ರುದ್ರಗೌಡ ಪಾಟೀಲ್ ಪ್ರತಿಷ್ಠಾನದಿಂದ ರಾಜ್ಯಮಟ್ಟದ ಕಥಾ ಸ್ಪರ್ಧೆ

Date: 21-10-2020

Location: ಬೆಂಗಳೂರು


ಶ್ರೀರುದ್ರಗೌಡ ಪಾಟೀಲ್ ಸಿಂಧನೂರು ಇವರ ಪುಣ್ಯಸ್ಮರಣಾರ್ಥವಾಗಿ ರಾಜ್ಯ ಮಟ್ಟದ ಮುಕ್ತ ಕಥಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ರುದ್ರಗೌಡ ಪಾಟೀಲ್ ಪ್ರತಿಷ್ಠಾನ(ರಿ)ಸಿಂಧನೂರು ಹಾಗೂ ಆಕ್ಸ್ ಫರ್ಡ್ ಫೌಂಡೇಷನ್ ಸಿಂಧನೂರು ಇವರ ಸಹಯೋಗದೊಂದಿಗೆ ಆಯೋಜಿಸುತ್ತಿರುವ ಈ ಕಥಾಸ್ಪರ್ಧೆಯಲ್ಲಿ ಪ್ರಥಮ ಬಹುಮಾನ 15.000, ದ್ವಿತೀಯ ಬಹುಮಾನ 10.000, ತೃತೀಯ ಬಹುಮಾನ - 5000 ಹಾಗೂ ಮೆಚ್ಚುಗೆ ಪಡೆದ ಐದು ಕಥೆಗಳಿಗೆ 2.500ರೂಗಳನ್ನು ನಿಗಧಿ ಪಡಿಸಲಾಗಿದೆ. ಕಥೆಗಳನ್ನು ಕಳುಹಿಸಲು ಕೊನೆಯ ದಿನಾಂಕ- 30-11-2020. 

ಸ್ಪರ್ಧೆಯ ನಿಯಮಗಳು: 

  • ಕರ್ನಾಟಕ ರಾಜ್ಯದ ಕಥೆಗಾರರಿಗೆ ಮುಕ್ತ ಅಪಕಾಶ, ವಯಸ್ಸಿನ ನಿರ್ಬಂಧತೆ ಇರುವುದಿಲ್ಲ.

  • ಕಥಾ ಸ್ಪರ್ಧೆಗೆ ಒಬ್ಬರಿಂದ ಒಂದು ಕಥೆಗೆ ಮಾತ್ರ ಅವಕಾಶ 

  • ಕಥಾ ಸ್ಪರ್ಧಾರ್ಥಿಗಳಿಗೆ ಯಾವುದೇ ಶುಲ್ಕವಿರುವುದಿಲ್ಲ

  • ಕಥೆಯು ಈ ಹಿಂದೆ ಪ್ರಶಸ್ತಿ ಹಾಗೂ ಪ್ರಕಟನೆಗೆ ಆಯ್ಕೆಗೊಂಡಿರಬಾರದು

  • ಕಥೆಯು ಕೃತಿಚೌರ್ಯಗೊಂಡಿರದೆ, ಸ್ವಂತದ್ದಾಗಿರಬೇಕು ಮತ್ತು ಭಾಷಾಂತರ, ರೂಪಾಂತರಗೊಂಡಿರಬಾರದು

  • ತೀರ್ಪುಗಾರರಿಗೆ ಮೆಚ್ಚುಗೆಯಾದ ಆಯ್ದ 25 ಕಥೆಗಳನ್ನು ಮಾತ್ರ ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುವುದು

  • ಸ್ಪರ್ಧೆಗೆ ಕಳುಹಿಸುವ ಕಥೆಯು 3000 ಪದಗಳ ಮಿತಿಯೊಳಗಿರಬೇಕು 

  • ಸ್ಪರ್ಧಾರ್ಥಿಗಳು ತಮ್ಮ ಸಂಪೂರ್ಣ ವಿಳಾಸ ಹಾಗೂ ಎರಡು ಭಾವ ಚಿತ್ರಗಳನ್ನು ಕಥೆಯೊಂದಿಗೆ ಪ್ರತ್ಯೇಕ ಪುಟದಲ್ಲಿ ಕಳುಹಿಸುವುದು. 

