ಪೆರಮಾತಿನ ಶಿಕ್ಶಣ: ಕೆಲ ಸಮಸ್ಯೆಗಳು-ಶಿಕ್ಶಣದಲ್ಲಿ ಸೋಲು

Date: 02-02-2025

Location: ಬೆಂಗಳೂರು


"ಬಾರತದಾಗ ಇನ್ನೂ ಎಲ್ಲ ಮಕ್ಕಳು ಶಾಲೆಯ ಮೆಟ್ಟಿಲನ್ನು ಏರಿಲ್ಲ. ಶಾಲೆಗೆ ಬಂದ ಹೆಚ್ಚಾನುಹೆಚ್ಚು ಮಕ್ಕಳು ಪ್ರಾತಮಿಕ ಮತ್ತು ಇನ್ನೂ ಹೆಚ್ಚೆಂದರೆ ಪ್ರವುಡ ಶಾಲಾ ಹಂತದವರೆಗೆ ಮಾತ್ರ ಶಾಲೆಯಲ್ಲಿ ಉಳಿಯುತ್ತಾರೆ. ಪ್ರವುಡ ಶಾಲಾ ಹಂತದ ನಂತರ ಅರ‍್ದದಶ್ಟು ಮಕ್ಕಳು ಶಾಲೆಯನ್ನು ಬಿಟ್ಟುಬಿಡುತ್ತಾರೆ," ಎನ್ನುತ್ತಾರೆ ಬಸವರಾಜ ಕೋಡಗುಂಟಿ. ಅವರು ತಮ್ಮ ‘ತೊಡೆಯಬಾರದ ಲಿಪಿಯ ಬರೆಯಬಾರದು’ ಅಂಕಣದಲ್ಲಿ ‘ಪೆರಮಾತಿನ ಶಿಕ್ಶಣ: ಕೆಲ ಸಮಸ್ಯೆಗಳು-ಶಿಕ್ಶಣದಲ್ಲಿ ಸೋಲು’ ಕುರಿತು ಬರೆದಿದ್ದಾರೆ.

ಈ ಮೇಲೆ ಮಾತನಾಡಿದ ಶಾಲೆ ಮತ್ತು ಶಿಕ್ಶಣದಲ್ಲಿ ನಕಾರಾತ್ಮಕ ಮನೋಬಾವ ಬೆಳೆಸಿಕೊಳ್ಳುವುದು ಕ್ರಮೇಣ ಬೆಳೆದು ಮಕ್ಕಳು ಶಾಲೆ ಬಿಡುವ ಸ್ತಿತಿಗೆ ಬರುತ್ತದೆ. ಜಗತ್ತಿನಾದ್ಯಂತ ಶಾಲೆ ಬಿಟ್ಟ ಮಕ್ಕಳ ಅದ್ಯಯನ ಮಾಡಿದ ಸಂಶೋದನೆಗಳು ಹೆಚ್ಚಾನುಹೆಚ್ಚು ಶಾಲೆ ಬಿಟ್ಟ ಸಂದರ‍್ಬಗಳಲ್ಲಿ ಮಕ್ಕಳಿಗೆ ತಾಯ್ಮಾತಿನ ಶಿಕ್ಶಣ ಸಿಕ್ಕಿಲ್ಲ ಎಂಬುದನ್ನು ತೋರಿಸಿವೆ. ಅಂದರೆ ಮಕ್ಕಳು ಶಾಲೆ ಬಿಡುವುದಕ್ಕೆ ಮುಕ್ಯವಾದ ಒಂದು ಕಾರಣ ಪೆರಮಾತಿನ ಶಿಕ್ಶಣ. ಮಕ್ಕಳ ಮಾನಸಿಕತೆಯನ್ನು ಪೆರಮಾತಿನ ಶಿಕ್ಶಣ ಹೇಗೆ ನಕಾರಾತ್ಮಕ ಬೆಳವಣಿಗೆಗೆ ತಳ್ಳುತ್ತದೆ ಎಂಬುದನ್ನು ಈ ಮೊದಲು ಸಾಕಶ್ಟು ಮಾತನಾಡಿದೆ. ಇದರಿಂದಾಗಿ ಸಹಜವಾಗಿಯೆ ಮಕ್ಕಳು ಮಾನಸಿಕ ಉಲ್ಲಸಿತವಲ್ಲದ ವಾತಾವರಣದಿಂದ ಹೊರಬರಲು ಕಾತರಿಸುತ್ತಿರುತ್ತಾರೆ. ಹೀಗಾಗಿಯೆ ಬಹು ದೊಡ್ಡ ಸಂಕೆಯ ಮಕ್ಕಳು ಶಾಲೆ ಬಿಟ್ಟು ಹೋಗುತ್ತಾರೆ.

