'ಕಹಳೆ ಕವಿತೆ ಪ್ರಶಸ್ತಿ’ ಸ್ಪರ್ಧೆಗೆ ಕವಿತೆಗಳ ಆಹ್ವಾನ

Date: 14-10-2019

Location: ಬೆಂಗಳೂರು


2019 ರ ಕಹಳೆ ಕವಿತೆ ಪ್ರಶಸ್ತಿಗಾಗಿ ಕವಿಗಳಿಂದ ಕವಿತೆಗಳನ್ನು ಆಹ್ವಾನಿಸಿದೆ.

ನಾಡಿನ ಪ್ರಖ್ಯಾತ ಬರಹಗಾರರು ಕವಿತೆಗಳನ್ನು ಆಯ್ಕೆ ಮಾಡಿ ಕಹಳೆ ಕವಿತೆ ಪ್ರಶಸ್ತಿಗೆ ಆಯ್ಕೆ ಮಾಡುತ್ತಾರೆ. ಪ್ರಶಸ್ತಿ ವಿಜೇತರಿಗೆ ಪ್ರಶಸ್ತಿ ಫಲಕ, ಪ್ರಶಸ್ತಿ ಪತ್ರ ಹಾಗೂ ಸಾವಿರ ರೂ ಮೌಲ್ಯದ ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಗುವುದು. ಎರಡನೇ ಬಹುಮಾನ ಗಳಿಸಿದ ಕವಿತೆಗೆ ಪ್ರಶಸ್ತಿ ಪತ್ರ ಜೊತೆಗೆ ಪುಸ್ತಕಗಳನ್ನು ನೀಡಲಾಗುವುದು.

ಕವಿತೆಗಳನ್ನು ನುಡಿ ಇಲ್ಲವೇ ಯೂನಿಕೋಡ್‌ನಲ್ಲಿ ಟೈಪ್ ಮಾಡಿ kahaleblog@gmail.com ಗೆ ಇಮೇಲ್ ಮೂಲಕ ಕಳುಹಿಸಿಕೊಡಬೇಕೆಂದು ಸಂಸ್ಥೆಯ ಸಿಬ್ಬಂದಿಗಳು ತಿಳಿಸಿದ್ದಾರೆ. ಈ ಮೇಲ್‌ ಅನ್ನು ಕಳುಹಿಸುವ ವಿಧಾನವನ್ನು ತಿಳಿಸಿದ್ದು, ಈ ಮೇಲ್‌ನಲ್ಲಿ 'ಕಹಳೆ ಕವಿತೆ ಸ್ಪರ್ಧೆ 2019' ಎಂದು ಕಡ್ಡಾಯವಾಗಿ ನಮೂದಿಸಬೇಕು ಎಂದಿದ್ದಾರೆ.

ಕವಿತೆಗಳನ್ನು ಕಳುಹಿಸಲು ಕೊನೆಯ ದಿನ 30 ಅಕ್ಟೋಬರ್ 2019.

ಹೆಚ್ಚಿನ ಮಾಹಿತಿಗಾಗಿ: www.kahale.org https://www.facebook.com/Kahale.org/

ಕವಿತೆ ಕಳಿಸಲು ಪ್ರಮುಖ ನಿಯಮಗಳು:

ಈ ಸ್ಪರ್ಧೆಗೆ ಕಳುಹಿಸುವ ಕವಿತೆಗಳು ಸ್ವಂತ ರಚನೆಯಾಗಿರಬೇಕು.

ಈ ಮೊದಲು ಯಾವುದೇ ಪತ್ರಿಕೆ, ನಿಯತಕಾಲಿಕೆ,ಬ್ಲಾಗ್, ಜಾಲತಾಣ, ಸಾಮಾಜಿಕ ಜಾಲತಾಣಗಳು, ಅಂತರ್ಜಾಲ ಹೀಗೆ ಎಲ್ಲಿಯೂ ಕೂಡ ಪ್ರಕಟ ಅಥವಾ ಪ್ರಸಾರ ಆಗಿರಬಾರದು.

ಒಬ್ಬರು ಗರಿಷ್ಠ ಎರಡು ಕವಿತೆಗಳನ್ನು ಕಳುಹಿಸಬಹುದು.

ಕವಿತೆ 40 ಸಾಲುಗಳನ್ನು ಮೀರಿರಬಾರದು.

MORE NEWS

‘ಕಠಾರಿ ಅಂಚಿನ ನಡಿಗೆ’ ಸಮಕಾಲೀನ ವಿಡಂಬನೆಗಳ ಪುಸ್ತಕ: ಶಿವಸುಂದರ್

22-04-2024 ಬೆಂಗಳೂರು

ಬೆಂಗಳೂರು: ಚಂದ್ರಪ್ರಭ ಕಠಾರಿಯವರು ವಿಡಂಬನೆಗಳನ್ನು ಬರೆದಿದ್ದಾರೆ. ವಿಡಂಬನೆ, ಲೇವಡಿ ಮಾಡುವುದಕ್ಕೆ ಇಂದು ಬಹಳ ಧೈರ್ಯ ಬ...

ಜೋಗಿ ಅವರ 'ಭಗ್ನಪ್ರೇಮಿಯ ಅಪೂರ್ಣ ಡೈರಿ' ಕೃತಿ ಬಿಡುಗಡೆ ಸಮಾರಂಭ

22-04-2024 ಬೆಂಗಳೂರು

ಬೆಂಗಳೂರು: ಸಾವಣ್ಣ ಪ್ರಕಾಶನದ 200ನೇ ಕೃತಿ, ಲೇಖಕ ಜೋಗಿ ಅವರ ‘ಭಗ್ನಪ್ರೇಮಿಯ ಅಪೂರ್ಣ ಡೈರಿ’ ಬಿಡುಗಡೆ ಕಾ...

ನಟ ಎಂ. ಎಸ್‌. ಉಮೇಶ್‌ ಅವರಿಗೆ ಡಾ. ರಾಜಕುಮಾರ ಸಂಸ್ಕೃತಿ ದತ್ತಿ ಪ್ರಶಸ್ತಿ ಪ್ರದಾನ

21-04-2024 ಬೆಂಗಳೂರು

ಬೆಂಗಳೂರು: ನನ್ನ ಕಲಾರಂಗದ ಬೆಳವಣಿಗೆಗೆ ಇದೇ ವೇದಿಕೆ ಕಾರಣ. ಈ ವೇದಿಕೆ ನನ್ನನ್ನ ಸಾಕಿದೆ, ಬೆಳೆಸಿದೆ, ನನಗೆ ತಿಳುವಳಿಕೆ...