ಫೊಟೋಗ್ರಫಿಯನ್ನು ಸಮಕಾಲೀನ ಆರ್ಟ್ ಮಾಡಿದ ವಿಕ್ ಮ್ಯೂನಿಸ್

Date: 12-10-2021

Location: ಬೆಂಗಳೂರು


ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯುವ ಅಂಕಣ 'ಈಚೀಚೆ, ಇತ್ತೀಚೆ'. ಪ್ರತಿ ವಾರ ಪ್ರಕಟವಾಗುವ ಈ ಸರಣಿಯಲ್ಲಿ ಈ ಬಾರಿ ಅಮೆರಿಕ ಮೂಲದ ಕಾನ್ಸೆಪ್ಚುವಲ್ ಆರ್ಟ್ ಕಲಾವಿದ ವಿನ್ಸೆಂಟ್ ಜೋಸ್ ಡೆ ಆಲಿವೆರಾ ಮ್ಯೂನಿಸ್ ಕಲಾಬದುಕಿನ ಕುರಿತು ಬರೆದಿದ್ದಾರೆ.

ಕಲಾವಿದ: ವಿನ್ಸೆಂಟ್ ಜೋಸ್ ಡೆ ಆಲಿವೆರಾ ಮ್ಯೂನಿಸ್ (Vicente José de Oliveira Muniz)
ಜನನ: 20 ಡಿಸೆಂಬರ್, 1961
ಶಿಕ್ಷಣ: FAAP, ಸಾವೊಪಾವ್ಲೊ, ಬ್ರೆಜಿಲ್
ವಾಸ: ನ್ಯೂಯಾರ್ಕ್, ಅಮೆರಿಕ ಮತ್ತು ಬ್ರೆಜಿಲ್
ಕವಲು: ಕಾನ್ಸೆಪ್ಚುವಲ್ ಆರ್ಟ್
ವ್ಯವಸಾಯ: ಮಿಕ್ಸೆಡ್ ಮೀಡಿಯಾ ಫೊಟೊಗ್ರಫಿ, ಡಾಕ್ಯುಮೆಂಟರಿ

ವಿಕ್ ಮ್ಯೂನಿಸ್ ಅವರ ಸಿ.ವಿ.ಗಾಗಿ ಇಲ್ಲಿ ಕ್ಲಿಕ್ ಮಾಡಿ:

ವಿಕ್ ಮ್ಯೂನಿಸ್ ಅವರ ವೆಬ್‌ಸೈಟಿಗಾಗಿ ಇಲ್ಲಿ ಕ್ಲಿಕ್ ಮಾಡಿ:

ಆರ್ಟ್ ಫೊಟೋಗ್ರಫಿ ಎಂದರೆ ಚಿತ್ರದಿಂದಾಚೆ ಚಿತ್ರ ತೆಗೆದ ಛಾಯಾಗ್ರಾಹಕರ ಮನಸ್ಸಿನಲ್ಲಿರುವುದನ್ನೂ ತಿಳಿಸುವ ಪ್ರಯತ್ನ ಎಂಬುದು 19ನೇ ಶತಮಾನದ ಆದಿಯಿಂದಲೂ ಗೊತ್ತಿರುವ ಸಂಗತಿ. ಅದನ್ನು ಅಲ್ಲಿಂದ ಮುಂದೆ ಸಮಕಾಲೀನ ಕಲೆಯಾಗಿಸಿದ ಶ್ರೇಯಸ್ಸಿನಲ್ಲಿ ಬಹುದೊಡ್ಡ ಪಾಲು ಸಲ್ಲಬೇಕಾದದ್ದು ವಿಕ್ ಮ್ಯೂನಿಸ್‌ಗೆ. ಚಾಕಲೇಟು, ಸಕ್ಕರೆ, ಕಸ, ಗೊಂಬೆಗಳು…ಹೀಗೆ ಸಾಮಾನ್ಯವಾಗಿ ಬಳಕೆಯಾಗದ ವಸ್ತುಗಳನ್ನು ಬಳಸಿ ಚಾರಿತ್ರಿಕವಾದ ಕಲಾಕೃತಿಗಳನ್ನು ಮರುರಚಿಸಿ, ಅವಕ್ಕೆ ಫೊಟೋಗ್ರಫಿಯ ಟಚ್ ನೀಡುವ ಮೂಲಕ ಅದಕ್ಕೊಂದು ಕಂಟೆಂಪೊರರಿ ಆಯಾಮವನ್ನು ತಂದಿತ್ತ ವಿಕ್ ಮ್ಯೂನಿಸ್ ಬಾಲ್ಯದಲ್ಲಿ ಡಿಸ್‌ಲೆಕ್ಸಿಕ್. ಈ ಸ್ಥಿತಿ ಕೂಡ ಕಲಾವಿದನಾಗಿ ತನಗೆ ಅಡ್ವಾಂಟೇಜ್ ಆಯಿತು ಎಂದು ಅವರು ಹೇಳುತ್ತಾರೆ.