ಬಾರತದಾಗ ಇನ್ನೂ ಎಲ್ಲ ಮಕ್ಕಳು ಶಾಲೆಯ ಮೆಟ್ಟಿಲನ್ನು ಏರಿಲ್ಲ. ಶಾಲೆಗೆ ಬಂದ ಹೆಚ್ಚಾನುಹೆಚ್ಚು ಮಕ್ಕಳು ಪ್ರಾತಮಿಕ ಮತ್ತು ಇನ್ನೂ ಹೆಚ್ಚೆಂದರೆ ಪ್ರವುಡ ಶಾಲಾ ಹಂತದವರೆಗೆ ಮಾತ್ರ ಶಾಲೆಯಲ್ಲಿ ಉಳಿಯುತ್ತಾರೆ. ಪ್ರವುಡ ಶಾಲಾ ಹಂತದ ನಂತರ ಅರ‍್ದದಶ್ಟು ಮಕ್ಕಳು ಶಾಲೆಯನ್ನು ಬಿಟ್ಟುಬಿಡುತ್ತಾರೆ. ಉನ್ನತ ಹಂತದ ಶಿಕ್ಶಣಕ್ಕೆ ಬರುವವರ ಸಂಕೆ ತುಂಬಾ ಕಡಿಮೆ ಇದೆ. ಶಾಲೆಯನ್ನು ಬಿಡುವ ಮಕ್ಕಳ ಸಂಕೆ ದೊಡ್ಡ ಪ್ರಮಾಣದಲ್ಲಿ ಇದೆ. ಹೀಗೆ ಶಾಲೆಯನ್ನು ಬಿಟ್ಟು ಹೋಗುವ ಮಕ್ಕಳ ಸಂಕೆ ಹೆಚ್ಚಿರುವ ವಿವಿದ ಪ್ರದೇಶಗಳಲ್ಲಿ ಅದ್ಯಯನ ಮಾಡಿರುವ ಸಂಶೊದನೆಗಳು ಕಂಡುಕೊಂಡ ವಾಸ್ತವವೆಂದರೆ ಶಾಲೆ ಬಿಟ್ಟ ಮಕ್ಕಳಿಗೆ ಹೆಚ್ಚಾಗಿ ಪೆರಮಾತಿನ ಶಿಕ್ಶಣವನ್ನು ಕೊಡಲಾಗುತ್ತಿದೆ. ಮನೆಯಲ್ಲಿ, ಮನೆಯ ಸುತ್ತಲಿನ ಪರಿಸರದಲ್ಲಿ ಮಕ್ಕಳು ಅನುಬವಿಸುವ ಯಾವೂ ಶಾಲೆಯಲ್ಲಿ ದೊರೆಯುವುದಿಲ್ಲ. ಬದಲಿಗೆ ಒಂದು ಬಿನ್ನವಾದೊಂದು ಜಗತ್ತಿಗೆ ಮಕ್ಕಳನ್ನು ದೂಡಿದಂತಾಗುತ್ತದೆ.

