ಸಾಹಿತ್ಯ ಕಲೆ ಭಾವದಿಂದ ಕೂಡಿದೆ: ಮಂಜುನಾಥ್ ಅಜ್ಜಂಪುರ

Date: 12-08-2022

Location: ಬೆಂಗಳೂರು


"ಸಾಹಿತ್ಯ ಕಲೆ ಭಾವದಿಂದ ಕೂಡಿದ್ದು, ಬರೆದದ್ದನ್ನು ಪ್ರಕಟಿಸುವ ಮೂಲಕ ಜನರಿಗೆ ಅಭಿವ್ಯಕ್ತಗೊಳಿಸಲಾಗುವುದು” ಮಂಜುನಾಥ್ ಅಜ್ಜಂಪುರ ರವರು ಅಭಿಪ್ರಾಯಪಟ್ಟರು.

ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸೌಜನ್ಯ ದತ್ತರಾಜ್ ರವರ ಎರಡು ಕೃತಿಗಳಾದ “ಭಾವ ನೌಕೆಯನೇರಿ” ಕವನ ಸಂಕಲನ ಹಾಗು “ಕಥೆಯೆಂಬ ಕನ್ನಡಿಯಲ್ಲಿ” ಕಥಾ ಸಂಕಲನ ಲೋಕಾರ್ಪಣೆಯ ವೇಳೆ ಅವರು ಮಾತಾನಾಡಿದರು.

ಕಥೆಗಾರರಾದ ಆರ್. ಶಶಿಧರ್ ರವರು ಮಾತಾನಾಡಿ, ಇಂದಿನ ಸಮಾಜವು ಮೇಲ್ನೋಟಕ್ಕೆ ಪುರುಷ ಪ್ರಧಾನವೆಂಬಂತೆ ಕಂಡರೂ ಪುರುಷನಿಗಿಂತ ಮೊದಲು ಗುರುತಿಸುವುದು ಮಹಿಳೆಯನ್ನೇ. ಹಾಗಾಗಿ ಎಲ್ಲರು ತಿಳಿದಿರುವಂತೆ ಮಹಿಳೆ ಬರಿಯ ಭಾವಜೀವಿಯಲ್ಲ. ಅವಳು ಪುರುಷನಿಗಿಂತ ಪ್ರಾಕ್ಟಿಕಲ್ ಮನೋಭಾವದವಳು ಎಂದ ಅವರು, ಕವನ ಸಂಕಲನದಿಂದ ಎರಡು ಕವನಗಳನ್ನು ಓದಿ ಅದರ ಗಾಂಭೀರ್ಯತೆಯನ್ನು ಹಾಗು ವಾಸ್ತವತೆಯನ್ನು ವಿವರಿಸಿದರು.

ಕವಿ ಹಾಗು ಕಥೆಗಾರರಾದ ಅಪೂರ್ವ ಅಜ್ಜಂಪುರ ರವರು ಮಾತಾನಾಡ, ಸೌಜನ್ಯ ದತ್ತರಾಜ್ ರವರನ್ನು ನಾನು ಚಿಕ್ಕಂದಿನಿಂದಲೇ ಬಲ್ಲೆ, ಹಿಂದೆ ಶಾಲೆಗಳಲ್ಲಿ ಚಿಕ್ಕ ಮಕ್ಕಳು ಪದ್ಯ ಕವನ ಕಥೆ ಮುಂತಾದವುಗಳನ್ನು ಬರೆದಾಗ ಅವರನ್ನು ಪ್ರೋತ್ಸಾಹಿಸಲು ನೋಟೀಸ್ ಬೋರ್ಡ್ ಗಳಲ್ಲಿ ಹಾಕುತ್ತಿದ್ದರು, ಸೌಜನ್ಯರವರು ತಾವು ಚಿಕ್ಕವರಿದ್ದಾಗಲೇ ಪದ್ಯಗಳನ್ನು ಕಥೆಗಳನ್ನು ರಚಿಸುತ್ತ ಇಂದು ತಮ್ಮದೇ ಆದ ಪುಸ್ತಕ ಪ್ರಕಟಣೆಯಾಗುವ ತನಕ ಸಾಹಿತ್ಯ ಕ್ಷೇತ್ರದಲ್ಲಿ ಬೆಳೆಯುತ್ತ ಬಂದಿದ್ದಾರೆ ಎಂದು ಕಥಾ ಸಂಕಲನಗಳಲ್ಲಿದ್ದ ಎಲ್ಲಾ ಒಂಬತ್ತು ಕಥೆಗಳ ಕುರಿತು ಕಿರು ವಿಮರ್ಶೆಗಳನ್ನು ಕೊಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಲೇಖಕರು ಹಾಗು ಚಿಂತಕರಾದ ಕೆ. ರಾಜಕುಮಾರ್ ರವರು , ಹಿಂದೆ ಮಹಿಳಾ ಸಾಹಿತ್ಯವೆಂದರೆ ಅಡುಗೆ ಮನೆ ಸಾಹಿತ್ಯ ಎಂದೇ ಬಹಳಷ್ಟು ಜನರಲ್ಲಿ ತಪ್ಪು ಅಭಿಪ್ರಾಯವಿತ್ತು. ಆದರೆ ಈಗ ಸಾಮಾಜಿಕ ಮಾಧ್ಯಮಗಳು ಹೆಚ್ಚಾಗಿರುವುದರಿಂದ ಮಹಿಳಾ ಸಾಹಿತ್ಯ ಉನ್ನತ ಮಟ್ಟದಲ್ಲಿರುವುದಕ್ಕೆ ಸೌಜನ್ಯರವರ ಈ ಎರಡು ಕೃತಿಗಳೇ ಸಾಕ್ಷಿ ಎಂದು ಕೃತಿಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.