ಸೇನಾಡಳಿತದ ಬ್ರೆಜಿಲ್‌ನಲ್ಲಿ ಹೊಟೇಲ್ ವೇಟರ್ ಆಗಿದ್ದ ತಂದೆ ಮತ್ತು ಟೆಲಿಫೋನ್ ಆಪರೇಟರ್ ತಾಯಿಗೆ ಮಗನಾಗಿ ಬಡ ಕುಟುಂಬದಲ್ಲಿ ಜನಿಸಿದ್ದ ವಿಕ್‌ಗೆ, ತನ್ನ ಡಿಸ್‌ಲೆಕ್ಸಿಯಾ (ಕಲಿಕೆಯ ಮಾನಸಿಕ ಸಮಸ್ಯೆಗಳು) ಕಾರಣದಿಂದಾಗಿ ಏಳು ವರ್ಷ ಆದರೂ ಬರೆಯಲು ಬರುತ್ತಿರಲಿಲ್ಲ. ಅಜ್ಜಿ ಮನೆಯಲ್ಲಿದ್ದ ಎನ್ಸೈಕ್ಲೋಪೇಡಿಯಾ (ಅವು ಮಾತ್ರ ಮನೆಯಲ್ಲಿದ್ದ ಪುಸ್ತಕಗಳು) ಓದಿ ಹೇಳುತ್ತಿದ್ದರು. ಶಿಕ್ಷಣ ಪಡೆಯಲಾಗದ್ದಕ್ಕೆ 14ನೇ ವಯಸ್ಸಿಗೆ ಟಿವಿ ರಿಪೇರಿ ಕಲಿತ ವಿಕ್, ಊರಲ್ಲಿ ಕಲಾಮೇಳವೊಂದು ನಡೆದಾಗ ಅದರಲ್ಲಿ ಪಾಲ್ಗೊಂಡು, ಅಲ್ಲಿನ ತನ್ನ ಕೌಶಲದ ಆಧಾರದಲ್ಲಿ ಸ್ಕಾಲರ್‌ಶಿಪ್ ಪಡೆದು ಕಲಾಶಾಲೆಗೆ ಸೇರುತ್ತಾರೆ. ಇದರಿಂದ ಅವರಿಗಾದ ಲಾಭ ಎಂದರೆ, ದೃಶ್ಯಾತ್ಮಕ ಮಾಹಿತಿಗಳನ್ನು ಅವುಗಳ ಆದ್ಯತೆಯ ಆಧಾರದಲ್ಲಿ ವರ್ಗೀಕರಿಸಿಕೊಳ್ಳುವ ತಂತ್ರವನ್ನು ಕಲಿತದ್ದು ಎನ್ನುತ್ತಾರೆ ಅವರು. 1979ರಲ್ಲಿ ಪ್ರಚಾರ-ಜಾಹೀರಾತು ಕಲೆಯನ್ನು ಕಲಿತ ವಿಕ್, ಅಲ್ಲಿ ಆಕಸ್ಮಿಕ ಅವಘಡವೊಂದರಲ್ಲಿ ಕಾಲಿಗೆ ಪೆಟ್ಟಾಗಿ, ಅದಕ್ಕೆ ಪರಿಹಾರವಾಗಿ ದೊರೆತ ದುಡ್ಡನ್ನು ಬಳಸಿಕೊಂಡು ಅಮೆರಿಕಕ್ಕೆ ಹೋಗುತ್ತಾರೆ.