ಇದರಿಂದ ಮಕ್ಕಳು ಮಾನಸಿಕವಾಗಿ ಸಹಜವಾಗಿಯೆ ವಿಚಲಿತರಾಗುತ್ತಾರೆ. ತಮ್ಮ ಸಾಮರ್‍ತ್ಯವನ್ನು ಕಳೆದುಕೊಂಡುಬಿಡುತ್ತಾರೆ. ಹೀಗಾಗಿ ಶಿಕ್ಶಣ, ಶಾಲೆ, ಪಟ್ಯ ಇವುಗಳಲ್ಲಿ ಆಸಕ್ತಿಯನ್ನೆ ಬೆಳೆಸಿಕೊಳ್ಳುವುದಿಲ್ಲ, ಇನ್ನು ಕೆಲವು ಸಂದರ‍್ಬಗಳಲ್ಲಿ ಆಸಕ್ತಿ ಕಡಿಮೆಯಾಗುತ್ತದೆ. ಶಿಕ್ಶಣದಲ್ಲಿ ಆಸಕ್ತಿ ಇಲ್ಲದ ಸ್ತಿತಿಯಲ್ಲಿ ಏನನ್ನೆ ಕೊಟ್ಟರೂ ಸಶಕ್ತವಾಗಿ ಮಕ್ಕಳು ಅದನ್ನು ಪಡೆದುಕೊಳ್ಳುವುದಿಲ್ಲ. ಹೀಗೆ ಮಕ್ಕಳು ಶಿಕ್ಶಣದಿಂದ ವಿಮುಕರಾಗುತ್ತಾರೆ. ಈ ಶಿಕ್ಶಣವಿಮುಕಿ ನಿಲುವು ನಿದಾನವಾಗಿ ಅವರ ಬದುಕನ್ನು ಇಡಿಯಾಗಿ ಆವರಿಸಿಕೊಳ್ಳುತ್ತದೆ. ಇದು ಬದುಕಿನ ಸೋತ ಸ್ತಿತಿಗೆ ಕಾರಣವಾಗುತ್ತದೆ, ಶಿಕ್ಶಣವನ್ನು ಸೂಕ್ತವಾಗಿ ಪಡೆದುಕೊಳ್ಳಲಾಗದ ಮಕ್ಕಳು ಇತರ ಮಕ್ಕಳೆದುರು ಸೋತವರಂತೆ ನಿಲ್ಲುವುದು ಮಕ್ಕಳ ಮನೊಸ್ತಯರ‍್ಯವನ್ನು ಕುಂಟಿತಗೊಳಿಸುತ್ತದೆ. ಇದು ಸಹಜವಾಗಿಯೆ ಅವರ ಇಡಿಯ ಬದುಕಿನ ಮೇಲೆ ಪ್ರಬಾವ ಬೀರುತ್ತದೆ. ಇದರಿಂದ ತಮ್ಮ ಸಹಜ ಸಾಮರ್‍ತ್ಯವನ್ನೂ ಮಕ್ಕಳು ಕಳೆದುಕೊಳ್ಳುವ ಸಾದ್ಯತೆ ಇರುತ್ತದೆ.

