ಪ್ರಾದೇಶಿಕತೆಯ ಸೊಗಡಿನಲ್ಲಿ'ದಡ ಸೇರಿಸು ತಂದೆ’: ಪ್ರಶಂಸೆ

Date: 20-01-2020

Location: ರಾಯಚೂರು


ರಾಯಚೂರಿನ ಕನ್ನಡ ಭವನದಲ್ಲಿ ಜ. 19  ರಂದು ಅಮರೇಶ ನುಗಡೋಣಿ ಅವರ "ದಡ ಸೇರಿಸು ತಂದೆ" ಆರನೆಯ ಕಥಾ ಸಂಕಲನವನ್ನು ಕನ್ನಡ ವಿವಿ ಕುಲಪತಿ ಪ್ರೊ. ಸ. ಚಿ. ರಮೇಶ ಬಿಡುಗಡೆ ಮಾಡಿದರು. ನಂತರ ಅವರು ಮಾತನಾಡಿ,  "ಅಮರೇಶ ನುಗಡೋಣಿ" ಅವರ ಕಥೆಗಳ ಮಹತ್ವ ಮತ್ತು ಶಕ್ತಿ ಕಾಣುವುದು ಅವರು ಕಟ್ಟಿಕೊಡುವ ಪ್ರಾದೇಶಿಕತೆಯಲ್ಲಿದೆ. ಅವರ ಕಥೆಗಳ ಮಾದರಿ ಇತರರಿಗಿಂತ ಭಿನ್ನವಾಗಿದೆ. ಕಥೆಯಿಂದ ಕಥೆಗೆ ಸಾಮಾನ್ಯ ಮನುಷ್ಯರ ಸಾಮಾಜಿಕ ಬದುಕನ್ನು ಹೊಸದಾಗಿ ಚಿತ್ರಿಸುತ್ತಾರೆ .ವಸ್ತುವಿನಲ್ಲಿ, ಭಾಷೆಯಲ್ಲಿ ನಿರಂತರವಾಗಿ ಹೊಸತನವನ್ನು ತರುತ್ತಾರೆ ಎಂದು ಹೇಳಿದರು.  
ಶ್ರೀದೇವಿ ಕಳಸದ ಅವರು ಪುಸ್ತಕ ಕುರಿತು ಮಾತನಾಡಿ, ಕಥೆಗಳ ನಿರೂಪಣೆಯಲ್ಲಿ ಅಪಾರ ಸಂಯಮ ತೋರಿಸುತ್ತಾರೆ. ಕಥೆಯ ವಸ್ತು ಪಾತ್ರಕ್ಕೆ ಅನುಗುಣವಾಗಿ ಪ್ರಾದೇಶಿಕತೆಯನ್ನು ಹೊಸದೆಂಬಂತೆ  ರಚಿಸುತ್ತಾರೆ. ಸಾಮಾನ್ಯರ ಬದುಕು ಇವರ ಕಥೆಗಳಲ್ಲಿ ಸಂಯಮದಿಂದ ಅನಾವರಣಗೊಳ್ಳುತ್ತದೆ ಎಂದರು.

ಲೇಖಕ ಅಮರೇಶ ನುಗಡೋಣಿ ಮಾತನಾಡಿ, ಪ್ರತಿ ಕಥೆಯಲ್ಲಿ ಹೊಸತನ ಹುಡುಕುವುದು ಕಷ್ಟದ ಕೆಲಸ. ಅದನ್ನು  ಹುಡುಕದೇ ಬೇರೆ ದಾರಿ ಇಲ್ಲ. ವಸ್ತು, ಪಾತ್ರ, ಭಾಷೆ, ತಂತ್ರ ಎಲ್ಲವನ್ನು  ತಾಳ್ಮೆಯಿಂದ ಗ್ರಹಿಸಿ ನಿರೂಪಿಸಲು  ಪ್ರಯತ್ನಿಸಿದ್ದೇನೆ ಎಂದರು.

 

MORE NEWS

ಎಸ್.ಜ್ಯೋತಿ ಅವರ ‘ಅತ್ತೆ ನಿಮಗೊಂದು ಪ್ರಶ್ನೆ’ ಪುಸ್ತಕ ಬಿಡುಗಡೆ ಸಮಾರಂಭ

19-03-2024 ಬೆಂಗಳೂರು

ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...

ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರಬಂದಗಳಿಗೆ ಆಹ್ವಾನ

17-12-2023 ಬೆಂಗಳೂರು

ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...

ಸಾಂಸ್ಕೃತಿಕ ಸಂವಿಧಾನದ ಅರಿವು ಅಗತ್ಯ : ಪ್ರೊ.ನಟರಾಜ ಬೂದಾಳು

06-12-2023 ಬೆಂಗಳೂರು

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...