ರವೀಂದ್ರ ಕರ್ಜಗಿಅವರ ಕಾವ್ಯ ಪುಸ್ತಕ ಬಿಡುಗಡೆ

Date: 22-10-2019

Location: ಕಲಬುರ್ಗಿ


ಸೇಡಂನ ಸಂಸ್ಕೃತಿ ಪ್ರಕಾಶನ ಪ್ರಕಟಿಸಿದ ಹಿರಿಯ ಕವಿ ರವೀಂದ್ರ ಕರ್ಜಗಿ ಅವರ ಸಮಸ್ತ ಕವನಗಳ ಸಂಪುಟ ಅನ್ವಯ ಕಾವ್ಯ ಪುಸ್ತಕವನ್ನು ವಿಜಯವಾಣಿ ಸ್ಥಾನಿಕ ಸಂಪಾದಕ ವಾದಿರಾಜ ವ್ಯಾಸಮುದ್ರ ಕಲಬುರಗಿಯಲ್ಲಿ ಭಾನುವಾರ ಬಿಡುಗಡೆ ಮಾಡಿದರು. ಡಾ.ವಾಸುದೇವ ಅಗ್ನಿಹೋತ್ರಿ, ಎಚ್.ಆರ್. ಶ್ರೀಶ, ಹೇಮಂತ ಕೊಲ್ಹಾಪುರ, ರವೀಂದ್ರ ಕರ್ಜಗಿ, ಪ್ರಭಾಕರ ಜೋಶಿ, ಬಿ.ಎಚ್. ನಿರಗುಡಿ ವೇದಿಕೆಯನ್ನಲಂಕರಿಸಿದ್ದರು.

ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನ ಭಾನುವಾರ ಆಯೋಜಿಸಿದ್ದ ಸೇಡಂನ ಸಂಸ್ಕೃತಿ ಪ್ರಕಾಶನ ಪ್ರಕಟಿಸಿದ ಹಿರಿಯ ಕವಿ ರವೀಂದ್ರ ಕರ್ಜಗಿ ಅವರ ಸಮಸ್ತ ಕವನಗಳ ಸಂಪುಟ ಅನ್ವಯ ಕಾವ್ಯ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಸಾಹಿತಿಗಳಿಗೂ ಸಾಮಾಜಿಕ ಕಳಕಳಿ ಬೇಕು. ಜನಸಂಪರ್ಕದ ಫಲವಾಗಿ ಮಾನವ ಘನತೆ ಹೆಚ್ಚಾಗುವಂತೆ ಬರಹ ಪ್ರೇರೇಪಿಸಬೇಕು ಎಂದರು. ಕೃತಿ ಬಿಡುಗಡೆ ಮಾಡಿದ ವಿಜಯವಾಣಿ ಸ್ಥಾನಿಕ ಸಂಪಾದಕ ವಾದಿರಾಜ ವ್ಯಾಸಮುದ್ರ ಮಾತನಾಡಿ, ವಿವಿಧ ಕಾಲಘಟ್ಟದಲ್ಲಿ ಕರ್ಜಗಿ ಪ್ರಕಟಿಸಿದ ಕಿರು ಹೊತ್ತಿಗೆಗಳನ್ನು ಸಮಗ್ರವಾಗಿ ಸಂಪಾದಿಸುವುದು ಸಾಹಿತ್ಯದ ದೃಷ್ಟಿಯಿಂದ ಉತ್ತಮ ಕಾರ್ಯ. ಒಬ್ಬ ಕವಿಯ ಕಾವ್ಯಶಕ್ತಿಯನ್ನು ಅರ್ಥ ಮಾಡಿಕೊಳ್ಳಲು ಇದರಿಂದ ಸಾಧ್ಯವಾಗುತ್ತದೆ ಎಂದು ಹೇಳಿದರು.

