ಸಾಹಿತಿ ಈಶ್ವರ ಕಮ್ಮಾರ ಇನ್ನಿಲ್ಲ

Date: 21-01-2020

Location: ಧಾರವಾಡ


ಧಾರವಾಡದಲ್ಲಿರುವ ಮಕ್ಕಳ ಹಿರಿಯ ಸಾಹಿತಿ ಈಶ್ವರ ಕಮ್ಮಾರ ಮಂಗಳವಾರ ನಸುಕಿನ ಜಾವದಲ್ಲಿ ಹೃದಯಾಘಾತದಿಂದ ನಿಧನರಾದರು. ಇಂದು ಮಧ್ಯಾಹ್ನ 2 ಗಂಟೆಗೆ ಮರೇವಾಡದಲ್ಲಿ ಅವರ ಅಂತ್ಯಕ್ರಿಯೆ ಜರುಗಲಿದೆ.
70ರ ದಶಕದಲ್ಲಿ ಧಾರವಾಡದ ಹಲವು ಗೆಳೆಯರೊಂದಿಗೆ ಸೇರಿ "ಮಕ್ಕಳ ಮನೆ" ಸಂಸ್ಥೆ ಕಟ್ಟಿ ಆ ಮೂಲಕ ನಾಡಿನ ಯುವ ಬರಹಗಾರರಿಗೆ ಧಾರವಾಡದಲ್ಲಿ ಎಂಟು ದಿನಗಳ ಕಾಲ ಮಕ್ಕಳ ಸಾಹಿತ್ಯ ಕಮ್ಮಟಕ್ಕೆ ಶ್ರಮಿಸುವ ಮೂಲಕ ಹತ್ತಾರು ಶ್ರೇಷ್ಟ ಮಕ್ಕಳ ಸಾಹಿತಿಗಳಾಗಿ ರೂಪುಗೊಳ್ಳುವಂತೆ ಮಾಡಿದ್ದರು. 

 "ಮಕ್ಕಳ ಮಂದಿರ" ಮಕ್ಕಳ ಪತ್ರಿಕೆ ಕೆಲವು ವರ್ಷಗಳವರೆಗೆ ನಡೆಸಿದ್ದರು. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪ್ರಸಾರಂಗದಲ್ಲಿ ಬಹುವರ್ಷದವರೆಗೆ ಸೇವೆ ಸಲ್ಲಿಸಿ, ವಿಶ್ವವಿದ್ಯಾಲಯದ ಜನಪ್ರಿಯ ಸಾಹಿತ್ಯವನ್ನು ಹಳ್ಳಿಗಳಿಗೆ ತಲುಪುವಂತೆ ಪ್ರಯತ್ನಿಸಿದ್ದರು. ಮಕ್ಕಳ ಸಾಹಿತ್ಯ ಕೃತಿಗಳಲ್ಲಿ’ತಿಪ್ಪನ ಕನಸ”  ಕಾದಂಬರಿಯಿಂದ ಹಿಡಿದು ಕಾವ್ಯ, ಕಥೆ, ನಾಟಕಗಳ ಕೃತಿಗಳನ್ನು ರಚಿಸಿದ್ದಾರೆ. 
ಇಳಿ ವಯಸ್ಸಿನಲ್ಲೂ ಅತ್ಯಂತ ಉತ್ಸುಕರಾಗಿ ಸಂಸ್ಥೆಯೊಂದನ್ನು ಕಟ್ಟಿಕೊಂಡು, ಮನೆಯಲ್ಲಿಯೇ ಮಕ್ಕಳ ಸಾಹಿತ್ಯ ಕುರಿತು, ಮಹಿಳೆಯರ ಕುರಿತು ಸದಾ ಕಾರ್ಯಕ್ರಮ ನಡೆಸುತ್ತಿದ್ದರು. 

MORE NEWS

ಎಸ್.ಜ್ಯೋತಿ ಅವರ ‘ಅತ್ತೆ ನಿಮಗೊಂದು ಪ್ರಶ್ನೆ’ ಪುಸ್ತಕ ಬಿಡುಗಡೆ ಸಮಾರಂಭ

19-03-2024 ಬೆಂಗಳೂರು

ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...

ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರಬಂದಗಳಿಗೆ ಆಹ್ವಾನ

17-12-2023 ಬೆಂಗಳೂರು

ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...

ಸಾಂಸ್ಕೃತಿಕ ಸಂವಿಧಾನದ ಅರಿವು ಅಗತ್ಯ : ಪ್ರೊ.ನಟರಾಜ ಬೂದಾಳು

06-12-2023 ಬೆಂಗಳೂರು

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...