  • ಕಥೆಯು ಕಾಗದದ ಒಂದೇ ಮಗ್ಗುಲಲ್ಲಿ ಮುದ್ರಣಗೊಂಡಿರಬೇಕು. ಹಸ್ತಪ್ರತಿಯನ್ನು ಹಿಂದಕ್ಕೆ ಕಳುಹಿಸುವ ವ್ಯವಸ್ಥೆ ಇರುವುದಿಲ್ಲ

  • ಬಹುಮಾನಿತ ಕಥೆಗಳನ್ನು ಯಾವುದೇ ರೂಪದಲ್ಲಿ, ಯಾವಾಗ ಬೇಕಾದರೂ ಬಳಸುವ ಸಂಪೂರ್ಣ ಹಕ್ಕು ರುದ್ರಗೌಡ ಪ್ರತಿಷ್ಠಾನದ್ದು

  • ಸ್ಪರ್ಧೆಗೆ ಸಂಬಂಧಿಸಿದ ಎಲ್ಲಾ ವಿಚಾರಗಳಲ್ಲೂ ವ್ಯವಸ್ಥಾಪಕದ್ದೇ ಅಂತಿಮ ತೀರ್ಮಾನವಾಗಿರುತ್ತದೆ. 

  • ಕಥೆಗಾರರು ಸ್ಪರ್ಧೆಗೆ ಕಳುಹಿಸುವ ಕಥೆಗಳನ್ನು ನುಡಿ, ಬರಹ ಅಥವಾ ಯುನಿಕೋಡ್ ನ ಎಂ.ಎಸ್-ವರ್ಡ್ ತಂತ್ರಾಂಶದಲ್ಲಿ (ಸಾಫ್ಟ್ ಕಾಪಿ) (ಇ-ಮೇಲ್- principaloxford515@gmail.com, kvvdevendrahufa@gmail.com ಗೆ ಕಳಿಸುವುದು. 

  • ಕಥೆಯನ್ನು ಕಳುಹಿಸುವ ಕೊನೆಯ ದಿನಾಂಕ- 30-11-2020 

MORE NEWS

ಮಾತೋಶ್ರೀ ರತ್ನಮ್ಮ ಹೆಗ್ಗಡೆ 47ನೇ ಮಹಿಳಾ ಗ್ರಂಥ ಬಹುಮಾನಕ್ಕೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾದಿಂದ 2023ನೇ ವರ್ಷದ ಮಹಿಳಾ ಶ್ರೇಷ್ಠ ಕನ್ನಡ ಕೃತಿಗಳಿಗೆ “ಮಾತೋಶ್ರೀ...

ಗಿರಡ್ಡಿ ಗೋವಿಂದರಾಜ ವಿಮರ್ಶಾ ಪ್ರಶಸ್ತಿಗೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಡಾ. ಗಿರಡ್ಡಿ ಗೋವಿಂದರಾಜ ಫೌಂಡೇಶನ್ ನಿಂದ “ವಿಮರ್ಶಾ ಪ್ರಶಸ್ತಿ"ಗೆ ವಿಮರ್ಶಾ ಕೃತಿಗಳನ್ನು ಆಹ್ವಾ...

ಕವಿಗಳು, ಲೇಖಕರು ಬಹುತೇಕವಾಗಿ ಕಲ್ಪನಾ ಶಕ್ತಿಯಿಂದ ಸಾಹಿತ್ಯವನ್ನು ಸೃಷ್ಟಿಸುತ್ತಾರೆ; ಎಂ. ಬಸವಣ್ಣ

25-04-2024 ಬೆಂಗಳೂರು

ಬೆಂಗಳೂರು: ವಿಜಯನಗರದಲ್ಲಿರುವ 'ಅಮೂಲ್ಯ ಪುಸ್ತಕ' ದ ಅಂಗಡಿಯಲ್ಲಿ ಏಪ್ರಿಲ್ 23ರಂದು ವಿಶ್ವ ಪುಸ್ತಕ ದಿನವನ್ನು ...