ಬಾರತದಲ್ಲಿ ಇಂಗ್ಲೀಶ್ ಮಾದ್ಯಮ ಮೋಹದಿಂದ ಮತ್ತು ಸಣ್ಣ ಸಣ್ಣ ಬಾಶೆಗಳಲ್ಲಿ ಶಿಕ್ಶಣ ಇಲ್ಲದಿರುವ ಸ್ತಿತಿಯಿಂದಾಗಿ ಹೆಚ್ಚಿನ ಮಕ್ಕಳು ಪೆರಮಾತಿನ ಶಿಕ್ಶಣವನ್ನು ಪಡೆದುಕೊಳ್ಳುತ್ತಿದ್ದಾರೆ. ಪ್ರಾತಮಿಕ ಶಾಲಾ ಹಂತದಲ್ಲಿಯೆ ಹೆಚ್ಚಿನ ಮಕ್ಕಳು ಶಾಲೆ ಬಿಡುತ್ತಾರೆ. ಅದರಲ್ಲಿಯೂ ಮುಕ್ಯವಾಗಿ ಸಾಮಾಜಿಕ ರಚನೆ ತುಂಬಾ ಬಿನ್ನವಾಗಿರುವ ಬುಡಕಟ್ಟು ಮಕ್ಕಳು ಹೆಚ್ಚಿನವರು ಶಾಲೆಯನ್ನು ಪ್ರಾತಮಿಕ ಶಾಲೆಯ ಆರಂಬದಲ್ಲಿಯೆ ಬಿಡುವುದು ಅತ್ಯಂತ ಸಾಮಾನ್ಯ. ಹಲವು ಬಾರಿ ಹೀಗೆ ಶಾಲೆ ಬಿಟ್ಟ ಮಕ್ಕಳು ಸಾಕಶ್ಟು ಚುರುಕುತನವನ್ನು ಹೊಂದಿರುವುದನ್ನು ಕಾಣಬಹುದು. ಆದರೆ, ಅವರ ಚುರುಕುತನವನ್ನು ಗುರುತಿಸುವ ಸಾಮರ್‍ತ್ಯ ಪೆರಮಾತಿನ ಶಿಕ್ಶಣಕ್ಕೆ ಇಲ್ಲವೆ ಪೆರಮಾತಿನ ಶಿಕ್ಶಣ ವ್ಯವಸ್ತೆಗೆ ಇರುವುದಿಲ್ಲ ಮತ್ತು ಆ ಚುರುಕುತನದಿಂದ ಶಿಕ್ಶಣದಲ್ಲಿ ಮುಂದುವರೆಯುವುದಕ್ಕೆ ಮಕ್ಕಳಿಗೆ ಸಾದ್ಯವಾಗಿರುವುದಿಲ್ಲ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಬೇಕು. ಸಮಾಜದ ಹಲವರ ಬದುಕಿನಲ್ಲಿ ಬಿಕ್ಕಟ್ಟುಗಳನ್ನು ದಿನವೂ ಎದುರುಗೊಳ್ಳುವ ಸ್ತಿತಿ ಇದ್ದೆ ಇರುತ್ತದೆ. ಅವರಲ್ಲಿ ಚುರುಕುತನದ ಮಕ್ಕಳನ್ನೂ ಸಹಜವಾಗಿ ಎಲ್ಲರೂ ನೋಡಿರುತ್ತಾರೆ. ಆದರೆ ಈ ಮಕ್ಕಳೂ ಶಾಲೆಯಿಂದ ಶಿಕ್ಶಣವಿಮುಕಿಗಳಾಗಿ ಹೊರಬಿದ್ದವರು. ಇದಕ್ಕೆ ಕಾರಣ ಇಡಿಯಾಗಿ ತಮ್ಮದಲ್ಲದ ಇನ್ನಾವುದೊ ಒಂದು ಜಗತ್ತಿನಲ್ಲಿ ಬಂದು ಬಿದ್ದ ಅನುಬವಕ್ಕೆ ಮಕ್ಕಳು ಬರುತ್ತವೆ. ಇದು ಸಹಜವಾಗಿಯೆ ಮಕ್ಕಳಿಗೆ ಉಸಿರು ಬಿಗಿ ಹಿಡಿದ ಸ್ತಿತಿಗೆ ತಂದು ನಿಲ್ಲಿಸುತ್ತದೆ. ಉಸಿರಾಡುವ ಸಹಜ ಸ್ತಿತಿಗೆ ಮರಳುವ ತವಕ ವಯೋಸಹಜ ತವಕಗಳನ್ನು ಇಮ್ಮಡಿಸಿ ಶಾಲೆ ಬಿಡಲು ಕಾರಣಗಳಾಗುತ್ತವೆ.

