ರಾಯಚೂರಿನಲ್ಲಿ ಸಾಹಿತ್ಯ ಲೋಕದ ಅನಾವರಣ

Date: 24-10-2019

Location: ಸಿಂಧನೂರು


ಸಾಹಿತ್ಯಾಸಕ್ತರು, ಕನ್ನಾಡಾಭಿಮಾನಿಗಳ ಆಗಮನದಿಂದ ರಾಯಚೂರಿನಲ್ಲಿ ನಡೆದ ಸಮ್ಮೇಳನವು ಕಳೆಗೊಂಡಿತ್ತು. ಜಿಲ್ಲಾ 10ನೇ ಕನ್ನಡ ಸಾಹಿತ್ಯ ಸಮ್ಮೇಳನವು ಸಿಂಧನೂರು ಸಮೀಪದ ಹೊಸಳ್ಳಿ ಕ್ಯಾಂಪ್‌ನ ಕಮ್ಮವಾರ ಕಲ್ಯಾಣ ಮಂಟಪದಲ್ಲಿನಡೆಯಿತು. ಸಮ್ಮೇಳನಾಧ್ಯಕ್ಷತೆಯನ್ನು ಹೊತ್ತಿದ್ದ ಶಾಶ್ವತಸ್ವಾಮಿ ಮುಕ್ಕುಂದಿಮಠ  ಉದ್ಘಾಟನಾ ಸಮಾರಂಭದ ನಂತರ ಮಾತನಡಿದ ಅವರು “ಜಿಲ್ಲೆಯ ಇತಿಹಾಸ ಸಾಹಿತ್ಯ ಮತ್ತು ಸಂಸ್ಕೃತಿಗೆ ಉಜ್ವಲ ಇತಿಹಾಸವಿದೆ. ನಿಜಾಮರ ಕಾಲದಲ್ಲಿ ಕನ್ನಡ ಭಾಷೆಯನ್ನು ಜೀವಂತವಾಗಿ ಉಳಿಸಿದ ಕೀರ್ತಿ ರಾಯಚೂರಿಗೆ ಇದೆ” ಎಂದರು. “ಭಾಷೆ ವಿಷಯದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ದೇಶದಲ್ಲಿ ಒತ್ತಡದಿಂದ ಹಿಂದೆ ಹೇರಿಕೆ ಮಾಡುತ್ತಿರುವುದು ದುರದೃಷ್ಟಕರ ಸಂಗತಿ. ಇದನ್ನು ಪ್ರತಿಯೊಬ್ಬ ಕನ್ನಡಾಭಿಮಾನಿಯೂ ವಿರೋಧಿಸಬೇಕು”, “ರಾಯಚೂರು ಜಿಲ್ಲೆಯ ರೈತರು ಕೃಷಿಗೆ ತುಂಗಭದ್ರಾ ಡ್ಯಾಂ ಅವಲಂಭಿಸಿದ್ದಾರೆ. ಪ್ರತಿ ವರ್ಷ ಎರಡು ಬೆಳೆ ಬೆಳೆಯುತ್ತಿದ್ದ ರೈತರು ಇತ್ತೀಚಿಗೆ ನೀರಿನ ಕೊರತೆಯಿಂದ ಒಂದೇ ಬೆಳೆ ಬೆಳೆಯುತ್ತಿದ್ದಾರೆ. ಈ ಬಗ್ಗೆ ಚಿಂತನೆ ನಡೆಯಬೇಕಿದೆ. ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಜನಪ್ರತಿನಿಧಿಗಳು ಮುಂದಾಗಬೇಕು” ಎಂದು ಹಿರಿಯ ಸಾಹಿತಿ ಅಮರೇಶ ನುಡಗೋಣಿ ನುಡಿದರು. 

ಸಮ್ಮೇಳನಾಧ್ಯಕ್ಷ ಶಾಶ್ವತಸ್ವಾಮಿ ಬೆಳೆಯಲಿ ಮುಕ್ಕುಂದಿಮಠ, ಶಾಸಕ ವೆಂಕಟರಾವ್, ನಾಡಗೌಡ, ರಾಜಾ ವೆಂಕಟಪ್ಪ ನಾಯಕ, ಕಸಾಪ ಜಿಲ್ಲಾ ಅಧ್ಯಕ್ಷ ಬಸವಪ್ರಭು ಬೆಟ್ಟದೂರು, ಮಾಜಿ ಶಾಸಕ ಹಂಪನಗೌಡ ಬಾದರ್ಲಿ, ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ ಜಿಪಂ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ, ರಾಜಶೇಖರ ನೀರಮಾನ್ವಿ, ಕೃಷಿ ಬೆಲೆ ಆಯೋಗ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ, ಜಿಲ್ಲಾಧಿಕಾರಿ ವೆಂಕಟೇಶಕುಮಾರ, ಕೆ. ಕರಿಯಪ್ಪ, ಶಿವನಾಗಪ್ಪ ಎಸ್. ಶರಣೆಗೌಡ, ಸರಸ್ವತಿ ಪಾಟೀಲ, ಕಮ್ಮವಾರಿ ಕಲ್ಯಾಣ ಮಂಟಪದ ಬಿ. ಹರ್ಷ ಹಾಜರಿದ್ದರು. 

MORE NEWS

ಎಸ್.ಜ್ಯೋತಿ ಅವರ ‘ಅತ್ತೆ ನಿಮಗೊಂದು ಪ್ರಶ್ನೆ’ ಪುಸ್ತಕ ಬಿಡುಗಡೆ ಸಮಾರಂಭ

19-03-2024 ಬೆಂಗಳೂರು

ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...

ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರಬಂದಗಳಿಗೆ ಆಹ್ವಾನ

17-12-2023 ಬೆಂಗಳೂರು

ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...

ಸಾಂಸ್ಕೃತಿಕ ಸಂವಿಧಾನದ ಅರಿವು ಅಗತ್ಯ : ಪ್ರೊ.ನಟರಾಜ ಬೂದಾಳು

06-12-2023 ಬೆಂಗಳೂರು

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...