ಅಮೆರಿಕದಲ್ಲಿ, ಚಿಕಾಗೋದಲ್ಲಿ ಸೂಪರ್ ಮಾರ್ಕೆಟ್ ಒಂದರ ಪಾರ್ಕಿಂಗ್ ಲಾಟ್‌ನಲ್ಲಿ ಕೆಲಸ ಮಾಡುತ್ತಾ, 84ರ ಹೊತ್ತಿಗೆ ನ್ಯೂಯಾರ್ಕ್ ತಲುಪುತ್ತಾರೆ. ಅಲ್ಲಿ ರಾತ್ರಿ ನಾಟಕ ನಿರ್ದೇಶನ, ಸೆಟ್ ಡಿಸೈನಿಂಗ್ ಕಲಿಯುತ್ತಾ ಹಗಲು ದುಡಿಮೆ ಮಾಡುತ್ತಾ ದಿನ ಕಳೆದ ವಿಕ್‌ಗೆ ಫೊಟೋ ಫ್ರೇಮ್ ಕಂಪನಿಯೊಂದರಲ್ಲಿ ದುಡಿದದ್ದು, ಕಲಾಜಗತ್ತಿಗೆ ಬಾಗಿಲು ತೆರೆದುಕೊಟ್ಟಿತು. ಕಲಾಜಗತ್ತನ್ನು ಪ್ರವೇಶಿಸಿದ ಬಳಿಕ ಬ್ರಾಂಕ್ಸ್‌ನಲ್ಲಿ ಸ್ಟುಡಿಯೊ ತೆರೆದ ವಿಕ್, ಮೊದಲ ಕಲಾಪ್ರದರ್ಶನ ನೀಡಲು ಸಾಧ್ಯವಾದದ್ದು, 1988ರಲ್ಲಿ.

Rest of Line ಸರಣಿಯ ಮೂಲಕ ತನ್ನದೇ ಶೈಲಿಯನ್ನು ರೂಢಿಸಿಕೊಂಡ ವಿಕ್, ಫೊಟೋಗ್ರಫಿಯನ್ನು ಬಳಸಿಕೊಂಡು ಕಲಾಕೃತಿಗಳನ್ನು ರಚಿಸತೊಡಗುತ್ತಾರೆ. ಚಾಕಲೇಟ್ ಸಿರಪ್, ಧೂಳು ಬಳಸಿ ಮೊನಾಲಿಸಾ, ಮರ್ಲಿನ್ ಮುನ್ರೊ ಚಿತ್ರಗಳನ್ನು ರಚಿಸಿದ ಅವರು, 1992ರಲ್ಲಿ ಕೆಲವು ಸಮಯ ಪ್ಯಾರಿಸ್ಸಿನಲ್ಲಿದ್ದರು. ಅಲ್ಲಿ ಬ್ಲೈಂಡ್ ಸ್ಪಾಟ್ ಫೊಟೋಗ್ರಫಿ ಪುಸ್ತಕವನ್ನು ಸಂಪಾದಿಸಿದರು.

1996ರಲ್ಲಿ ಅವರು ರಚಿಸಿದ Sugar Children ಕಲಾಸರಣಿ ಅವರಿಗೆ ಕಲಾ ಬದುಕಿನಲ್ಲಿ ಮಹತ್ವದ ತಿರುವು ಕಟ್ಟಿತು. ಕ್ಯಾರಿಬ್ಬಿಯನ್ ದುಡಿಯುವ ಮಕ್ಕಳ ದುಸ್ಥಿತಿಯ ಬಗ್ಗೆ ಹೇಳುವ ಈ ಚಿತ್ರಸರಣಿಯದು ಅವರು ಆರ್ಥಿಕ ಲಾಭ ಮಾಡಿಕೊಂಡರು, ಆದರೆ ಮಕ್ಕಳಿಗೇನೂ ಲಾಭ ಆಗಲಿಲ್ಲ, ಅವರ ಬದುಕು ಬದಲಾಗಲಿಲ್ಲ ಎಂಬ ಆಪಾದನೆ ಬಂದದ್ದೂ ಇದೆ. ಇದನ್ನು ನಿವಾರಿಸಿಕೊಳ್ಳಲು ಅವರು ರಚಿಸಿದ Wasteland ಎಂಬ ಡಾಕ್ಯುಮೆಂಟರಿ ನಿರ್ಮಿಸಿ, ಅವರಿಗೆ ಬಂದ ಹಣವನ್ನು ಅಲ್ಲಿಗೆ ಬಳಸಿಕೊಂಡರು; ಆ ಮಕ್ಕಳ ಜೊತೆ ಕೆಲಸ ಮಾಡಿದರು. Pictures in Garbage ಸರಣಿಯಲ್ಲಿ ದೊರೆತ 50,000$ ಲಾಭವನ್ನು ದುಡಿಯುವ ಮಕ್ಕಳ ಕಲ್ಯಾಣಕ್ಕಾಗಿ ಹಂಚಿಕೊಂಡರು.