ಪ್ರಾತಮಿಕ ಹಂತದ ಒಂದೆರಡು ವರುಶಗಳ ಶಾಲೆಯನ್ನು ಮುಂದುವರೆಸುವ ಮಕ್ಕಳು ಆನಂತರ ಪ್ರತಿವರುಶ ಒಬ್ಬೊಬ್ಬರಾಗಿ ಶಾಲೆ ಬಿಡುತ್ತಲೆ ಹೋಗುತ್ತಾರೆ. ದೊಡ್ಡ ನಗರಗಳ ಕತೆಯನ್ನು ಹೊರತುಪಡಿಸಿ ಓದು-ಬರಹ ಬಲ್ಲ ಬಹುತೇಕ ಬಾರತೀಯರು ತಮ್ಮ ಗೆಳೆಯರು ವಿವಿದ ಹಂತಗಳಲ್ಲಿ ಶಾಲೆ ಬಿಟ್ಟುಹೋಗಿರುವುದನ್ನು ನೆನಪಿಸಿಕೊಳ್ಳಬಹುದು. ಮಕ್ಕಳು ಶಾಲೆ ಬಿಡದಂತೆ ಒತ್ತಾಯದಿಂದ ಉಳಿಸಿಕೊಂಡು ಮುಂದುವರೆಸಿಕೊಂಡು ಬಂದಾಗಲೂ ಹೆಚ್ಚಿನ ಮಕ್ಕಳು ಮೊದಲ ಸಾಮಾನ್ಯ ಪರಿಕ್ಶೆಯವರೆಗೆ ಮುಂದುವರೆಯುತ್ತಾರೆ. ಪರಿಕ್ಶೆಯ ಪಲಿತಾಂಶವನ್ನೂ ನೋಡಲು ಹೋಗದೆ ಶಾಲೆಯಿಂದ ದೂರವಾಗುವವರೂ, ಪಾಸಾಗಿದ್ದರೂ ಶಿಕ್ಶಣ ಮುಂದುವರೆಸದ ಮಕ್ಕಳೂ ಹಲವರು ಸಿಗುತ್ತಾರೆ. ಶಾಲೆ ಬಿಡುವುದಕ್ಕೆ ಹಲವು ಕಾರಣಗಳಿರುವುದು ನಿಜವಾದರೂ ಅದಕ್ಕೆ ಶಾಲೆಯೂ ಕೂಡ ಒಂದು ಮಹತ್ವದ ಕಾರಣ ಎಂಬುದನ್ನು ಗಮನಿಸಬೇಕು. ಶಾಲೆಗೆ ಬಂದ ಅರ‍್ದಕ್ಕೂ ಹೆಚ್ಚು ಮಕ್ಕಳು ಮೊದಲ ಸಾಮಾನ್ಯ ಪರಿಕ್ಶೆಯಿಂದ ಶಿಕ್ಶಣವನ್ನು ಬಿಟ್ಟುಬಿಡುತ್ತಾರೆ. ಈ ಮೇಲೆ ಹೇಳಿದಂತೆ ಹೀಗೆ ಶಾಲೆ ಬಿಟ್ಟ ಮಕ್ಕಳಲ್ಲಿ ಬದುಕಿನಲ್ಲಿ ಯಶಸ್ಸನ್ನು ಪಡೆದವರ ಸಂಕೆಯೂ ದೊಡ್ಡ ಪ್ರಮಾಣದಲ್ಲಿ ಇರುತ್ತದೆ. ಆದರೆ ಅವರ ಈ ಸಾಮರ್‍ತ್ಯ ಪೆರಮಾತಿನ ಶಿಕ್ಶಣ ವ್ಯವಸ್ತೆಯಲ್ಲಿ ಮಾನ್ಯತೆಯನ್ನು ಪಡೆದಿರುವುದಿಲ್ಲ. ಹೀಗಾಗಿ ಶಾಲೆಯಿಂದ ಅವರು ಹೊರಗುಳಿಯುತ್ತಾರೆ.

ಈ ಅಂಕಣದ ಹಿಂದಿನ ಬರಹಗಳು:
ಪೆರಮಾತಿನ ಶಿಕ್ಶಣ: ಕೆಲ ಸಮಸ್ಯೆಗಳು-ವಿಶಯದಲ್ಲಿ ಸೋಲು
ಆರ‍್ತಿಕ ಅಬಿರುದ್ದಿ ಮತ್ತು ತಾಯ್ಮಾತಿನ ಶಿಕ್ಶಣ
ಬಾಶೆಗಳ ಸಾವು ಮತ್ತು ತಾಯ್ಮಾತಿನ ಶಿಕ್ಶಣ
ಬಹುತ್ವ, ಬಹುಬಾಶಿಕತೆ ಮತ್ತು ತಾಯ್ಮಾತಿನ ಶಿಕ್ಶಣ

