Date: 06-12-2025
Location: ಬೆಂಗಳೂರು
ಬೆಂಗಳೂರು: ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ (Freedom Park) ನಡೆಯುತ್ತಿರುವ ಬೆಂಗಳೂರು ಸಾಹಿತ್ಯ ಉತ್ಸವದ (Bengaluru Literature Festival-2025) 'ಬೀಯಿಂಗ್ ಬಾನು, ಬೀಯಿಂಗ್ ಬಂಡಾಯ' ಗೋಷ್ಠಿಯಲ್ಲಿ ಮಾತನಾಡಿದ ಬಾನು ಮುಷ್ತಾಕ್ ಅವರು, ಡಾ. ಬಿ.ಆರ್. ಅಂಬೇಡ್ಕರ್ ಅವರ ನುಡಿಗಳನ್ನು ಉಲ್ಲೇಖಿಸಿ, "ಬ್ರಾತೃತ್ವ ಇಲ್ಲದೆ ಸಮಾನತೆ ಇಲ್ಲ" ಹಾಗೂ ಭ್ರಾತೃತ್ವವನ್ನು ಕಳೆದುಕೊಂಡಾಗ ಪ್ರಜಾಪ್ರಭುತ್ವದ ಮೂಲವೇ ಮಾಯವಾಗುತ್ತದೆ ಎಂದು ಹೇಳಿದರು.
ಬಳಿಕ ಮಾತನಾಡಿ, ಇಂದಿನ ದಿನವು ಸಂದೇಶದ ಅಥವಾ ಸ್ಮರಣೆಯ ದಿನವಲ್ಲ, ಬದಲಿಗೆ ಪರಿವರ್ತನೆಯ ದಿನವಾಗಿದೆ. ಸಾಹಿತ್ಯವನ್ನು ಕೇವಲ ಕಲೆಯಾಗಿ ನೋಡದೆ, ಅದನ್ನು ಇತಿಹಾಸದ ಗಾಯಗಳನ್ನು ಅರ್ಥಮಾಡಿಕೊಳ್ಳುವ ಶಕ್ತಿ ಮತ್ತು ಭವಿಷ್ಯಕ್ಕೆ ದಿಕ್ಕು ಕಲ್ಪಿಸುವ ಭಾವನಾತ್ಮಕ ಸೇತುವೆಯಾಗಿದೆ.ಇತಿಹಾಸವನ್ನು ನೋವಿನಿಂದ ನೋಡದೆ, ಸಮಾಜದ ಮೌಲ್ಯಗಳನ್ನು ಕಟ್ಟಿಕೊಳ್ಳಲು ಬಳಸಬೇಕು ಎಂದರು.
ಬಳಿಕ ತಮ್ಮ ವೈಯಕ್ತಿಕ ಅನುಭವಗಳನ್ನು ಹಂಚಿಕೊಂಡ ಅವರು, ಬೂಕರ್ ಬಹುಮಾನದ ಅನುಭವವು ನನಗೆ "ಸತ್ಯ ಹೇಳು, ಆಳವಾಗಿ ಹೇಳು" ಎಂಬುದನ್ನು ಕಳಿಸಿದೆ ಎಂದರು.
ಗೋಷ್ಠಿಯನ್ನು ಪ್ರತೀತಿ ಪುಂಜಾ ಬಲ್ಲಾಳ್ ಅವರು ನಡೆಸಿಕೊಟ್ಟರು.
ಬೆಂಗಳೂರು: ಮನುಷ್ಯ ಸಂಸ್ಕೃತಿಯ ಬಹುದೊಡ್ಡ ಕೊಡುಗೆಯಾಗಿ ವಿಭಿನ್ನ ಭಾಷೆಯ ಬರವಣಿಗೆ ಸಮಾಜದ ಪ್ರತಿಬಿಂಬವಾಗಿವೆ. ಓರ್ವ ಉತ್...
ಬೆಂಗಳೂರು ಸಾಹಿತ್ಯ ಉತ್ಸವದ 14ನೇ ಆವೃತ್ತಿಯು ಡಿ.6 ಮತ್ತು 7ರಂದು ನಗರದ ಸ್ವಾತಂತ್ಯ್ರ ಉದ್ಯಾನವನದಲ್ಲಿ ಹಮ್ಮಿಕೊಳ್ಳಲಾಗ...
ಬೆಂಗಳೂರು: ಅಂಕಿತ ಪುಸ್ತಕ ಪ್ರಕಾಶನದ ವತಿಯಿಂದ ಲೇಖಕ ಸು. ರುದ್ರಮೂರ್ತಿ ಶಾಸ್ತ್ರಿ ಅವರ 'ಜನ ಭಾರತ', ಉಷಾ ನರಸ...
©2025 Book Brahma Private Limited.