ಪುಂಡರು-ಸಂಸ್ಕೃತಿ ಗುತ್ತಿಗೆದಾರರ ಮಧ್ಯೆ ಹೆಣ್ಣು ತತ್ತರ : ವೈದೇಹಿ ಆತಂಕ

Date: 27-01-2021

Location: ಉಡುಪಿ


ಭಾರತದಲ್ಲಿ ಒಂದೆಡೆ ಪುಂಡ ಪೋಕರಿಗಳು ಮತ್ತೊಂದೆಡೆ ಇಡೀ ಭಾರತೀಯ ಸಂಸ್ಕೃತಿಯ ಗುತ್ತಿಗೆದಾರರು ಎಂಬಂತೆ ವರ್ತಿಸುತ್ತಿರುವವರ ಮಧ್ಯೆ ಹೆಣ್ಣು ಮಕ್ಕಳು ತತ್ತರಿಸುವ ವಾತಾವರಣ ಸೃಷ್ಟಿಯಾಗಿದೆ ಎಂದು ಖ್ಯಾತ ಲೇಖಕಿ-ಚಿಂತಕಿ ವೈದೇಹಿ ಅವರು ತೀವ್ರ ಆತಂಕ ವ್ಯಕ್ತಪಡಿಸಿದರು.

ಉಸಿರು ಕೋಟ ಹಾಘೂ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬ್ರಹ್ಮಾವರ ತಾಲೂಕಿನ ಹಂಗಾರಕಟ್ಟೆಯ ಚೈತನ್ಯ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಉಡುಪಿ ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರೈತರು ಆತ್ಮಗೌರವದಿಂದ ಬದುಕುವ, ನಿರ್ಲಕ್ಷಿತ ವರ್ಗದ ಜನತೆ ಭರವಸೆಯಿಂದ ಬದುಕುವ ಹಾಗೂ ಮಹಿಳೆಯರು ಸಾಮಾಜಿಕವಾಗಿ ಭಯ-ಭೀತಿ ಇಲ್ಲದೇ ಗೌರವದಿಂದ ಬದುಕುವಂತಾಗಬೇಕು. ಆದರೆ, ಭಾರತದಲ್ಲಿ ಇಂತಹ ಭರವಸೆಗಳು ಕಡಿಮೆಯಾಗುತ್ತಿದೆ. ಪುಂಡ-ಪೋಕರಿಗಳು ಹೆಚ್ಚುತ್ತಿದ್ದರೆ ಭಾರತೀಯ ಸಂಸ್ಕೃತಿಯ ವಾರಸುದಾರರಂತೆ ವರ್ತಿಸುವವರ ಹಾವಳಿ ಹೆಚ್ಚುತ್ತಿದೆ. ಇವರ ಮಧ್ಯೆ ಹೆಣ್ಣುಮಕ್ಕಳು ಜೀವಭಯದಿಂದ ಬದುಕುವಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ತೋರಿಕೆಗೆ ಮಾತ್ರ ಕಾನೂನು: ಮಹಿಳೆಯ ಸುರಕ್ಷತೆ ಕುರಿತು ಕಾನೂನುಗಳಿವೆ. ಆದರೆ, ಅವು ತೋರಿಕೆಗೆ ಮಾತ್ರ ಎಂಬಂತಿವೆ. ಅದರಿಂದ, ಮಹಿಳೆಯರ ಸುರಕ್ಷತೆ ಆಗುತ್ತಿಲ್ಲ. ಶಾಲಾ-ಕಾಲೇಜುಗಳಿಗೆ ಹುಡುಗಿಯ ಸಂಖ್ಯೆ ಹೆಚ್ಚುತ್ತಿದೆಯಾದರೂ ಇಂದಿಗೂ ಅವರು ಭೀತಿಯಲ್ಲೇ ಶಾಲಾ-ಕಾಲೇಜಿನತ್ತ ಹೋಗಬೇಕಿದೆ. ಕಾಡಿನ ದಾರಿಗಳು ಸಹ ಇಂದಿಗೂ ಸುಧಾರಣೆ ಕಂಡಿಲ್ಲ ಎಂದು ವಿಷಾದಿಸಿದರು.

