ರಾಜೇಂದ್ರ ಪ್ರಸಾದ್‌‌ಗೆ ನರಹಳ್ಳಿ ಪ್ರಶಸ್ತಿ

Date: 22-10-2019

Location: ಬೆಂಗಳೂರು


ಕವಿ ಹಾಗೂ ಸಂಕಥನ ಸಾಹಿತ್ಯ ಪತ್ರಿಕೆಯ ಸಂಪಾದಕರಾದ ರಾಜೇಂದ್ರ ಪ್ರಸಾದ್ ಅವರ 2019 ರ ನರಹಳ್ಳಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಏಳು ಕವನ ಸಂಕಲನ ಪ್ರಕಟಿಸಿರುವ ರಾಜೇಂದ್ರ ಪ್ರಸಾದ್ ಅವರು  ಸಾಹಿತ್ಯ,  ಬರವಣಿಗೆ ಹಾಗೂ ಸಂಗೀತದಲ್ಲಿ ಆಸಕ್ತಿ ಹೊಂದಿದ್ದಾರೆ. ಚಂದ್ರ ನೀರ ಹೂ, ಲಾವೋನ ಕನಸು, ಬ್ರೆಕ್ಟ್ ಪರಿಣಾಮ, ಕೋವಿ ಮತ್ತು ಕೊಳಲು, ಒಂದಿಷ್ಟು ಪ್ರೀತಿಗೆ ಕವನ ಸಂಕಲನ ಹಾಗೂ ಕೆ.ಎಸ್‌.ನ. ಕವಿತೆಗಳ ಕುರಿತ ’ಹೂಬುಟ್ಟಿ’ (ಸಂಪಾದನೆ) ಕೃತಿಗಳನ್ನು ಪ್ರಕಟಿಸಿದ್ದಾರೆ.

ರಾಜೇಂದ್ರ ಅವರಿಗೆ ಬೇಂದ್ರೆ ಗ್ರಂಥ ಬಹುಮಾನ, ಟೋಟೋ ಪುರಸ್ಕಾರ, ಕಡೆಂಗೋಡ್ಲು ಕಾವ್ಯ ಪುರಸ್ಕಾರ, ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿದ್ದಾರೆ. 

ಡಾ. ನರಹಳ್ಳಿ ಪ್ರತಿಷ್ಠಾನವು ಕಳೆದ ಆರು ವರ್ಷಗಳಿಂದ ಪ್ರತಿಭಾವಂತ ಯುವಲೇಖಕರಿಗೆ ’ನರಹಳ್ಳಿ ಪ್ರಶಸ್ತಿ’ ನೀಡಿ ಗೌರವಿಸುತ್ತಿದೆ. ಪ್ರಶಸ್ತಿಯು ಹತ್ತು ಸಾವಿರ ರೂ ನಗದು ಹಾಗೂ ಫಲಕವನ್ನು ಹೊಂದಿದೆ. ನವೆಂಬರ್‌ 17ರಂದು ಭಾನುವಾರ ಬೆಳಗ್ಗೆ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಕವಿ ರಾಜೇಂದ್ರ ಪ್ರಸಾದ್ ಅವರ ಕಾವ್ಯದ ಕುರಿತು ಶ್ರೀಧರ ಪಿಸ್ಸೆಯವರು ಋತುಮಾನದಲ್ಲಿ ಬರೆದ ಲೇಖನ

https://ruthumana.com/2017/01/22/lavonakanasu/?fbclid=IwAR0f3ImhYSivuqIXqVkm36AqDwsdhNhcPCJ5VVT9ITT-RtXQgrF-cc_xkig

MORE NEWS

ಎಸ್.ಜ್ಯೋತಿ ಅವರ ‘ಅತ್ತೆ ನಿಮಗೊಂದು ಪ್ರಶ್ನೆ’ ಪುಸ್ತಕ ಬಿಡುಗಡೆ ಸಮಾರಂಭ

19-03-2024 ಬೆಂಗಳೂರು

ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...

ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರಬಂದಗಳಿಗೆ ಆಹ್ವಾನ

17-12-2023 ಬೆಂಗಳೂರು

ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...

ಸಾಂಸ್ಕೃತಿಕ ಸಂವಿಧಾನದ ಅರಿವು ಅಗತ್ಯ : ಪ್ರೊ.ನಟರಾಜ ಬೂದಾಳು

06-12-2023 ಬೆಂಗಳೂರು

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...