ಪುಸ್ತಕ ವಿನ್ಯಾಸ, ಮುದ್ರಣ:ಅಭಿನವ ಪ್ರಕಾಶನಕ್ಕೆ ರಾಷ್ಟ್ರ ಪ್ರಶಸ್ತಿಯ ಗರಿ 

Date: 28-10-2020

Location: ನವದೆಹಲಿ


ನವದೆಹಲಿಯ ಭಾರತೀಯ ಪ್ರಕಾಶಕರ ಒಕ್ಕೂಟವು 2020ನೇ ಸಾಲಿನ ಅತ್ಯುತ್ತಮ ಪುಸ್ತಕಗಳ ವಿನ್ಯಾಸ ಮತ್ತು ಮುದ್ರಣಕ್ಕೆ ನೀಡುವ ಪ್ರಶಸ್ತಿಗಾಗಿ ಅಭಿನವ ಪ್ರಕಾಶನದ ಎಂ. ಬಸವಣ್ಣ ಅವರ ‘ಸಿಗ್ಮಂಡ್ ಫ್ರಾಯ್ಡ್’ (ಜೀವನ-ದರ್ಶನ) ಕೃತಿಗೆ ಪ್ರಥಮ ಬಹುಮಾನ ಹಾಗೂ ಸರ್ಟಿಫಿಕೆಟ್ ಆಫ್ ಮೆರಿಟ್ ಬಹುಮಾನಕ್ಕೆ ಹ. ಶಿ. ಭೈರನಟ್ಟಿ ಅವರ 'ಆರೋಹಣ' (ಮಕ್ಕಳಿಗಾಗಿ ವೈಜ್ಞಾನಿಕ ಕಾದಂಬರಿ) ಕೃತಿ ಆಯ್ಕೆಯಾಗಿದೆ.

ಕನ್ನಡ ಪುಸ್ತಕಗಳ ಈ ಆಯ್ಕೆಯು ರಾಷ್ಟ್ರಮಟ್ಟದಲ್ಲಿ ದೊರೆತ ದೊಡ್ಡ ಗೌರವ ಎಂದು ಪರಿಗಣಿಸಲಾಗುತ್ತಿದ್ದು, ವರ್ಚುವಲ್ ದೆಹಲಿ ಪುಸ್ತಕ ಮೇಳದಲ್ಲಿ (2020ರ ಅಕ್ಟೋಬರ್ 30 ರಂದು) ಬಹುಮಾನಗಳನ್ನು ವಿತರಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

MORE NEWS

ಕುವೆಂಪು ಪರಿಸರದಲ್ಲಿ ದೇವರನ್ನ ಕಂಡರೆ, ರಾಜ್‌ಕುಮಾರ್‌ ಅಭಿಮಾನಿಗಳಲ್ಲಿ ದೇವರನ್ನ ಕಂಡರು: ಬರಗೂರು

18-04-2024 ಬೆಂಗಳೂರು

ಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರೇ ನನ್ನ ವಿಶ್ವ ಮಾನವ ಸಂದೇಶವನ್ನು ಜನರಿಗೆ ತಲುಪಿಸುವ ಶಕ್ತಿ ಇರುವುದು ರಾಜ್&zwnj...

ಹಾಸನ ಸಂಸ್ಕೃತ ಭವನದಲ್ಲಿ ವಿಶ್ವ ಕಲಾ ದಿನಾಚರಣೆ, ಚಿತ್ರಕಲಾ ಪ್ರದರ್ಶನ ಸ್ಫರ್ಧೆ

18-04-2024 ಬೆಂಗಳೂರು

ಕಲೆಗೆ ಗೌರವವನ್ನು ವ್ಯಕ್ತಪಡಿಸಲು ವಿಶ್ವ ಕಲಾ ದಿನವನ್ನು ಆಚರಿಸಲಾಗುತ್ತಿದೆ. ವಿಶ್ವ ಕಲಾ ದಿನವು ಸಮಾಜದಲ್ಲಿ ಕಲೆಯ ಪ್ರಾ...

ತನುಶ್ರೀ ಸಾಹಿತ್ಯ ವೇದಿಕೆಯಿಂದ ಕವಿಗೋಷ್ಠಿಗೆ ಕವನಗಳ ಆಹ್ವಾನ

16-04-2024 ಬೆಂಗಳೂರು

ಚಿತ್ರದುರ್ಗ: ತನುಶ್ರೀ ಸಾಹಿತ್ಯ, ಸಾಂಸ್ಕೃತಿಕ ಕಲಾ ವೇದಿಕೆಯಿಂದ ರಾಜ್ಯ ಮಟ್ಟದ ಕವಿಗೋಷ್ಠಿಗೆ ಕವನಗಳನ್ನು ಆಹ್ವಾನಿಸಲಾಗ...