2000ದಿಂದೀಚೆಗೆ ಉಪನ್ಯಾಸ, ಕಲಾ ಪ್ರದರ್ಶನ ಕ್ಯುರೇಶನ್ ಎಂದು ಜಗದಗಲ ಸುತ್ತಾಡತೊಡಗಿದ ಅವರು ಫೊಟೋಗ್ರಾಫಿಯನ್ನು ಮಿಶ್ರಮಾಧ್ಯಮದಲ್ಲಿ ಮರುವ್ಯಾಖ್ಯಾನಿಸಿ, ಭ್ರಮೆಗಳ- ದೃಷ್ಟಿಕೋನಗಳ ಆಚೆ ಹೊಸ ಅರ್ಥಗಳನ್ನು ಮೂಡಿಸಿದರು. ದೃಶಪ್ರೇರಣೆಯ ಅನುಭವಗಳಿಗೆ ಹೊಸ ಮಗ್ಗುಲು ಒದಗಿಸುವ ಈ ಕಲಾವಿದ ತನ್ನನ್ನು “ಲೋ ಟೆಕ್ ಇಲ್ಯೂಷನಿಸ್ಟ್” ಎಂದು ಕರೆದುಕೊಳ್ಳುತ್ತಾರೆ. ಅವರ ಸಮಕಾಲೀನ ಫೊಟೋಗ್ರಫಿ ಅವರ ದೃಷ್ಟಿಯಿಂದ ಸಾಂಪ್ರದಾಯಿಕ ಫೊಟೋಗ್ರಫಿಗಿಂತ ಹೇಗೆ ಭಿನ್ನ ಎಂಬ ಪ್ರಶ್ನೆಗೆ, ವಿಕ್ ಉತ್ತರಿಸಿದ್ದು ಹೀಗೆ: I’m more interested in how pictures get conveyed. What’s the language of the thing I’m photographing and how do I learn about it? How does a photograph bring to mind somebody, and how can I photograph them? I’m interested in the linguistics of an image. I want to see where the verb is, and the subject. Is there an article? What’s the object? It’s like when you go to have your picture taken and the photographer says, “smile.” You know, you are not really smiling. You are just answering to a command of some sort.

I try to break images down like that and analyze them. So, in a way, it’s a very analytical approach, but I try to make it seamless. I don’t want the images to look conceptual because the moment it looks like I’m trying to come up with some idea or some intellectual scheme, it will scare people away and they’ll become defensive, you know? I want the pictures to be beautiful and I want them to be easy to look at and have a residual effect. I also want them to be intelligent. I want to keep that edge to them, but I don’t want people to know that. (ಲಿಂಡಾ ಬೆನೆಡಿಕ್ಟ್ ಜೋನ್ಸ್ ಅವರು 2000ನೇ ಇಸವಿಯಲ್ಲಿ ವಿಕ್ ಅವರ ಕಲಾಪ್ರದರ್ಶನವೊಂದಕ್ಕೆ ಪೂರ್ವಭಾವಿಯಾಗಿ ಪೆನ್ಸಿಲ್ವೇನಿಯಾದಲ್ಲಿ ನಡೆಸಿದ ಸಂದರ್ಶನದಿಂದ)

ವಿಕ್ ಮ್ಯೂನಿಸ್ ಅವರ ಜೊತೆ ಸಮಾಜ ಶಾಸ್ತ್ರಜ್ಞೆಸಾರಾ ಥೋರ್ಟನ್ ಮಾತುಕತೆ (2017):

ವಿಕ್ ಮ್ಯೂನಿಸ್ ಅವರ ಉಪನ್ಯಾಸ:

ಚಿತ್ರ ಶೀರ್ಷಿಕೆಗಳು:
ವಿಕ್ ಮ್ಯೂನಿಸ್ ಅವರ Action Painter (Pictures of Chocolate Series) (1998)

ವಿಕ್ ಮ್ಯೂನಿಸ್ ಅವರ Belvedere Museum (The Kiss after Klimt) (Repro), (2017)

ವಿಕ್ ಮ್ಯೂನಿಸ್ ಅವರ Clown Skull (1989)

ವಿಕ್ ಮ್ಯೂನಿಸ್ ಅವರ Double Mona Lisa (Peanut butter and Jelly), from the series After Warhol, (1999)

ವಿಕ್ ಮ್ಯೂನಿಸ್ ಅವರ Half Mellow Pad, after Stuart Davis, Surfaces, (2019)

ವಿಕ್ ಮ್ಯೂನಿಸ್ ಅವರ Marat (Sebastiao)From the Pictures of Garbage series (2011)

ವಿಕ್ ಮ್ಯೂನಿಸ್ ಅವರ Marlene Dietrich From the Pictures of Diamonds series (2004)

ವಿಕ್ ಮ್ಯೂನಿಸ್ ಅವರ Medusa Marinara From the After Warhol series (1997)

ವಿಕ್ ಮ್ಯೂನಿಸ್ ಅವರ Metachrome (Interior with Egyptian Curtain, after Matisse), (2016)

ವಿಕ್ ಮ್ಯೂನಿಸ್ ಅವರ Postcards from Nowhere - Eiffel Tower, (2015)

ವಿಕ್ ಮ್ಯೂನಿಸ್ ಅವರ Sandcastle #3 (2013)

ವಿಕ್ ಮ್ಯೂನಿಸ್ ಅವರ Seated black woman, after Felix Vallaton, (2013)

ವಿಕ್ ಮ್ಯೂನಿಸ್ ಅವರ Sugar children Series , (1996–1996)

