ಪತ್ರಕರ್ತೆ ರಾಜಲಕ್ಷ್ಮೀ ಯು.ಬಿ. ಅವರಿಗೆ 2020ನೇ ಸಾಲಿನ ಪ್ರತಿಷ್ಠಿತ ಖಾದ್ರಿ ಶಾಮಣ್ಣ ಪ್ರಶಸ್ತಿ

Date: 06-06-2020

Location: ಬೆಂಗಳೂರು


ಪತ್ರಿಕೋದ್ಯಮದಲ್ಲಿ ಸಾಧನೆ ಮಾಡಿರುವವರಿಗೆ ಕೊಡಮಾಡುವ ಪ್ರತಿಷ್ಠಿತ ಖಾದ್ರಿ ಶಾಮಣ್ಣ ಪ್ರಶಸ್ತಿಗೆ ಪತ್ರಕರ್ತೆ ರಾಜಲಕ್ಷ್ಮೀ ಯು.ಬಿ. ಅವರಿಗೆ ಸಂದಿದೆ. 

ರಾಜಲಕ್ಷ್ಮಿ ಯು. ಬಿ. ಅವರು ಸ್ನಾತಕೋತ್ತರ ಪದವೀಧರೆ. ತಂದೆ ಯು. ಬಿ. ರಾಮರಾವ್, ತಾಯಿ ಬಿ. ವನಜಾಕ್ಷಿ. ಓದಿದ್ದು  ಡಿಪ್ಲೊಮಾ ಇನ್ ಜರ್ನಲಿಸಂ, ಡಿಪ್ಲೊಮಾ ಇನ್‌ ಕಮರ್ಶಿಯಲ್ ಪ್ರಾಕ್ಟಿಸ್ (ಡಿ.ಲಿಟ್) ನಂತರ 'ತರಂಗ' ವಾರಪತ್ರಿಕೆಯಲ್ಲಿ ಕಾರ್ಯನಿರ್ವಾಹಕ ಸಂಪಾದಕಿ ಹಾಗೂ  ಪತ್ರಿಕೋದ್ಯಮದಲ್ಲಿ 37 ವರ್ಷದ ಸುದೀರ್ಘ ಅನುಭವ ಹೊಂದಿದ್ದಾರೆ. 

‘ಸಾಹಿತಿ ಕೊರಡ್ಕಲ್ ಶ್ರೀನಿವಾಸರಾವ್, ನೂಪುರ - (ಮಾನವೀಯ ನುಡಿಚಿತ್ರಗಳ ಸಂಕಲನ), ಶಂಖನಾದ (ಕ್ಷೇತ್ರದರ್ಶನ), ನಿನಾದ, ಒಂದು ಬೈಲ್’ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಅವರ ಪತ್ರಿಕಾ ಕ್ಷೇತ್ರದ ಸೇವೆಗಾಗಿ ಮಂತ್ರಾಲಯದ 'ಸುಜಯಶ್ರೀ' ಪ್ರಶಸ್ತಿ, ಪಾಟೀಲ ಪುಟ್ಟಪ್ಪ ಪ್ರಶಸ್ತಿ, ಬೆಸ್ಟ್ ಔಟ್ ಸ್ಯಾಂಡಿಂಗ್ ಪರ್ಸನಾಲಿಟಿ (ಜೇಸೀ ಪುರಸ್ಕಾರ) ಹಾಗೂ ಅವರ 'ನೂಪುರ' ಕೃತಿಗೆ ಕರ್ನಾಟಕ ಲೇಖಕಿಯರ ಸಂಘದ ಕಮಲಾರಾಮಸ್ವಾಮಿ ಪ್ರಶಸ್ತಿ, ಕರ್ನಾಟಕ ಮಹಿಳಾ ವಿಶ್ವವಿದ್ಯಾನಿಲಯದ ಎಸ್.ಎಫ್.ಉಪ್ಪಿನ ಐಎಸ್‌ಎಫ್‌ ಪ್ರಶಸ್ತಿ, ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿಗಳು ಲಭಿಸಿವೆ. 

MORE NEWS

ಎಸ್.ಜ್ಯೋತಿ ಅವರ ‘ಅತ್ತೆ ನಿಮಗೊಂದು ಪ್ರಶ್ನೆ’ ಪುಸ್ತಕ ಬಿಡುಗಡೆ ಸಮಾರಂಭ

19-03-2024 ಬೆಂಗಳೂರು

ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...

ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರಬಂದಗಳಿಗೆ ಆಹ್ವಾನ

17-12-2023 ಬೆಂಗಳೂರು

ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...

ಸಾಂಸ್ಕೃತಿಕ ಸಂವಿಧಾನದ ಅರಿವು ಅಗತ್ಯ : ಪ್ರೊ.ನಟರಾಜ ಬೂದಾಳು

06-12-2023 ಬೆಂಗಳೂರು

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...