ಕೃತಿ ಪರಿಚಯಿಸಿದ ನೂತನ ವಿದ್ಯಾಲಯ ಡಿಗ್ರಿ ಕಾಲೇಜಿನ ಪ್ರಾಚಾರ್ಯ ಹೇಮಂತ ಕೊಲ್ಹಾಪುರೆ, ರವೀಂದ್ರ ಕರ್ಜಗಿ ಅವರ ಆರಂಭದ ಕವಿತೆಗಳಿಂದ ಹಿಡಿದು ಇತ್ತೀಚಿನ ಕವಿತೆಗಳವರೆಗೆ ಎಲ್ಲವನ್ನೂ ಓದಿದಾಗ ವಿವಿಧ ವಿಷಯ ವಸ್ತುಗಳುಳ್ಳ ಅರ್ಥಪೂರ್ಣ ಕವಿತೆಗಳನ್ನು ಓದಿದಂತಾಗುತ್ತದೆ. ದಶಕಕ್ಕೊಂದು ಸಂಕಲನ ಪ್ರಕಟಿಸುವ ಸಹನೆ ಇರುವುದರಿಂದ ಒಂದಕ್ಕಿಂತ ಒಂದು ಉತ್ತಮ ಕವಿತೆಗಳನ್ನು ನೀಡಿದ್ದಾರೆ ಎಂದು ಕೊಂಡಾಡಿದರು. ಅಧ್ಯಕ್ಷತೆ ವಹಿಸಿದ್ದ ದಾಸ ಸಾಹಿತ್ಯ ವಿದ್ವಾನ್ ಡಾ.ವಾಸುದೇವ ಅಗ್ನಿಹೋತ್ರಿ ಮಾತನಾಡಿ, ಜಿಲ್ಲೆಯಲ್ಲಿ ಕನ್ನಡ ಕಟ್ಟಿದ ಕವಿಗಳಲ್ಲಿ ರವೀಂದ್ರ ಕರ್ಜಗಿ ಹೆಸರು ಮುಂಚೂಣಿಯಲ್ಲಿದೆ. ಅವರ ಕೃತಿಗಳೇ ಅವರನ್ನು ಬೆಳಕಿಗೆ ತಂದಿವೆ ಎನ್ನಲು ಈ ಸಮಸ್ತ ಸಂಪುಟವೇ ಸಾಕ್ಷಿಯಾಗಿದೆ ಎಂದರು. ಹಿರಿಯ ಸಾಹಿತಿ ಸ್ವಾಮಿರಾವ ಕುಲಕರ್ಣಿ, ಶ್ರೀನಿವಾಸ ಸಿರನೂರಕರ್, ಎ.ಕೆ.ರಾಮೇಶ್ವರ, ಸಿದ್ಧರಾಮ ಪೋಲೀಸ್ ಪಾಟೀಲ್, ನರಸಿಂಗರಾವ ಹೇಮನೂರ, ಶಾಂತಾ ಪಸ್ತಾಪುರ, ಚಾಮರಾಜ ದೊಡ್ಡಮನಿ, ಶೈಲಜಾ ಕೊಪ್ಪರ್, ಲಕ್ಷ್ಮೀಶಂಕರ ಜೋಶಿ, ಸಂಧ್ಯಾ ಹೊನಗುಂಟಿಕರ್, ಶ್ರಾವಣಿ ದೇಶಪಾಂಡೆ, ಗೀತಾ ಜೋಶಿ, ಗೌರಿ ಪಾಟೀಲ್, ಸಂದೇಶ ಕರ್ಜಗಿ, ಸಂಕೇತ ಕರ್ಜಗಿ, ಸಂತೋಷ ಕರ್ಜಗಿ, ವಿಶಾಲಾಕ್ಷಿ ಕರಡ್ಡಿ ಇತರರು ಇದ್ದರು.

ಸನ್ಮಾನ

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿ ನೇಮಕಗೊಂಡ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಸುರೇಶ ಬಡಿಗೇರ ಮತ್ತು ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯರಾಗಿ ನೇಮಕಗೊಂಡ ಡಾ.ರಾಜೇಂದ್ರ ಯರನಾಳೆ ಅವರನ್ನು ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಸಂಸ್ಕೃತಿ ಪ್ರಕಾಶನ ಪರವಾಗಿ ಸನ್ಮಾನಿಸಲಾಯಿತು.

 

MORE NEWS

ಎಸ್.ಜ್ಯೋತಿ ಅವರ ‘ಅತ್ತೆ ನಿಮಗೊಂದು ಪ್ರಶ್ನೆ’ ಪುಸ್ತಕ ಬಿಡುಗಡೆ ಸಮಾರಂಭ

19-03-2024 ಬೆಂಗಳೂರು

ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...

ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರಬಂದಗಳಿಗೆ ಆಹ್ವಾನ

17-12-2023 ಬೆಂಗಳೂರು

ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...

ಸಾಂಸ್ಕೃತಿಕ ಸಂವಿಧಾನದ ಅರಿವು ಅಗತ್ಯ : ಪ್ರೊ.ನಟರಾಜ ಬೂದಾಳು

06-12-2023 ಬೆಂಗಳೂರು

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...