ಈ ಅಂಕಣದ ಹಿಂದಿನ ಬರೆಹಗಳು:
ನನ್ನದೇ ಸಂಗತಿಗಳಿವು: ಆದರೆ ಕೇವಲ ನನ್ನವಲ್ಲ– ಶಿರಿನ್ ನೆಹಶಾತ್
ಪೇಂಟಿಂಗ್ ಎಂಬುದು ಐಡಿಯಾ ಮತ್ತು ವಾಸ್ತವದ ಮಧ್ಯಂತರ ಸ್ಥಿತಿ – ಲೀ ಉಹ್ವಾನ್
ಸದಭಿರುಚಿ ಎಂಬುದು ಆಧುನಿಕ ಬದುಕಿನ ಶಾಪ – ಗಿಲ್ಬರ್ಟ್ ಮತ್ತು ಜಾರ್ಜ್
ಆನೆಲದ್ದಿ ಮತ್ತು ಕ್ರಿಸ್ ಒಫಿಲಿ
ನಿಸರ್ಗ ನನ್ನ ಸಹಶಿಲ್ಪಿ – ಆಂಡಿ ಗೋಲ್ಡ್ಸ್‌ವರ್ದಿ
ಫಿಗರೇಟಿವ್ ಚಿತ್ರಗಳು ಕೂಡಾ ಇಂದು ಪ್ರಸ್ತುತ – ಪೀಟರ್ ಡಾಯ್
ಕಾನ್ಸೆಪ್ಚುವಲ್ ಆರ್ಟ್‌ನ ಜನಕ – ಸೊಲ್ ಲೆವಿಟ್
ಮನುಷ್ಯ ಆಗಿರೋದು ಅಂದ್ರೆ ಏನು?- ವಿಲಿಯಂ ಕೆಂಟ್ರಿಜ್
“ಸೂಪರ್ ಫ್ಲ್ಯಾಟ್” ಐ ಕ್ಯಾಂಡಿಗಳ ತಕಾಷಿ ಮುರಾಕಾಮಿ
ಅಲ್ಲಿರುವುದು ನನ್ನಮನೆ – ದೊ ಹೊ ಸುಹ್
ದಿ ಲೈಫ್ ಆಫ್ CB: ಅರ್ಥಾತ್, ಕ್ರಿಷ್ಚಿಯನ್ ಬೋಲ್ತನಸ್ಕಿ
ಅಸೆಂಬ್ಲಿಗಳಲ್ಲಿ “ಬಾಕತನ” ತೋರಿಸಿದ ಅರ್ಮಾನ್
ಪ್ರಾಮಾಣಿಕತೆಯೇ ಸೌಂದರ್ಯ- ಜೊರ್ಗ್ ಇಮ್ಮೆಂದ್ರಾಫ್
ನಾಗರೀಕತೆಯ ಒಡಕಿಗೆ ಕನ್ನಡಿ ಹಿಡಿದ ಡೊರಿಸ್ ಸಾಲ್ಸೆದೊ
ಕಾನ್ಸೆಪ್ಚುವಲ್ ಆರ್ಟ್‌ಗೆ ತಳಪಾಯ –ರಾಬರ್ಟ್ ರಾಷನ್‌ಬರ್ಗ್
ಡಿಜಿಟಲ್ ಜಗತ್ತಿನಲ್ಲಿ ಒರಿಜಿನಲ್‌ನ ಹುಡುಕಾಟ – ಥಾಮಸ್ ರಫ್
ಕಲೆ ಜಗತ್ತನ್ನು ಬದಲಾಯಿಸಲೇ ಬೇಕೆಂದಿಲ್ಲ- ಫಿಯೊನಾ ಹಾಲ್
ಜಾಗತೀಕರಣದ ಆಟಗಳ ಬೆನ್ನಟ್ಟಿರುವ ಇಂಕಾ ಶೋನಿಬೇರ್
ಅರ್ಥವಂತಿಕೆಗಾಗಿ ಅರ್ಥ ಕಳೆದುಕೊಳ್ಳಬೇಕೆಂಬ- ಗು ವೆಂಡಾ
ಗದ್ದಲದ ಲೋಕದಲ್ಲಿ ಒಳಗಿನ ಪಿಸುಮಾತು- ನಿಯೊ ಆವ್
ಕಲೆ ಒಂದು ಉತ್ಪನ್ನವಲ್ಲ ಪ್ರಕ್ರಿಯೆ- ನಾಮನ್ ಬ್ರೂಸ್
‘ಇನ್ಫಾರ್ಮೇಷನ್ ಸೂಪರ್ ಹೈವೇ’ ಹೊಳಹು- ನಾಮ್ ಜುನ್ ಪಾಯಿಕ್
ಬದುಕಿನ ಮುಜುಗರಗಳಿಗೆ ಹೊರದಾರಿ- ಸ್ಟೀವ್ ಮೆಕ್ವೀನ್
ಅವ್ಯಕ್ತವನ್ನು ವ್ಯಕ್ತದಿಂದ ವಿವರಿಸುವ ರೀಚಲ್ ವೈಟ್‌ರೀಡ್
ಒಪ್ಪಿತ ನೈತಿಕತೆಯ ದ್ವಂದ್ವಗಳ ಶೋಧ - ಸಾರಾ ಲೂಕಸ್
ತನ್ನೊಳಗಿನ “ತೋಳ”ತನಕ್ಕೆ ಭಾವಕೊಟ್ಟ- ಕಿಕಿ ಸ್ಮಿತ್