ಲೇಖಕಿ ಸೌಜನ್ಯ ದತ್ತರಾಜ್ ರವರು ತನ್ನ ಬರವಣಿಗೆಯನ್ನು ಇದುವರೆಗೂ ಪ್ರೋತ್ಸಾಹಿಸುತ್ತ ಬಂದಿರುವ ಜನರನ್ನು ನೆನೆದು ಕೃತಿಗಳ ಲೋಕಾರ್ಪಣೆಗೆ ಸಾಕ್ಷಿಯಾದ ಎಲ್ಲರಿಗೂ ತಮ್ಮ ವಂದನೆಗಳನ್ನು ಅರ್ಪಿಸಿದರು.

ಪೋಟೋ ಗ್ಯಾಲರಿ

MORE NEWS

ಕುವೆಂಪು ಪರಿಸರದಲ್ಲಿ ದೇವರನ್ನ ಕಂಡರೆ, ರಾಜ್‌ಕುಮಾರ್‌ ಅಭಿಮಾನಿಗಳಲ್ಲಿ ದೇವರನ್ನ ಕಂಡರು: ಬರಗೂರು

18-04-2024 ಬೆಂಗಳೂರು

ಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರೇ ನನ್ನ ವಿಶ್ವ ಮಾನವ ಸಂದೇಶವನ್ನು ಜನರಿಗೆ ತಲುಪಿಸುವ ಶಕ್ತಿ ಇರುವುದು ರಾಜ್&zwnj...

ಹಾಸನ ಸಂಸ್ಕೃತ ಭವನದಲ್ಲಿ ವಿಶ್ವ ಕಲಾ ದಿನಾಚರಣೆ, ಚಿತ್ರಕಲಾ ಪ್ರದರ್ಶನ ಸ್ಫರ್ಧೆ

18-04-2024 ಬೆಂಗಳೂರು

ಕಲೆಗೆ ಗೌರವವನ್ನು ವ್ಯಕ್ತಪಡಿಸಲು ವಿಶ್ವ ಕಲಾ ದಿನವನ್ನು ಆಚರಿಸಲಾಗುತ್ತಿದೆ. ವಿಶ್ವ ಕಲಾ ದಿನವು ಸಮಾಜದಲ್ಲಿ ಕಲೆಯ ಪ್ರಾ...

ತನುಶ್ರೀ ಸಾಹಿತ್ಯ ವೇದಿಕೆಯಿಂದ ಕವಿಗೋಷ್ಠಿಗೆ ಕವನಗಳ ಆಹ್ವಾನ

16-04-2024 ಬೆಂಗಳೂರು

ಚಿತ್ರದುರ್ಗ: ತನುಶ್ರೀ ಸಾಹಿತ್ಯ, ಸಾಂಸ್ಕೃತಿಕ ಕಲಾ ವೇದಿಕೆಯಿಂದ ರಾಜ್ಯ ಮಟ್ಟದ ಕವಿಗೋಷ್ಠಿಗೆ ಕವನಗಳನ್ನು ಆಹ್ವಾನಿಸಲಾಗ...