ಸಾಹಿತ್ಯಿಕ ಅನ್ವೇಷಣೆಯ ಕವಿತೆಗಳ ಸಂಕಲನ ‘ನಿನ್ನ ಯುಗ’


ನಿನ್ನ ಯುಗ ಕೃತಿಯ ಕುರಿತು ಇತಿಹಾಸಕಾರ ಮನು ವಿ. ದೇವದೇವನ್ ಅವರು ಬರೆದ ಲೇಖಕರ ಮಾತು ಇಲ್ಲಿದೆ. 

ಕಳೆದ ಎರಡುವರೆ ದಶಕಗಳಲ್ಲಿ ನಾನು ಪರಿಶೀಲಿಸಿದ ಸಾಹಿತ್ಯ ಕೃತಿಗಳಲ್ಲಿ ಹತ್ತಾರು ರಚನೆಗಳು ನನ್ನನ್ನು ಅಗಾಧವಾಗಿ ಸ್ಪರ್ಶಿಸಿವೆ. ಮತ್ತೆ ಮತ್ತೆ ವಿಶ್ಲೇಷಿಸಿದಾಗ ಅಂಥ ಕೃತಿಗಳಿಗೆಲ್ಲ ಒಂದು ಸಾಮಾನ್ಯ ಗುಣವಿದ್ದದ್ದು ಕಂಡುಬಂದಿದೆ. ಅವು ತಿಳಿದೋ ತಿಳಿಯದೆಯೋ ಬಯಕೆ (ಡಿಸಯರ್), ನ್ಯಾಯ (ಜಸ್ಟಿಸ್) ಮತ್ತು ಸ್ವಾತಂತ್ರ್ಯ (ಫ್ರೀಡಂ), ಇವುಗಳ ನಡುವಿನ ಸಂಬಂಧದ ಹುಡುಕಾಟದಲ್ಲಿ ನಿರತವಾಗಿವೆ. ಇದು ಆ ಕೃತಿಗಳ ಜೀವನದರ್ಶನಕ್ಕೆ ಸ್ಪಷ್ಟವಾದೊಂದು ಸ್ವರೂಪ ನೀಡಿದೆ, ಅಲ್ಲಿನ ಶೋಧಕ್ಕೆ ನಿರ್ದಿಷ್ಟವಾದ ನೆಲೆಯೊಂದನ್ನು ಒದಗಿಸಿಕೊಟ್ಟಿದೆ. ಈ ಕೃತಿಗಳೆಲ್ಲವೂ ವಿಶ್ವಸಾಹಿತ್ಯದ ಮೇರುಬರಹಗಳೆಂದು ಗುರುತಿಸಲಾಗುವ ರಚನೆಗಳ ಸಾಲಿಗೆ ಸೇರಿದ್ದಲ್ಲ. ಆದರೆ ಅವು ನನ್ನ ಅನೇಕ ಸವಾಲುಗಳಿಗೆ ಉತ್ತರನೀಡಿ ನನ್ನಲ್ಲಿನ ಹಲವು ಉತ್ತರಗಳಿಗೆ ಸವಾಲು ಎಸಗುವ ಸಾಮಥ್ರ್ಯ ಹೊಂದಿವೆ. 

ಅಂಥ ಕೃತಿಗಳ ಪ್ರೇರಣೆಯಿಂದ ಬಯಕೆ, ನ್ಯಾಯ, ಸ್ವಾತಂತ್ರ್ಯ ಈ ಮೂರು ಹೇಗೆ ಪರಸ್ಪರ ಸೆಳೆದಾಡುತ್ತವೆ ಯಾ ನಿವಾರಿಸಿಕೊಳ್ಳುತ್ತವೆ ಎಂಬ ಅನ್ವೇಷಣೆಯೇ ನನ್ನ ಕವಿತೆಗಳಿಗೂ ಧ್ಯೇಯವಾಗಿದೆ. ಅದರಲ್ಲಿ ಈ ರಚನೆಗಳು ಯಶಸ್ವಿಯಾಗಿವೆಯೇ ಇಲ್ಲವೇ? ಇದು ಸಹೃದಯರ ವಿವೇಕಕ್ಕೆ ಬಿಟ್ಟದ್ದು. 


- ಮನು ವಿ.ದೇವದೇವನ್


 

MORE FEATURES

ವಚನಗಳ ಮೂಲಕ ಶರಣರ ಒಡನಾಟ ಅನುಭವಿಸಬಹುದು: ಡಿ.ಶಬ್ರಿನಾ ಮಹಮದ್ ಅಲಿ

29-03-2024 ಬೆಂಗಳೂರು

'ಬನ್ನಿರಿ ಶರಣರೇ' ಎಂಬುದು ಈ ಕವನ ಸಂಕಲನ ಮೊದಲ ಕವನವಾಗಿದ್ದು, ಈ ಕವಿತೆಯಲ್ಲಿ ಕವಿ ಸಮಾಜಕ್ಕೆ ಒಂದು ಕರೆಯನ್ನು...

ಪೂರ್ಣಿಮಾ ಮಾಳಗಿಮನಿ ಕಂಡ `ಗಿಣಿಬಾಗಿಲು' 

28-03-2024 ಬೆಂಗಳೂರು

"ಸಪ್ನ ಬುಕ್ಸ್ ಪ್ರಕಟಿಸಿದ ಹರೀಶ್ ಕೇರ ಅವರ ವಿಶಿಷ್ಟವಾದ ಶೀರ್ಷಿಕೆ ಇರುವ ಈ ಕೃತಿಯಲ್ಲಿನ ಒಂದೊಂದು ಅಧ್ಯಾಯವೂ ಒಂದ...

ಹೋರಾಡಲು ಹಂಬಲಿಸುವವರಿಗೆ ಈ ಕೃತಿ ಮುಖ್ಯವಾಗಬಲ್ಲದು

27-03-2024 ಬೆಂಗಳೂರು

'ಸಮಾನತೆಯನ್ನಾಧರಿಸಿದ ಸಮಾಜ, ಜನಪರ ರಾಜಕೀಯದ ಜನತಂತ್ರ ಹಾಗೂ ಭಾವೈಕ್ಯ, ಬಹುಮುಖಿ ಸಂಸ್ಕೃತಿಯ ಉಳಿವಿಗಾಗಿ ಹೋರಾಡುತ್...