ಭಾರತವು ರಾಜಕೀಯ ಪಕ್ಷಗಳ ಆಸ್ತಿಯಲ್ಲ: ಭಾರತವನ್ನು ಕೆಲವು ರಾಜಕೀಯ ಪಕ್ಷಗಳು ತಮ್ಮದೇ ಪಿತ್ರಾರ್ಜಿತ ಆಸ್ತಿಯಂತೆ ಮನಬಂದಂತೆ ವರ್ತಿಸುತ್ತಿವೆ. ತಾವೇ ಭಾರತೀಯ ಸಂಸ್ಕೃತಿಯ ವಾರಸುದಾರರು ಎಂಬ ಘೋಷಣೆಗಳು ಕೇಳಿ ಬರುತ್ತಿವೆ. ಮೌಢ್ಯಗಳ ವಿರುದ್ಧ ಮಾತನಾಡಿದರೆ ಅವರ ಅಭಿಪ್ರಾಯ ಸ್ವಾತಂತ್ಯ್ರದ ಹಕ್ಕನ್ನು ಕಸಿಸಲಾಗುತ್ತಿದೆ. ಹಲ್ಲೆಗಳು ನಡೆಯುತ್ತಿವೆ. ಈ ಬಗ್ಗೆ ಸೃಜನಶೀಲವಾಗಿ ಚಿಂತನೆ ನಡೆಸುವವರು ಎಚ್ಚರವಹಿಸಬೇಕಿದೆ. ದೇಶವು ಅಸಹನೆಯ ಬೆಂಕಿಯಿಂದ ಉರಿಯುತ್ತಿರುವಾಗ ಅದಕ್ಕೆ ಕಾರಣರಾಗುವವರ ವಿರುದ್ಧ ಮಾತನಾಡಬೇಕು. ಮೌನ ಸರಿಯಲ್ಲ ಎಂದೂ ಅವರು ಹೇಳಿದರು.

ಕನ್ನಡ ಮಾಧ್ಯಮ ಶಾಲೆಗಳು: ಕನ್ನಡ ಉಳಿಸುವತ್ತ ಮಾತನಾಡುತ್ತೇವೆ. ಆದರೆ, ಕನ್ನಡದ ಉಳಿವಿನಲ್ಲಿ ಪ್ರಮುಖ ಪಾತ್ರವಹಿಸುವ ಕನ್ನಡ ಶಾಲೆಗಳನ್ನು ಸುಧಾರಿಸುವತ್ತ ಗಮನ ನೀಡುತ್ತಿಲ್ಲ. ಇಂಗ್ಲಿಷ್ ಮಾಧ್ಯಮದ ಶಿಕ್ಷಣದ ಬದಲು ಒಂದು ಭಾಷೆಯಾಗಿ ಪ್ರಾಥಮಿಕ ಶಿಕ್ಷಣವಿರಬೇಕು. ಕನ್ನಡ ಮಾಧ್ಯಮದ ಆಭ್ಯರ್ಥಿಗಳಿಗೆ ಉದ್ಯೋಗಾವಕಾಶ ನೀಡುವಂತೆ ಕ್ರಮ ಕೈಗೊಳ್ಳಬೇಕು. ಕೋಮು ಸೌಹಾರ್ದತೆ ಕಾಯ್ದುಕೊಳ್ಳಬೇಕು ಎಂದೂ ಅವರು ಆಶಿಸಿದರು.

 

 

 

MORE NEWS

2024ನೇ ಸಾಲಿನ ಬುಕ್‌ ಬ್ರಹ್ಮ ಕಥಾ ಸ್ಪರ್ಧೆ - ಕಾದಂಬರಿ ಪುರಸ್ಕಾರಕ್ಕೆ ಆಹ್ವಾನ

29-03-2024 ಬೆಂಗಳೂರು

ʻಬುಕ್‌ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ 2024 ಮತ್ತು ಕಾದಂಬರಿ ಪುರಸ್ಕಾರ 2024ʼ ರೂ. 2 ಲಕ್ಷ 69 ಸ...

25 ಮಂದಿಗೆ ಕೆಯುಡಬ್ಲ್ಯುಜೆ ದತ್ತಿ ನಿಧಿ ಪ್ರಶಸ್ತಿ

28-03-2024 ಬೆಂಗಳೂರು

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಕೊಡಮಾಡುವ ಪ್ರಸಕ್ತ ಸಾಲಿನ ಕೆಯುಡಬ್ಲ್ಯುಜೆ ದತ್ತಿ ನಿಧಿ ಪ್ರಶಸ್...

ಖ್ಯಾತ ರಂಗ ನಿರ್ದೇಶಕ ಶ್ರೀ ಪಾದ ಭಟ್ ಗೆ 'ರಂಗ ಭೂಪತಿ' ಪ್ರಶಸ್ತಿ

28-03-2024 ಬೆಂಗಳೂರು

ಬೆಂಗಳೂರು: ಪ್ರಸಿದ್ಧ ನಾಟಕಕಾರರಾದ ದಿ.ಗೋಪಾಲ ವಾಜಪೇಯಿ ಅವರ ಹೆಸರಿನಲ್ಲಿ ಸ್ಥಾಪಿಸಲಾಗಿರುವ 'ರಂಗ ಭೂಪತಿ' ಪ್ರ...