ರಾಜ್ಯಮಟ್ಟದ ನೂಪುರ ನೃತ್ಯೋತ್ಸವ

Date: 27-01-2023

Location: ಬೀದರ


ಬೀದರ್‌ ನ ನೂಪುರ ನೃತ್ಯ ಅಕಾಡೆಮಿ ವತಿಯಿಂದ ಜನವರಿ 29 ರಂದು ರಾಜ್ಯ ಮಟ್ಟದ "ನೂಪುರ ನೃತ್ಯೋತ್ಸವ" ಡಾ ಚನ್ನಬಸವ ಪಟ್ಟದ್ದೇವರ ಜಿಲ್ಲಾ ರಂಗಮಂದಿರದಲ್ಲಿ ನಡೆಯಲಿದೆ.

ಅಂದು ಸಂಜೆ ಅಕಾಡೆಮಿಯ ವಿದ್ಯಾರ್ಥಿಗಳಿಂದ ಗುರುವಂದನೆ, ಅಲರಿಪು, ಕೌತ್ತಂ, ಶ್ಲೋಕಗಳು ಹಾಗೂ ರೂಪಕಗಳು ಪ್ರದರ್ಶನಗೊಳ್ಳಲಿವೆ. ವಿಶೇಷವಾಗಿ ಸಿದ್ದೇಶ್ವರಶ್ರೀಗಳಿಗೆ ನೃತ್ಯ ನಮನವನ್ನು ಉಷಾ ಪ್ರಭಾಕರ ನಡೆಸಿಕೊಡಲಿದ್ದಾರೆ. ಜಾನಪದ ನೃತ್ಯ ಪ್ರಕಾರದಲ್ಲಿ ದೇಶದ ವಿವಿಧತೆಯನ್ನು ಬಿಂಬಿಸುವ ರಾಜಸ್ಥಾನಿ ನೃತ್ಯ, ಗರ್ಭಾ ನೃತ್ಯ, ಬಂಗಾಳಿ ನೃತ್ಯ, ಕೋಲಾಟಗಳಿದ್ದು ಮನರಂಜಿಸಲಿವೆ. ಭಾಷಾವಾರು ವಿಭಾಗದಲ್ಲಿ ಕೊಂಕಣಿ ಮತ್ತು ಬಂಗಾಳಿ ನೃತ್ಯಗಳನ್ನು ಆಯೋಜಿಸಲಾಗಿದೆ. ದೇಶಭಕ್ತಿಗೀತೆಗಳಿಗೆ ಮೈನವಿರೇಳೀಸುವ ನರ್ತನಗಳು ಪ್ರೇಕ್ಷಕರನ್ನು ಮುದಗೊಳಿಸಲಿವೆ. ಹಿಂದಿ ಹಾಡುಗಳಿಗೆ, ಹಳೆಯ ಚಿತ್ರಗೀತೆಗಳಿಗೆ ಸುಮಧುರವಾದ ಅಭಿನಯದೊಂದಿಗೆ ನೃತ್ಯಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಲಿದ್ದಾರೆ.

ಶಾಸ್ತ್ರೀಯ ನೃತ್ಯ ವಿಭಾಗದಲ್ಲಿ ಕೃಷ್ಣಲೀಲಾ ಕಥಾ ರೂಪಕ, ಬಸವಣ್ಣನ ವಚನಗಳಿಗೆ ನೃತ್ಯ, ಮಾತೆಯರಿಂದ ನಟರಾಜ ನೃತ್ಯ ನಮನ ವಿಶೇಷ ಆಕರ್ಷಣೆಯಾಗಿ ಕಾಂತಾರದ ಮೋಹಿನಿ ಅಟ್ಟಂ ನೃತ್ಯ ಪ್ರದರ್ಶನಗೊಳ್ಳಲಿವೆ. ಪಾಶ್ಚಾತ್ಯ ಸಂಗೀತ ಮತ್ತು ಶಾಸ್ತ್ರೀಯ ನೃತ್ಯಗಳನ್ನು ಬೆಸೆಯುವ ಫ್ಯೂಷನ್‌ ಡಾನ್ಸಗಳು ಇರಲಿವೆ.

ಕಲ್ಯಾಣ ಕರ್ನಾಟಕದಲ್ಲಿ ಒಂದೂವರೆ ದಶಕದಿಂದ ಭರತನಾಟ್ಯ, ಜಾನಪದ, ಶಾಸ್ತ್ರೀಯ ನೃತ್ಯ ಮತ್ತು ಪಾರಂಪರಿಕ ನೃತ್ಯಗಳನ್ನು ಪ್ರಚಾರ ಜೊತೆಗೆ ಇಲ್ಲಿನ ಆಸಕ್ತ ವಿದ್ಯಾರ್ಥಿಗಳಿಗೆ ನೃತ್ಯ ಕಲಿಸುವುದು ಹಾಗೂ ವಿದೇಶಗಳಲ್ಲಿ ಪ್ರದರ್ಶನ ನೀಡುವಲ್ಲಿ ನೂಪುರ ಅಕಾಡೆಮಿ ಕಾರ್ಯನಿರತವಾಗಿದೆ.

MORE NEWS

ಅವಿರತ ಹರೀಶ್ ಅವರ ಅಭಿನಂದನಾ ಕಾರ್ಯಕ್ರಮ ಎಲ್ಲರಿಗೂ ಆದರ್ಶವಾಗಿದೆ; ಬರಗೂರು ರಾಮಚಂದ್ರಪ್ಪ

25-04-2024 ಬೆಂಗಳೂರು

ಬೆಂಗಳೂರು: ಅವಿರತ ಹರೀಶ್ ಗೆಳೆಯರ ಬಳಗದಿಂದ ಹಮ್ಮಿಕೊಂಡಿದ್ದ ಪ್ರಕಾಶಕ, ಲೇಖಕ, ಸಂಘಟಕ ಅವಿರತ ಹರೀಶ್ 60ರ ಸಾಂಸ್ಕೃತಿಕ ಸ...

ಮಾತೋಶ್ರೀ ರತ್ನಮ್ಮ ಹೆಗ್ಗಡೆ 47ನೇ ಮಹಿಳಾ ಗ್ರಂಥ ಬಹುಮಾನಕ್ಕೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾದಿಂದ 2023ನೇ ವರ್ಷದ ಮಹಿಳಾ ಶ್ರೇಷ್ಠ ಕನ್ನಡ ಕೃತಿಗಳಿಗೆ “ಮಾತೋಶ್ರೀ...

ಗಿರಡ್ಡಿ ಗೋವಿಂದರಾಜ ವಿಮರ್ಶಾ ಪ್ರಶಸ್ತಿಗೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಡಾ. ಗಿರಡ್ಡಿ ಗೋವಿಂದರಾಜ ಫೌಂಡೇಶನ್ ನಿಂದ “ವಿಮರ್ಶಾ ಪ್ರಶಸ್ತಿ"ಗೆ ವಿಮರ್ಶಾ ಕೃತಿಗಳನ್ನು ಆಹ್ವಾ...