ಪ್ರಹ್ಲಾದ ಅಗಸನಕಟ್ಟೆ ವಿದ್ಯಾರ್ಥಿ ಕತಾ ಸ್ಪರ್ಧೆ ಆಯೋಜನೆ

Date: 22-02-2021

Location: ಬೆಂಗಳೂರು


ಹುಬ್ಬಳ್ಳಿಯ ಅಕ್ಷರ ಸಾಹಿತ್ಯ ವೇದಿಕೆಯು ಕನ್ನಡದ ಕಥೆಗಾರ ಡಾ. ಪ್ರಹ್ಲಾದ ಅಗಸನಕಟ್ಟೆ ಅವರ ಸ್ಮರಣಾರ್ಥ ‘ಪ್ರಹ್ಲಾದ ಅಗಸನಕಟ್ಟೆ ವಿದ್ಯಾರ್ಥಿ ಕಥಾ ಸ್ಪರ್ಧೆ’ ಆಯೋಜಿಸಿದ್ದು, ರಾಜ್ಯದ ಎಲ್ಲ ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಳ್ಳಬಹುದು. ಆಯ್ಕೆಯಾದ ಕಥೆಗೆ 5 ಸಾವಿರ ರೂ. ನಗದು ಬಹುಮಾನ ಹಾಗೂ ಪ್ರಶಸ್ತಿ ಫಲಕ ಲಭಿಸಲಿದೆ.

ಸೂಚನೆ :

  • ಉದಯೋನ್ಮುಖ ಕತೆಗಾರರು ತಮ್ಮ ಕಾಲೇಜಿನ ಮುಖ್ಯಸ್ಥರಿಂದ ದೃಢೀಕರಣ ಪ್ರಮಾಣಪತ್ರದೊಂದಿಗೆ ತಮ್ಮ ಅಪ್ರಕಟಿತ ಸ್ವರಚಿತ ಕತೆ ಕಳುಹಿಸಬೇಕು.
  • ಮೇಲ್ ಜೊತೆಯಲ್ಲೂ ದೃಢೀಕೃತ ಪ್ರಮಾಣ ಪತ್ರ ಇರಬೇಕು.
  • ಮಾ. 20 ಕತೆ ಕಳುಹಿಸಲು ಕೊನೆಯ ದಿನ. ಡಾ. ಪ್ರಹ್ಲಾದ ಅಗಸನಕಟ್ಟೆ ಸ್ಮರಣಾರ್ಥ ವಿದ್ಯಾರ್ಥಿ ಕಥಾಸ್ಪರ್ಧೆ, ಅಕ್ಷರ ಸಾಹಿತ್ಯ ವೇದಿಕೆ, ಹುಬ್ಬಳ್ಳಿ, ಕೇರಾಫ್/ ಸುನಂದಾ ಪ್ರಕಾಶ ಕಡಮೆ, ಮನೆ ಸಂಖ್ಯೆ 90, ನಾಗಸುಧೆ 6/ಬಿ ಕ್ರಾಸ್, ಕಾಳಿದಾಸ ನಗರ, ವಿದ್ಯಾನಗರ, ಹುಬ್ಬಳ್ಳಿ- 580031 ವಿಳಾಸಕ್ಕೆ ಕಳುಹಿಸಬೇಕು. ಇ- ಮೇಲ್: sunandakadame@gmail.com ಕಳುಹಿಸಿ. ಸಂಪರ್ಕ ಸಂಖ್ಯೆ - 9845779387

MORE NEWS

25 ಮಂದಿಗೆ ಕೆಯುಡಬ್ಲ್ಯುಜೆ ದತ್ತಿ ನಿಧಿ ಪ್ರಶಸ್ತಿ

28-03-2024 ಬೆಂಗಳೂರು

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಕೊಡಮಾಡುವ ಪ್ರಸಕ್ತ ಸಾಲಿನ ಕೆಯುಡಬ್ಲ್ಯುಜೆ ದತ್ತಿ ನಿಧಿ ಪ್ರಶಸ್...

ಖ್ಯಾತ ರಂಗ ನಿರ್ದೇಶಕ ಶ್ರೀ ಪಾದ ಭಟ್ ಗೆ 'ರಂಗ ಭೂಪತಿ' ಪ್ರಶಸ್ತಿ

28-03-2024 ಬೆಂಗಳೂರು

ಬೆಂಗಳೂರು: ಪ್ರಸಿದ್ಧ ನಾಟಕಕಾರರಾದ ದಿ.ಗೋಪಾಲ ವಾಜಪೇಯಿ ಅವರ ಹೆಸರಿನಲ್ಲಿ ಸ್ಥಾಪಿಸಲಾಗಿರುವ 'ರಂಗ ಭೂಪತಿ' ಪ್ರ...

ದಾವಣಗೆರೆಯ ಎಲ್ಲಾ ಭಾಷಾರಸಸ್ವಾದಗಳನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟ ಕೃತಿಯಿದು; ಎಂ. ವಿ. ರೇವಣಸಿದ್ದಯ್ಯ

28-03-2024 ಬೆಂಗಳೂರು

ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಅನಿವಾಸಿ ಲೇಖಕ ಶಿಕಾಗೋದ ರವಿ ಹಂಜ್ ಅವರ ಇಂಗ್ಲಿಷ್ ಕೃತಿ ...