ಸಾಹಿತ್ಯಕ-ಸಾಂಸ್ಕೃತಿಕ ಜಾಗೃತಿಗೆ ‘ಭೀಮಾಂತರಂಗ’ ಮೀಸಲು: ಆಶಯ

Date: 01-08-2021

Location: ಗೂಗಲ್.ಮೀಟ್


`‘ಸಾಹಿತ್ಯಕ-ಸಾಂಸ್ಕೃತಿಕ ಶ್ರೀಮಂತಿಕೆ ಇದ್ದೂ ತೀವ್ರ ನಿರ್ಲಕ್ಷ್ಯಕ್ಕೆ ಗುರಿಯಾದ ಭೀಮೆಯ ಬಗ್ಗೆ ಅಭಿಮಾನ-ಜಾಗೃತಿ ಮೂಡಿಸುವತ್ತ `ಭೀಮಾಂತರಂಗ ’ ಆನ್ ಲೈನ್ ಸಂಸ್ಥೆಯು ಶ್ರಮಿಸಲಿ’'

ಸಂದರ್ಭ: ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ‘ಭೀಮಾಂತರಂಗ ಆನ್ ಲೈನ್ ಸಾಹಿತ್ಯಿಕ-ಸಾಂಸ್ಕೃತಿಕ ಜಗಲಿ’ ಮೂಲಕ ಉಪನ್ಯಾಸ ಮಾಲಿಕೆಗೆ ಚಾಲನೆ ನೀಡುವ ಸಮಾರಂಭದಲ್ಲಿ ವ್ಯಕ್ತವಾದ ಆಶಯ ಹಾಗೂ ಹಾರೈಕೆಗಳಿವು.

ಕರ್ನಾಟಕದಲ್ಲಿ ಕಾವೇರಿ, ಶರಾವತಿ, ತುಂಗೆಗೆ ಎಲ್ಲ ವಿಧದಲ್ಲೂ ಪ್ರಾಮುಖ್ಯತೆ ನೀಡಲಾಗುತ್ತಿದೆ. ಆದರೆ, ಭೀಮಾ ನದಿ ಹಾಗೂ ಅದರ ತೋಳ್ತೆಕ್ಕೆಯಲ್ಲಿರುವ ಪ್ರದೇಶಗಳನ್ನೂ ಕಡೆಗಳಿಸುವ ಪ್ರವೃತ್ತಿ ಮುಂದುವರಿಯುತ್ತಿದೆ. ಈ ಬಗ್ಗೆ ಚಿಂತನೆಗಳು ಮಂಥನಗೊಂಡು ಭೀಮೆಯ ಪ್ರಾಮುಖ್ಯದ ದರ್ಶನ ಮಾಡಿಸುವ ಅಗತ್ಯ ಹಾಗೂ ಅನಿವಾರ್ಯತೆ ಇದೆ. ‘ಭೀಮಾಂತರಂಗ ಆನ್ ಲೈನ್ ಸಾಹಿತ್ಯಿಕ-ಸಾಂಸ್ಕೃತಿಕ ಜಗಲಿ’ ಮೂಲಕ ಈ ಆಶಯವು ಸಾಕಾರಗೊಳ್ಳಲಿ ಎಂದು ಅಭಿಪ್ರಾಯಪಡಲಾಯಿತು.

ಭೀಮೆಯ ಒಡಲಿಗೆ ಕಳಂಕ: ಭೀಮಾಂತರಂಗ ಸಾಹಿತ್ಯಿಕ-ಸಾಂಸ್ಕೃತಿಕ ಜಗಲಿ ಕೇಂದ್ರವನ್ನು ಆನ್ ಲೈನ್ ನಲ್ಲಿ ಉದ್ಘಾಟಿಸಿ ಮಾತನಾಡಿದ ಸಾಹಿತಿ ಡಾ. ರಾಗಂ ‘ ಭೀಮಾ ನದಿಯು ಕಾವೇರಿ-ಶರಾವತಿಯಷ್ಟೇ ಪವಿತ್ರಳು. ಭೀಮೆಯ ನೀರು ಕುಡಿದ ಜನ ಉತ್ಕೃಷ್ಟ ಸಾಹಿತ್ಯ ರಚಿಸಿದ್ದು, ಉತ್ತಮೋತ್ತಮ ಸಂಸ್ಕೃತಿಯ ಹರಿಕಾರರಾಗಿದ್ದಾರೆ. ಆದರೂ, ಭೀಮೆ ಹಾಗೂ ಅವಳ ತೋಳ್ತೆಕ್ಕೆಯಲ್ಲಿ ಬೆಳೆದ ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ನಿರ್ಲಕ್ಷಿಸಲಾಗುತ್ತಿದೆ. ಈ ಬಗ್ಗೆ ಅಭಿಮಾನ-ಜಾಗೃತಿ ಮೂಡಿಸುವ ಕೆಲಸವಾಗಬೇಕಿದೆ ಎಂದು ಆಶಿಸಿದರು.

