’ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆ' ಫಲಿತಾಂಶ

Date: 16-10-2019

Location: ಬೆಂಗಳೂರು


’ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆ'ಯಲ್ಲಿ ಗುರುಪ್ರಸಾದ ಕಂಟಲಗೆರೆಗೆ ಮೊದಲ ಬಹುಮಾನ

2019ನೇ ಸಾಲಿನ ’ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆ'ಯಲ್ಲಿ ಗುರುಪ್ರಸಾದ ಕಂಟಲಗೆರೆ ಬರೆದ 'ಚಾಕರಿ', ಕಥಾ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದಿದೆ. ಮಾಧವಿ ಭಂಡಾರಿ ಅವರ ‘ಗುಲಾಬಿ ಕಂಪಿನ ರಸ್ತೆ' ಹಾಗೂ ಜಿ.ಆರ್‌. ಚಂದ್ರಶೇಖರ್ ಅವರ 'ಬೈಪಾಸ್ ರಸ್ತೆ' ಕಥೆಗಳು ಕ್ರಮವಾಗಿ ಎರಡನೆಯ ಮತ್ತು ಮೂರನೆಯ ಬಹುಮಾನಕ್ಕೆ ಪಾತ್ರವಾಗಿವೆ. ಅದೀಬ್ ಅಖರ (ಪಂಜರ), ಪ್ರವೀಣಕುಮಾರ್ ಜಿ. (ಡೈರಿ ಮಿಲ್ಕ್ ಚಾಕ್ಲೇಟು), ವಿಕಾಸ ಮೌರ್ಯ (ಒಂದು ಹೆಜ್ಜೆ) ಅವರ ಕಥೆಗಳು ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಗಿವೆ. ಕೇಶವ ಮಳಗಿ ಮತ್ತು ಸುನಂದಾ ಕಡಮ ಅವರು ಕಥಾ ಸ್ಪರ್ಧೆಯ ತೀರ್ಪುಗಾರರಾಗಿದ್ದರು.

ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆ'ಯಲ್ಲಿ ಪ್ರವೀಣ .ಕೆ ಅವರಿಗೆ ಮೊದಲ ಬಹುಮಾನ

ಪ್ರವೀಣ .ಕೆ ಅವರ 'ಲಕ್ಷಾಂತರ ಬತ್ತಿ', ಕವನ ಸ್ಪರ್ಧೆಯಲ್ಲಿ ಮೊದಲ ಬಹುಮಾನಕ್ಕೆ ಆಯ್ಕೆಯಾಗಿದೆ. ಎಂ.ಡಿ. ಒಕ್ಕುಂದ ಅವರ 'ಶಿವ ಶಿವಾ ಮಕ್ಕಳು ದೊಡ್ಡವರಾಗಬಾರದು' ಮತ್ತು ಪ್ರಕಾಶ ಪೊನ್ನಾಚಿ ಅವರ 'ಅಸ್ಪಶ್ಯ ಗಿಳಿ ಮತ್ತು ಮಾಯಕಾರ' ಕವಿತೆಗಳು ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಬಹುಮಾನಕ್ಕೆ ಪಾತ್ರವಾಗಿವೆ.

ಮಲ್ಲಿಕಾರ್ಜುನ ಛಬ್ಬಿ (ದಂಗೆ ಏಳುತ್ತವೆ ಕವಿತೆಗಳು), ಎಚ್.ಸಿ, ಭವ್ಯ ನವೀನ್ (ಸಿಂಡ್ರೆಲಾ ಮತ್ತು ಮುಫ್ತಿಗೆ ಸಿಕ್ಕ ರಾಜಕುಮಾರ) ಮತ್ತು ಸೋಮಶೇಖರ್ ಎಸ್‌ (ಹಿಮಗಿರಿಯ ಕಂದರ) ಅವರ ಕವಿತೆಗಳು ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಗಿದೆ. ಎಚ್.ಎಸ್. ವೆಂಕಟೇಶ ಮೂರ್ತಿ ಮತ್ತು ಎಚ್‌. ಎಲ್. ಪುಷ್ಪ ಅವರು ಕವನ ಸ್ಪರ್ಧೆಯ ತೀರ್ಪುಗಾರರರಾಗಿದ್ದರು.

