ಸಾಹಿತ್ಯದ ಶ್ರೇಷ್ಠತೆಗೆ ಅನುಭವದ ಪಕ್ವತೆಯೇ ಮೂಲ: ಡಾ. ಎಲ್. ಹನುಮಂತಯ್ಯ

Date: 19-04-2021

Location: ಬೆಂಗಳೂರು


ಅನುಭವವು ಮಾಗಬೇಕು. ಆಗಲೇ ಕಥೆ-ಕವನ ಸಾಹಿತ್ಯ ಪಕ್ವವಾಗುತ್ತದೆ ಎಂದು ಖ್ಯಾತ ಲೇಖಕ ಹಾಗೂ ರಾಜ್ಯಸಭಾ ಸದಸ್ಯ ಡಾ. ಎಲ್. ಹನುಮಂತಯ್ಯ ಅವರು ಅಭಿಪ್ರಾಯಪಟ್ಟರು.

ನಗರದ ಬನಶಂಕರಿಯ 2ನೇ ಹಂತದಲ್ಲಿರುವ ಸುಚಿತ್ರ ಫಿಲ್ಮಂ ಸೊಸೈಟಿಯಲ್ಲಿ ಲೇಖಕ ಚಂದ್ರಪ್ರಭಾ ಕಠಾರಿ ಅವರ ಕಾಗೆ ಮೋಕ್ಷ (ಕಥಾ ಸಂಕಲನ) ಹಾಗೂ (ಅ) ಗೋಚರ ಕೈ (ಕವನ ಸಂಕಲನ) ಕೃತಿಗಳನ್ನುಅವರು ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಬರೆಯಬೇಕಾದವರು ಮೊದಲು ಅನುಭವಕ್ಕಾಗಿ ಕಾಯಬೇಕು. ಈ ಕಾಯುವಿಕೆಯ ಪ್ರಕ್ರಿಯೆಯಲ್ಲಿ ಆತನ ಬರಹ ಪಕ್ವಗೊಳ್ಳುತ್ತದೆ. ಸಾಹಿತ್ಯದ ಶ್ರೇಷ್ಠತೆಗೆ ಅನುಭವದ ಪಕ್ವತೆಯೇ ಮೂಲ ಕಾರಣವಾಗಿದೆ ಎಂದು ಹೇಳಿದರು.

ತಮ್ಮ ಧರ್ಮವನ್ನು ಗೌರವಿಸುವುದು ದೊಡ್ಡದಲ್ಲ. ಮತ್ತೊಂದು ಧರ್ಮವನ್ನು ಗೌರವದಿಂದ ಕಾಣುವುದು ಮುಖ್ಯ. ಆದರೆ, ಹೀಗೆ ಕಂಡರೆ ಭೀತಿ ಎದುರಾಗುವ ಸನ್ನಿವೇಶ ಇದೆ. ಈ ಭೀಕರತೆಯನ್ನು ಎದುರಿಸುವುದು ಇಂದಿನ ಅಗತ್ಯವಿದೆ. ಈ ಬಗ್ಗೆ ಸಾಹಿತಿಗಳು ತಮ್ಮ ಸಾಮಾಜಿಕ ಹೊಣೆಗಾರಿಕೆ ಮೆರೆಯಬೇಕು ಎಂದರು.

ಖ್ಯಾತ ಲೇಖಕಿ ಡಾ. ಪದ್ಮಿನಿ ನಾಗರಾಜ್ ಮುಖ್ಯ ಅತಿಥಿಗಳಾಗಿದ್ದರು. (ಅ)ಗೋಚರ ಕೈ ಕವನ ಸಂಕಲನ ಕುರಿತು ಮಮತಾ ಅರಸೀಕರೆ ಹಾಗೂ ಡಾ. ನಟರಾಜ್ ತಲಘಟ್ಟಪುರ ಕಥಾ ಸಂಕಲನ ಕುರಿತು ಮಾತನಾಡಿ ‘ವರ್ತಮಾನಕ್ಕೆ ಸ್ಪಂದಿಸುವ ಕವಿತೆಗಳಿದ್ದು, ಕಥೆಗಳು ಸಹ ತಮ್ಮ ವಸ್ತುವೈವಿಧ್ಯತೆಯಿಂದ ರಚನಾತ್ಮಕವಾಗಿವೆ ಎಂದು ಪ್ರಶಂಸಿಸಿದರು.

ನಿರ್ದೇಶಕ, ರಂಗಕರ್ಮಿ ಬಿ.ಸುರೇಶ, ಪತ್ರಕರ್ತ ಕುಮಾರ ರೈತ ಸೇರಿದಂತೆ ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು.

 

MORE NEWS

2024ನೇ ಸಾಲಿನ ಬುಕ್‌ ಬ್ರಹ್ಮ ಕಥಾ ಸ್ಪರ್ಧೆ - ಕಾದಂಬರಿ ಪುರಸ್ಕಾರಕ್ಕೆ ಆಹ್ವಾನ

29-03-2024 ಬೆಂಗಳೂರು

ʻಬುಕ್‌ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ 2024 ಮತ್ತು ಕಾದಂಬರಿ ಪುರಸ್ಕಾರ 2024ʼ ರೂ. 2 ಲಕ್ಷ 69 ಸ...

25 ಮಂದಿಗೆ ಕೆಯುಡಬ್ಲ್ಯುಜೆ ದತ್ತಿ ನಿಧಿ ಪ್ರಶಸ್ತಿ

28-03-2024 ಬೆಂಗಳೂರು

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಕೊಡಮಾಡುವ ಪ್ರಸಕ್ತ ಸಾಲಿನ ಕೆಯುಡಬ್ಲ್ಯುಜೆ ದತ್ತಿ ನಿಧಿ ಪ್ರಶಸ್...

ಖ್ಯಾತ ರಂಗ ನಿರ್ದೇಶಕ ಶ್ರೀ ಪಾದ ಭಟ್ ಗೆ 'ರಂಗ ಭೂಪತಿ' ಪ್ರಶಸ್ತಿ

28-03-2024 ಬೆಂಗಳೂರು

ಬೆಂಗಳೂರು: ಪ್ರಸಿದ್ಧ ನಾಟಕಕಾರರಾದ ದಿ.ಗೋಪಾಲ ವಾಜಪೇಯಿ ಅವರ ಹೆಸರಿನಲ್ಲಿ ಸ್ಥಾಪಿಸಲಾಗಿರುವ 'ರಂಗ ಭೂಪತಿ' ಪ್ರ...