ಸಮಾನತೆಯ ವಿಚಾರ ಮತ್ತು ತಾಯ್ಮಾತಿನ ಶಿಕ್ಶಣ
ತಾಯ್ಮಾತಿನ ಶಿಕ್ಶಣ ಯಾಕೆ?
ತಾಯ್ಮಾತಿನ ಶಿಕ್ಶಣ: ಎಲ್ಲಿತನಕ
ಮಗುವಿನ ಮನೋವಿಕಾಸ, ಸಾಮಾಜಿಕತೆ ಮತ್ತು ಕಲಿಕೆ
ಮಗು ಮತ್ತು ಬಾಶಾಗಳಿಕೆ
ತಾಯ್ಮಾತು-ತಾಯಿ ಮಾತು-ಗುರ‍್ತಿಕೆ
ಮನುಶ್ಯ ದೇಹರಚನೆ ಮತ್ತು ಬಾಶಾ ಗಳಿಕೆ
ಬಾಶೆ ಮತ್ತು ಮಾತು
ಲಂಬಾಣಿ ಮತ್ತು ಇತರ ಉತ್ತರ ಬಾರತದ ಬಾಶೆಗಳ ಸಹಸಂಬಂದ
ಮಲಯಾಳಂ, ಕೊಡವ ಮತ್ತು ಇತರ ದ್ರಾವಿಡ ಬಾಶೆಗಳೊಂದಿಗನ ಸಹಸಂಬಂದ
ಮರಾಟಿ, ಉರ‍್ದು ಮತ್ತು ಇತರ ದಕ್ಶಿಣದ ಬಾಶೆಗಳೊಡನೆಯ ಸಹಸಂಬಂದ
ಕನ್ನಡ ಮತ್ತು ತಮಿಳು ಸಹಸಂಬಂದ
ತುಳುವಿನೊಡನೆ ಸಹಸಂಬಂದ
ಕನ್ನಡ ಮತ್ತು ತೆಲುಗು ಸಹಸಂಬಂದ
ಬಾರತೀಯ ಇಂಗ್ಲೀಶು
ಇಂಗ್ಲೀಶು ಕನ್ನಡ ಬದುಕಿನೊಳಗೆ
ಇಂಗ್ಲೀಶೆಂಬ ಜಗತ್ತು ಕನ್ನಡ ಜಗತ್ತಿನೊಳಗೆ
ಪರ‍್ಶಿಯನ್ ನಡೆ-ಉರ‍್ದು ಬೆಳವಣಿಗೆ
ಅರಾಬಿಕ್-ಪರ‍್ಶಿಯನ್ ಕನ್ನಡ ಜಗತ್ತಿನೊಳಗೆ
ಸಕ್ಕದದ ಉಬ್ಬರವಿಳಿತ
ಅಸೋಕನ ಬರಹ-ಪಾಗದ-ಪಾಲಿ-ಪ್ರಾಕ್ರುತ ಮತ್ತು ಕನ್ನಡ
ಕನ್ನಡಮುಂ ಸಕ್ಕದಮುಂ
ಕನ್ನಡಮುಂ ಪಾಗದಮುಂ
ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?
ಬೇರೆ ಬಾಶೆಗಳ ನಂಟಿಲ್ಲದೆ ಬದುಕಬಹುದೆ?
ಎರಡು ಬಾಶೆಗಳ ನಡುವೆ ನಂಟು ಹೇಗೆ ಸಾಮಾಜಿಕ ಚಲನೆಯನ್ನು ಪಡೆದುಕೊಳ್ಳುತ್ತದೆ?
ವಿಶ್ವ ತಾಯ್ಮಾತಿನ ದಿವಸ
ಬಾಶೆಗಳ ನಡುವಿನ ನಂಟನ್ನು ಪರಿಬಾವಿಸುವುದು
ಕಲ್ಲು ಕಲ್ಲು ಹೇಗಾಯಿತು, ಯಾಕಾಯಿತು, ಇನ್ನೇನಾಯಿತು?
ಪ್ರತಿ ಪದಕೂ ಒಂದು ಚರಿತೆ ಇದೆ, ಮನುಶ್ಯರಿಗೆ ಮಾತ್ರವಲ್ಲ
ಹೊಲದಲ್ಲಿ ಕನ್ನಡ ಮತ್ತು ಇತಿಹಾಸದ ಅರಿವು
ಅಡುಗೆಮನೆಯ ಬಾಶಿಕ ಜಗತ್ತು ಇಲ್ಲವೆ ಅಡುಗೆಮನೆ ಕನ್ನಡ
ಮನೆಯೊಳಗೆ ಬಾಶಿಕ ಅನುಸಂದಾನ
ಪದಕೋಶದ ಬದುಕು
ಕನ್ನಡ ಪದಕೋಶ ಎಶ್ಟು ದೊಡ್ಡದು?
ಪದಕೋಶ: ಶಬ್ದಪಾರಮಾರ‍್ಗಮಶಕ್ಯಂ
ಕನ್ನಡ ಒಳನುಡಿಗಳು ಹೇಗೆ ಬಿನ್ನ?
ಕನ್ನಡ ಒಳನುಡಿಗಳ ಪಸರಿಕೆ ಅರಿಯುವುದು ಹೇಗೆ?
ಕನ್ನಡ ಒಳನುಡಿಗಳು ಎಶ್ಟು ಹಳೆಯವು?
ದರುಶನ-ನೋಡು/ನೋಡು-ದರುಶನ
ಬಕ್ತ-ಬಕುತ: ಕನ್ನಡ ಮತ್ತು ಸಂಸ್ಕ್ರುತಗಳ ನಡುವಿನ ಗುದುಮುರಿಗಿ
ಒಡೆ-ಅಡೆ-ಅರೆ
ವಾಕ್ಯಪ್ರಕಾರಗಳು
ವಿವಿದ ಬಗೆಯ ವಾಕ್ಯಗಳು
ಪೂರ‍್ಣ ಮತ್ತು ಅಪೂರ‍್ಣ ಕ್ರಿಯಾಪದಗಳು
ವಾಕ್ಯದಲ್ಲಿನ ಗಟಕಗಳ ನಡುವಿನ ಒಪ್ಪಂದ
ವಾಕ್ಯದ ಅನುಕ್ರಮ
ವಾಕ್ಯದ ಗಟಕಗಳ ನಡುವಿನ ಸಂಬಂದ