ಮಕ್ಕಳ ವರ್ಣಚಿತ್ರ ಸ್ಪರ್ಧೆ: ಪೃಥ್ವಿರಾಜ್ ಎಂ. ಆರ್‌. ಆಳ್ವ (ಮಡಿಕೇರಿ), ಬಂದೇನವಾಜ್ (ಕುರುಕುಂದ, ಮಾನ್ವಿ ತಾಲ್ಲೂಕು), ಪ್ರತೀಕ್ಷಾ ಮರಕಿಣಿ (ಬೆಂಗಳೂರು), ಅಭಿನವ ಎಸ್. ರಾವ್ (ಬೆಂಗಳೂರು), ಕೆ. ಪ್ರಥಮ್ ಕಾಮತ್ (ಕಟಪಾಡಿ, ಉಡುಪಿ ಜಿಲ್ಲ), ಸಾನಿಯಾ ಐ, ಯಲಿಗಾರ (ಗಜೇಂದ್ರ ಗಡ, ಗದಗ ಜಿಲ್ಲೆ), ಕಾಶೀಕ್ ಎಂ.ಎಸ್. (ಭರಮಸಾಗರ, ಚಿತ್ರದುರ್ಗ ಜಿಲ್ಲೆ), ಪ್ರಗತಿ ಡಿ.ಕೆ, (ಜಿಗಳಿ, ಹರಿಹಾರ ತಾಲ್ಲೂಕು) ಅವರು ಬಿಡಿಸಿದ ವರ್ಣಚಿತ್ರಗಳು ಪ್ರಶಸ್ತಿಗೆ ಆಯ್ಕೆಯಾಗಿವೆ. ಕಲಾವಿದೆ ಜೆ.ಎಂ.ಎಸ್. ಮಣಿ ಅವರು ವರ್ಣಚಿತ್ರ ಸ್ಪರ್ಧೆಯ ತೀರ್ಪುಗಾರ ಆಗಿದ್ದರು.

ವಿಜೇತರಿಗೆ ಬಹುಮಾನ

ಕಥಾ ಸ್ಪರ್ಧೆಯಲ್ಲಿ ಬಹಮಾನ ಪಡೆದ ಮೊದಲ ಮೂರು ಕಥೆಗಳಿಗೆ ಕ್ರಮವಾಗಿ ಇಪ್ಪತ್ತು ಸಾವಿರ, ಹದಿನೈದು ಸಾವಿರ ಮತ್ತು ಹತ್ತು ಸಾವಿರ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ಲಭಿಸಲಿದೆ. ಕವನ ಸ್ಪರ್ಧೆ ವಿಭಾಗದ ಮೊದಲ ಮೂರು ಕವನಗಳಿಗೆ ಕ್ರಮವಾಗಿ ಐದು ಸಾವಿರ, ಮೂರು ಸಾವಿರ ಮತ್ತು ಎರಡುವರೆ ಸಾವಿರ ನಗದು ಮತ್ತು ಪ್ರಶಸ್ತಿ ಪತ್ರ ದೊರೆಯಲಿದೆ.


MORE NEWS

ಕುವೆಂಪು ಪರಿಸರದಲ್ಲಿ ದೇವರನ್ನ ಕಂಡರೆ, ರಾಜ್‌ಕುಮಾರ್‌ ಅಭಿಮಾನಿಗಳಲ್ಲಿ ದೇವರನ್ನ ಕಂಡರು: ಬರಗೂರು

18-04-2024 ಬೆಂಗಳೂರು

ಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರೇ ನನ್ನ ವಿಶ್ವ ಮಾನವ ಸಂದೇಶವನ್ನು ಜನರಿಗೆ ತಲುಪಿಸುವ ಶಕ್ತಿ ಇರುವುದು ರಾಜ್&zwnj...

ಹಾಸನ ಸಂಸ್ಕೃತ ಭವನದಲ್ಲಿ ವಿಶ್ವ ಕಲಾ ದಿನಾಚರಣೆ, ಚಿತ್ರಕಲಾ ಪ್ರದರ್ಶನ ಸ್ಫರ್ಧೆ

18-04-2024 ಬೆಂಗಳೂರು

ಕಲೆಗೆ ಗೌರವವನ್ನು ವ್ಯಕ್ತಪಡಿಸಲು ವಿಶ್ವ ಕಲಾ ದಿನವನ್ನು ಆಚರಿಸಲಾಗುತ್ತಿದೆ. ವಿಶ್ವ ಕಲಾ ದಿನವು ಸಮಾಜದಲ್ಲಿ ಕಲೆಯ ಪ್ರಾ...

ತನುಶ್ರೀ ಸಾಹಿತ್ಯ ವೇದಿಕೆಯಿಂದ ಕವಿಗೋಷ್ಠಿಗೆ ಕವನಗಳ ಆಹ್ವಾನ

16-04-2024 ಬೆಂಗಳೂರು

ಚಿತ್ರದುರ್ಗ: ತನುಶ್ರೀ ಸಾಹಿತ್ಯ, ಸಾಂಸ್ಕೃತಿಕ ಕಲಾ ವೇದಿಕೆಯಿಂದ ರಾಜ್ಯ ಮಟ್ಟದ ಕವಿಗೋಷ್ಠಿಗೆ ಕವನಗಳನ್ನು ಆಹ್ವಾನಿಸಲಾಗ...