವಿದೇಶದ ಗಗನಚುಂಬಿ ಕಟ್ಟಡಗಳಿಗೂ ಮುಟ್ಟುವಂತಾಗಿದ್ದು ನನ್ನ ಅದೃಷ್ಟ. ಇದರಿಂದ ನನಗೆ ಆಪಾರ ಸ್ನೇಹಿತ ವರ್ಗ ದಕ್ಕಿದೆ ಎಂದು ನೆನಪು ಮೆಲುಕು ಹಾಕಿದ ಅವರು ಪರಿಸರ ಚಳವಳಿಗಳು ನನ್ನನ್ನು ರೂಪಿಸಿವೆ ಹಾಗೆಯೇ ನಾನು ಬರೆದ ಲೇಖನಗಳ ಸುತ್ತಲೂ ಪರಿಸರ ಚಳವಳಿಗಳು ಹುಟ್ಟಿಕೊಂಡವು ಎಂದರು.

ಕಾರ್ಯಕ್ರಮವನ್ನು ‘ಅವಧಿʼಯ ಪ್ರಧಾನ ಸಂಪಾದಕ ಜಿ. ಎನ್. ಮೋಹನ್ ನಡೆಸಿಕೊಟ್ಟರು.

MORE NEWS

ಅವಿರತ ಹರೀಶ್ ಅವರ ಅಭಿನಂದನಾ ಕಾರ್ಯಕ್ರಮ ಎಲ್ಲರಿಗೂ ಆದರ್ಶವಾಗಿದೆ; ಬರಗೂರು ರಾಮಚಂದ್ರಪ್ಪ

25-04-2024 ಬೆಂಗಳೂರು

ಬೆಂಗಳೂರು: ಅವಿರತ ಹರೀಶ್ ಗೆಳೆಯರ ಬಳಗದಿಂದ ಹಮ್ಮಿಕೊಂಡಿದ್ದ ಪ್ರಕಾಶಕ, ಲೇಖಕ, ಸಂಘಟಕ ಅವಿರತ ಹರೀಶ್ 60ರ ಸಾಂಸ್ಕೃತಿಕ ಸ...

ಮಾತೋಶ್ರೀ ರತ್ನಮ್ಮ ಹೆಗ್ಗಡೆ 47ನೇ ಮಹಿಳಾ ಗ್ರಂಥ ಬಹುಮಾನಕ್ಕೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾದಿಂದ 2023ನೇ ವರ್ಷದ ಮಹಿಳಾ ಶ್ರೇಷ್ಠ ಕನ್ನಡ ಕೃತಿಗಳಿಗೆ “ಮಾತೋಶ್ರೀ...

ಗಿರಡ್ಡಿ ಗೋವಿಂದರಾಜ ವಿಮರ್ಶಾ ಪ್ರಶಸ್ತಿಗೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಡಾ. ಗಿರಡ್ಡಿ ಗೋವಿಂದರಾಜ ಫೌಂಡೇಶನ್ ನಿಂದ “ವಿಮರ್ಶಾ ಪ್ರಶಸ್ತಿ"ಗೆ ವಿಮರ್ಶಾ ಕೃತಿಗಳನ್ನು ಆಹ್ವಾ...