“ನಾನು ಪ್ರೀ-ಪಿಕ್ಸೆಲ್”- ಚಕ್ ಕ್ಲೋಸ್
ಕಲೆ ಎಂಬುದು ಪ್ರಶ್ನಿಸುವ ಕಲೆ- ಸ್ಯು ಬಿಂಗ್
ವೀಡಿಯೊ ಆರ್ಟ್ ಕಾಲದ ’ರೆಂಬ್ರಾಂಟ್’
ದೇಹಕ್ಕೆ ವಿಸ್ತರಣೆ; ಯಂತ್ರಗಳಿಗೆ ಆತ್ಮ- ರೆಬೆಕಾ ಹಾರ್ನ್
ಪಾಪ್ ಆರ್ಟಿಗೊಬ್ಬ ಗಾಡ್‌ಫಾದರ್ – ಪೀಟರ್ ಬ್ಲೇಕ್
ಬಾರ್ಬರಾ ಕ್ರುಗರ್‌ - ಘೋಷಣೆಯೊಂದು ಆರ್ಟಾಗುವ ಮ್ಯಾಜಿಕ್
ಭಾವನೆಯಿಂದ ವರ್ತನೆಯೆಡೆಗೆ -ಒಲಫರ್ ಎಲಿಯಾಸನ್
ಚರಿತ್ರೆಯ ನೆರಳಿನ ಬಂಡಾಯಗಾರ್ತಿ - ಕಾರಾ ವಾಕರ್
“ರಪ್ಪೆಂದು… ಮುಖಕ್ಕೆ ತಣ್ಣೀರು ರಾಚುವ ಸಾಂಟಿಯಾಗೊ ಸಿಯೆರಾ”
“ಪಾತ್ರಾನುಸಂಧಾನ ಮತ್ತು ಅದರಿಂದಾಚೆ: ಸಿಂಡಿ ಶೆರ್ಮನ್”
ಬ್ರಿಟಿಷ್ ಕಲಾಜಗತ್ತಿನ ’ಬ್ಯಾಡ್ ಗರ್ಲ್’ –ತ್ರೇಸಿ ಎಮಿನ್
ಕಲೆಯ ಬೀದಿಯಲ್ಲೊಬ್ಬ 'ಬೆಳದಿಂಗಳ ಬಾಲೆ' - ಬಾಂಕ್ಸಿ
“ಕಾನ್ಸೆಪ್ಚುವಲ್ ಆರ್ಟ್‌ನ ಪಿತಾಮಹ ಮಾರ್ಸೆಲ್ ದುಷಾಮ್ ”
“ಪ್ರತಿಯೊಬ್ಬ ವ್ಯಕ್ತಿಯೂ ಕಲಾವಿದನೇ; ಸಮಾಜವೇ ಶಿಲ್ಪ”
“ಅಮೂರ್ತದಿಂದ ನವಮೂರ್ತದತ್ತ – ಭಾರತವೇ ಸ್ಪೂರ್ತಿ”
“ಕಲಾಲೋಕದ ಡೊನಾಲ್ಡ್ ಟ್ರಂಪ್ – ಜೆಫ್ ಕೂನ್ಸ್”
“ಸಿಗ್ಮಾರ್ ಪೋಲ್ಕ್ ಎಂಬ ರಸಶಾಸ್ತ್ರಿಗೆ ಕಲೆಯೂ ವಿಮರ್ಶೆಯೇ”
“ಒಳಗಣ ಅನಂತ ಮತ್ತು ಹೊರಗಣ ಅನಂತ”
“ಪ್ಯಾಕ್ ಅಪ್“ – ಕ್ರಿಸ್ತೊ ಮತ್ತು ಜೇನ್ ಕ್ಲೋದ್ ದಂಪತಿ ಶೈಲಿ
ಜಗತ್ತಿಗೊಬ್ಬಳು ಸೂಜಿಮಲ್ಲಿ – ಕಿಮ್ ಸೂ ಜಾ
ವ್ಯಗ್ರತೆಯ ಒಳಹರಿವುಗಳ ಶೋಧ – ಮೋನಾ ಹಾಟಮ್
ಪರ್ಫಾರ್ಮಿಂಗ್ ಆರ್ಟ್ ನ ಹಿರಿಯಜ್ಜಿ – ಮಾರಿನಾ ಅಬ್ರಾಮೊವಿಚ್
ಸೈ ಗು-ಚಾಂಗ್ ಎಂಬ ’ಬೆಂಕಿಚೂರ್ಣ’
ಅನೀಶ್ ಕಪೂರ್ ಅವರ “ಕರಿ”ಗೆ ಅಂಟಿದ “ಗುಲಾಲಿ” ವಿವಾದ
ಅತಿವೇಗಕ್ಕೆ ಬೆಲೆ ತೆತ್ತ ಡೇಮಿಯನ್ ಹರ್ಸ್ಟ್
ಸೂರ್ಯಕಾಂತಿಯ ಹೊಸಮೊಳಕೆ… ಆಯ್ ವೇಯಿ ವೇಯಿ
ಆನ್ಸೆಲ್ಮ್ ಕೀಫರ್ ಕಟ್ಟಿಕೊಡುವ ವಿನಾಶದ ವಿಷಣ್ಣತೆ
ಕಟ್-ಕಾಪಿ-ಪೇಸ್ಟ್ ನಿಂದ ಸಿಟ್-ಥಿಂಕ್-ಆಕ್ಟ್ ನತ್ತ

 

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...