ಭೀಮೆಯನ್ನು ವ್ಯಾಪಾರೀಕರಣಗೊಳಿಸುವತ್ತ ಹೆಚ್ಚಿನ ಉತ್ಸಾಹ ತೋರುತ್ತಿದ್ದೇವೆ. ಭೀಮೆ ಒಡಲಿನ ಮರಳನ್ನು ಬಗೆಯುತ್ತಿದ್ದೇವೆ. ಅವಳ ಪ್ರಕೃತಿದತ್ತ ಸಿರಿವಂತಿಕೆಯನ್ನು ನಾಶ ಮಾಡುತ್ತಿದ್ದೇವೆ. ಇಂತಹ ಅನಾಹುತಗಳ ವಿರುದ್ಧ ಜಾಗೃತಿ ಮೂಡಿಸುವುದು ಅನಿವಾರ್ಯ ಎಂದರು.

ಸಮಾರಂಭದ ಅಧ್ಯಕ್ಷತೆವಹಿಸಿದ್ದ ಸಂಶೋಧಕ ಡಾ.ಎಸ್ ಕೆ ಕೊಪ್ಪಾಮಾತನಾಡಿ ‘ಭೀಮೆಯ ಒಡಲು ಸಮೃದ್ಧಿಯ ಕಡಲು,ಅಧ್ಯಾತ್ಮದ ಹವಳ. ಐತಿಹಾಸಿಕ ಶಕ್ತಿಯ ತವರು ಆಗಿದೆ.ಆದರೆ ಬರಗಾಲದಿಂದ ಭೀಮೆಯು ಒಣಗುತ್ತಿದ್ದರೆ, ಕೆಲ ಜನರ ದುಷ್ಟ ಆಲೋಚನೆಗಳಿಂದ ಉಸುಕು ಕೆದರಿ ಭೀಮೆಗೆ ಗಾಯಮಾಡಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದ ಅವರು, ಭೀಮೆಯ ಅಂತರಂಗ ಪ್ರವೇಶಿಸಿ, ತಿಳಿಯಲು ಇಂತಹ ವೇದಿಕೆಗಳು ಅವಶ್ಯಕ.ಎಂದರು.

ವೇದಿಕೆಯ ಸದಸ್ಯ ಸಿ ಎಂ ಬಂಡಗರ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಘವೇಂದ್ರ ಕುಲಕರ್ಣಿ ಸ್ವಾಗತಿಸಿದರು. ಗೀತಯೋಗಿ ಅವರು ಸಮಾರೋಪ ಭಾಷಣ ಮಾಡಿದರು. ಯಶವಂತ ಬಿರಾದಾರ ನಿರೂಪಿಸಿದರು. ಹಿರಿಯ ಸಾಹಿತಿಗಳಾದ ಡಿ.ಎನ್.ಅಕ್ಕಿ ಸೇರಿದಂತೆ ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು.

MORE NEWS

2024ನೇ ಸಾಲಿನ ಬುಕ್‌ ಬ್ರಹ್ಮ ಕಥಾ ಸ್ಪರ್ಧೆ - ಕಾದಂಬರಿ ಪುರಸ್ಕಾರಕ್ಕೆ ಆಹ್ವಾನ

29-03-2024 ಬೆಂಗಳೂರು

ʻಬುಕ್‌ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ 2024 ಮತ್ತು ಕಾದಂಬರಿ ಪುರಸ್ಕಾರ 2024ʼ ರೂ. 2 ಲಕ್ಷ 69 ಸ...

25 ಮಂದಿಗೆ ಕೆಯುಡಬ್ಲ್ಯುಜೆ ದತ್ತಿ ನಿಧಿ ಪ್ರಶಸ್ತಿ

28-03-2024 ಬೆಂಗಳೂರು

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಕೊಡಮಾಡುವ ಪ್ರಸಕ್ತ ಸಾಲಿನ ಕೆಯುಡಬ್ಲ್ಯುಜೆ ದತ್ತಿ ನಿಧಿ ಪ್ರಶಸ್...

ಖ್ಯಾತ ರಂಗ ನಿರ್ದೇಶಕ ಶ್ರೀ ಪಾದ ಭಟ್ ಗೆ 'ರಂಗ ಭೂಪತಿ' ಪ್ರಶಸ್ತಿ

28-03-2024 ಬೆಂಗಳೂರು

ಬೆಂಗಳೂರು: ಪ್ರಸಿದ್ಧ ನಾಟಕಕಾರರಾದ ದಿ.ಗೋಪಾಲ ವಾಜಪೇಯಿ ಅವರ ಹೆಸರಿನಲ್ಲಿ ಸ್ಥಾಪಿಸಲಾಗಿರುವ 'ರಂಗ ಭೂಪತಿ' ಪ್ರ...