ರೈತರ ಮೇಲಿನ ಶೋಷಣೆಯ ಕುರಿತು ಬೆಳಕು ಚೆಲ್ಲಿದ ಕೃತಿ ‘ಜರ್ಮನ್ ರೈತ ಯುದ್ಧ’ - ಜಿ.ಎನ್. ನಾಗರಾಜ್

Date: 22-09-2022

Location: ಬೆಂಗಳೂರು


ರೈತರ ಮೇಲಿನ ಶೋಷಣೆಯನ್ನು "ಜರ್ಮನ್ ರೈತ ಯುದ್ಧ" ಕೃತಿಯಲ್ಲಿ ಬಹಳ ವಿಸ್ತಾರವಾಗಿ ವಿವರಿಸಲಾಗಿದ್ದು ಬಂಡವಾಳ ಶಾಹಿಗಳಿಗೂ ಇದರ ಪರಿಣಾಮ ಹೇಗೆ ಬೀರಿದೆ ಎಂಬುದನ್ನು ತಿಳಿಸಲಾಗಿದೆ ಎಂದು ಜಿ.ಎನ್.ನಾಗರಾಜ್ ಹೇಳಿದರು.

ಅವರು ಕ್ರಿಯಾ ಮಾಧ್ಯಮ ಮತ್ತು ನವಕರ್ನಾಟಕ ವತಿಯಿಂದ ನಡೆದ ಫ್ರೆಡರಿಕ್ ಎಂಗೆಲ್ಸ್ ರಚಿಸಿರುವ, ನಾ ದಿವಾಕರ್ ಕನ್ನಡಕ್ಕೆ ಅನುವಾದಿಸಿರುವ "ಜರ್ಮನ್ ರೈತ ಯುದ್ಧ" ಕೃತಿಯನ್ನು ಬೆಂಗಳೂರಿನ ಪುಸ್ತಕ ಪ್ರೀತಿ ಮಳಿಗೆಯಲ್ಲಿ ಬಿಡುಗಡೆ ಮಾಡಿ ಮಾತಾನಾಡಿದರು.

ಜರ್ಮನ್‌ ರೈತ ಯುದ್ಧ ಪುಸ್ತಕಗಳಿಂದ ಸಾಕಷ್ಟು ವಿಚಾರಗಳನ್ನು ನಾವು ಕಲಿಯಬಹುದಾಗಿದೆ. ರೈತ ಚಳುವಳಿಯ ಪ್ರಭಾವ ಹಾಗೂ ಅಗಾಧತೆಯನ್ನು ಈ ಕೃತಿಯಿಂದ ತಿಳಿಯಲು ಸಾಧ್ಯ. ರೈತ ಚಳುವಳಿಯನ್ನು ಯಶಸ್ವಿಗೊಳಿಸುವಲ್ಲಿ ಕಾರ್ಮಿಕರ ಪಾತ್ರ ಪ್ರಮುಖವಾಗಿದೆ ಎಂಬುದು ಈ ಕೃತಿಯನ್ನ ಓದಿದ ನಂತರ ತಿಳಿಯಿತು ಎಂಬುದಾಗಿ ನುಡಿದರು.

ಆನ್ ಲೈನ್ ಮೂಲಕ ಡಾ.ಬಂಜಗೆರೆ ಜಯಪ್ರಕಾಶ್ ಮಾತನಾಡಿದರು. ಪಿ.ವಿ.ಲೋಕೇಶ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು ಕ್ರಿಯಾ ಮಾಧ್ಯಮದ ವಸಂತ್ ರಾಜ್ ಪ್ರಾಸ್ತಾವಿಕ ಮಾತನಾಡಿದರು. ನವಕರ್ನಾಟಕದ ಸಿದ್ದನಗೌಡ ಪಾಟೀಲ ವಂದಿಸಿದರು.


MORE NEWS

ವಿಶು ಕುಮಾರ್ ಸಾಹಿತ್ಯ ಪ್ರಶಸ್ತಿ: ...

01-10-2022 ಬೆಂಗಳೂರು

ಯುವ ವಾಹಿನಿ ಕೇಂದ್ರ ಸಮಿತಿಯಿಂದ ನೀಡಲಾಗುವ ವಿಶು ಕುಮಾರ್ ಸಾಹಿತ್ಯ ಪ್ರಶಸ್ತಿಗೆ ಈ ಬಾರಿ ಲೇಖಕ, ವಿಮರ್ಶಕ ಡಾ. ಬಿ. ಜನಾ...

ಕನ್ನಡವು ಸಂವಹನಕ್ಕಷ್ಟೇ ಅಲ್ಲ; ಅದಕ...

01-10-2022 ಬೆಂಗಳೂರು

ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸರಕಾರಿ ಶಾಲೆಗಳಿಗೆ ಮೂಲಭೂತ ಸೌಲಭ್ಯಗಳನ್ನು ಪೂರೈಸಲು 5 ಕೋಟಿ ಅನುದಾನ...

ಪುಸ್ತಕಗಳ ರಚನೆಯಲ್ಲಿ ಎಚ್ಚರಿಕೆ ಅವ...

30-09-2022 ಪುತ್ತೂರು.

ಪುಸ್ತಕಗಳು ಓದುಗರ ಹಾಗೂ ಸಮಾಜದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಲೇಖಕರು ಪುಸ್ತಕವನ್ನು ಎಚ್ಚರಿಕೆಯಿಂದ ರಚಿಸಬೇಕಾದ...