ವಾಕ್ಯದ ಗಟಕಗಳು
ಕಿರುವಾಕ್ಯಗಳು
ವಾಕ್ಯವೆಂಬ ಮಾಯಾಜಾಲ
ಕನ್ನಡ ಸಂದಿಗಳು
ಸಂದಿಯ ಕೂಟ
‘ಮನಿ’, ’ಮನೆ’, ‘ಮನ’, ‘ಮನಯ್’
ಕನ್ನಡದ ವಿಬಕ್ತಿಗಳು
ಕಾರಕ-ವಿಬಕ್ತಿ
ಕನ್ನಡದಲ್ಲಿ ವಚನ ವ್ಯವಸ್ತೆ
ಬಹು-ವಚನ
ಕನ್ನಡದಲ್ಲಿ ಲಿಂಗವು ತೆರತೆರ
ಲಿಂಗಮೆನಿತು ತೆರಂ
ಲಿಂಗವೆಂದರೆ
ಕಾಲದ ಕಟ್ಟಳೆ
ತೋರುಗವೆಂಬ ಮಾಯಕ
ಕನ್ನಡದಾಗ ಕಾಲನಿರ‍್ವಹಣೆ
ಏನೇನನ್ನು ಪ್ರಶ್ನಿಸುವುದು?
ಕನ್ನಡದಾಗ ಪ್ರಶ್ನಿಸುವುದು
ಕನ್ನಡದ ಅಂಕಿಗಳು
ಎಣಿಸುವ ಕಲೆ
ಕನ್ನಡದಾಗ ಎರಡು ಜೋಡಿ ಪ್ರತಮ ಪುರುಶ ಸರ‍್ವನಾಮಗಳು
ಸರ‍್ವನಾಮಗಳು
ವಿಶೇಶಣಗಳು
ಬೇರೆ ಭಾಷೆಗಳಿಂದ ಪಡೆದುಕೊಳ್ಳುವುದು ಮತ್ತು ಪದಕೋಶದ ಬೆಳವಣಿಗೆ
ದ್ವನಿ ಬದಲಾವಣೆ ಮತ್ತು ಪದಕೋಶದ ಬೆಳವಣಿಗೆ
ಸಾಮಾಜಿಕ ಬೆಳವಣಿಗೆ ಮತ್ತು ಪದಕೋಶದ ಬೆಳವಣಿಗೆ
ಪದಕೋಶದ ಬೆಳವಣಿಗೆ: ಸಮಾಸ ಪ್ರಕ್ರಿಯೆ
ಪದಕೋಶದ ಬೆಳವಣಿಗೆ: ಪ್ರತ್ಯಯಗಳ ಸೇರುವಿಕೆ
ಪದಕೋಶದ ಬೆಳವಣಿಗೆ: ಕೆಲವು ಹಳೆಯ ಪ್ರಕ್ರಿಯೆಗಳು
ಕನ್ನಡದಾಗ ಹೊಸಪದಗಳನ್ನು ಹುಟ್ಟಿಸುವುದು
ಪದರಚನೆಯಲ್ಲಿ ಗಿಡ್ಡ ಸ್ವರ ಮತ್ತು ಉದ್ದ ಸ್ವರದ ಪಾತ್ರ
ಕ್ರಿಯಾಪದಗಳು
ನಾಮಪದಗಳು
ಪದ ರಚನೆಯ ಗಟಕಗಳು
ಪದಗಳು-ಯಾವಯಾವ ಬಗೆಯವು?
ಎಶ್ಟು ಅಕ್ಶರಗಳ ಪದಗಳು?
ದ್ವನಿ ಎಂಬ ಜಗತ್-ವಲಯ
ಇಂದಿನ ಬಳಕೆ ಕನ್ನಡಗಳ ದ್ವನಿವಿಶಿಶ್ಟತೆ
ಕನ್ನಡದಾಗ ಗ್ ಜ್ ಡ್ ದ್ ಬ್ ದ್ವನಿಗಳು - ಇತ್ತೀಚಿನ ಬೆಳವಣಿಗೆ
ನಾಲಿಗೆ ಮಡಿಚಿ ಉಚ್ಚರಿಸುವ ದ್ವನಿಗಳು
ಕನ್ನಡದ ವ್ಯಾಪಕ ಬಳಕೆಯ ದ್ವನಿಗಳು ಅ್ಯ-ಆ್ಯ
ಅಪರೂಪದ ವರ‍್ತ್ಸ-ತಾಲವ್ಯ ದ್ವನಿಗಳು : ‘ಚ್’ ಮತ್ತು ‘ಜ್’
ಊಶ್ಮ ದ್ವನಿಗಳೆನಿಸಿಕೊಂಬ ಸ್-ಶ್
ಗಿಡ್ಡಕ್ಕರ-ಉದ್ದಕ್ಕರ ನಡುವಿನ ಗೊಂದಲ
’ಹ್’ ದ್ವನಿಯ ಕತೆ
ದ್ವನಿ ಸಾತತ್ಯ- ಸ್ವರ-ವ್ಯಂಜ್ಯನ
ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದು ಹೇಗೆ?
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-2
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-1
ಬಾಶೆಯ ಬೆಳವಣಿಗೆ-ಬದಲಾವಣೆ
ಮೂಲಕನ್ನಡ
ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಕನ್ನಡದಾಗ ದ್ವನಿವಿಗ್ನಾನ
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು

