ಸಾಹಿತಿ ಡಾ. ಕೋ.ವೆಂ ರಾಮಕೃಷ್ಣೇಗೌಡ ಇನ್ನಿಲ್ಲ

Date: 04-05-2021

Location: ಬೆಂಗಳೂರು


ಕನ್ನಡ ಪ್ರಾಧ್ಯಾಪಕರಾಗಿ, ಗಾಯಕರಾಗಿ, ಕನ್ನಡ ಸಂಸ್ಕೃತಿ ಚಿಂತಕರಾಗಿ ನಿರಂತರ ಕ್ರಿಯಾಶೀಲತೆಯನ್ನು ಮೈಗೂಡಿಸಿಕೊಂಡಿದ್ದ ಲೇಖಕ ಡಾ. ಕೋ.ವೆಂ ರಾಮಕೃಷ್ಣೇಗೌಡ ಅವರು ಬೆಂಗಳೂರಿನಲ್ಲಿ ದಿನಾಂಕ-03-05-2021ರಂದು ನಿಧನರಾಗಿದ್ದಾರೆ.

ಡಾ. ವಿಜಯಾ (ವ್ಯಕ್ತಿಚಿತ್ರಣ) ಹಾಗೂ ಚಿಗುಳಿ (ಅಂಕಣಗಳ ಬರಹ) ಸೇರಿದಂತೆ ಸುಮಾರು 16 ಕೃತಿಗಳನ್ನು ಪ್ರಕಟಿಸಿದ್ದಾರೆ. 40 ಕ್ಕೂ ಅಧಿಕ ಸಾಹಿತ್ಯ ಕೃತಿಗಳನ್ನು ಪ್ರಕಟಿಸಿದ್ದಾರೆ. ಬಸವ ಕಾವ್ಯ ಸಂಪುಟ (ಸಂಪಾದನೆ), 2014ರಲ್ಲಿ ಕೆಂಪೇಗೌಡ ಪ್ರಶಸ್ತಿ ಪಡೆದ ಇವರು, ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ, ಉತ್ತಮ ಉಪನ್ಯಾಸಕರ ಪ್ರಶಸ್ತಿ, ಕನ್ನಡ ಭೂಷಣ ಹೀಗೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಹಾಗೂ ಬಿ.ಎಂ. ಶ್ರೀ ಪ್ರತಿಷ್ಠಾನದ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದರು. ಕಸಾಪ ಅವಧಿ 5 ವರ್ಷಕ್ಕೆ ವಿಸ್ತರಣೆಯಾಗುವುದನ್ನುವಿರೋಧಿಸಿ ಅವರು ನ್ಯಾಯಾಲಯದಲ್ಲಿ ನಿರಂತರ ಹೋರಾಟ ಮಾಡಿದ್ದರು.

MORE NEWS

ಅವ್ವ ಪುಸ್ತಕಾಲಯದಿಂದ 'ಕೊರೋನ ಕಿರು...

28-04-2021 ಬೆಂಗಳೂರು

ಅವ್ವ ಪುಸ್ತಕಾಲಯ, ಕೆಂಚನಹಳ್ಳಿ ಇವರ ವತಿಯಿಂದ 'ಕೊರೋನ ಕಿರುಪ್ರಬಂಧ ಸ್ಪರ್ಧೆಯಡಿ "ಕೊರೋನ 2ನೆ ಅಲೆಯ ಲಾಕ್ಡೌನ...

ನಿಘಂಟು ತಜ್ಞ ಡಾ. ಜಿ. ವೆಂಕಟಸುಬ್ಬ...

19-04-2021 ಬೆಂಗಳೂರು

ನಿಘಂಟು ತಜ್ಞರೆಂದೇ ಕನ್ನಡ ನಾಡಿನಲ್ಲಿ ಪ್ರಖ್ಯಾತರಾದ ಹಾಗೂ ಶತಾಯುಷಿ ಜಿ. ವೆಂಕಟಸುಬ್ಬಯ್ಯನವರು ಭಾನುವಾರ ರಾತ್ರಿ 1-15ರ...

ವಿಕ- 2021ನೇ ಸಾಲಿನ ಯುಗಾದಿ ಕಥಾ ಸ...

11-04-2021 ಬೆಂಗಳೂರು

ವಿಜಯಕರ್ನಾಟಕ ದಿನಪತ್ರಿಕೆಯ 2021ನೇ ಸಾಲಿನ ಯುಗಾದಿ ಕಥಾ ಸ್ಪರ್ಧೆಯ ಬಹುಮಾನಿತ ಟಾಪ್ 25 ಕಥೆಗಳನ್ನು ‘ಸ್ನೇಹಾ ಬು...