MORE NEWS

ಪ್ರೇಮದ ಹೊಸ ಆಖ್ಯಾನದ ಕವಿತೆಗಳು

14-02-2025 ಬೆಂಗಳೂರು

"ಬದುಕಿನ ಹಲವು ಆಯಾಮಗಳ ಮೂಲಕ ಪ್ರೇಮವನ್ನು ನೋಡುತ್ತವೆ. ಇಲ್ಲಿ ದುಃಖ, ವಿಷಾದ, ನೋವು, ಸಂಕಟ, ಸಂಭ್ರಮ ಒಂದಕ್ಕೊಂದು...

ಶ್ರಾದ್ಧ ಕಥೆಯಲ್ಲಿ ಕಾಣುವ ಆಚಾರದ ದ್ವಂದ್ವ ನಿಲುವು

13-02-2025 ಬೆಂಗಳೂರು

"ಶ್ರೀನಿವಾಸನ ಮನೆಯಲ್ಲಿ ತಂದೆಯ ಶ್ರಾದ್ಧ ಕಾರ್ಯ ಕುರಿತು ತಾಯಿ ಮಗನಲ್ಲಿ ತಿಳಿಸಿದರು ಕೂಡ ಅದರ ಬಗ್ಗೆ ಇದ್ದ ಅಸಡ್ಡ...

ಪೆರಮಾತಿನ ಶಿಕ್ಶಣ: ಕೆಲ ಸಮಸ್ಯೆಗಳು-ಬದುಕಿನಲ್ಲಿ ಸೋಲು

12-02-2025 ಬೆಂಗಳೂರು

"ಪೆರಮಾತಿನ ಶಿಕ್ಶಣ ಮಕ್ಕಳನ್ನು ಅವರದಲ್ಲದ ಇನ್ನೊಂದಕ್ಕೆ ಕಸಿ ಮಾಡುವುದರಿಂದ ಇಂತದೆಲ್ಲ ಅನಾಹುತಗಳ ಸಾದ್ಯತೆಗಳನ್ನು...